* ಪ್ರಮುಖ 50 ಕವಿಗಳ ಪರಿಚಯ & ಅವರ ಕೃತಿಗಳು – For SDA FDA & ವಿದ್ಯಾರ್ಥಿಗಳಿಗಾಗಿ



ಬೋಳುವಾರಿ ಮೊಹಮ್ಮದ್ ಕುಂಞ:  1951

 

ಜನನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ.

* ಮುಸ್ಲಿಂ ಸಂಸ್ಕೃತಿಯನ್ನು ಕನ್ನಡ ಸಾಹಿತ್ಯದ ಮೂಲಕ ಲೋಕಾರ್ಪಣೆ ಮಾಡಿದವರಲ್ಲಿ ಮೊದಲಿಗರು.

ಕೃತಿಗಳು:  ದೇವರುಗಳ ರಾಜ್ಯದಲ್ಲಿ, ಆಕಾಶಕ್ಕೆ ನೀಲಿ ಪರದೆ, ಜಿಹಾದ್, ಸ್ವಾತಂತ್ರ್ಯದ ಓಟ, ಪಂಡಿತ ಫಕೀರ, ತಟ್ಟು ಚಪ್ಪಾಳೆ ಪುಟ್ಟ ಮಗು, ಕಲಾಂ ಮೇಸ್ಟ್ರು .

ಕಾದಂಬರಿ:  ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ ಎಂಬ ಮಕ್ಕಳ ಕಾದಂಬರಿ .

ಬಿ. ವಿ. ಕಾರಂತ: ಬಾಬುಕೋಡಿ ವೆಂಕಟರಮಣ ಕಾರಂತ

ಕ್ರಿ. . 1928

ಜನನ:  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದಲ್ಲಿ.

ನಾಟಕಗಳು: ಈಡಿಪಸ್, ಪಂಜರಶಾಲೆ, ಗೋಕುಲ ನಿರ್ಗಮನ, ಸತ್ತವರ ನೆರಳು, ಜೋಕುಮಾರಸ್ವಾಮಿ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.

* ರವಿಂದ್ರನಾಥ ಟಾಗೋರ್ ಅವರ ಬಂಗಾಳಿ ನಾಟಕವನ್ನು ಕಪಂಜರಶಾಲೆ ಎಂದು ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ್ದಾರೆ.

>ಶ್ರೀ ಗುರುಸಿದ್ಧಯ್ಯ ಹುಚ್ಚಯ್ಯ ಹನ್ನೆರಡುಮಠ:

1940 ಮಾರ್ಚ್ 13ರಂದು

ಜನನ ಹುಬ್ಬಳ್ಳಿಯಲ್ಲಿ.

ಕೃತಿಗಳು:  ಸೋಮ ಸಾಕ್ಷಾತ್ಕಾರ, ಪಂಚಾರತಿ, ಮಹಾತಪಸ್ವಿ, ಬಂಡೆದ್ದ ಬಾರಕೋಲು, ಹೋಳಿ ಇತ್ಯಾದಿ.

* ಮಹಾತಪಸ್ವಿ, ಹೋಳಿ ಮುಂತಾದ ಕೃತಿಗಳು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದಿವೆ.

ಸಣ್ಣ ಕಥೆಗಳ ಸಂಕಲನ:  ಕನಕಾಂಬರಿಯೊಂದಿಗೆ ಕಂಪಿನ ಪಯಣ

ಡಾ. ಬಸವರಾಜ ಹದ್ಲಿ:

01-06-1955 ರಂದು

ಜನನ:  ಬಾಗಲಕೋಟೆ ಜಿಲ್ಲೆಯ ಬೇವೂರಿನಲ್ಲಿ.

ಕೃತಿಗಳು:  ವೀರ ಸೇನಾನಿ ಜನರಲ್ ಜಿ.ಜಿ.ಬೇವೂರ

ಶ್ರೀ ಪಂಜೆ ಮಂಗೇಶರಾವ್

ಕ್ರಿ. . 1874

ಜನನ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ.

ಕಾವ್ಯನಾಮ `ಕವಿಶಿಷ್ಯ'

* "ಮಕ್ಕಳ ಕವಿತೆಗಳ ಕಣ್ಮಣಿ" ಎಂದು ಪ್ರಸಿದ್ಧರಾಗಿದ್ದಾರೆ.

ಕೃತಿಗಳು:  ಹುತ್ತರಿಯ ಹಾಡು, ನಾಗರ ಹಾವೇ, ಕೋಟಿ ಚೆನ್ನಯ್ಯ, ಗುಡುಗುಡು ಗುಮ್ಮಟ ದೇವರು, ಮಾತಾಡೋ ರಾಮಪ್ಪ ಇತ್ಯಾದಿ.

ಕೆ. ಎಸ್. ನಿಸಾರ್ ಅಹಮ್ಮದ್:  ಕೊಕ್ಕರೆಹೊಸಹಳ್ಳಿ ಷೇಕ್ ಹೈದರ್ ನಿಸಾರ್ ಅಹಮ್ಮದ್

05-02-1936

ಜನನ:  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ.

ಕೃತಿಗಳು:  ಮನಸು ಗಾಂಧಿಬಜಾರು, ನೆನೆದವರ ಮನದಲ್ಲಿ, ನಿತ್ಯೋತ್ಸವ, ಸುಮೂರ್ತ ಇತ್ಯಾದಿ.

ಬಸವಣ್ಣ :

ಕ್ರಿ.. ಸುಮಾರು 12 ನೆಯ ಶತಮಾನ

ಜನನ:  ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲಿ.

