* ಕರ್ನಾಟಕ ಆರ್ಥಿಕ ಸಮೀಕ್ಷೆ – 2018 – Notes - 4

ಅಧ್ಯಾಯ - 1 - ಕರ್ನಾಟಕ ರಾಜ್ಯದ ಆರ್ಥಿಕತೆ -  ಒಂದು ಅವಲೋಕನ



=> ಆರ್ಥಿಕ ಅಭಿವೃದ್ಧಿ ಮತ್ತು ರಾಜ್ಯ ಹಣಕಾಸು ಸ್ಥಿತಿ :

1) ಹಣಕಾಸಿನ ಬಲವರ್ಧನೆ: ಕರ್ನಾಟಕವು ರಾಜಸ್ವವನ್ನು ಹೆಚ್ಚಿಸಿಕೊಳ್ಳುವದರ ಜೊತೆಗೆ ವೆಚ್ಚವನ್ನು ಸಹ ಉತ್ತಮವಾಗಿ ನಿರ್ವಹಿಸುತ್ತಿದೆ. ರಾಜ್ಯವು 2017-18 (ಆಯವ್ಯಯ ಅಂದಾಜು) ರಲ್ಲಿ (1) ರೂ.136.54 ಕೋಟಿ ಹೆಚ್ಚುವರಿ ರಾಜಸ್ವ (2) ಒಟ್ಟು ರಾಜ್ಯದ ಆಂತರಿಕ ಉತ್ಪನ್ನದಲ್ಲಿ ಶೇ.2.61 ರಷ್ಟು ಆರ್ಥಿಕ ಕೊರತೆ (3) ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ಶೇ.18.93 ಬಾಕಿ ಸಾಲ ಎಂದು ಅಂದಾಜಿಸಿರುತ್ತದೆ.

 


=> ರಾಜ್ಯದ ಹಣಕಾಸು:

* 2017-18 (ಆಯವ್ಯಯ ಅಂದಾಜು) ರಲ್ಲಿ ರಾಜ್ಯದ ರಾಜಸ್ವ ಜಮೆಯು 2016-17(ಪರಿಷ್ಕೃತ ಅಂದಾಜು) ನೇ ಸಾಲಿಗಿಂತ 2017-18(ಆಯವ್ಯಯ ಅಂದಾಜು) ನೇ ಸಾಲಿಗೆ ಶೇ.9.05 ರಷ್ಟು ಹೆಚ್ಚಳವಾಗಿರುತ್ತದೆ.- ರಾಜಸ್ವ ಜಮೆಯ ಬೆಳವಣಿಗೆಗೆ ಮೂಲ ಕಾರಣ ತೆರಿಗೆ ರಾಜಸ್ವದಲ್ಲಿನ ಹೆಚ್ಚಳ.

* 2016-17 (ಪರಿಷ್ಕೃತ ಅಂದಾಜು)ಕ್ಕೆ ಹೋಲಿಸಿದಾಗ 2017-18 (ಆಯವ್ಯಯ ಅಂದಾಜು) ರಲ್ಲಿ ಅಭಿವೃದ್ಧಿ ವೆಚ್ಚವು ಶೇ.11.41 ರಷ್ಟು ಏರಿಕೆಯಾಗಿದೆ.

=>  ರಾಜ್ಯದ ಸ್ವಂತ ತೆರಿಗೆ ರಾಜಸ್ವ :

ರಾಜ್ಯದ ಸ್ವಂತ ತೆರಿಗೆ ರಾಜಸ್ವದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರಕ್ಕೆ ಶೇ.10.96 ಆಗಿರುತ್ತದೆ. ಒಟ್ಟು ಸ್ವೀಕೃತಿಗಳಿಗೆ ತೆರಿಗೆಯೇತರ ರಾಜಸ್ವ ಸಂಗ್ರಹಣೆಯ ಅನುಪಾತವು ಹಲವಾರು ವರ್ಷಗಳಿಂದ ಏರಿಕೆಯಾಗುತ್ತಿಲ್ಲ. ಸರ್ಕಾರವು ಬಳಕೆ ಶುಲ್ಕವನ್ನು ತರ್ಕಬದ್ಧವಾಗಿಸಲು ಮತ್ತು ನಿಯಮಿತವಾಗಿ ಪರಿಷ್ಕರಿಸಲು ಬದ್ಧವಾಗಿದೆ. ರಾಜಸ್ವ ಸ್ವೀಕೃತಿಯಲ್ಲಿ ರಾಜ್ಯ ತೆರಿಗೆ ಆದಾಯದ ಅನುಪಾತವು ಕರ್ನಾಟಕವನ್ನು ಉತ್ತಮ ಸ್ಥಾನದಲ್ಲಿರಿಸಿದೆ.

