* ಪ್ರಮುಖ 50 ಕವಿಗಳ ಪರಿಚಯ & ಅವರ ಕೃತಿಗಳು – For SDA FDA & ವಿದ್ಯಾರ್ಥಿಗಳಿಗಾಗಿ



ಬೋಳುವಾರಿ ಮೊಹಮ್ಮದ್ ಕುಂಞ:  1951

 

* ಜನನ:  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ.

* ಮುಸ್ಲಿಂ ಸಂಸ್ಕೃತಿಯನ್ನು ಕನ್ನಡ ಸಾಹಿತ್ಯದ ಮೂಲಕ ಲೋಕಾರ್ಪಣೆ ಮಾಡಿದವರಲ್ಲಿ ಮೊದಲಿಗರು.

* ಕೃತಿಗಳು:  ದೇವರುಗಳ ರಾಜ್ಯದಲ್ಲಿ, ಆಕಾಶಕ್ಕೆ ನೀಲಿ ಪರದೆ, ಜಿಹಾದ್, ಸ್ವಾತಂತ್ರ್ಯದ ಓಟ, ಪಂಡಿತ ಫಕೀರ, ತಟ್ಟು ಚಪ್ಪಾಳೆ ಪುಟ್ಟ ಮಗು, ಕಲಾಂ ಮೇಸ್ಟ್ರು .

* ಕಾದಂಬರಿ:  ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ ಎಂಬ ಮಕ್ಕಳ ಕಾದಂಬರಿ .

ಬಿ. ವಿ. ಕಾರಂತ: ಬಾಬುಕೋಡಿ ವೆಂಕಟರಮಣ ಕಾರಂತ

ಕ್ರಿ. ಶ. 1928

* ಜನನ:  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದಲ್ಲಿ.

* ನಾಟಕಗಳು: ಈಡಿಪಸ್, ಪಂಜರಶಾಲೆ, ಗೋಕುಲ ನಿರ್ಗಮನ, ಸತ್ತವರ ನೆರಳು, ಜೋಕುಮಾರಸ್ವಾಮಿ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.

* ರವಿಂದ್ರನಾಥ ಟಾಗೋರ್ ಅವರ ಬಂಗಾಳಿ ನಾಟಕವನ್ನು ಕಪಂಜರಶಾಲೆ ಎಂದು ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ್ದಾರೆ.

>ಶ್ರೀ ಗುರುಸಿದ್ಧಯ್ಯ ಹುಚ್ಚಯ್ಯ ಹನ್ನೆರಡುಮಠ:

1940 ಮಾರ್ಚ್ 13ರಂದು

* ಜನನ:  ಹುಬ್ಬಳ್ಳಿಯಲ್ಲಿ.

* ಕೃತಿಗಳು:  ಸೋಮ ಸಾಕ್ಷಾತ್ಕಾರ, ಪಂಚಾರತಿ, ಮಹಾತಪಸ್ವಿ, ಬಂಡೆದ್ದ ಬಾರಕೋಲು, ಹೋಳಿ ಇತ್ಯಾದಿ.

* ಮಹಾತಪಸ್ವಿ, ಹೋಳಿ ಮುಂತಾದ ಕೃತಿಗಳು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದಿವೆ.

* ಸಣ್ಣ ಕಥೆಗಳ ಸಂಕಲನ:  ಕನಕಾಂಬರಿಯೊಂದಿಗೆ ಕಂಪಿನ ಪಯಣ

ಡಾ. ಬಸವರಾಜ ಹದ್ಲಿ:

01-06-1955 ರಂದು

* ಜನನ:  ಬಾಗಲಕೋಟೆ ಜಿಲ್ಲೆಯ ಬೇವೂರಿನಲ್ಲಿ.

* ಕೃತಿಗಳು:  ವೀರ ಸೇನಾನಿ ಜನರಲ್ ಜಿ.ಜಿ.ಬೇವೂರ

ಶ್ರೀ ಪಂಜೆ ಮಂಗೇಶರಾವ್

ಕ್ರಿ. ಶ. 1874

* ಜನನ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ.

* ಕಾವ್ಯನಾಮ:  `ಕವಿಶಿಷ್ಯ'

* "ಮಕ್ಕಳ ಕವಿತೆಗಳ ಕಣ್ಮಣಿ" ಎಂದು ಪ್ರಸಿದ್ಧರಾಗಿದ್ದಾರೆ.

* ಕೃತಿಗಳು:  ಹುತ್ತರಿಯ ಹಾಡು, ನಾಗರ ಹಾವೇ, ಕೋಟಿ ಚೆನ್ನಯ್ಯ, ಗುಡುಗುಡು ಗುಮ್ಮಟ ದೇವರು, ಮಾತಾಡೋ ರಾಮಪ್ಪ ಇತ್ಯಾದಿ.

ಕೆ. ಎಸ್. ನಿಸಾರ್ ಅಹಮ್ಮದ್:  ಕೊಕ್ಕರೆಹೊಸಹಳ್ಳಿ ಷೇಕ್ ಹೈದರ್ ನಿಸಾರ್ ಅಹಮ್ಮದ್

05-02-1936

* ಜನನ:  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ.

* ಕೃತಿಗಳು:  ಮನಸು ಗಾಂಧಿಬಜಾರು, ನೆನೆದವರ ಮನದಲ್ಲಿ, ನಿತ್ಯೋತ್ಸವ, ಸುಮೂರ್ತ ಇತ್ಯಾದಿ.

ಬಸವಣ್ಣ :

ಕ್ರಿ.ಶ. ಸುಮಾರು 12 ನೆಯ ಶತಮಾನ

* ಜನನ:  ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲಿ.