* ಕಳಚುರಿ ವಂಶದ ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿ, ರಾಜ್ಯದ ಮಹಾದಂಡನಾಯಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

  ಅಂಕಿತನಾಮ: ಕೂಡಲ ಸಂಗಮದೇವಾ

* ಬಸವಣ್ಣನವರ ಕ್ರಿಯಾಕ್ಷೇತ್ರ ಬೀದರ ಜಿಲ್ಲೆಯ ಕಲ್ಯಾಣ (ಇಂದಿನ ಬಸವ ಕಲ್ಯಾಣ).

ಅಂಬಿಗರ ಚೌಡಯ್ಯ :

ಕ್ರಿ .. ಸುಮಾರು 12ನೆಯ ಶತಮಾನ.

ಜನನ ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ್ರಾ ನದಿ ತೀರದಲ್ಲಿ ತನ್ನ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು.

ಅಂಕಿತ ನಾಮ :  ಅಂಬಿಗರ ಚೌಡಯ್ಯ.

ಅಕ್ಕಮಹಾದೇವಿ :

ಕ್ರಿ . 1160

ಜನನ:  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ(ಉಡುಗಣಿ) ಗ್ರಾಮದಲ್ಲಿ.

* ಇವರ ಬರೆವಣಿಗೆಯು ಭಾವಗೀತಾತ್ಮಕವಾದುದು.

ಅಂಕಿತನಾಮ:  ಚೆನ್ನಮಲ್ಲಿಕಾರ್ಜುನ

* ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳೆಂದು ಐತಿಹ್ಯ.

ತಂದೆ ನಿರ್ಮಲಶೆಟ್ಟಿತಾಯಿ ಸುಮತಿ.

* ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ಭಾವಿಸಲು ಗಂಡುರೂಪ ಎಂಬಂತೆ ವ್ಯಕ್ತಿತ್ವವನ್ನು ರೂಪಿಸಿಕೊಂಡಳು.

ಆಯ್ದಕ್ಕಿ ಲಕ್ಕಮ್ಮ :

ಕ್ರಿ. . ಸುಮಾರು 12 ನೆಯ ಶತಮಾನ

ಜನನರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮದಲ್ಲಿ.

* ಮಹಾಮನೆಯ ಅಂಗಳದಲ್ಲಿ ಶುದ್ಧ ಅಕ್ಕಿಯನ್ನು ಆಯ್ದು ಜಂಗಮ ದಾಸೋಹವನ್ನು ನಡೆಸುತ್ತಿದ್ದರು.

ಅಂಕಿತನಾಮ:  ಮಾರಯ್ಯ ಪ್ರಿಯ ಅಮರೇಶ್ವರಲಿಂಗ.

ಚಂದ್ರಶೇಖರ ಪಾಟೀಲ(ಚಂಪಾ):

ಕ್ರಿ. . 1939

ಜನನ:  ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರಿನಲ್ಲಿ.

ಕೃತಿಗಳು:  ಬಾನುಲಿ, ಮಧ್ಯಬಿಂದು, ಗಾಂಧೀಸ್ಮರಣೆ, ಶಾಲ್ಮಲಾ ಇತ್ಯಾದಿ.

ಪುರಂದರದಾಸರು :

(1484-1564):

ಜನನ: ಮಹಾರಾಷ್ಟ್ರದ ಪುರಂದರಗಡದಲ್ಲಿ.

ತಂದೆ ವರದಪ್ಪನಾಯಕತಾಯಿ ಸರಸ್ವತಿ.

* ಪೂರ್ವದ ಹೆಸರು ಶ್ರೀನಿವಾಸನಾಯಕ.

* ಹರಿದಾಸ ಸಾಹಿತ್ಯದ ಅಶ್ವಿನಿದೇವತೆಗಳಲ್ಲಿ ಒಬ್ಬರು.

* ದಾಸರೆಂದರೆ ಪುರಂದರದಾಸರಯ್ಯ ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದಲೇ ಹೊಗಳಿಕೆಗೆ ಪಾತ್ರರಾದರು.

* ಕರ್ನಾಟಕ ಸಂಗೀತದ ಪಿಳ್ಳಾರಿ ಗೀತೆಗಳನ್ನು ರಚಿಸಿದರು.

ಬಿರುದು ಕರ್ನಾಟಕ ಸಂಗೀತದ ಪಿತಾಮಹ

ಅಂಕಿತನಾಮ:  ಪುರಂದರವಿಠಲ.

ಸಿದ್ಧಯ್ಯ ಪುರಾಣಿಕ ಕ್ರಿ. . 1918

ಜನನಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರ ಗ್ರಾಮದಲ್ಲಿ.

ಬಿರುದು ವಚನೋದ್ಯಾನದ ಅನುಭಾವಿ

ಕಾವ್ಯನಾಮ:  ಕಾವ್ಯಾನಂದ

ಕೃತಿಗಳು:  ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ಮೊದಲು ಮಾನವನಾಗು, ವಚನೋದ್ಯಾನ ಇತ್ಯಾದಿ.

ಡಾ. ಚಂದ್ರಶೇಖರ ಕಂಬಾರ:

ದಿನಾಂಕ 02-01-1937

ಜನನಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ೋಡಗೆರೆ ಗ್ರಾಮದಲ್ಲಿ.

ಮಹಾಕಾವ್ಯ: ಚಕೋರಿ

ನಾಟಕಗಳು:  ಸಂಗ್ಯಾಬಾಳ್ಯಾ, ಜೋಕುಮಾರಸ್ವಾಮಿ, ಸಿರಿಸಂಪಿಗೆ, ಶಿವರಾತ್ರಿ ಮುಂತಾದವು.