 

=> ತಲಾವಾರು ಅಭಿವೃದ್ಧಿ ವೆಚ್ಚ :

ಕರ್ನಾಟಕ ರಾಜ್ಯದ ರಾಜಸ್ವ ಸ್ವೀಕೃತಿಗಳಿಗೆ ಬದ್ಧತೆಯುಳ್ಳ ಹೆಚ್ಚು ಪ್ರಮಾಣದ ರಾಜಸ್ವ ವೆಚ್ಚವು 2016-17 (ಪರಿಷ್ಕೃತ ಅಂದಾಜು) ಶೇ.78 ಇದ್ದು, ಇದು ರಾಜ್ಯಕ್ಕೆ ತನ್ನ ಸ್ವಂತ ಸಂಪನ್ಮೂಲಗಳನ್ನು ಹೊಸ ಯೋಜನೆಗಳಿಗೆ ಹಂಚಲು ಇರುವ ಸೀಮಿತ ಮಿತಿಯನ್ನು ತೋರಿಸುತ್ತದೆ. ಆದ್ದರಿಂದ ವಿವೇಚನಾಯುತ ವೆಚ್ಚವನ್ನು ಪುನಶ್ಚೇತನ/ಮರು ವಿನ್ಯಾಸಗೊಳಿಸುವುದು ಈಗಿನ ಅಗತ್ಯತೆಯಾಗಿದೆ.

=> ಬಂಡವಾಳ ವೆಚ್ಚ :

ಬಂಡವಾಳ ವೆಚ್ಚ (ನಿವ್ವಳ)ಯು 2017-18(ಆಯವ್ಯಯ ಅಂದಾಜು) ರಲ್ಲಿ ಶೇ.2.50 ಕ್ಕೆ ಇಳಿಕೆಯಾಗಿದೆ. ಇದು ಒಂದು ಮಹಾನ್ ಸವಾಲಾಗಿದೆ ಮತ್ತು ತುಂಬಾ ಕಾಳಜಿದಾಯಕ ವಿಚಾರವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ರಚಿಸಿದ ವೆಚ್ಚ ಸುಧಾರಣಾ ಆಯೋಗವು ಬಂಡವಾಳ ಅನುದಾನವನ್ನು ರಾಜಸ್ವದ ಪ್ರತಿಕೂಲತೆ/ಅನಾನುಕೂಲತೆಗಳಿಂದ ಬೇರ್ಪಡಿಸುವುದು ಅವಶ್ಯವೆಂದು ಶಿಫಾರಸ್ಸು ಮಾಡಿದೆ.

 

 

=> ತೆರಿಗೆಯೇತರ ರಾಜಸ್ವ :

ಒಟ್ಟು ಜಮೆಗೆ ತೆರಿಗೆಯೇತರ ರಾಜಸ್ವದ ಅನುಪಾತವು ವರ್ಷದಿಂದ ವರ್ಷಕ್ಕೆ ಸತತವಾಗಿ ಇಳಿಕೆಯಾಗಿರುವುದು ಕಂಡು ಬರುತ್ತಿದೆ. ಇದಕ್ಕೆ ವೆಚ್ಚಗಳ ಕಡಿಮೆ ವಸೂಲಾತಿಯೇ ಕಾರಣವಾಗಿದೆ. ವೆಚ್ಚ ಸುಧಾರಣಾ ಆಯೋಗವು ಬಳಕೆದಾರರ ಶುಲ್ಕಗಳಿಂದ ರಾಜಸ್ವವನ್ನು ಹೆಚ್ಚಿಸಲು ಹಲವಾರು ಶಿಫಾರಸ್ಸುಗಳನ್ನು ಮಾಡಿರುತ್ತದೆ.