* ಕಳಚುರಿ ವಂಶದ ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿ, ರಾಜ್ಯದ ಮಹಾದಂಡನಾಯಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

  ಅಂಕಿತನಾಮ: ಕೂಡಲ ಸಂಗಮದೇವಾ

* ಬಸವಣ್ಣನವರ ಕ್ರಿಯಾಕ್ಷೇತ್ರ ಬೀದರ ಜಿಲ್ಲೆಯ ಕಲ್ಯಾಣ (ಇಂದಿನ ಬಸವ ಕಲ್ಯಾಣ).

ಅಂಬಿಗರ ಚೌಡಯ್ಯ :

ಕ್ರಿ .ಶ. ಸುಮಾರು 12ನೆಯ ಶತಮಾನ.

* ಜನನ:  ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ್ರಾ ನದಿ ತೀರದಲ್ಲಿ ತನ್ನ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು.

* ಅಂಕಿತ ನಾಮ :  ಅಂಬಿಗರ ಚೌಡಯ್ಯ.

ಅಕ್ಕಮಹಾದೇವಿ :

ಕ್ರಿ ಶ. 1160

* ಜನನ:  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ(ಉಡುಗಣಿ) ಗ್ರಾಮದಲ್ಲಿ.

* ಇವರ ಬರೆವಣಿಗೆಯು ಭಾವಗೀತಾತ್ಮಕವಾದುದು.

* ಅಂಕಿತನಾಮ:  ಚೆನ್ನಮಲ್ಲಿಕಾರ್ಜುನ

* ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳೆಂದು ಐತಿಹ್ಯ.

* ತಂದೆ ನಿರ್ಮಲಶೆಟ್ಟಿ, ತಾಯಿ ಸುಮತಿ.

* ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ಭಾವಿಸಲು ಗಂಡುರೂಪ ಎಂಬಂತೆ ವ್ಯಕ್ತಿತ್ವವನ್ನು ರೂಪಿಸಿಕೊಂಡಳು.

ಆಯ್ದಕ್ಕಿ ಲಕ್ಕಮ್ಮ :

ಕ್ರಿ. ಶ. ಸುಮಾರು 12 ನೆಯ ಶತಮಾನ

* ಜನನ: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮದಲ್ಲಿ.

* ಮಹಾಮನೆಯ ಅಂಗಳದಲ್ಲಿ ಶುದ್ಧ ಅಕ್ಕಿಯನ್ನು ಆಯ್ದು ಜಂಗಮ ದಾಸೋಹವನ್ನು ನಡೆಸುತ್ತಿದ್ದರು.

* ಅಂಕಿತನಾಮ:  ಮಾರಯ್ಯ ಪ್ರಿಯ ಅಮರೇಶ್ವರಲಿಂಗ.

ಚಂದ್ರಶೇಖರ ಪಾಟೀಲ(ಚಂಪಾ):

ಕ್ರಿ. ಶ. 1939

* ಜನನ:  ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರಿನಲ್ಲಿ.

* ಕೃತಿಗಳು:  ಬಾನುಲಿ, ಮಧ್ಯಬಿಂದು, ಗಾಂಧೀಸ್ಮರಣೆ, ಶಾಲ್ಮಲಾ ಇತ್ಯಾದಿ.

ಪುರಂದರದಾಸರು :

(1484-1564):

ಜನನ: ಮಹಾರಾಷ್ಟ್ರದ ಪುರಂದರಗಡದಲ್ಲಿ.

* ತಂದೆ ವರದಪ್ಪನಾಯಕ, ತಾಯಿ ಸರಸ್ವತಿ.

* ಪೂರ್ವದ ಹೆಸರು ಶ್ರೀನಿವಾಸನಾಯಕ.

* ಹರಿದಾಸ ಸಾಹಿತ್ಯದ ಅಶ್ವಿನಿದೇವತೆಗಳಲ್ಲಿ ಒಬ್ಬರು.

* ದಾಸರೆಂದರೆ ಪುರಂದರದಾಸರಯ್ಯ ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದಲೇ ಹೊಗಳಿಕೆಗೆ ಪಾತ್ರರಾದರು.

* ಕರ್ನಾಟಕ ಸಂಗೀತದ ಪಿಳ್ಳಾರಿ ಗೀತೆಗಳನ್ನು ರಚಿಸಿದರು.

* ಬಿರುದು:  ಕರ್ನಾಟಕ ಸಂಗೀತದ ಪಿತಾಮಹ

* ಅಂಕಿತನಾಮ:  ಪುರಂದರವಿಠಲ.

ಸಿದ್ಧಯ್ಯ ಪುರಾಣಿಕ ಕ್ರಿ. ಶ. 1918

* ಜನನ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರ ಗ್ರಾಮದಲ್ಲಿ.

* ಬಿರುದು:  ವಚನೋದ್ಯಾನದ ಅನುಭಾವಿ

* ಕಾವ್ಯನಾಮ:  ಕಾವ್ಯಾನಂದ

* ಕೃತಿಗಳು:  ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ಮೊದಲು ಮಾನವನಾಗು, ವಚನೋದ್ಯಾನ ಇತ್ಯಾದಿ.

ಡಾ. ಚಂದ್ರಶೇಖರ ಕಂಬಾರ:

ದಿನಾಂಕ 02-01-1937

* ಜನನ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ೋಡಗೆರೆ ಗ್ರಾಮದಲ್ಲಿ.

* ಮಹಾಕಾವ್ಯ: ಚಕೋರಿ

* ನಾಟಕಗಳು:  ಸಂಗ್ಯಾಬಾಳ್ಯಾ, ಜೋಕುಮಾರಸ್ವಾಮಿ, ಸಿರಿಸಂಪಿಗೆ, ಶಿವರಾತ್ರಿ ಮುಂತಾದವು.