ಕಾದಂಬರಿಗಳು: ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ, ಶಿಖರಸೂರ್ಯ ಮುಂತಾದವು.

ಬಿ. ವಿ. ಸತ್ಯನಾರಾಯಣರಾವ್:

1948

ಜನನ:  ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದಲ್ಲಿ.

ಅಂಕಿತನಾಮ:  ಸತ್ಯವಿಠಲ.

ಕಾವ್ಯಗಳು:  ಬಸವ ಭಾರತಿ ಸುರ್ದೀ ಲಾವಣಿ ಕಾವ್ಯ, ಸಂಪೂರ್ಣ ದೇವೀ ಮಹಾತ್ಮೆ, ಬಸವೇಶ್ವರ ಲೀಲಾ ವೈಭವಂ, ಲಂಕೇಶ್ವರ ಸೋಮನಾಥ ಚಾರಿತ್ರ ಇತ್ಯಾದಿ.

*ಕೃತಿಗಳು: ಬಾಹುಬಲಿಚರಿತಂ, ಗಾಯತ್ರೀರಾಮಾಯಣ, ಸಿರಿಗನ್ನಡ ವೈಜಂತಿ, ಕನ್ನಡನಾಡ ಚರಿತ್ರೆ, ತತ್ವಭಾರತಿ, ಭಾವಗೀತಗಳು, ಶ್ರೀಶಿವಕುಮಾರಸ್ವಾಮಿ ಗುರುಚರಿತಂ, ಗುರುದತ್ತಚರಿತಂ ಇತ್ಯಾದಿ.

ಡಾ. ಬುದ್ದಣ್ಣ ಹಿಂಗಮಿರೆ :

ಕ್ರಿ. . 1933

ಜನನ:  ಬೆಳಗಾವಿ ಜಿಲ್ಲೆಯ ರಾಜಾಪೂರದ ಆರಗದಲ್ಲಿ.

ಕೃತಿಗಳು: ಉದಯರಾಗ, ಗುಬ್ಬಿಯ ಹಾಡು, ಹುಲ್ಲುಗೆಜ್ಜೆ, ಶಬ್ದ ರಕ್ತ ಮತ್ತು ಮಾಂಸ, ಹದ್ದುಗಳ ಹಾಡು.

ಮೂಡ್ನಾಕೂಡು ಚಿನ್ನಸ್ವಾಮಿ :

ಕ್ರಿ. . 1954

ಜನನ:  ಚಾಮರಾಜ ನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ.

ಕೃತಿಗಳು: ಕೊಂಡಿಗಳು ಮತ್ತು ಮುಳ್ಳು ಬೇಲಿಗಳು, ಗೋಧೂಳಿ, ನಾನೊಂದು ಮರವಾಗಿದ್ದರೆ, ಕೆಂಡಾಮಂಡಲ, ಭೀಮಾಬೋಯಿ, ಮೋಹದ ದೀಪ ಇತ್ಯಾದಿ.

ಡಾ. ನಾರ್ಬಟ್ ಡಿಸೋಜ:

1937 ಜೂನ್ 6ರಂದು

ಕಾದಂಬರಿ:  ಕಾಡಿನ ಬೆಂಕಿ ಹಾಗೂ ದ್ವೀಪ ಚಲನಚಿತ್ರಗಳಾಗಿ ರಜತಕಮಲ ಹಾಗೂ ಸ್ವರ್ಣಕಮಲ ಪ್ರಶಸ್ತಿಗಳನ್ನು ಪಡೆದಿವೆ.

*ಬಳುವಳಿ ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ.

* ಮುಳುಗಡೆಯ ಊರಿಗೆ ಬಂದವರು ಕಿರು ಕಾದಂಬರಿಗೆ 2011 ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ರಸ್ಕಾರ ದೊರೆತಿ.

ಶ್ರೀಮತಿ ವಿ. ಗಾಯತ್ರಿ

 

ಕೃತಿಗಳು:  ಕರ್ನಾಟಕದಲ್ಲಿ ಸಾವಯವ ಪರಂಪರೆಯ ಕಥನ ಭಾಗ 1 ಮತ್ತು 2, ಸಹಜ/ಸಾವಯವ ರೈತರ ಕೃಷಿ ಮತ್ತು ಬದುಕುಗಳು, ಕೇಂದ್ರ ಪರಿಸರ ಮಂತ್ರಾಲಯದ ಪರಿಸರ ಶಿಕ್ಷಣ ಕೇಂದ್ರಕ್ಕಾಗಿ ಪರಿಸರ ಶಿಕ್ಷಣದಲ್ಲಿ ಅಗತ್ಯ ಕಲಿಕೆಗಳು. ಎಳೆಯರಿಗಾಗಿ ಪರಿಸರ ಇತ್ಯಾದಿ.

ಕಾದಂಬರಿ:  ತುಂಗಾಇದು  ಮಕ್ಕಳ ಸೃಜನಶೀಲ ಕಲಿಕೆಯ ಸುತ್ತ ಹೆಣೆದ ಕಾದಂಬರಿ.

* ತೊತ್ತೋಚಾನ್ ವಿಶ್ವವಿಖ್ಯಾತ ಜಪಾನಿ ಕಾದಂಬರಿಯ ಕನ್ನಡ ಅನುವಾದ.

ಗಿರೀಶರಾವ್ ಹತ್ವಾರ್:  ನವೆಂಬರ್ 1965

ಜನನ:  ದಕ್ಷಿಣ ಕನ್ನಡ ಜಿಲ್ಲೆಯ ಹೊಸಬೆಟ್ಟಿನಲ್ಲಿ.

