ಸರ್ವನಾಮಗಳು & ನಾಮವಾಚಕಗಳು
ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ್ಯವನ್ನು ನಿರ್ವಹಿಸುವ ಪದಗಳೇ ಸರ್ವನಾಮಗಳು. ಅಥವಾ
ನಾಮಪದಗಳ ಬದಲಾಗಿ ಬಳಸುವ ಪದಗಳನ್ನು ‘ಸರ್ವನಾಮ’ ಎನ್ನುತ್ತೇವೆ.
ಉದಾ: ನಾನು, ನಾವು, ಅವನು, ಅವಳು, ಅವರು, ಅದು, ಇದು, ಅವು, ಇವು, ಆತನು, ಈತನು, ಆಕೆ, ಈಕೆ, ತಾನು, ತಾವು ಇತ್ಯಾದಿ.
ಈ ಸರ್ವನಾಮಗಳನ್ನು 1) ಪುರುಷಾರ್ಥಕ 2) ಪ್ರಶ್ನಾರ್ಥಕ ಮತ್ತು 3) ಆತ್ಮಾರ್ಥಕ ಸರ್ವನಾಮಗಳೆಂದು 3 ವಿಧಗಳಾಗಿ ವಿಂಗಡಿಸಲಾಗಿದೆ.
1) ಪುರುಷಾರ್ಥಕ ಸರ್ವನಾಮ : ಇದನ್ನು ಮತ್ತೆ 3 ವಿಭಾಗ ಮಾಡಿದೆ.
ಎ) ಉತ್ತಮ ಪುರುಷ ಸರ್ವನಾಮ : ಮಾತನಾಡುವ ವ್ಯಕ್ತಿಗೆ/ವ್ಯಕ್ತಿಗಳಿಗೆ ಸಂಬಂಧಿಸಿದ ಪದಗಳು ‘ಉತ್ತಮ ಪುರುಷ’ಪದಗಳು. ಉದಾ:ನಾನು ನಾವು ನಾನು, ನನ್ನನ್ನು, ನನ್ನಿಂದ, ನಮ್ಮ, ನಮ್ಮಲ್ಲಿ ಇತ್ಯಾದಿ.
ಬಿ) ಮಧ್ಯಮ ಪುರುಷ : ಮತ್ತೊಬ್ಬರೊಡನೆ ಮಾತನಾಡುವಾಗ ಅವರನ್ನು ಸಂಬೋಧಿಸಿ/ ಅವರನ್ನು ಕುರಿತು ಹೇಳುವುದನ್ನು ಸೂಚಿಸುವ ಪದಗಳು ‘ಮಧ್ಯಮ ಪುರುಷ’ ಪದಗಳು. ಉದಾ:ನೀನು, ನಿನ್ನನ್ನು, ನೀವು, ನಿಮ್ಮನ್ನು, ನಿಮ್ಮಿಂದ, ನಿಮ್ಮ, ನಿಮ್ಮಲ್ಲಿ ಇತ್ಯಾದಿ. ನೀನು ನೀವು ಇತ್ಯಾದಿ.
ಸಿ) ಪ್ರಥಮ ಪುರುಷ/ಅನ್ಯ ಪರುಷ : ನಮ್ಮನ್ನು ಕುರಿತು ಅಥವಾ ಯಾರೊಡನೆ ಮಾತನಾಡುತ್ತೇವೆಯೋ ಅವರನ್ನು ಕುರಿತು ಹೇಳದೆ ಬೇರೆ ಯಾರನ್ನೋ ಕುರಿತು ನಾವು ಮಾತನಾಡುತ್ತೇವೆ. ಇದನ್ನು ಸೂಚಿಸುವ ಪದಗಳು ‘ಪ್ರಥಮಪುರುಷ’/ ಅನ್ಯ ಪರುಷ ಪದಗಳು. ಉದಾಹರಣೆಗೆ: ಅವನು, ಅವಳು, ಅವರು, ಅವನು - ಇವನು ಅವಳು - ಇವಳು ಅವರು - ಇವರು ಅದು - ಅವು ಇದು - ಇವು (ಇತ್ತೀಚೆಗೆ ಇವುಗಳನ್ನು ಪ್ರಥಮ, ದ್ವಿತೀಯ, ತೃತೀಯ ಪುರುಷಗಳೆಂದು ಹೇಳುವ ವಾಡಿಕೆ ಆರಂಭವಾಗಿದೆ.)