* ಕಾದಂಬರಿಗಳು: ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ, ಶಿಖರಸೂರ್ಯ ಮುಂತಾದವು.

ಬಿ. ವಿ. ಸತ್ಯನಾರಾಯಣರಾವ್:

1948

* ಜನನ:  ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದಲ್ಲಿ.

* ಅಂಕಿತನಾಮ:  ಸತ್ಯವಿಠಲ.

* ಕಾವ್ಯಗಳು:  ಬಸವ ಭಾರತಿ ಸುರ್ದೀ ಲಾವಣಿ ಕಾವ್ಯ, ಸಂಪೂರ್ಣ ದೇವೀ ಮಹಾತ್ಮೆ, ಬಸವೇಶ್ವರ ಲೀಲಾ ವೈಭವಂ, ಲಂಕೇಶ್ವರ ಸೋಮನಾಥ ಚಾರಿತ್ರ ಇತ್ಯಾದಿ.

*ಕೃತಿಗಳು: ಬಾಹುಬಲಿಚರಿತಂ, ಗಾಯತ್ರೀರಾಮಾಯಣ, ಸಿರಿಗನ್ನಡ ವೈಜಂತಿ, ಕನ್ನಡನಾಡ ಚರಿತ್ರೆ, ತತ್ವಭಾರತಿ, ಭಾವಗೀತಗಳು, ಶ್ರೀಶಿವಕುಮಾರಸ್ವಾಮಿ ಗುರುಚರಿತಂ, ಗುರುದತ್ತಚರಿತಂ ಇತ್ಯಾದಿ.

ಡಾ. ಬುದ್ದಣ್ಣ ಹಿಂಗಮಿರೆ :

ಕ್ರಿ. ಶ. 1933

* ಜನನ:  ಬೆಳಗಾವಿ ಜಿಲ್ಲೆಯ ರಾಜಾಪೂರದ ಆರಗದಲ್ಲಿ.

* ಕೃತಿಗಳು: ಉದಯರಾಗ, ಗುಬ್ಬಿಯ ಹಾಡು, ಹುಲ್ಲುಗೆಜ್ಜೆ, ಶಬ್ದ ರಕ್ತ ಮತ್ತು ಮಾಂಸ, ಹದ್ದುಗಳ ಹಾಡು.

ಮೂಡ್ನಾಕೂಡು ಚಿನ್ನಸ್ವಾಮಿ :

ಕ್ರಿ. ಶ. 1954

* ಜನನ:  ಚಾಮರಾಜ ನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ.

* ಕೃತಿಗಳು: ಕೊಂಡಿಗಳು ಮತ್ತು ಮುಳ್ಳು ಬೇಲಿಗಳು, ಗೋಧೂಳಿ, ನಾನೊಂದು ಮರವಾಗಿದ್ದರೆ, ಕೆಂಡಾಮಂಡಲ, ಭೀಮಾಬೋಯಿ, ಮೋಹದ ದೀಪ ಇತ್ಯಾದಿ.

ಡಾ. ನಾರ್ಬಟ್ ಡಿಸೋಜ:

1937 ಜೂನ್ 6ರಂದು

* ಕಾದಂಬರಿ:  ಕಾಡಿನ ಬೆಂಕಿ ಹಾಗೂ ದ್ವೀಪ ಚಲನಚಿತ್ರಗಳಾಗಿ ರಜತಕಮಲ ಹಾಗೂ ಸ್ವರ್ಣಕಮಲ ಪ್ರಶಸ್ತಿಗಳನ್ನು ಪಡೆದಿವೆ.

*ಬಳುವಳಿ ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ.

* ಮುಳುಗಡೆಯ ಊರಿಗೆ ಬಂದವರು ಕಿರು ಕಾದಂಬರಿಗೆ 2011ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ರಸ್ಕಾರ ದೊರೆತಿ.

ಶ್ರೀಮತಿ ವಿ. ಗಾಯತ್ರಿ

 

* ಕೃತಿಗಳು:  ಕರ್ನಾಟಕದಲ್ಲಿ ಸಾವಯವ ಪರಂಪರೆಯ ಕಥನ ಭಾಗ 1 ಮತ್ತು 2, ಸಹಜ/ಸಾವಯವ ರೈತರ ಕೃಷಿ ಮತ್ತು ಬದುಕುಗಳು, ಕೇಂದ್ರ ಪರಿಸರ ಮಂತ್ರಾಲಯದ ಪರಿಸರ ಶಿಕ್ಷಣ ಕೇಂದ್ರಕ್ಕಾಗಿ ಪರಿಸರ ಶಿಕ್ಷಣದಲ್ಲಿ ಅಗತ್ಯ ಕಲಿಕೆಗಳು. ಎಳೆಯರಿಗಾಗಿ ಪರಿಸರ ಇತ್ಯಾದಿ.

* ಕಾದಂಬರಿ:  ತುಂಗಾ –ಇದು  ಮಕ್ಕಳ ಸೃಜನಶೀಲ ಕಲಿಕೆಯ ಸುತ್ತ ಹೆಣೆದ ಕಾದಂಬರಿ.

* ತೊತ್ತೋಚಾನ್ ವಿಶ್ವವಿಖ್ಯಾತ ಜಪಾನಿ ಕಾದಂಬರಿಯ ಕನ್ನಡ ಅನುವಾದ.

ಗಿರೀಶರಾವ್ ಹತ್ವಾರ್:  ನವೆಂಬರ್ 1965

* ಜನನ:  ದಕ್ಷಿಣ ಕನ್ನಡ ಜಿಲ್ಲೆಯ ಹೊಸಬೆಟ್ಟಿನಲ್ಲಿ.