ಕೃತಿ: ಕಥಾಸಮಯ.

ಕಾವ್ಯನಾಮ:  ಜೋಗಿ

ಪೂರ್ಣಚಂದ್ರ ತೇಜಸ್ವಿ

1938 ಸೆಪ್ಟೆಂಬರ್ 08

 

ಜನನ:  ಶಿವಮೊಗ್ಗದಲ್ಲಿ.

* ಇವರು ರಾಷ್ಟ್ರಕವಿ ಕುವೆಂಪು ರವರ ಪುತ್ರ.

ಕೃತಿಗಳು ಕರ್ವಾಲೊ, ಅಬಚೂರಿನ ಸ್ಟಾಫೀಸ್, ಚಿದಂಬರ ರಹಸ್ಯ, ಕಿರಗೂರಿನ ಗಯ್ಯಾಳಿಗಳು, ತಬರನ ಕಥೆ, ಜುಗಾರಿ ಕ್ರಾಸ್,ಮಾಯಾಲೋಕ, ಪರಿಸರದ ಕತೆ, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್, ಅಣ್ಣನ ನೆನ ಇತ್ಯಾದಿ.

ಡಾ.ಎಚ್.ಎಸ್.ವೆಂಕಟೇಶಮೂರ್ತಿ

1944

ಜನನ:  ದಾವಣಗೆರೆ ಜಿಲ್ಲೆಯ ನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ.

ಕವನ ಸಂಕಲನಗಳು:  ಸಿಂದಾಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲಹಬ್ಬ, ಭೂಮಿಯೂ ಒಂದು ಆಕಾಶ ಮೊದಲಾದವು.

ನಾಟಕಗಳು ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಳಿಲು ರಾಮಾಯಣ, ಸುಣ್ಣದ ಸುತ್ತು, ಊರ್ಮಿಳಾ ಹೂವಿ ಮತ್ತು ಸಂಧಾನ ಮೊದಲಾದವು.

* ಇವರ ಋತುವಿಲಾಸ ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ.

.ಆರ್. ಮಣಿಕಾಂತ್:

 

* ಈಗ ಕನ್ನಡಪ್ರಭ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದು, ಭಾವತೀರಯಾನ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ.

ಕೃತಿಗಳು:  ಉಭಯಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ, ಮರೆಯಲಿ ಹ್ಯಾಂಗ, ಗುಲಾಬಿಯು ನಿನಗಾಗಿ ಅಪ್ಪ ಅಂದ್ರೆ ಆಕಾಶ ಇತ್ಯಾದಿ.

ಡಾ. ಸತ್ಯಾನಂದ ಪಾತ್ರೋಟ:

 

ಜನನ:  ಬಾಗಲಕೋಟೆಯಲ್ಲಿ,

ಕವನ ಸಂಕಲನಗಳು:  ಕರಿನೆಲದ ಕಲೆಗಳು, ಜಾಜಿ ಮಲ್ಲಿಗೆ, ಕಲ್ಲಿಗೂ ಗೊತ್ತಿರುವ ಕಥೆ, ಕರಿಯ ಕಟ್ಟಿದ ಕವನ, ನನ್ನ ಕನಸಿನ ಹುಡುಗಿ, ನದಿಗೊಂದು ಕನಸು ಮತ್ತು ಅವಳು ಇತ್ಯಾದಿ.

ನಾಟಕಗಳು:  ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ, ಮತ್ತೊಬ್ಬ ಏಕಲವ್ಯ

ಧ್ವನಿಸುರುಳಿ:  ಎದೆಯ ಮಾತು.

ಡಾ. ಎಂ. ಅಕಬರ ಅಲಿ:

1925 ಮಾರ್ಚ್ 3

ಜನನ:  ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾರದಲ್ಲಿ.

* ವಿಷಸಿಂಧು ಎಂಬ ಅಷ್ಟ ಷಟ್ಪದಿಗಳ ಸಂಗ್ರಹವನ್ನೂ, ನವಚೇತನ ಗಂಧಕೇಶರ, ಸುಮನಸೌರಭ ಎಂಬ ಕವನ ಸಂಗ್ರಹಗಳನ್ನೂ, ಅವ್ವ ಎಂಬ ಚುಟುಕುಗಳ ಸಂಗ್ರಹವನ್ನೂ ರಚಿಸಿದ್ದಾರೆ.

ಕಾದಂಬರಿ:  ನಿರೀಕ್ಷೆಯಲಿ.

ಜೇಡರ ದಾಸಿಮಯ್ಯ :

11ನೇ ಶತಮಾನ

ಜನನ ಯಾದಗಿರಿ ಸನಿಹದ ಮುದೇನೂರಿನಲ್ಲಿ.

* ಪ್ರಥಮ/ಆದ್ಯ ವಚನಕಾರನೆಂದೇ ಮಾನ್ಯನಾಗಿದ್ದಾನೆ.

ಅಂಕಿತನಾಮ ರಾಮನಾಥ.

ಮಡಿವಾಳ ಮಾಚಯ್ಯ :

12ನೇ ಶತಮಾನ

ಜನನ:  ವಿಜಯಪುರ ಜಿಲ್ಲೆಯ ಹಿಪ್ಪರಗಿ.

* ಬಸವಣ್ಣನವರ ಕೀರ್ತಿ ಕೇಳಿ ಹೊಸ ಧರ್ಮಕ್ಕೆ ಆಕರ್ಷಣೆಗೊಂಡು ಕಲ್ಯಾಣಕ್ಕೆ ಹೋದವರಲ್ಲಿ ಮೊದಲಿಗರು.

