* ಸಾ.ಶ. 5ನೆಯ ಶತಮಾನದಲ್ಲಿ ಪಶ್ಚಿಮ ರೋಮನ್
ಸಾಮ್ರಾಜ್ಯವು ಅನಾಗರಿಕರ ದಾಳಿಗಳಿಂದ ನಾಶವಾಯಿತು. ಇಂತಹ ದಾಳಿಗಳಿಂದ ಕ್ರೈಸ್ತ ಧರ್ಮವನ್ನು ರಕ್ಷಿಸಿಕೊಳ್ಳಲು
ರೋಮನ್ನಿನ ಕ್ಯಾಥೋಲಿಕರು ಪೋಪ್ ನ ನಾಯಕತ್ವದಲ್ಲಿ ಸಂಘಟಿತರಾದರು.
* ಚರ್ಚುಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು
ಜನರಲ್ಲಿ ಮೌಢ್ಯವನ್ನು ತುಂಬುವ ಕೆಲಸವನ್ನು ಮಾಡಿದವು. ಇವುಗಳ ಒಟ್ಟಾರೆ ಪರಿಣಾಮವೆಂದರೆ ಎಲ್ಲಾ ಕ್ಷೇತ್ರಗಳ
ಪ್ರಗತಿ ಕುಂಠಿತಗೊಂಡಿತು. ಈ ಹಿನ್ನೆಲೆಯಲ್ಲಿ ಇಡೀ ಕಾಲಘಟ್ಟವನ್ನು ಕತ್ತಲೆ ಯುಗವೆಂದು ಕರೆಯಲಾಗಿದೆ.
* ಊಳಿಗಮಾನ್ಯ ದೊರೆಗಳು ಪ್ರವರ್ಧಮಾನಕ್ಕೆ
ಬಂದರು.
* ಯುರೋಪಿನ ಮಧ್ಯಮ ಮತ್ತು ಕೆಳವರ್ಗದ ಸಮಾಜ
ತತ್ತರಿಸಿತು.
* 15ನೆಯ ಶತಮಾನದ ಮಧ್ಯಭಾಗದಲ್ಲಿ ಹೊಸ ಯುಗ
ಆರಂಭಗೊಂಡಿತು.
ಪುನರುಜ್ಜೀವನದ ಅರ್ಥ :
* ಲ್ಯಾಟಿನ್ ಭಾಷೆಯ `ರಿನೆಸೆರೆ -> ಇಂಗ್ಲೀಷ್
ಪದ ರಿನೈಸಾನ್ಸ್ ಎಂದರೆ -> ಪುನರ್ಜನ್ಮ/ಪುನರುಜ್ಜೀವನ/ನವೋದಯ ಎಂದರ್ಥ.
* ಪುನರುಜ್ಜೀವನ ಎಂದರೆ - ಪ್ರಾಚೀನ ಗ್ರೀಕ್
ಮತ್ತು ಲ್ಯಾಟಿನ್ ಸಾಹಿತ್ಯದ ಮರು ಓದಿನಿಂದ ಉಂಟಾದ ಬೌದ್ಧಿಕ ವಿಕಾಸ. ಈ ವಿಕಾಸದಿಂದ ಯೂರೋಪಿನ ಜನ
ಸರಳ, ವಿಚಾರಶೀಲ, ಮಾನವೀಯ ಮತ್ತು ವಿಜ್ಞಾನದ ಚಿಂತನೆಗಳಲ್ಲಿ ಪ್ರಗತಿಯನ್ನು ಸಾಧಿಸಿ ಕತ್ತಲೆ ಯುಗವನ್ನು
ಅಂತ್ಯಗೊಳಿಸಿ ಆಧುನಿಕ ಯುಗವನ್ನು ಆರಂಭಿಸಿದರು.
* ಪುನರುಜ್ಜೀವನವು ಪ್ರಥಮ ಬಾರಿಗೆ ಇಟಲಿಯಲ್ಲಿ
ಆರಂಭಗೊಂಡಿತು.