* ಕೃತಿ: ಕಥಾಸಮಯ.

* ಕಾವ್ಯನಾಮ:  ಜೋಗಿ

ಪೂರ್ಣಚಂದ್ರ ತೇಜಸ್ವಿ

1938ರ ಸೆಪ್ಟೆಂಬರ್ 08

 

* ಜನನ:  ಶಿವಮೊಗ್ಗದಲ್ಲಿ.

* ಇವರು ರಾಷ್ಟ್ರಕವಿ ಕುವೆಂಪು ರವರ ಪುತ್ರ.

* ಕೃತಿಗಳು:  ಕರ್ವಾಲೊ, ಅಬಚೂರಿನ ಸ್ಟಾಫೀಸ್, ಚಿದಂಬರ ರಹಸ್ಯ, ಕಿರಗೂರಿನ ಗಯ್ಯಾಳಿಗಳು, ತಬರನ ಕಥೆ, ಜುಗಾರಿ ಕ್ರಾಸ್,ಮಾಯಾಲೋಕ, ಪರಿಸರದ ಕತೆ, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್, ಅಣ್ಣನ ನೆನ ಇತ್ಯಾದಿ.

ಡಾ.ಎಚ್.ಎಸ್.ವೆಂಕಟೇಶಮೂರ್ತಿ

1944

* ಜನನ:  ದಾವಣಗೆರೆ ಜಿಲ್ಲೆಯ ನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ.

* ಕವನ ಸಂಕಲನಗಳು:  ಸಿಂದಾಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲಹಬ್ಬ, ಭೂಮಿಯೂ ಒಂದು ಆಕಾಶ ಮೊದಲಾದವು.

* ನಾಟಕಗಳು:  ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಳಿಲು ರಾಮಾಯಣ, ಸುಣ್ಣದ ಸುತ್ತು, ಊರ್ಮಿಳಾ ಹೂವಿ ಮತ್ತು ಸಂಧಾನ ಮೊದಲಾದವು.

* ಇವರ ಋತುವಿಲಾಸ ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ.

ಎ.ಆರ್. ಮಣಿಕಾಂತ್:

 

* ಈಗ ಕನ್ನಡಪ್ರಭ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದು, ಭಾವತೀರಯಾನ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ.

* ಕೃತಿಗಳು:  ಉಭಯಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ, ಮರೆಯಲಿ ಹ್ಯಾಂಗ, ಈ ಗುಲಾಬಿಯು ನಿನಗಾಗಿ ಅಪ್ಪ ಅಂದ್ರೆ ಆಕಾಶ ಇತ್ಯಾದಿ.

ಡಾ. ಸತ್ಯಾನಂದ ಪಾತ್ರೋಟ:

 

* ಜನನ:  ಬಾಗಲಕೋಟೆಯಲ್ಲಿ,

* ಕವನ ಸಂಕಲನಗಳು:  ಕರಿನೆಲದ ಕಲೆಗಳು, ಜಾಜಿ ಮಲ್ಲಿಗೆ, ಕಲ್ಲಿಗೂ ಗೊತ್ತಿರುವ ಕಥೆ, ಕರಿಯ ಕಟ್ಟಿದ ಕವನ, ನನ್ನ ಕನಸಿನ ಹುಡುಗಿ, ನದಿಗೊಂದು ಕನಸು ಮತ್ತು ಅವಳು ಇತ್ಯಾದಿ.

* ನಾಟಕಗಳು:  ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ, ಮತ್ತೊಬ್ಬ ಏಕಲವ್ಯ

* ಧ್ವನಿಸುರುಳಿ:  ಎದೆಯ ಮಾತು.

ಡಾ. ಎಂ. ಅಕಬರ ಅಲಿ:

1925ರ ಮಾರ್ಚ್ 3

* ಜನನ:  ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾರದಲ್ಲಿ.

* ವಿಷಸಿಂಧು ಎಂಬ ಅಷ್ಟ ಷಟ್ಪದಿಗಳ ಸಂಗ್ರಹವನ್ನೂ, ನವಚೇತನ ಗಂಧಕೇಶರ, ಸುಮನಸೌರಭ ಎಂಬ ಕವನ ಸಂಗ್ರಹಗಳನ್ನೂ, ಅವ್ವ ಎಂಬ ಚುಟುಕುಗಳ ಸಂಗ್ರಹವನ್ನೂ ರಚಿಸಿದ್ದಾರೆ.

* ಕಾದಂಬರಿ:  ನಿರೀಕ್ಷೆಯಲಿ.

ಜೇಡರ ದಾಸಿಮಯ್ಯ :

11ನೇ ಶತಮಾನ

* ಜನನ:  ಯಾದಗಿರಿ ಸನಿಹದ ಮುದೇನೂರಿನಲ್ಲಿ.

* ಪ್ರಥಮ/ಆದ್ಯ ವಚನಕಾರನೆಂದೇ ಮಾನ್ಯನಾಗಿದ್ದಾನೆ.

* ಅಂಕಿತನಾಮ:  ರಾಮನಾಥ.

ಮಡಿವಾಳ ಮಾಚಯ್ಯ :

12ನೇ ಶತಮಾನ

* ಜನನ:  ವಿಜಯಪುರ ಜಿಲ್ಲೆಯ ಹಿಪ್ಪರಗಿ.

* ಬಸವಣ್ಣನವರ ಕೀರ್ತಿ ಕೇಳಿ ಹೊಸ ಧರ್ಮಕ್ಕೆ ಆಕರ್ಷಣೆಗೊಂಡು ಕಲ್ಯಾಣಕ್ಕೆ ಹೋದವರಲ್ಲಿ ಮೊದಲಿಗರು.