* ಮಾಚಯ್ಯ ಕಲ್ಯಾಣದಲ್ಲಿ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿಮಾಡಿಕೊಂಡಿದ್ದವರು.

ಅಂಕಿತನಾಮ:  ಕಲಿದೇವರ ದೇವ.

ಸತ್ಯಕ್ಕ :  12ನೆಯ ಶತಮಾನ

ಜನನ:  ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು.

* ಶಿವಭಕ್ತರ ಮನೆಯಂಗಳ ಕಸಗುಡಿಸುತ್ತ ಶಿವಭಕ್ತಿಯನ್ನು ಆಚರಿಸುವುದು ಇವರ ಕಾಯಕವಾಗಿತ್ತು.

* ಶಿವನಲ್ಲದೆ ಅನ್ಯ ದೇವ ಪೂಜಿಸೆ; ಶಿವ ಶಬ್ದವಲ್ಲದೆ ಅನ್ಯ ಶಬ್ದವ ಕೇಳೆ ಎಂಬ ಪ್ರತಿಜ್ಞೆ ಅವರದಾಗಿತ್ತು.

ಅಂಕಿತನಾಮ:  ಶಂಭುಕ್ಕೇಶ್ವರ.

ಡಾ. ಡಿ.ಎಸ್.ಕರ್ಕಿ:

1907 ನವೆಂಬರ್ 15

ಜನನ:  ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಕೊಪ್ಪದಲ್ಲಿ.

ಕವನ ಸಂಕಲನಗಳು:  ನಕ್ಷತ್ರಗಾನ, ಭಾವತೀರ್ಥ, ತನನತೋಂ, ಗೀತ ಗೌರವ, ಕರಿಕೆ ಕಣಗಿಲು, ನಮನ, ಬಣ್ಣದ ಚೆಂಡು ಇತ್ಯಾದಿ.

* ಕನ್ನಡ ಛಂದೋವಿಕಾಸ ಎಂಬ ಸಂಶೋಧನಾ ಪ್ರಬಂಧವನ್ನು ಸಹ ಬರೆದು ಕನ್ನಡಿಗರ ಮನಗೆದ್ದಿದ್ದಾರೆ.

ಮುದೇನೂರು ಸಂಗಣ್ಣ :

17 ಮಾರ್ಚ್ 1927

ಜನನ ಬಳ್ಳಾರಿ ಜಿಲ್ಲೆಗೆ ಸೇರಿದ ಹರಪ್ಪನಹಳ್ಳಿ ತಾಲ್ಲೂಕಿನ ಚಿಗಟೇರಿಯಲ್ಲಿ.

ನಾಟಕಗಳು:  ನವಿಲು ಕುಣಿದಾವ, ಬಾಳಬಿಕ್ಷುಕ, ಚಿತ್ರಪಟ ರಾಮಾಯಣ ಮೊದಲಾದವು.

ಕೃತಿಗಳು:  ಜನಪದ ಮುಕ್ತಕಗಳು, ಅಜ್ಜ ಮೊಮ್ಮಗ, ಗೊಂದಲಿಗ ದೇವೇಂದ್ರಪ್ಪನ ಹಾಡುಗಳು, ಚಿಗಟೇರಿ ಪದಕೋಶ ಮೊದಲಾದವು.

ಮುಪ್ಪಿನ ಷಡಕ್ಷರಿ:

ಕ್ರಿ. 1500

ಜನನ:  ಸುಮಾರಿಗೆ ಕೊಳ್ಳೆಗಾಲದಲ್ಲಿ.

* ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ.

ಕೃತಿಗಳು:  ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ.

* ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ.

ಕುಮಾರವ್ಯಾಸ:  ಕ್ರಿ.. 1430

ಜನನ:  ಈಗಿನ ಗದಗ ಜಿಲ್ಲೆಯಲ್ಲಿರುವ ಕೋಳಿವಾಡ ಗ್ರಾಮದಲ್ಲಿ.

ಕಾವ್ಯನಾಮ :  ಕುಮಾರವ್ಯಾಸ.

ಮೂಲ ಹೆಸರು ನಾರಣಪ್ಪ ಹಾಗೂ ಗದುಗಿನ ನಾರಣಪ್ಪ

* ಗದುಗಿನ ವೀರನಾರಾಯಣನ ಗುಡಿಯಲ್ಲಿ ಈಗಲೂ ಸಹ ಒಂದು ಕಂಬಕ್ಕೆ ಕುಮಾರವ್ಯಾಸನ ಕಂಬ ಎಂದು ಕರೆಯಲಾಗುತ್ತದೆ. ಕುಮಾರವ್ಯಾಸ ಕಂಬದ ಅಡಿಯಲ್ಲೇ ಕಾವ್ಯವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಇದೆ.

ಕೃತಿಗಳು:  ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಕರೆಯಲಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ ಹತ್ತು ಪರ್ವಗಳನ್ನು ಒಳಗೊಂಡಿದೆ. ಸಂರ್ಣ ಕಾವ್ಯ ಭಾಮಿನಿ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದೆ ಮತ್ತು ಐರಾವತ.

ಬಿರುದು:  ರೂಪಕ ಸಾಮ್ರಾಜ್ಯ ಚಕ್ರವತಿ.

* ಕುಮಾರವ್ಯಾಸ ಪ್ರತಿಭೆಗೆ ಕನ್ನಡಿಯಾಗಿ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ನೋಡಿ. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು ಮೈಯ್ಯಲಿ ಮಿಂಚಿನ ಹೊಳೆ ತುಳುಕಾಡುವುದು.