2) ಪ್ರಶ್ನಾರ್ಥಕ ಸರ್ವನಾಮ : ಪ್ರಶ್ನೆ ಕೇಳುವ ಸಂದರ್ಭದಲ್ಲಿ ಬಳಸುವ ಸರ್ವನಾಮಗಳನ್ನು ಸರ್ವನಾಮಗಳೆನ್ನುವರು. ಉದಾ:ಯಾರು ಬಂದರು? ಯಾವನು ಬಂದನು? ನೀನು ಏನು ಮಾಡಿದೆ? ನೀನು ಏಕೆ ಬಂದೆ?ಯಾರು ?ಯಾವುದು ?ಏನು? ಯಾವನು? ಯಾವಳು ?ಇತ್ಯಾದಿ.
* * * *
ನಾಮವಾಚಕಗಳು
ನಾಮವಾಚಕಗಳು : ನಾಮವಾಚಕ ಪ್ರಕೃತಿಗಳನ್ನು 1) ವಸ್ತು ವಾಚಕ 2) ಗುಣ ವಾಚಕ 3) ಸಂಖ್ಯಾ ವಾಚಕ 4) ಸಂಖ್ಯೇಯ ವಾಚಕ 5) ಭಾವ ವಾಚಕ 6) ಪರಿಮಾಣ ವಾಚಕ 7) ದಿಗ್ವಾಚಕ ಎಂದು ವಿಂಗಡಿಸಲಾಗಿದೆ.
1) ವಸ್ತುವಾಚಕ : ವಸ್ತುಗಳ ಹೆಸರನ್ನು ಹೇಳುವ ಪದಗಳೇ ವಸ್ತುವಾಚಕಗಳು. ವಸ್ತುಗಳನ್ನು ಚೇತನ (ಚೇತನವುಳ್ಳ), ಅಚೇತನ (ಚೇತನವಿಲ್ಲದ್ದು )ಎಂದು ವಿಭಾಗಿಸಲಾಗಿದೆ.
ಉದಾ : ಮನುಷ್ಯ, ಪ್ರಾಣಿ, ಪಕ್ಷಿ ಇವು ಚೇತನವುಳ್ಳವು.
ನೆಲ, ಜಲ, ಹಣ್ಣು, ಕಾಯಿ, ಮನೆ, ಬೆಟ್ಟ ಇವು ಚೇತನವಿಲ್ಲದವು. ಇಂತಹ ವಸ್ತುವಾಚಕಗಳನ್ನು
ರೂಢನಾಮ, ಅಂಕಿತನಾಮ, ಅನ್ವರ್ಥನಾಮಗಳೆಂದು 3 ವಿಭಾಗ ಮಾಡಲಾಗಿದೆ.
ಎ) ರೂಢನಾಮ : ರೂಢಿಯಿಂದ ಬಂದ ಪದಗಳಿಗೆ ರೂಢನಾಮ ಎನ್ನುವರು.
ಉದಾ : ನದಿ, ಪರ್ವತ, ಹೆಂಗಸು, ಪಟ್ಟಣ, ದೇಶ, ಇತ್ಯಾದಿ.
ಬಿ) ಅಂಕಿತನಾಮ : ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
-ಇಟ್ಟ ಹೆಸರನ್ನು ಅಂಕಿತನಾಮ ಎಂದು ಕರೆಯುತ್ತೇವೆ.
ಉದಾ: ಕೂಡಲಸಂಗಮದೇವ, ಪುರಂದರವಿಠಲ, ಗಂಗಾ, ಬ್ರಹ್ಮಪುತ್ರ, ಭಾರತ ಇತ್ಯಾದಿ.
ಸಿ) ಅನ್ವರ್ಥನಾಮ : ರೂಪ, ಗುಣ, ವೃತ್ತಿ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥನಾಮಗಳು. ಉದಾ: ವ್ಯಾಪಾರಿ, ರೋಗಿ, ಯೋಗಿ, ಬಳೆಗಾರ, ಪೂಜಾರ, ಶಿಕ್ಷಕ, ವಿದ್ಯಾರ್ಥಿ ಇತ್ಯಾದಿ.
2) ಗುಣವಾಚಕ : ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು. ಉದಾ : ಒಳ್ಳೆಯ, ಕೆಟ್ಟ, ಹೊಸದು, ದೊಡ್ಡದು ಇತ್ಯಾದಿ ಪದಗಳು.
3) ಸಂಖ್ಯಾವಾಚಕ : ಸಂಖ್ಯೆಯನ್ನು ಸೂಚಿಸುವ ಪದಗಳೇ ಸಂಖ್ಯಾವಾಚಕಗಳು.
ಉದಾ : ಒಂದು, ಎರಡು, ಹತ್ತು, ನೂರೈದು, ಸಾವಿರ, ಲಕ್ಷ ಇತ್ಯಾದಿ.
