* ಭಾರತ ಸ್ವಾತಂತ್ರ್ಯ ಹೋರಾಟ - ಮಂದಗಾಮಿಗಳು / ಸೌಮ್ಯವಾದಿಗಳ ಯುಗ -1885 ರಿಂದ 1905



* ಮಂದಗಾಮಿಗಳೆಂದರೆ - ಭಾರತ ರಾಷ್ಟ್ರೀಯ ಕಾಂಗ್ರೆಸಿನ ಆರಂಭಿಕ ನಾಯಕರು.
* ಮಂದಗಾಮಿಗಳ ನೀತಿ
- ಸಂವಿಧಾನಾತ್ಮಕ ನೀತಿಯಲ್ಲಿ ನಂಬಿಕೆ 
- ಪ್ರಾರ್ಥನೆ, ಭಿನ್ನಹ ಮತ್ತು ಪ್ರತಿಭಟನೆಯ ನೀತಿ 


* ಪ್ರಮುಖ ಮಂದಗಾಮಿ ನಾಯಕರು:
ದಾದಾಬಾಯಿ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ಮಹಾದೇವ ಗೋವಿಂದ ರಾನಡೆ. 
* ಮಂದಗಾಮಿಗಳ ಹೋರಾಟದ ಫಲವಾಗಿ - ಭಾರತೀಯರು ಶಾಸನ ಸಭೆಗಳನ್ನು ಪ್ರವೇಶಿಸಲು ಸಾಧ್ಯವಾಯಿತು.
* ಭಾರತದ ಬಡತನಕ್ಕೆ ಬ್ರಿಟಿಷರು ಕಾರಣ ಎಂಬುದು ತಿಳಿಯಿತು.
* ಭಾರತೀಯರು ರಾಜಕೀಯ ಸಂರ್ಷಕ್ಕೆ ಬೇಕಾದ ತರಬೇತಿ ಪಡೆಯುವ ಮೂಲಕ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ರಾಷ್ಟ್ರೀಯ ವ್ಯಾಪ್ತಿಯನ್ನು ಸೃಷ್ಟಿಸಿಕೊಂಡರು.


-> ಮಂದಗಾಮಿಗಳ ಪ್ರಮುಖ ಬೇಡಿಕೆಗಳು :
* ವಾಕ್ ಮತ್ತು ಮುದ್ರಣ ಸ್ವಾತಂತ್ರ್ಯ .
* ಕಾರ್ಯಾಂಗದಿಂದ ನ್ಯಾಯಾಂಗದ ಬೇರ್ಪಡೆ .
* ಸೈನಿಕ ವೆಚ್ಚದ ಕಡಿತ .
* ಪ್ರಾಥಮಿಕ, ಪ್ರೌಢ ಮತ್ತು ತಾಂತ್ರಿಕ ಶಿಕ್ಷಣದ ಅನುಷ್ಠಾನ
* ಶಸ್ತ್ರಾಸ್ತ್ರ ನಿಷೇಧ ಕಾಯಿದೆಯ ರದ್ಧತಿ .
* ಬ್ಯಾಂಕಿಂಗ್, ನೀರಾವರಿ, ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳು .
* ಉಪ್ಪಿನ ಸುಂಕದ ಸಂಪೂರ್ಣ ರದ್ದತಿ .
* ಇಂಗ್ಲೆಂಡ್ ಮತ್ತು ಇಂಡಿಯಾದಲ್ಲಿ ಏಕಕಾಲದಲ್ಲಿ ಐ.ಸಿ.ಎಸ್. ಪರೀಕ್ಷೆಯನ್ನು ನಡೆಸುವುದು .
* ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ನೀಡುವುದು.
* ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸುವುದು ಮುಂತಾದವು.

Post a Comment

1 Comments