ಪುನರುಜ್ಜೀವನದ ಕಾರಣಗಳು :
1. ವಿಚಾರಶೀಲರು ಕ್ಯಾಥೋಲಿಕ್ ಚರ್ಚಿನ ಮೂಢ
ನಂಬಿಕೆ ಮತ್ತು ದಬ್ಭಾಳಿಕೆಯನ್ನು ಪ್ರಶ್ನಿಸುವುದರ ಮೂಲಕ ಮುಂದಿನ ಚಳವಳಿಗೆ ದಾರಿಯಾದರು.
2. ಸಾ.ಶ. 1453ರಲ್ಲಿ ಆಟೋಮನ್ ಟರ್ಕರು ರೋಮನ್
ಸಾಮ್ರಾಜ್ಯದ ವ್ಯಾಪಾರ ಮಹಾದ್ವಾರವಾಗಿದ್ದ ಕಾನ್ ಸ್ಟಾಂಟಿನೋಪಲ್ ನಗರವನ್ನು ಆಕ್ರಮಿಸಿದರು. ಟರ್ಕರ
ಕಿರುಕುಳ ಸಹಿಸದೆ ಅಲ್ಲಿದ್ದ ಬುದ್ಧಿಜೀವಿಗಳು ತಮ್ಮ ಗ್ರಂಥಗಳೊಡನೆ ಇಟಲಿಯಂತಹ ದೇಶಗಳಲ್ಲಿ ನೆಲಸಿ
ಪುನರುಜ್ಜೀವನಕ್ಕೆ ಕಾರಣರಾದರು.
3. ಸಾ.ಶ. 1455ರಲ್ಲಿ ಜರ್ಮನಿಯ ಗುಟೆನ್ ಬರ್ಗ್
ಎಂಬುವನಿಂದ ಮುದ್ರಣ ಯಂತ್ರದ ಶೋಧನೆ - ಇದರಿಂದ ಯುರೋಪಿನಾದ್ಯಂತ ಜ್ಞಾನ ಪ್ರಸಾರದ ವೇಗವು ಹೆಚ್ಚಿತು.
4. ಯುರೋಪಿನಲ್ಲಿದ್ದ ಬುದ್ಧಿ ಜೀವಿಗಳಿಗೆ
ರಾಜರು, ಪೋಪ್ರು, ಶೀಮಂತರು ಆಶ್ರಯ ನೀಡಿದರು
ಪೋಪ್ 3ನೇ ನಿಕೋಲಸ್, ಪೋಪ್ 10ನೇ ಲಿಯೋ, ಫ್ಲೋರೆನ್ಸಿನ
ಮೆಡೆಸಿ ಕುಟುಂಬ, ರಾಣಿ 1ನೇ ಎಲಿಜಬತ್ ಮುಂತಾದವರು ಜ್ಞಾನದ ವೃದ್ಧಿಗೆ ಅವಕಾಶ ಕಲ್ಪಿಸಿದರು.
5. ಭೌಗೋಳಿಕ ಅನ್ವೇಷಣೆಗಳು ಮತ್ತು ಧರ್ಮಯುದ್ದಗಳಿಂದ
ಯುರೋಪಿಯನ್ನರಿಗೆ ಪೂರ್ವ ದೇಶಗಳ ಪರಿಚಯವಾಯಿತು. ಈ ಹೊಸ ಪ್ರದೇಶಗಳಿಂದ ಜ್ಞಾನ ಮತ್ತು ಸಂಪತ್ತನ್ನು
ಪಡೆದು ಅವುಗಳನ್ನು ಪುನರುಜ್ಜೀವನಕ್ಕೆ ಬಳಸಿದರು.
ಪುನರುಜ್ಜೀವನದ ಲಕ್ಷಣಗಳು :
1.
ಮಾನವತಾವಾದ - ಜಗತ್ತು ಮತ್ತು ಮಾನವನನ್ನು ಕುರಿತ ಅಭಿಪ್ರಾಯ ಬದಲಾಗಿ,
ಜನರು ಉತ್ಕೃಷ್ಟ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಮಾನವ ಜೀವನಕ್ಕೆ ಸಂಬಂಧಿಸಿದ ಕ್ರಮಗಳಿಗೆ ಒತ್ತು
ನೀಡುವ ಪ್ರಯತ್ನ ನಡೆಯಿತು.