* ಆದಿಕವಿ ಪಂಪನ ಅನಂತರ ವ್ಯಾಸರ ಮಹಾಭಾರತದ ಕನ್ನಡದಲ್ಲಿ ಮೊದಲ ಹತ್ತು ಪರ್ವಗಳನ್ನು ರಚಿಸಿ ಪಂಡಿತರಿಗೆ ಮಾತ್ರವಲ್ಲದೇ, ಪಾಮರರಿಗೂ ಕಾಮಧೇನು ಎಂಬ ಗೌರವಕ್ಕೆ ಪಾತ್ರನಾದವನು ಕುಮಾರವ್ಯಾಸ.

ಡಾ.ಎಲ್. ಬಸವರಾಜು:

ಕ್ರಿ..1919

ಜನನ:  ರಲ್ಲಿ ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ.

ಕೃತಿಗಳು:  ಶಿವದಾಸ ಗೀತಾಂಜಲಿ, ಬಸವಣ್ಣನವರ ವಚನಗಳು, ಭಾಸನ ಭಾರತ ರೂಪಕ, ಅಲ್ಲಮನ ವಚನಗಳು ಮೊದಲಾದವು.

ಹಂಸಲೇಖ:  1951

ಮೂಲ ಹೆಸರು:  ಜಿ. ಗಂಗರಾಜು.

* ಇವರ ರಚನೆಯ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯು ಅಪಾರ ಜನಪ್ರಿಯತೆ ಪಡೆಯಿತು.

ಡಾ. ಎಚ್.ಎಸ್. ಅನುಪಮ:

06-02-1970

ಜನನ:  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲುನಲ್ಲಿ.

ಕೃತಿಗಳು:  ಕಾಡುಹಕ್ಕಿಯ ಹಾಡು ಮತ್ತು ಸಹಗಮನ (ಕವನ ಸಂಕಲನ), ಹೂವರಳಿದ್ದಕ್ಕೆ ಯಾಕೆ ಸಾಕ್ಷಿ? (ಕಥಾ ಸಂಕಲನ), ಜೀವಕೋಶ ವೈದ್ಯಲೋಕದ ಕಥನ (ಚಿಂತನ ಬರೆಹ), ನೈಲ್ ನದಿಯಗುಂಟ ಶರಾವತಿಯನರಸುತ್ತ ಮತ್ತು ಅಂಡಮಾನ್: ಛತ್ರಪತಿ ಶಾಹೂ:  ಜನರ ನೋವಿಗೆ ಮಿಡಿದ ಪ್ರಾಣಮಿತ್ರ ಮತ್ತು ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ (ಜೀವನ ಚರಿತ್ರೆ).

ಪ್ರವಾಸ ಕಥನ ಕಂಡ ಹಾಗೆ,

ಅಂಕಣ ಬರಹ ನೋಯುವ ಹಲ್ಲಿಗೆ ಹೊರಳುವ ನಾಲಿಗೆ ಎಂಬ ಅಂಕಣ ಬರಹ ಜನಪ್ರಿಯವಾಗಿದೆ.

ಚನ್ನಮಲ್ಲಪ್ಪ ಹಲಸಂಗಿ : ಕ್ರಿಸ್ತ ಶಕ 1903

ಜನನ:  ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ.

ಕಾವ್ಯನಾಮಮಧುರಚೆನ್ನ.

ಕವನ ಸಂಕಲನ:  ನನ್ನ ನಲ್ಲ.

ದು. ಸರಸ್ವತಿ:

1963

ಜನನ: ಬೆಂಗಳೂರಿನಲ್ಲಿ.

ಕವನ ಸಂಕಲನ:  ಹೆಣೆದರೆ ಜೇಡನಂತೆ ಮತ್ತು ಜೀವಸಂಪಿಗೆ.

ಡಾ. ಕೃಷ್ಣಾನಂದ ಕಾಮತ್:

29.09.1934

ಜನನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲ್ಲಿ.

ಕೃತಿಗಳು:  ನಾನೂ ಅಮೆರಿಕಾಗೆ ಹೋಗಿದ್ದೆ, ಪ್ರಾಣಿ ಪರಿಸರ, ಕೀಟ ಜಗತ್ತು, ಪಶು ಪಕ್ಷಿ ಪ್ರಪಂಚ, ಸಸ್ಯ ಪರಿಸರ, ಇರುವೆಯ ಇರವು, ಸರ್ಪ ಸಂಕುಲ ಮತ್ತು ಕಾವಿ ಕಲೆ ಇತ್ಯಾದಿ.

ಬಾಗಲೋಡಿ ದೇವರಾಯ:

1927

ಜನನ:  ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿ.

ಕಥಾಸಂಗ್ರಹಗಳು:  ಹುಚ್ಚು ಮುನಸೀಫ ಮತ್ತು ಇತರ ಕತೆಗಳು, ಆರಾಧನಾ, ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು.

ಶ್ರೀಮತಿ ನೇಮಿಚಂದ್ರ:

ಜುಲೈ 16, 1959

ಜನನ:  ಚಿತ್ರದುರ್ಗದಲ್ಲಿ.

ಕೃತಿಗಳು ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೆ ಬರೆದ ಕಥೆಗಳು, ನೇಮಿಚಂದ್ರರ ಕಥೆಗಳು ಮುಂತಾದ ಕಥಾಸಂಕಲನಗಳು.

ಕಾದಂಬರಿ:  ಯಾದ್ ವಶೇಮ್.