* ಮಾಚಯ್ಯ ಕಲ್ಯಾಣದಲ್ಲಿ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿಮಾಡಿಕೊಂಡಿದ್ದವರು.

* ಅಂಕಿತನಾಮ:  ಕಲಿದೇವರ ದೇವ.

ಸತ್ಯಕ್ಕ :  12ನೆಯ ಶತಮಾನ

* ಜನನ:  ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು.

* ಶಿವಭಕ್ತರ ಮನೆಯಂಗಳ ಕಸಗುಡಿಸುತ್ತ ಶಿವಭಕ್ತಿಯನ್ನು ಆಚರಿಸುವುದು ಇವರ ಕಾಯಕವಾಗಿತ್ತು.

* ಶಿವನಲ್ಲದೆ ಅನ್ಯ ದೇವ ಪೂಜಿಸೆ; ಶಿವ ಶಬ್ದವಲ್ಲದೆ ಅನ್ಯ ಶಬ್ದವ ಕೇಳೆ ಎಂಬ ಪ್ರತಿಜ್ಞೆ ಅವರದಾಗಿತ್ತು.

* ಅಂಕಿತನಾಮ:  ಶಂಭುಕ್ಕೇಶ್ವರ.

ಡಾ. ಡಿ.ಎಸ್.ಕರ್ಕಿ:

1907ರ ನವೆಂಬರ್ 15

* ಜನನ:  ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಕೊಪ್ಪದಲ್ಲಿ.

* ಕವನ ಸಂಕಲನಗಳು:  ನಕ್ಷತ್ರಗಾನ, ಭಾವತೀರ್ಥ, ತನನತೋಂ, ಗೀತ ಗೌರವ, ಕರಿಕೆ ಕಣಗಿಲು, ನಮನ, ಬಣ್ಣದ ಚೆಂಡು ಇತ್ಯಾದಿ.

* ಕನ್ನಡ ಛಂದೋವಿಕಾಸ ಎಂಬ ಸಂಶೋಧನಾ ಪ್ರಬಂಧವನ್ನು ಸಹ ಬರೆದು ಕನ್ನಡಿಗರ ಮನಗೆದ್ದಿದ್ದಾರೆ.

ಮುದೇನೂರು ಸಂಗಣ್ಣ :

17 ಮಾರ್ಚ್ 1927

* ಜನನ:  ಬಳ್ಳಾರಿ ಜಿಲ್ಲೆಗೆ ಸೇರಿದ ಹರಪ್ಪನಹಳ್ಳಿ ತಾಲ್ಲೂಕಿನ ಚಿಗಟೇರಿಯಲ್ಲಿ.

* ನಾಟಕಗಳು:  ನವಿಲು ಕುಣಿದಾವ, ಬಾಳಬಿಕ್ಷುಕ, ಚಿತ್ರಪಟ ರಾಮಾಯಣ ಮೊದಲಾದವು.

* ಕೃತಿಗಳು:  ಜನಪದ ಮುಕ್ತಕಗಳು, ಆ ಅಜ್ಜ ಈ ಮೊಮ್ಮಗ, ಗೊಂದಲಿಗ ದೇವೇಂದ್ರಪ್ಪನ ಹಾಡುಗಳು, ಚಿಗಟೇರಿ ಪದಕೋಶ ಮೊದಲಾದವು.

ಮುಪ್ಪಿನ ಷಡಕ್ಷರಿ:

ಕ್ರಿ.ಶ 1500

* ಜನನ:  ಸುಮಾರಿಗೆ ಕೊಳ್ಳೆಗಾಲದಲ್ಲಿ.

* ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ.

* ಕೃತಿಗಳು:  ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ.

* ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ.

ಕುಮಾರವ್ಯಾಸ:  ಕ್ರಿ.ಶ. 1430

* ಜನನ:  ಈಗಿನ ಗದಗ ಜಿಲ್ಲೆಯಲ್ಲಿರುವ ಕೋಳಿವಾಡ ಗ್ರಾಮದಲ್ಲಿ.

* ಕಾವ್ಯನಾಮ :  ಕುಮಾರವ್ಯಾಸ.

* ಮೂಲ ಹೆಸರು :  ನಾರಣಪ್ಪ ಹಾಗೂ ಗದುಗಿನ ನಾರಣಪ್ಪ

* ಗದುಗಿನ ವೀರನಾರಾಯಣನ ಗುಡಿಯಲ್ಲಿ ಈಗಲೂ ಸಹ ಒಂದು ಕಂಬಕ್ಕೆ ಕುಮಾರವ್ಯಾಸನ ಕಂಬ ಎಂದು ಕರೆಯಲಾಗುತ್ತದೆ. ಕುಮಾರವ್ಯಾಸ ಈ ಕಂಬದ ಅಡಿಯಲ್ಲೇ ಈ ಕಾವ್ಯವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಇದೆ.

* ಕೃತಿಗಳು:  ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಕರೆಯಲಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ ಹತ್ತು ಪರ್ವಗಳನ್ನು ಒಳಗೊಂಡಿದೆ. ಸಂರ್ಣ ಕಾವ್ಯ ಭಾಮಿನಿ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದೆ ಮತ್ತು ಐರಾವತ.

* ಬಿರುದು:  ರೂಪಕ ಸಾಮ್ರಾಜ್ಯ ಚಕ್ರವತಿ.

* ಕುಮಾರವ್ಯಾಸ ಈ ಪ್ರತಿಭೆಗೆ ಕನ್ನಡಿಯಾಗಿ ರಾಷ್ಟ್ರಕವಿ ಕುವೆಂಪು ಅವರ ಈ ಸಾಲುಗಳನ್ನು ನೋಡಿ. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು ಮೈಯ್ಯಲಿ ಮಿಂಚಿನ ಹೊಳೆ ತುಳುಕಾಡುವುದು.