2.
ಶ್ರೇಷ್ಠಾನುಕರಣೆ - ಇದು ಪುನರುಜ್ಜೀವನದ ಮುಖ್ಯ ಲಕ್ಷಣವಾಗಿದ್ದು,
ಜನರು ಸಾಂಸ್ಕೃತಿಕ ಶ್ರೇಷ್ಠತೆಯ ಬಗ್ಗೆ ಆಸಕ್ತಿ ತಳೆದು, ಯಾವುದು ಶ್ರೇಷ್ಠವೆನಿಸುವುದೋ ಅದನ್ನು ಅನುಕರಿಸುವ
ಪ್ರವೃತ್ತಿ ಬೆಳೆಯಿತು.
3. ಇಂಗ್ಲೀಷ್, ಇಟಾಲಿಯನ್ ಮತ್ತು ಜರ್ಮನ್
ಭಾಷೆಗಳ ಸಾಹಿತ್ಯ ಶ್ರೀಮಂತವಾಯಿತು.
4. ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಬದಲಾವಣೆ
- ಕೃಷಿಕ ಜೀವನವು ವಾಣಿಜ್ಯ ಮತ್ತು ಕೈಗಾರಿಕಾ ಜೀವನ ವಿಧಾನಗಳಿಗೆ ಸ್ಥಿತ್ಯಂತರಗೊಂಡಿತು. ಸಾಮಾಜಿಕ
ಸಂಬಂಧಗಳಲ್ಲೂ ಮೂಲಭೂತವಾಗಿ ಬದಲಾವಣೆಯಾದವು.
5. ಪುನರುಜ್ಜೀವನದ ಲಕ್ಷಣಗಳು ಮೊಟ್ಟಮೊದಲು
ಇಟಲಿಯಲ್ಲಿ ಕಾಣಿಸಿಕೊಂಡವು. ಕಾರಣ ಗ್ರೀಕ್ ಮತ್ತು ರೋಮ್ ನ ವಿದ್ವಾಂಸರು ಇಟಲಿಗೆ ವಲಸೆ ಬಂದು ನೆಲೆಸಿದರು.
ಸಾಹಿತ್ಯದಲ್ಲಿ ಪುನರುಜ್ಜೀವನ :
ಪ್ರಾಪಂಚಿಕ ವಿಷಯವು ಈ ಕಾಲದ ಸಾಹಿತ್ಯದ ತಿರುಳಾಗಿತ್ತು.
ಮಾನವನ ದೇಹ, ಅಂಗಸೌಷ್ಟವ ಮುಂತಾದ ವಿಷಯಗಳ ಬಗ್ಗೆ ಬರೆದರು. ಲ್ಯಾಟಿನ್ ಬದಲು ಯುರೋಪಿನ ಪ್ರಾದೇಶಿಕ
ಭಾಷೆಗಳು ಬಳಕೆಗೆ ಬಂದವು. ಲಂಡನ್ನಿನಲ್ಲಿ ಸ್ಥಾಪಿತವಾದ ಸೈಂಟ್ ಪಾಲ್ ಶಾಲೆಯು ನೂತನ ಜ್ಞಾನದ ಕಲಿಕೆಗಾಗಿಯೇ
ಮೀಸಲಾಗಿದ್ದಿತು.
ಲೇಖಕರು
|
ಕೃತಿಗಳು
|
ಪೆಟ್ಟ್ರಾರ್ಕ್
|
ಪುನರುಜ್ಜೀವನದ ಜನಕ, ಸುಮಾರು
200 ಲ್ಯಾಟಿನ್ ಮತ್ತು ಗ್ರೀಕ್ ಹಸ್ತಪ್ರತಿಗಳ ಸಂಗ್ರಹ, ಸಾನೆಟ್ ಗಳ ರಚನೆಗೆ ಪ್ರಖ್ಯಾತ.
|
ಬೊಕಾಷಿಯೋ
|
ಇಟಾಲಿಯನ್ ಭಾಷೆಯಲ್ಲಿ - 100 ಕಥೆಗಳ ಸಂಗ್ರಹ ಡೆಕಾಮೆರಾನ್
|
ಡಾಂಟೆ
|
ಡಿವೈನ್ ಕಾಮಿಡಿ
|
ಇಂಗ್ಲೆಂಡಿನ ಛಾಸರ್
|
ಕ್ಯಾಂಟರ್ಬರಿ ಟೇಲ್ಸ್
|
ಸ್ಪೈನಿನ ಸರ್ವಾಂಟಿಸ್
|
ಡಾನ್ ಕ್ವಿಕ್ಸಾಟ್
|
ಇಂಗ್ಲೆಂಡಿನ ಸರ್ ಥಾಮಸ್ ಮೋರ್
|
ಯುಟೋಪಿಯಾ
|
ಇಂಗ್ಲೆಂಡಿನ ಶೇಕ್ಸ ಪಿಯರ್
|
ದುಃಖಾಂತ-ಸುಖಾಂತ ನಾಟಕಗಳು
|
ಪುನರುಜ್ಜೀವನದ ವಾಸ್ತುಶಿಲ್ಪ ಮತ್ತು
ಶಿಲ್ಪಕಲೆ :
ಪೌರಾಣಿಕ ವ್ಯಕ್ತಿಗಳು, ದೇವಪುತ್ರ ಏಸುಕ್ರಿಸ್ತ
ಮತ್ತು ಅವನ ಶಿಷ್ಯರನ್ನು ಮಾನವ ಸಹಜ ಭಾವನೆಗಳೊಂದಿಗೆ ಶಿಲ್ಪ ಚಿತ್ರಗಳಲ್ಲಿ ಕಲಾವಿದರು ಮೂಡಿಸಿದರು.
ಕಲಾವಿದರು
|
ವರ್ಣಚಿತ್ರಗಳು
|
ಮೈಖಲ್ ಆಂಜೆಲೋ
|
ಆ್ಯಡಂ ಮತ್ತು ಕೊನೆಯ ತೀರ್ಮಾನ
|
ಲಿಯೋನಾರ್ಡ್-ಡ-ವಿಂಚಿ
|
ಲಾಸ್ಟ್ ಸಪ್ಪರ್ ಮತ್ತು ಮೊನಾಲಿಸಾ
|
ರಾಫೇಲ್
|
ಸಿಸ್ಟೈನ್ ಮಡೋನ್ನ
|
ಟಿಟಿಯನ್
|
ಅಸಂಪ್ಷನ್ ಆಫ್ ದಿ ವರ್ಜಿನ್
|
ಪುನರುಜ್ಜೀವನದ ಕಾಲದಲ್ಲಿ ವಿಜ್ಞಾನ
/ ಆಧುನಿಕ ವಿಜ್ಞಾನದ ಜನನ :
ಪುನರುಜ್ಜೀವನದ ಕಾಲದಿಂದಲೇ ಆಧುನಿಕ ವಿಜ್ಞಾನವು
ಜನ್ಮ ತಾಳಿತು. ಮಾನವನ ಬಗ್ಗೆ ತಿಳಿಯುವ ಆಸಕ್ತಿಯು ಈ ಕಾಲದಲ್ಲಿ ಹೊಸ ಆವಿಷ್ಕಾರಗಳಿಗೆ ನಾಂದಿಯಾಯಿತು.
ಅವಶ್ಯಕತೆ ಮತ್ತು ಪ್ರಶ್ನಿಸುವ ಮನೋಭಾವ ಬೆಳೆದಂತೆ ವೈಜ್ಞಾನಿಕ ಸಂಶೋಧನೆಗಳು ಹೆಚ್ಚಿದವು.
