The Indian Constitution- Qun. and answers part - 5



201) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು? ➡ರಾಷ್ಟ್ರಪತಿ.
 202) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು? ➡ಉಪ ರಾಷ್ಟ್ರಪತಿ.
203) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು? ➡ಉತ್ತರಪ್ರದೇಶ.
 204) ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು? ➡ಅಂದಾಜು ವೆಚ್ಚ ಸಮಿತಿ.
205) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು? ➡ರಾಜ್ಯಪಾಲರು.
206) ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ? ➡1921 ರಲ್ಲಿ.
207) ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು? ➡ಲೋಕಸಭೆಯ ಸ್ಪೀಕರ್.
208) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ? ➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.
209) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ? ➡ಅಟಾರ್ನಿ ಜನರಲ್.
210) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು? ➡54 ನೇ.
 211) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ? ➡333.
 212) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ? ➡ 25-28.
 213) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ? ➡ಚುನಾವಣೆ ಆಯೋಗಕ್ಕೆ.
214) ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು? ➡29.
 215) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.
216) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ? ➡ಉಪರಾಷ್ಟ್ರಪತಿಯ.
 217) ಸಂಸತ್ತಿನ ಮೇಲ್ಮನೇ ಯಾವುದು? ➡ರಾಜ್ಯಸಭೆ.
218) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು? ➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.
219) ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.
220) ಸಂಸತ್ತು ------ ಒಳಗೊಂಡಿದೆ? ➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.
221) ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು? ➡315.
222) ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು? ➡35.
223) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು? ➡ಸಾರ್ವಜನಿಕ ಉದ್ದಿಮೆಗಳ ಸಮಿತಿ.
224) ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ? ● ಅಮೆರಿಕಾ (USA).
225) ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? ● ಅಮೆರಿಕಾ (USA).
 226) ಭಾರತವು 'ಪಂಚವಾರ್ಷಿಕ ಯೋಜನೆ' ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆದುಕೊಂಡಿದೆ ? ● ಉತ್ತರ: ರಷ್ಯಾ(ಯುಎಸ್ಎಸ್ಆರ್).
 227) ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ? ● ಬ್ರಿಟನ್ (ಯುಕೆ).
228) ಭಾರತ ಸಂವಿಧಾನವು ಯಾವ ದೇಶದಿಂದ "ಸಂಸತ್ ಚುನಾವಣೆ" (Parliamentary Election) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ? ● ಬ್ರಿಟನ್ (ಯುಕೆ).
229) ಭಾರತ ಸಂವಿಧಾನವು ಯಾವ ದೇಶದಿಂದ "ಚುನಾವಣಾ ಆಯೋಗ" (Election Commission) ದ ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ? ● ಬ್ರಿಟನ್ (ಯುಕೆ).
230).ಭಾರತ ಸಂವಿಧಾನವು ಯಾವ ದೇಶದಿಂದ "ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು' (Suspension of Fundamental Rights during the Emergency) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ? ● ಜರ್ಮನಿ.
 231). ಭಾರತ ಸಂವಿಧಾನವು ಯಾವ ದೇಶದಿಂದ " ಸಮವರ್ತಿ ಪಟ್ಟಿ" (Concurrent list) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ? ●ಆಸ್ಟ್ರೇಲಿಯಾ.
232). ಭಾರತದ ಸಂವಿಧಾನದಲ್ಲಿ ಅಳವಡಿಸಲಾದ "ಫೆಡರಲ್ ವ್ಯವಸ್ಥೆ" (Federal System) ಯಾವ ದೇಶದಿಂದ ಎರವಲು ಪಡೆಯಲಾಗಿದೆ ? ● ಕೆನಡಾ.
233) ಭಾರತ ಸಂವಿಧಾನವು ಯಾವ ದೇಶದಿಂದ "ಕೇಂದ್ರ-ರಾಜ್ಯ ಪಟ್ಟಿ" (Union-State List) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ? ●ಕೆನಡಾ.
234) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ? ● ದಕ್ಷಿಣ ಆಫ್ರಿಕಾ.
235). ಯಾವ ಸಂವಿಧಾನದ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ? ● 42 ನೇ ತಿದ್ದುಪಡಿ (1976).
 236). ಸಂವಿಧಾನದಲ್ಲಿರುವ 'ಪ್ರಸ್ತಾವನೆ'ಯನ್ನು ತಿದ್ದುಪಡಿ ಮಾಡಿದ ತಿದ್ದುಪಡಿ ಯಾವುದು? ● 42 ನೇ ತಿದ್ದುಪಡಿ.
237) ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ? ● 44 ನೇ ತಿದ್ದುಪಡಿ (1978).
 238) ಮತದಾನ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಇಳಿಕೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು ? ● 61 ನೇ ತಿದ್ದುಪಡಿ (1989).
 239). ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನಾಗಿಸಿದ ಸಂವಿಧಾನದ ತಿದ್ದುಪಡಿ ಯಾವುದು ? ● 69 ನೇ ತಿದ್ದುಪಡಿ (1991). 240) ಪಂಚಾಯತ್ ರಾಜ್ ಸೃಷ್ಟಿಗೆ ಮುನ್ನಡಿಯಾದ ಸಂವಿಧಾನದ ತಿದ್ದುಪಡಿ ಯಾವುದು? ● 73ನೇ ತಿದ್ದುಪಡಿ (1992).
241). ಭಾರತ ಸಂವಿಧಾನದ 'ಆತ್ಮ ಮತ್ತು ಹೃದಯ' ಎಂದು ಕರೆಯಲ್ಪಡುವ ವಿಧಿ (Article) ಯಾವುದು ? ● 32ನೇ ವಿಧಿ .
242) ಸಂವಿಧಾನದ ಯಾವ ವಿಧಿಯು 'ಅಸ್ಪೃಶ್ಯತೆ ನಿರ್ಮೂಲನೆ'ಯ ಕುರಿತು ತಿಳಿಸುತ್ತದೆ? ● 17ನೇ ವಿಧಿ.
243). ಭಾರತ ಸಂವಿಧಾನದ ಯಾವ ವಿಧಿಗಳ ಅಡಿಯಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗುತ್ತದೆ ? ● 12 ರಿಂದ 35 ವಿಧಿಗಳು.
244) ಭಾರತ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ನಾಗರಿಕರಿಗೆ 'ಸಮಾನತೆಯ ಹಕ್ಕು'ನ್ನು ಒದಗಿಸಲಾಗಿದೆ ? ● 14ನೇ ವಿಧಿ.
245) ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿ ಯಾವುದು ? ●370 ನೇ ವಿಧಿ.
246) ಸಂವಿಧಾನದ ಯಾವ ವಿಧಿಯು 'ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ'ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ? ● 24ನೇ ವಿಧಿ.
247) ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ 'ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ? ●45 ನೇ ವಿಧಿ.
248) ದೇಶದಲ್ಲಿ ಸುಪ್ರೀಂಕೋರ್ಟ್ ಹೊಂದುವ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ? ● ಅಮೆರಿಕಾ (USA).
249) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು? ●1) ಅಮೇರಿಕಾ. 2) ಸ್ವಿಟ್ಜರ್ಲ್ಯಾಂಡ್.
250) ಜೆ.ವಿ.ಪಿ ವಿಸ್ತರಿಸಿರಿ? ●ಜೆ - ಜವಾಹರ್ ಲಾಲ್ ನೆಹರು. ವಿ - ವಲ್ಲಭಭಾಯ್ ಪಟೇಲ್. ಪಿ - ಪಟ್ಟಾಭಿ ಸೀತಾರಾಮಯ್ಯ

Post a Comment

0 Comments