* ಆದಿಕವಿ ಪಂಪನ ಅನಂತರ ವ್ಯಾಸರ ಮಹಾಭಾರತದ ಕನ್ನಡದಲ್ಲಿ ಮೊದಲ ಹತ್ತು ಪರ್ವಗಳನ್ನು ರಚಿಸಿ ಪಂಡಿತರಿಗೆ ಮಾತ್ರವಲ್ಲದೇ, ಪಾಮರರಿಗೂ ಕಾಮಧೇನು ಎಂಬ ಗೌರವಕ್ಕೆ ಪಾತ್ರನಾದವನು ಕುಮಾರವ್ಯಾಸ.

ಡಾ.ಎಲ್. ಬಸವರಾಜು:

ಕ್ರಿ.ಶ.1919

* ಜನನ:  ರಲ್ಲಿ ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ.

* ಕೃತಿಗಳು:  ಶಿವದಾಸ ಗೀತಾಂಜಲಿ, ಬಸವಣ್ಣನವರ ವಚನಗಳು, ಭಾಸನ ಭಾರತ ರೂಪಕ, ಅಲ್ಲಮನ ವಚನಗಳು ಮೊದಲಾದವು.

ಹಂಸಲೇಖ:  1951

* ಮೂಲ ಹೆಸರು:  ಜಿ. ಗಂಗರಾಜು.

* ಇವರ ರಚನೆಯ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯು ಅಪಾರ ಜನಪ್ರಿಯತೆ ಪಡೆಯಿತು.

ಡಾ. ಎಚ್.ಎಸ್. ಅನುಪಮ:

06-02-1970

* ಜನನ:  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲುನಲ್ಲಿ.

* ಕೃತಿಗಳು:  ಕಾಡುಹಕ್ಕಿಯ ಹಾಡು ಮತ್ತು ಸಹಗಮನ (ಕವನ ಸಂಕಲನ), ಹೂವರಳಿದ್ದಕ್ಕೆ ಯಾಕೆ ಸಾಕ್ಷಿ? (ಕಥಾ ಸಂಕಲನ), ಜೀವಕೋಶ ವೈದ್ಯಲೋಕದ ಕಥನ (ಚಿಂತನ ಬರೆಹ), ನೈಲ್ ನದಿಯಗುಂಟ ಶರಾವತಿಯನರಸುತ್ತ ಮತ್ತು ಅಂಡಮಾನ್: ಛತ್ರಪತಿ ಶಾಹೂ:  ಜನರ ನೋವಿಗೆ ಮಿಡಿದ ಪ್ರಾಣಮಿತ್ರ ಮತ್ತು ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ (ಜೀವನ ಚರಿತ್ರೆ).

* ಪ್ರವಾಸ ಕಥನ:  ಕಂಡ ಹಾಗೆ,

* ಅಂಕಣ ಬರಹ:  ನೋಯುವ ಹಲ್ಲಿಗೆ ಹೊರಳುವ ನಾಲಿಗೆ ಎಂಬ ಅಂಕಣ ಬರಹ ಜನಪ್ರಿಯವಾಗಿದೆ.

ಚನ್ನಮಲ್ಲಪ್ಪ ಹಲಸಂಗಿ : ಕ್ರಿಸ್ತ ಶಕ 1903

* ಜನನ:  ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ.

* ಕಾವ್ಯನಾಮ: ಮಧುರಚೆನ್ನ.

* ಕವನ ಸಂಕಲನ:  ನನ್ನ ನಲ್ಲ.

ದು. ಸರಸ್ವತಿ:

1963

* ಜನನ: ಬೆಂಗಳೂರಿನಲ್ಲಿ.

* ಕವನ ಸಂಕಲನ:  ಹೆಣೆದರೆ ಜೇಡನಂತೆ ಮತ್ತು ಜೀವಸಂಪಿಗೆ.

ಡಾ. ಕೃಷ್ಣಾನಂದ ಕಾಮತ್:

29.09.1934

* ಜನನ:  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲ್ಲಿ.

* ಕೃತಿಗಳು:  ನಾನೂ ಅಮೆರಿಕಾಗೆ ಹೋಗಿದ್ದೆ, ಪ್ರಾಣಿ ಪರಿಸರ, ಕೀಟ ಜಗತ್ತು, ಪಶು ಪಕ್ಷಿ ಪ್ರಪಂಚ, ಸಸ್ಯ ಪರಿಸರ, ಇರುವೆಯ ಇರವು, ಸರ್ಪ ಸಂಕುಲ ಮತ್ತು ಕಾವಿ ಕಲೆ ಇತ್ಯಾದಿ.

ಬಾಗಲೋಡಿ ದೇವರಾಯ:

1927

* ಜನನ:  ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿ.

* ಕಥಾಸಂಗ್ರಹಗಳು:  ಹುಚ್ಚು ಮುನಸೀಫ ಮತ್ತು ಇತರ ಕತೆಗಳು, ಆರಾಧನಾ, ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು.

ಶ್ರೀಮತಿ ನೇಮಿಚಂದ್ರ:

ಜುಲೈ 16, 1959

* ಜನನ:  ಚಿತ್ರದುರ್ಗದಲ್ಲಿ.

* ಕೃತಿಗಳು:  ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೆ ಬರೆದ ಕಥೆಗಳು, ನೇಮಿಚಂದ್ರರ ಕಥೆಗಳು ಮುಂತಾದ ಕಥಾಸಂಕಲನಗಳು.

* ಕಾದಂಬರಿ:  ಯಾದ್ ವಶೇಮ್.