 ರಾಜ್ಯ ಸಾಲಗಳು :

ಸರ್ಕಾರವು ಮುಂಗಡವಾಗಿ ನೀಡುವ ಸಾಲಗಳಿಂತ ಹೆಚ್ಚಾಗಿ, ರಾಜ್ಯವು ಪಡೆಯುವ ಸಾಲಗಳೂ ಹೆಚ್ಚು ದುಬಾರಿಯಾಗಿರುತ್ತದೆ. ನಿಗಮಗಳು ಮತ್ತು ಮಂಡಳಿಗಳು ಒದಗಿಸುವ ಸೇವೆಗಳಿಗೆ ತಮ್ಮ ಬಳಕೆದಾರರಿಂದ ವಸೂಲು ಮಾಡುವ ಮೊತ್ತವು ಕಡಿಮೆಯಾಗಿರುವ ಕಾರಣದಿಂದಾಗಿ ರಾಜ್ಯ ಸರ್ಕಾರದಿಂದ ಕೊಡಲ್ಪಡುವ ಸಾಲವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವಲ್ಲಿ ವಿಫಲಾಗಿದೆ.

=> ಯೋಜನೆ ಮತ್ತು ಯೋಜನೇತರ ನಡುವಿನ ಅಂತರದ ನಿವಾರಣೆ:

2017-18 ರ ವಿತ್ತೀಯ ವರ್ಷದಿಂದ ಸರ್ಕಾರಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಈ ವರ್ಗೀಕರಣವನ್ನು ತೆಗೆದು ಹಾಕಿದೆ. ಇದೇ ಕಾರಣಗಳಿಗಾಗಿ ರಾಜ್ಯ ಸರ್ಕಾರವು 2017-18 ರ ವಿತ್ತೀಯ ವರ್ಷದಿಂದ ಸರ್ಕಾರದ ಆಯವ್ಯಯದಲ್ಲಿ ಯೋಜನೆ ಮತ್ತು ಯೋಜನೇತರ ಅಂತರವನ್ನು ತೆಗೆದುಹಾಕಿದೆ.

  => ಮಹಿಳಾ ಉದ್ದೇಶಿತ ಆಯವ್ಯಯ :

* ಲಿಂಗಾಧಾರಿತ ಆಯವ್ಯಯವು 2006-07 ರಲ್ಲಿ ಪ್ರಾರಂಭಿಸಲ್ಪಟ್ಟಿತು.

* ರಾಜ್ಯ ಸರ್ಕಾರವು ಆಕ ಇಲಾಖೆಯಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಕೋಶವನ್ನು ಸ್ಥಾಪಿಸಿದೆ. ಭಾರತದಲ್ಲಿ ಮಹಿಳಾಧರಿತ ಆಯವ್ಯಯವನ್ನು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಪ್ರವರ್ತಕ ರಾಜ್ಯವಾಗಿದೆ.

 

  => ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ):

* ಸರಕು ಮತ್ತು ಸೇವಾ ತೆರಿಗೆಯನ್ನು ಜುಲೈ 2017-18 ನೇ ಸಾಲಿನಿಂದ ರಾಜ್ಯದಲ್ಲಿ ಜಾರಿಗೆಗೊಳಿಸಲಾಗುತ್ತಿದೆ. ರಾಜ್ಯದ ತೆರಿಗೆ ಸಂಗ್ರಹಣೆಯಲ್ಲಿ ಇದು ದೀರ್ಘಾವಧಿಯಲ್ಲಿ ಧನಾತ್ಮಕ ಪರಿಣಾಮವನ್ನು ಬೀರುತ್ತದೆಯಾದರೂ, ಅಲ್ಪ ಮತ್ತು ಮಧ್ಯಮಾವಧಿಗಳಲ್ಲಿ, ರಾಜಸ್ವಗಳ ಮೇಲೆ ಇದು ಋಣಾತ್ಮಕ ಪರಿಣಾಮವನ್ನು ಉಂಟು ಮಾಡುವ ಸಂಭವವಿದೆ.

* ಸರಕು ಮತ್ತು ಸೇವಾ ತೆರಿಗೆಯು ಮೂಲ ಸ್ಥಳಾಧಾರಿತ ತೆರಿಗೆಯಿಂದ ಗಮ್ಯಾಧಾರಿತ ತೆರಿಗೆಗೆ ಪಲ್ಲಟಗೊಳ್ಳುವುದರಿಂದ ಕರ್ನಾಟಕಕ್ಕೆ ತೆರಿಗೆ ನಷ್ಟ ಉಂಟಾಗುತ್ತದೆ.

* ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸುವ ದಿನಾಂಕದಿಂದ ಐದು ವರ್ಷಗಳವರೆಗೆ ಕೇಂದ್ರ ಸರ್ಕಾರವು ಪರಿಹಾರ ನೀಡುವುದು.


Post a Comment

0 Comments