ಪ್ರವಾಸ ಕಥನಗಳು:  ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ.

ಹಿರೇಮಲ್ಲೂರು ಈಶ್ವರನ್:

11.01.1922

ಜನನ:  ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು.

* ಪ್ರವಾಸ ಕಥನ:  ಕವಿ ಕಂಡ ನಾಡು.

ಕೃತಿಗಳು:  ಭಾರತದ ಹಳ್ಳಿಗಳು, ವಲಸೆ ಹೋದ ಕನ್ನಡಿಗನ ಕತೆ, ಹಾಲಾಹಲ, ರಾಜಾರಾಣಿ ದೇಖೋ, ಶಿವನ ಬುಟ್ಟಿ, ತಾಯಿನೋಟ ಮೊದಲಾದವು.

ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ:

29. 10. 1936

ಜನನ ಶಿವಮೊಗ್ಗದಲ್ಲಿ.

ಕವನ ಸಂಕಲನಗಳು:  ವೃತ್ತ, ಚಿತ್ರಕೂಟ, ಸುಳಿ. ಇವರ ಪ್ರಸಿದ್ಧ ಧ್ವನಿ ಸುರುಳಿಗಳು ದೀಪಿಕಾ, ಭಾವಸಂಗಮ, ಬಂದೇಬರತಾವ ಕಾಲ, ಬಾರೋ ವಸಂತ, ಅಭಿನಂದನ, ಭಾವೋತ್ಸವ, ಪ್ರೇಮಧಾರೆ. ಮಕ್ಕಳ ಧ್ವನಿ ಸುರುಳಿಗಳು ನಂದನ, ಕಿನ್ನರಿ, ನವಿಲುಗರಿ, ಕಿಶೋರಿ ಮುಂತಾದವು.

* 2000ದಲ್ಲಿ ಹೂಸ್ಟನ್ನಿನಲ್ಲಿ ನಡೆದ ಪ್ರಥಮ ಅಮೆರಿಕಾ ವಿಶ್ವ ಕನ್ನಡ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

.ಕೆ. ರಾಮಾನುಜನ್:  ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್

ಮಾರ್ಚ್ 16. 1929

ಜನನ ಮೈಸೂರಿನಲ್ಲಿ.

ಕೃತಿಗಳು ಹೊಕ್ಕುಳಲ್ಲಿ ಹೂವಿಲ್ಲ ಮತ್ತು ಇತರ ಕವಿತೆಗಳು, ಕುಂಟೋಬಿಲ್ಲೆ, ಮತ್ತೊಬ್ಬನ ಆತ್ಮ ಚರಿತ್ರೆ

*  ಕನ್ನಡ ವಚನ ಸಾಹಿತ್ಯವನ್ನು "ಸ್ಪಿಕಿಂಗ್ ಆಫ್ ಶಿವ" ಎಂದು ಅನುವಾದಿಸಿದ್ದಾರೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್:  6-6-1891

ಜನನ: ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ.

ಕಾವ್ಯನಾಮ ಶ್ರೀನಿವಾಸ

ಬಿರುದು:  ಸಣ್ಣಕಥೆಗಳ ಜನಕ.

* ಇವರ ಸಣ್ಣಕಥೆಗಳು ಒಟ್ಟು ಹದಿಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ.

ಕೃತಿಗಳು: `ಗೌತಮಿ ಹೇಳಿದ ಕಥೆ, `ಸಾರಿಪುತ್ರನ ಕೊನೆಯ ದಿನಗಳು, `ಕುಚೇಲನ ಭಾಗ್ಯ, `ಹೇಮಕೂಟದಿಂದ ಬಂದ ಮೇಲೆ, `ಚಿಕವೀರರಾಜೇಂದ್ರ ಮೊದಲಾದವು.

ಡಾ||ಯು.ಆರ್.ಅನಂತಮೂರ್ತಿ ಕ್ರಿ.. 1932-2014 ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ

ಜನನ: . ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದಲ್ಲಿ.

ಕಾದಂಬರಿಗಳು:  ಸಂಸ್ಕಾರ, ಭವ, ಅವಸ್ಥೆ, ಭಾರತೀಪುರ ಮುಂತಾದವು.

ನಾಟಕ ಆವಾಹನೆ (ನಾಟಕ)

ಕಥಾ ಸಂಕಲನಗಳು:  ಮೌನಿ, ಪ್ರಶ್ನೆ, ಎಂದೆಂದೂ ಮುಗಿಯದ ಕಥೆ,

ಕವನಸಂಕಲನಗಳು:  ಮಿಥುನ, ಅಜ್ಜನ ಹೆಗಲ ಸುಕ್ಕುಗಳು

ಆತ್ಮ ಕಥೆ ಸುರಗಿ.

ನಂದಳಿಕೆ ಲಕ್ಷ್ಮೀನಾರಾಯಣಪ್ಪ:  ಮುದ್ದಣ 1870 ಜನವರಿ 24

ಜನನ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ನಂದಳಿಕೆಯ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ 

* ತಾಯಿಯು ಈತನನ್ನು ಮುದ್ದಣ ಎಂದು ಮುದ್ದಿನಿಂದ ಕರೆಯುತ್ತಿದ್ದಳು.

ಕೃತಿಗಳು:  ರತ್ನಾವತಿಕಲ್ಯಾಣ ಮತ್ತು ಕುಮಾರವಿಜಯ ಎಂಬ ಯಕ್ಷಗಾನ ಪ್ರಸಂಗಗಳು.