* ಪ್ರವಾಸ ಕಥನಗಳು:  ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ.

ಹಿರೇಮಲ್ಲೂರು ಈಶ್ವರನ್:

11.01.1922

* ಜನನ:  ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು.

* ಪ್ರವಾಸ ಕಥನ:  ಕವಿ ಕಂಡ ನಾಡು.

* ಕೃತಿಗಳು:  ಭಾರತದ ಹಳ್ಳಿಗಳು, ವಲಸೆ ಹೋದ ಕನ್ನಡಿಗನ ಕತೆ, ಹಾಲಾಹಲ, ರಾಜಾರಾಣಿ ದೇಖೋ, ಶಿವನ ಬುಟ್ಟಿ, ತಾಯಿನೋಟ ಮೊದಲಾದವು.

ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ:

29. 10. 1936

* ಜನನ:  ಶಿವಮೊಗ್ಗದಲ್ಲಿ.

* ಕವನ ಸಂಕಲನಗಳು:  ವೃತ್ತ, ಚಿತ್ರಕೂಟ, ಸುಳಿ. ಇವರ ಪ್ರಸಿದ್ಧ ಧ್ವನಿ ಸುರುಳಿಗಳು ದೀಪಿಕಾ, ಭಾವಸಂಗಮ, ಬಂದೇಬರತಾವ ಕಾಲ, ಬಾರೋ ವಸಂತ, ಅಭಿನಂದನ, ಭಾವೋತ್ಸವ, ಪ್ರೇಮಧಾರೆ. ಮಕ್ಕಳ ಧ್ವನಿ ಸುರುಳಿಗಳು ನಂದನ, ಕಿನ್ನರಿ, ನವಿಲುಗರಿ, ಕಿಶೋರಿ ಮುಂತಾದವು.

* 2000ದಲ್ಲಿ ಹೂಸ್ಟನ್ನಿನಲ್ಲಿ ನಡೆದ ಪ್ರಥಮ ಅಮೆರಿಕಾ ವಿಶ್ವ ಕನ್ನಡ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಎ.ಕೆ. ರಾಮಾನುಜನ್:  ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್

ಮಾರ್ಚ್ 16. 1929

* ಜನನ:  ಮೈಸೂರಿನಲ್ಲಿ.

* ಕೃತಿಗಳು:  ಹೊಕ್ಕುಳಲ್ಲಿ ಹೂವಿಲ್ಲ ಮತ್ತು ಇತರ ಕವಿತೆಗಳು, ಕುಂಟೋಬಿಲ್ಲೆ, ಮತ್ತೊಬ್ಬನ ಆತ್ಮ ಚರಿತ್ರೆ

*  ಕನ್ನಡ ವಚನ ಸಾಹಿತ್ಯವನ್ನು "ಸ್ಪಿಕಿಂಗ್ ಆಫ್ ಶಿವ" ಎಂದು ಅನುವಾದಿಸಿದ್ದಾರೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್:  6-6-1891

* ಜನನ: ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ.

* ಕಾವ್ಯನಾಮ:  ಶ್ರೀನಿವಾಸ

* ಬಿರುದು:  ಸಣ್ಣಕಥೆಗಳ ಜನಕ.

* ಇವರ ಸಣ್ಣಕಥೆಗಳು ಒಟ್ಟು ಹದಿಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ.

* ಕೃತಿಗಳು: `ಗೌತಮಿ ಹೇಳಿದ ಕಥೆ, `ಸಾರಿಪುತ್ರನ ಕೊನೆಯ ದಿನಗಳು, `ಕುಚೇಲನ ಭಾಗ್ಯ, `ಹೇಮಕೂಟದಿಂದ ಬಂದ ಮೇಲೆ, `ಚಿಕವೀರರಾಜೇಂದ್ರ ಮೊದಲಾದವು.

ಡಾ||ಯು.ಆರ್.ಅನಂತಮೂರ್ತಿ ಕ್ರಿ.ಶ. 1932-2014 ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ

* ಜನನ: . ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದಲ್ಲಿ.

* ಕಾದಂಬರಿಗಳು:  ಸಂಸ್ಕಾರ, ಭವ, ಅವಸ್ಥೆ, ಭಾರತೀಪುರ ಮುಂತಾದವು.

* ನಾಟಕ:  ಆವಾಹನೆ (ನಾಟಕ)

* ಕಥಾ ಸಂಕಲನಗಳು:  ಮೌನಿ, ಪ್ರಶ್ನೆ, ಎಂದೆಂದೂ ಮುಗಿಯದ ಕಥೆ,

* ಕವನಸಂಕಲನಗಳು:  ಮಿಥುನ, ಅಜ್ಜನ ಹೆಗಲ ಸುಕ್ಕುಗಳು

* ಆತ್ಮ ಕಥೆ:  ಸುರಗಿ.

ನಂದಳಿಕೆ ಲಕ್ಷ್ಮೀನಾರಾಯಣಪ್ಪ:  ಮುದ್ದಣ 1870 ಜನವರಿ 24

* ಜನನ:  ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ನಂದಳಿಕೆಯ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ 

* ತಾಯಿಯು ಈತನನ್ನು ಮುದ್ದಣ ಎಂದು ಮುದ್ದಿನಿಂದ ಕರೆಯುತ್ತಿದ್ದಳು.

* ಕೃತಿಗಳು:  ರತ್ನಾವತಿಕಲ್ಯಾಣ ಮತ್ತು ಕುಮಾರವಿಜಯ ಎಂಬ ಯಕ್ಷಗಾನ ಪ್ರಸಂಗಗಳು.

* ವಾರ್ಧಕ ಷಟ್ಪದಿಯಲ್ಲಿ ರಚಿಸಲ್ಪಟ್ಟ ಶ್ರೀರಾಮಪಟ್ಟಾಭಿಷೇಕಂ ಕಾವ್ಯ, ಹಳಗನ್ನಡ ಶೈಲಿಯಲ್ಲಿ ಬರೆಯಲ್ಪಟ್ಟ ಅದ್ಭುತರಾಮಾಯಣ ಮತ್ತು ಶ್ರೀರಾಮಾಶ್ವಮೇಧಂ ಗದ್ಯಕಾವ್ಯಗಳು

* ಬಿರುದು:  ಹೊಸಗನ್ನಡದ ಅರುಣೋದಯದ ಮುಂಗೋಳಿ.

ರಾಷ್ಟ್ರಕವಿ ಎಂ. ಗೋವಿಂದ ಪೈ:

23.03.1883

* ಜನನ:  ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ.

* ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.

* ಕವನ ಸಂಕಲನಗಳು:  ಗಿಳಿವಿಂಡು, ನಂದಾದೀಪ ಮೊದಲಾದವು. ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ ಗದ್ಯಾನುವಾದ, ಸಿಂಗಾಲ ಸುತ್ತ ಬೌದ್ಧ ಸೂತ್ರಗಳ ಕನ್ನಡ ಅನುವಾದ.

* 35 ವೃತ್ತಗಳುಳ್ಳ ಪ್ರಾಸ ರಹಿತ ಗೊಮ್ಮಟ ಜಿನಸ್ತುತಿಯನ್ನು ರಚಿಸಿ ಪ್ರಕಟಿಸಿದರು.

* ಖಂಡಕಾವ್ಯಗಳು:  ವೈಶಾಖ ಮತ್ತು ಗೊಲ್ಗೊಥಾ.

* ಕೃತಿಗಳು: ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೇ ಚಿತ್ರಭಾನು, ಹೆಬ್ಬೆರಳು, ಪಾಶ್ರ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮೊದಲಾದವು.

*  ಅವರಿಗೆ 1949 ರಲ್ಲಿ ಮದ್ರಾಸ್ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿದೆ.

* ಇವರು ಕನ್ನಡದ ಮೊದಲ ರಾಷ್ಟ್ರಕವಿ ಹೆಗ್ಗಳಿಕೆಗೆ ಪಾತ್ರರಾದವರು.

ಕೆ.ಎಸ್. ನರಸಿಂಹಸ್ವಾಮಿ:    26-01-1915

* ಜನನ:  ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ.

* ಕವನ ಸಂಕಲನಗಳು:  ಮೈಸೂರು ಮಲ್ಲಿಗೆ(ಮೊದಲ ಕವನ ಸಂಕಲನ 1943ರಲ್ಲಿ ಪ್ರಕಟವಾಯಿತು.) ಶಿಲಾಲತೆ, ಐರಾವತ, ನವಪಲ್ಲವ, ಇರುವಂತಿಗೆ, ದೀಪದ ಮಲ್ಲಿ, ಉಂಗುರ, ಉಪವನ, ದಮಯಂತಿ, ಮನೆಯಿಂದ ಮನೆಗೆ, ತೆರೆದ ಬಾಗಿಲು .

* 1977 ರಲ್ಲಿ ಇವರ ತೆರೆದ ಬಾಗಿಲು ಎಂಬ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

* ಕೃತಿಗಳು: ಮೋಹನಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ರಾಣಿಯ ಗಿಳಿ ಮತ್ತು ರಾಜನ ಮಂಗ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.

* ಬಿರುದು:  ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೇಮಕವಿ ಎಂದೇ ಗುರುತಿಸಲಾಗಿದೆ.

ಚೆನ್ನವೀರ ಕಣವಿ:

1928

* ಜನನ: ಗದಗ ಜಿಲ್ಲೆಯ ಹೊಂಬಳದಲ್ಲಿ.

* ಬಿರುದು: ನವೋದಯ ಮತ್ತು ನವ್ಯ ಮಾರ್ಗಗಳ ಸಮನ್ವಯ ಸಾಧಿಸಿದ ಕವಿಯೆಂದೇ ಪ್ರಸಿದ್ಧರು.

* ಕವನ ಸಂಕಲನಗಳು:  ಆಕಾಶಬುಟ್ಟಿ, ಭಾವಜೀವಿ, ಮಧುಚಂದ್ರ, ದೀಪಧಾರಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಕಾವ್ಯಾಕ್ಷಿ, ಚಿರಂತನ ದಾಹ ಮತ್ತು ಜೀವಧ್ವನಿ.

ಶ್ರೀಮತಿ.ಬಿ.ಟಿ. ಲಲಿತಾನಾಯಕ್

04.04.1945

* ಜನನ:  ಚಿಕ್ಕಮಗಳೂರು ಜಿಲ್ಲೆಯ ತಂಗಲಿ ತಾಂಡ್ಯದಲ್ಲಿ.

* ಕೃತಿಗಳು:  ಚಂದ್ರ ಪರಾಭವ, ಭಟ್ಟನ ಕನಸು, ನೆಲೆಬೆಲೆ, ನಂ ರೂಪ್ಲಿ, ಗತಿ, ಹಬ್ಬ ಮತ್ತು ಬಲಿ, ಇದೇ ಕೂಗು ಮತ್ತೆ ಮತ್ತೆ, ದೇವದುರ್ಗ ತಾಲೂಕು ದರ್ಶನ, ಒಡಲ ಬೇಗೆ ಮೊದಲಾದವು.

* ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯೆಯಾಗಿಯೂ ಕರ್ನಾಟಕ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿರುವರು.

Post a Comment

3 Comments

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete
  2. ಸ್ವಪ್ನ
    9535776801

    ReplyDelete