ವಿಜ್ಞಾನಿಗಳು
|
ಸಂಶೋಧನೆ/ವಿಚಾರಗಳು
|
ಫ್ರಾನ್ಸಿಸ್ ಬೇಕನ್
|
ಪ್ರಾಚೀನ ವೈಜ್ಞಾನಿಕ ತೀರ್ಮಾನಗಳು ಪರಿಣತ ಜ್ಞಾನವನ್ನು ಪ್ರತಿನಿಧಿಸುವುದಿಲ್ಲವೆಂದು
ಘೋಷಿಸಿದನು.
|
ಡೆಸ್ಕಾರ್ಟಿಸ್
|
ಸಂದೇಹ ಮಾರ್ಗಕ್ಕೆ ಕೊಡುಗೆ ನೀಡಿ,
ಯಾವುದನ್ನೇ ಆದರೂ ಒಪ್ಪಿಕೊಳ್ಳುವ ಮೊದಲು ಪ್ರಶ್ನಿಸುವ ವಿಷಯವನ್ನು ಮಂಡಿಸಿದನು.
|
ಪೊಲೆಂಡಿನ ಕೊಪರ್ನಿಕಸ್
|
ಸೂರ್ಯ ಕೇಂದ್ರಿತ ಸಿದ್ಧಾಂತ
|
ಜರ್ಮನಿಯ ಕೆಪ್ಲರ್
|
ಗ್ರಹಗಳು ಸೂರ್ಯನನ್ನು ಅಂಡಾಕೃತಿಯಲ್ಲಿ ಸುತ್ತುತ್ತವೆ.
|
ಗೆಲಿಲಿಯೋ
|
ದೂರದರ್ಶಕ ಯಂತ್ರ, ಕೊಪರ್ನಿಕಸ್ಸನ ಸೂರ್ಯಕೇಂದ್ರಿತ ಪರಿಕಲ್ಪನೆಗೆ ಬೆಂಬಲ,
ಚರ್ಚಿನ ಒತ್ತಡಕ್ಕೆ ಮಣಿದು ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡನು.
|
ನ್ಯೂಟನ್
|
ಗುರುತ್ವಾಕರ್ಷಣೆಯ ನಿಯಮ
|
ಆಂಡ್ಯೂ ವಸಾಲಿಯಸ್
|
ಶರೀರದ ಶಸ್ತ್ರಚಿಕಿತ್ಸೆ
|
ಪುನರುಜ್ಜೀವನದ ಪರಿಣಾಮಗಳು :
1.
ಆಧುನಿಕ ಜ್ಞಾನ: ಯುರೋಪಿನ ಮಧ್ಯಯುಗದ ಆಜ್ಞಾನದ ಕತ್ತಲೆಯನ್ನು
ಹೋಗಲಾಡಿಸಿತು.
2.
ಮತಸುಧಾರಣೆಗೆ ನಾಂದಿ: ಕ್ಯಾಥೋಲಿಕ್ ಚರ್ಚಿನ ಮೂಢನಂಬಿಕೆ ಮತ್ತು
ದಬ್ಬಾಳಿಕೆಯನ್ನು ಕೊನೆಗಾಣಿಸಿ ಮಾನವೀಯ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತು ನೀಡಿತು.
3. ಕಲೆ, ಸಾಹಿತ್ಯ ಮತ್ತು ವಿಜ್ಞಾನದ ಪ್ರಗತಿಯು
ವಿಶಾಲವಾದ ಚಿಂತನೆಗಳ ಬೆಳವಣಿಗೆಗೆ ದಾರಿ.
4.
ಭೌಗೋಳಿಕ ಅನ್ವೇಷಣೆಗಳಿಗೆ ಕಾರಣವಾಯಿತು: ಮಾನವನ ಸಹಜ ಕುತೂಹಲ
ಮತ್ತು ಜ್ಞಾನದಾಹದ ಹೆಚ್ಚಳ.
5. ಯುರೋಪಿನ ದೇಶಿಯ ಭಾಷೆಗಳು ಮತ್ತು ಇತರ
ಭಾಷೆಗಳು ಅಪಾರ ಬೆಳವಣಿಗೆಗಳನ್ನು ಕಂಡವು.
1 Comments
Shivananda
ReplyDelete