* ವಾರ್ಧಕ ಷಟ್ಪದಿಯಲ್ಲಿ ರಚಿಸಲ್ಪಟ್ಟ ಶ್ರೀರಾಮಪಟ್ಟಾಭಿಷೇಕಂ ಕಾವ್ಯ, ಹಳಗನ್ನಡ ಶೈಲಿಯಲ್ಲಿ ಬರೆಯಲ್ಪಟ್ಟ ಅದ್ಭುತರಾಮಾಯಣ ಮತ್ತು ಶ್ರೀರಾಮಾಶ್ವಮೇಧಂ ಗದ್ಯಕಾವ್ಯಗಳು

ಬಿರುದು ಹೊಸಗನ್ನಡದ ಅರುಣೋದಯದ ಮುಂಗೋಳಿ.

ರಾಷ್ಟ್ರಕವಿ ಎಂ. ಗೋವಿಂದ ಪೈ:

23.03.1883

ಜನನ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ.

* ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.

ಕವನ ಸಂಕಲನಗಳು:  ಗಿಳಿವಿಂಡು, ನಂದಾದೀಪ ಮೊದಲಾದವು. ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ ಗದ್ಯಾನುವಾದ, ಸಿಂಗಾಲ ಸುತ್ತ ಬೌದ್ಧ ಸೂತ್ರಗಳ ಕನ್ನಡ ಅನುವಾದ.

* 35 ವೃತ್ತಗಳುಳ್ಳ ಪ್ರಾಸ ರಹಿತ ಗೊಮ್ಮಟ ಜಿನಸ್ತುತಿಯನ್ನು ರಚಿಸಿ ಪ್ರಕಟಿಸಿದರು.

ಖಂಡಕಾವ್ಯಗಳು ವೈಶಾಖ ಮತ್ತು ಗೊಲ್ಗೊಥಾ.

ಕೃತಿಗಳುಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೇ ಚಿತ್ರಭಾನು, ಹೆಬ್ಬೆರಳು, ಪಾಶ್ರ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮೊದಲಾದವು.

*  ಅವರಿಗೆ 1949 ರಲ್ಲಿ ಮದ್ರಾಸ್ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿದೆ.

* ಇವರು ಕನ್ನಡದ ಮೊದಲ ರಾಷ್ಟ್ರಕವಿ ಹೆಗ್ಗಳಿಕೆಗೆ ಪಾತ್ರರಾದವರು.

ಕೆ.ಎಸ್. ನರಸಿಂಹಸ್ವಾಮಿ:    26-01-1915

ಜನನ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ.

ಕವನ ಸಂಕಲನಗಳು ಮೈಸೂರು ಮಲ್ಲಿಗೆ(ಮೊದಲ ಕವನ ಸಂಕಲನ 1943ರಲ್ಲಿ ಪ್ರಕಟವಾಯಿತು.) ಶಿಲಾಲತೆ, ಐರಾವತ, ನವಪಲ್ಲವ, ಇರುವಂತಿಗೆ, ದೀಪದ ಮಲ್ಲಿ, ಉಂಗುರ, ಉಪವನ, ದಮಯಂತಿ, ಮನೆಯಿಂದ ಮನೆಗೆ, ತೆರೆದ ಬಾಗಿಲು .

* 1977 ರಲ್ಲಿ ಇವರ ತೆರೆದ ಬಾಗಿಲು ಎಂಬ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಕೃತಿಗಳುಮೋಹನಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ರಾಣಿಯ ಗಿಳಿ ಮತ್ತು ರಾಜನ ಮಂಗ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಬಿರುದು:  ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೇಮಕವಿ ಎಂದೇ ಗುರುತಿಸಲಾಗಿದೆ.

ಚೆನ್ನವೀರ ಕಣವಿ:

1928

ಜನನಗದಗ ಜಿಲ್ಲೆಯ ಹೊಂಬಳದಲ್ಲಿ.

ಬಿರುದುನವೋದಯ ಮತ್ತು ನವ್ಯ ಮಾರ್ಗಗಳ ಸಮನ್ವಯ ಸಾಧಿಸಿದ ಕವಿಯೆಂದೇ ಪ್ರಸಿದ್ಧರು.

ಕವನ ಸಂಕಲನಗಳು:  ಆಕಾಶಬುಟ್ಟಿ, ಭಾವಜೀವಿ, ಮಧುಚಂದ್ರ, ದೀಪಧಾರಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಕಾವ್ಯಾಕ್ಷಿ, ಚಿರಂತನ ದಾಹ ಮತ್ತು ಜೀವಧ್ವನಿ.

ಶ್ರೀಮತಿ.ಬಿ.ಟಿ. ಲಲಿತಾನಾಯಕ್

04.04.1945

ಜನನ ಚಿಕ್ಕಮಗಳೂರು ಜಿಲ್ಲೆಯ ತಂಗಲಿ ತಾಂಡ್ಯದಲ್ಲಿ.

ಕೃತಿಗಳು ಚಂದ್ರ ಪರಾಭವ, ಭಟ್ಟನ ಕನಸು, ನೆಲೆಬೆಲೆ, ನಂ ರೂಪ್ಲಿ, ಗತಿ, ಹಬ್ಬ ಮತ್ತು ಬಲಿ, ಇದೇ ಕೂಗು ಮತ್ತೆ ಮತ್ತೆ, ದೇವದುರ್ಗ ತಾಲೂಕು ದರ್ಶನ, ಒಡಲ ಬೇಗೆ ಮೊದಲಾದವು.

* ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯೆಯಾಗಿಯೂ ಕರ್ನಾಟಕ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿರುವರು.

Post a Comment

1 Comments

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete