ಪತ್ರಲೇಖನ
ನಾವು ಸಾಮಾನ್ಯವಾಗಿ
ಇನ್ನೊಬ್ಬರ ಜೊತೆ ಮಾತಿನ ಮೂಲಕ ವಿಷಯ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ. ಅವರು ನೇರವಾಗಿ ಸಂಪರ್ಕಕ್ಕೆ
ಸಿಗದಿದ್ದಾಗ ಅಂತಹ ಸಂದರ್ಭಗಳಲ್ಲಿ ಬರವಣಿಗೆಯ ಮೂಲಕ ಅವರಿಗೆ ವಿಷಯವನ್ನು ತಿಳಿಸುತ್ತೇವೆ.
ಹೀಗೆ ಸಂಗತಿ, ವಿಚಾರ,
ವಿಷಯಗಳನ್ನು ಇನ್ನೊಬ್ಬರ ಜೊತೆ ಬರೆವಣಿಗೆಯ ಮೂಲಕ ಹಂಚಿಕೊಳ್ಳುವುದು ಇಲ್ಲವೇ ತಿಳಿಸುವುದನ್ನು ‘ಪತ್ರಲೇಖನ’
ಎನ್ನುತ್ತೇವೆ. ಪತ್ರ ಎಂದರೆ ಕಾಗದ, ಓಲೆ, ಬರೆದ ಕಾಗದ ಎಂಬ ಅರ್ಥಗಳಿವೆ.
ಪತ್ರದ ಕೆಲವು ವಿಧಗಳು:
1. ವೈಯಕ್ತಿಕ ಪತ್ರಗಳು.
2. ಮನವಿ ಪತ್ರಗಳು
3. ಆಡಳಿತ ವಿಷಯಗಳಿಗೆ
ಸಂಬಂಧಿಸಿದ ಪತ್ರಗಳು.
4. ಜಾಹೀರಾತು ಮತ್ತು
ಪ್ರಕಟಣೆ ಪತ್ರಗಳು.
5. ವಿವಿಧ ಸಂಗ್ರಹಣೆ
ಹಾಗೂ ಪತ್ರಿಕಾ ವರದಿ ಪತ್ರಗಳು.
ಪತ್ರ ಬರೆಯುವಾಗ ಅನುಸರಿಸಬೇಕಾದ ಸಾಮಾನ್ಯ ನಿಯಮಗಳು:
1. ಪತ್ರದ ಮೇಲ್ಭಾಗದಲ್ಲಿ
ದಿನಾಂಕ, ಹೆಸರು, ವಿಳಾಸವಿರಬೇಕು.
2. ಸೂಕ್ತವಾದ ಸಂಬೋಧನೆ
ಬರೆಯಬೇಕು.
3. ವಿಷಯಗಳನ್ನು ಅರ್ಥವತ್ತಾಗಿ
ಸರಳ ಶೈಲಿಯಲ್ಲಿ ಬರೆಯಬೇಕು.
4. ಔಚಿತ್ಯಪೂರ್ಣವಾದ ಕೋರಿಕೆ, ಹಾರೈಕೆ ಇರಬೇಕು. ಉದಾ: ಇತಿ ನಮಸ್ಕಾರ, ಇತಿ ಆಶೀರ್ವಾದ.
5. ಪತ್ರದ ಕೊನೆಯಲ್ಲಿ
ಸಹಿ ಹಾಕಬೇಕು.
6. ಕವರ್ ಮತ್ತು ಪತ್ರದ ಮೇಲ್ಭಾಗದಲ್ಲಿ ಕಳುಹಿಸುವವರ ವಿಳಾಸವನ್ನು ಚಿಕ್ಕದಾಗಿ ಬರೆಯಬೇಕು.
7. ಕವರಿನ ಇನ್ನೊಂದು ಬದಿಯಲ್ಲಿ ಕಳುಹಿಸಬೇಕಾದ ವಿಳಾಸವನ್ನು ಚಿಕ್ಕದಾಗಿ ಬರೆಯಬೇಕು.
8. ಬರವಣಿಗೆಯು ಅಂದವಾದ
ಶೈಲಿಯಲ್ಲಿ, ಆಕರ್ಷಕವಾಗಿ ಇರಬೇಕು.
ಸಂಬೋಧನೆಗಳು:
ತಂದೆಗೆ - ತೀರ್ಥರೂಪು,
ತಾಯಿಗೆ - ಮಾತೃಶ್ರೀ, ಗುರುಗಳಿಗೆ - ಪೂಜ್ಯ, ಗೆಳೆಯ/ಗೆಳತಿಗೆ - ಆತ್ಮೀಯ, ನಲ್ಮೆಯ, ಪ್ರೀತಿಯ, ಚಿಕ್ಕಪ್ಪ
ದೊಡ್ಡಪ್ಪನಿಗೆ - ತೀರ್ಥರೂಪು ಸಮಾನ, ಚಿಕ್ಕಮ್ಮ ದೊಡ್ಡಮ್ಮರಿಗೆ - ಮಾತೃಶ್ರೀ ಸಮಾನ, ಕಿರಿಯರಿಗೆ
-ಚಿರಂಜೀವಿ
ಹೀಗೆ ವೈಯಕ್ತಿಕ ಪತ್ರಗಳನ್ನು
ಬರೆಯುವಾಗ ಬೇರೆ ಬೇರೆ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಸಂಬೋಧನೆಗಳನ್ನು ಬಳಸುತ್ತೇವೆ.
ಇದು ನಾವು ಅವರಿಗೆ ತೋರಿಸುವ ಗೌರವವನ್ನು ಸೂಚಿಸುತ್ತದೆ.
ಪತ್ರಲೇಖನಕ್ಕೆ ಉದಾಹರಣೆಗಳು:
1) ವಿನಂತಿ ಪತ್ರ :
ಬೀದಿಗೆ ಬೀದಿದೀಪ ಹಾಕಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ
ಪತ್ರ ಬರೆಯುವ ವಿಧಾನ.
ಇವರಿಂದ,
ರಾಮಚಂದ್ರ ಪಾಟೀಲ ದಿನಾಂಕ : 08-06-2022
ಮಲ್ಲಮ್ಮನ ಬೆಳವಡಿ ಗ್ರಾಮ,
ಮಲ್ಲಮ್ಮನ ಬೆಳವಡಿ ಅಂಚೆ,
ಬೈಲಹೊಂಗಲ ತಾಲ್ಲೂಕು,
ಬೆಳಗಾವಿ ಜಿಲ್ಲೆ.
ಇವರಿಗೆ,
ಮಾನ್ಯ ಅಧ್ಯಕ್ಷರು,
ಗ್ರಾಮ ಪಂಚಾಯಿತಿ ಕಚೇರಿ,
ಮಲ್ಲಮ್ಮನ ಬೆಳವಡಿ,
ಬೈಲಹೊಂಗಲ ತಾಲ್ಲೂಕು,
ಬೆಳಗಾವಿ ಜಿಲ್ಲೆ.
ಮಾನ್ಯರೇ,
ವಿಷಯ : ಬೀದಿ ದೀಪ ಅಳವಡಿಸುವಂತೆ ಕೋರಿ
ಮನವಿ.
****
ಬೆಳವಡಿ ಗ್ರಾಮದಿಂದ
ಸಿದ್ದಸಮುದ್ರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಸಂಚರಿಸುತ್ತಾರೆ. ಈ ರಸ್ತೆ
ನಿರ್ಮಾಣಗೊಂಡು ಈಗಾಗಲೇ ಹದಿನೈದು ವರ್ಷಗಳಾಗಿವೆ. ಸಿದ್ದಸಮುದ್ರ ಗ್ರಾಮದ ಸುಮಾರು ಮುನ್ನೂರು ಮನೆಗಳಿಗೆ
ಹೋಗಲು ಈ ರಸ್ತೆ ಪ್ರಮುಖವಾಗಿದೆ. ಆದರೆ ರಸ್ತೆ ಹೊಂಡಮಯವಾಗಿರುವರಿಂದ ಹಾಗೂ ಕಾಡಿನ ಮಧ್ಯೆ ಹಾದು ಹೋಗುವುದರಿಂದ
ರಾತ್ರಿ ಹೊತ್ತಿನಲ್ಲಿ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಆದುದರಿಂದ ಗ್ರಾಮ ಪಂಚಾಯಿತಿಯ ವತಿಯಿಂದ
ದಾರಿದೀಪ ಹಾಕಿಸಬೇಕಾಗಿ ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ
ಇಂತಿ ತಮ್ಮ ವಿಶ್ವಾಸಿ
(ರಾಮಚಂದ್ರ ಪಾಟೀಲ)
(ಊರಿನ ನಾಗರಿಕರಲ್ಲಿ ಐವತ್ತು ಜನರು ಈ ವಿನಂತಿ ಪತ್ರಕ್ಕೆ ಸಹಿ ಹಾಕಿರುತ್ತಾರೆ.)
2) ವ್ಯಾವಹಾರಿಕ ಪತ್ರ:
ಪರಿಷತ್ತು ಪ್ರಕಟಿಸಿದ ‘ಕನ್ನಡ ನಿಘಂಟು’ವಿನ ಹತ್ತು
ಪ್ರತಿಗಳನ್ನು ಕಳುಹಿಸಿಕೊಡುವಂತೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಪತ್ರವ್ಯವಹಾರ
ನಡೆಸುವ ಬಗ್ಗೆ.
ಇವರಿಂದ,
ಪ್ರಮೀಳ, ದಿನಾಂಕ
: 08-06-2022
ಹತ್ತನೇ ತರಗತಿ ಸ್ಥಳ : ಶಿವಮೊಗ್ಗ
ಸರಕಾರಿ ಪ್ರೌಢಶಾಲೆ
ಅಶೋಕನಗರ, ಮೈಸೂರು
ಇವರಿಗೆ,
ಮಾನ್ಯ ಕಾರ್ಯದರ್ಶಿಗಳು,
ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ, ಬೆಂಗಳೂರು.
ಮಾನ್ಯರೇ,
ವಿಷಯ : ಪರಿಷತ್ತಿನ ಪ್ರಕಟಣೆಯಾದ ‘ಕನ್ನಡ ನಿಘಂಟಿ’ನ ಹತ್ತು ಪ್ರತಿಗಳನ್ನು ಕಳುಹಿಸಿ ಕೊಡುವ ಬಗ್ಗೆ.
****
ಕನ್ನಡ ಸಾಹಿತ್ಯ ಪರಿಷತ್ತು
ಪ್ರಕಟಿಸಿರುವ ಕನ್ನಡ ನಿಘಂಟಿನ ಹತ್ತು ಪ್ರತಿಗಳು ನನಗೆ ಮತ್ತು ನನ್ನ ಗೆಳತಿಯರಿಗೆ ಬೇಕಾಗಿದೆ. ದಯಮಾಡಿ
ಹತ್ತು ಪ್ರತಿಗಳನ್ನು ನನ್ನ ವಿಳಾಸಕ್ಕೆ ವಿ.ಪಿ.ಪಿ. ಮಾಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ. ಆ
ಬಗ್ಗೆ ಐನೂರು ರೂಪಾಯಿಗಳ ಬ್ಯಾಂಕ್ ಹುಂಡಿಯನ್ನು ಮುಂಗಡರೂಪವಾಗಿ ಈ ಪತ್ರದ ಜೊತೆ ಇರಿಸಿದ್ದೇನೆ.
ವಂದನೆಗಳೊಂದಿಗೆ,
ಇಂತಿ ತಮ್ಮ ನಂಬುಗೆಯ,
ಸಹಿ.......................
(ಪ್ರಮೀಳ)
ಸ್ನೇಹಿತರೇ, ಮೇಲಿನ ವಿವರಣೆಯನ್ನು ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ತಲೆಬರಹ: ಪತ್ರಲೇಖನ ಎಂದರೇನು? ವಿಧಗಳು.
ಕಡತದ
ಭಾಷೆ : ಕನ್ನಡ
ಇಲಾಖೆ
: ಶಿಕ್ಷಣ ಇಲಾಖೆ
ರಾಜ್ಯ:
ಕರ್ನಾಟಕ
ಪ್ರಕಟಿಸಿದ
ದಿನಾಂಕ : 08-06-2022
ಫೈಲ್
ಫಾರ್ಮ್ಯಾಟ್ : ಪಿಡಿಎಫ್/ಜೆಪಿಜೆ/ಟೆಕ್ಸ್ಟ್
ಫೈಲ್
ಗಾತ್ರ : 1.5 ಎಂ.ಬಿ.
ಪುಟಗಳ
ಸಂಖ್ಯೆ : 3
ಡೌನ್ಲೋಡ್
ಲಿಂಕ್ : ಇದೆ
ವೆಬ್ಸೈಟ್
ಲಿಂಕ್ : ಇಲ್ಲ
ಸ್ಕ್ಯಾನ್
ಮಾಡಿದ ಪ್ರತಿ : ಅಲ್ಲ
ಸಂಪಾದಿಸಬಹುದಾದ
ಪಠ್ಯ : ಇಲ್ಲ
ನಕಲು
ಪಠ್ಯ : ಅಲ್ಲ
ಮುದ್ರಣ
: ಲಭ್ಯವಿದೆ
ಗುಣಮಟ್ಟ
: ಅತ್ಯುತ್ತಮ
ಫೈಲ್
ಗಾತ್ರ ಕಡಿಮೆಯಾಗಿದೆ : ಇಲ್ಲ
ಗುಪ್ತಪದ
: ಇಲ್ಲ
ಪಾಸ್ವರ್ಡ್
ಎನ್ಕ್ರಿಪ್ಟ್ : ಇಲ್ಲ
ಇಮೇಜ್
ಫೈಲ್ ಲಭ್ಯತೆ : ಇದೆ
ಫೈಲ್
ನ ವೆಚ್ಚ/ಮೌಲ್ಯ : ಸಂಪೂರ್ಣ ಉಚಿತ
1 Comments
Super 😍
ReplyDelete