4) ಸಂಖ್ಯೇಯವಾಚಕ : ಮೂವರು ಮಕ್ಕಳು, ನಾಲ್ಕನೆಯ ತರಗತಿ,ಐವರು ರಾಜಭಟರು, ಇಪ್ಪತ್ತೆರಡನೆಯ ತಾರೀಖು ಇಲ್ಲಿ ಮೂವರು, ನಾಲ್ಕನೆಯ, ಐವರು, ಇಪ್ಪತ್ತೆರಡನೆಯ ಈ ಪದಗಳು ಸಂಖ್ಯೆಯಿಂದ ಕೂಡಿರುವ ವಸ್ತುಗಳನ್ನು ಸೂಚಿಸುತ್ತವೆ. ಹೀಗೆ ಸಂಖ್ಯೆಯಿಂದ ಕೂಡಿರುವ ವಸ್ತುಗಳನ್ನು ಹೇಳುವ ಪದಗಳನ್ನು ಸಂಖ್ಯೇಯ ವಾಚಕಗಳು (ಎರಡನೆಯ, ನಾಲ್ಕನೆಯ, ಹತ್ತನೆಯ ಇತ್ಯಾದಿ) ಎನ್ನುತ್ತಾರೆ. ಇವುಗಳನ್ನು ಇತ್ತೀಚೆಗೆ ಎರಡನೇ, ನಾಲ್ಕನೇ, ಹತ್ತನೇ ಎಂದೂ ಸಹಾ ಕೆಲವರು ಬಳಸುತ್ತಿದ್ದಾರೆ.
5) ಭಾವನಾಮ : ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ ಪದಗಳೇ ಭಾವನಾಮ. ಉದಾ : ಕೆಚ್ಚನೆಯದರ ಭಾವ-ಕೆಂಪು, ಬಿಳಿದರ ಭಾವ-ಬಿಳುಪು, ಹಿರಿದರ ಭಾವ-ಹಿರಿಮೆ, ನೋಡುವುದರ ಭಾವ-ನೋಟ
6) ಪರಿಮಾಣವಾಚಕ : ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು?, ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ?, ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ? - ಈ ವಾಕ್ಯಗಳಲ್ಲಿ ಅಷ್ಟು,ಇಷ್ಟು, ಎಷ್ಟು, ಎಂಬ ಪದಗಳಿವೆ. ಈ ಪದಗಳು ನಿರ್ದಿಷ್ಟ ಅಳತೆ, ಸಂಖ್ಯೆಗಳನ್ನು ಹೇಳುವುದಿಲ್ಲ. ಕೇವಲ ಪರಿಮಾಣ ಅಥವಾ ಗಾತ್ರವನ್ನು ಮಾತ್ರ ಸೂಚಿಸುತ್ತವೆ. ಹೀಗೆ - ವಸ್ತುವಿನ ಪರಿಮಾಣ, ಗಾತ್ರವನ್ನು ಹೇಳುವ ಅಷ್ಟು, ಇಷ್ಟು, ಹಲವು, ಕೆಲವು, ಎನಿತು, ಅನಿತು, ಆಸು, ಈಸು, ಏಸು ಮುಂತಾದ ಪದಗಳೇ ಪರಿಮಾಣವಾಚಗಳು.
ಉದಾ : ಮೂಡಣ, ತೆಂಕಣ, ಪಡುವಣ, ಬಡಗಣ, ಪೂರ್ವ,ಪಶ್ಚಿಮ, ಆಗ್ನೇಯ, ದಕ್ಷಿಣ, ಉತ್ತರ,ಈಶಾನ್ಯ,ಮೇಲೆ, ಕೆಳಗೆ ಇತ್ಯಾದಿ
ಈ ಮೇಲಿನ ಮುಖ್ಯಾಂಶಗಳನ್ನು ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ತಲೆಬರಹ: ಸರ್ವನಾಮಗಳು
& ನಾಮವಾಚಕಗಳು
ಕಡತದ
ಭಾಷೆ : ಕನ್ನಡ
ಇಲಾಖೆ
: ಶಿಕ್ಷಣ ಇಲಾಖೆ
ರಾಜ್ಯ:
ಕರ್ನಾಟಕ
ಪ್ರಕಟಿಸಿದ
ದಿನಾಂಕ : 06-06-2022
ಫೈಲ್
ಫಾರ್ಮ್ಯಾಟ್ : ಪಿಡಿಎಫ್/ಜೆಪಿಜೆ/ಟೆಕ್ಸ್ಟ್
ಫೈಲ್
ಗಾತ್ರ : 1.5ಎಂ.ಬಿ.
ಪುಟಗಳ
ಸಂಖ್ಯೆ : 3
ಡೌನ್ಲೋಡ್
ಲಿಂಕ್ : ಇದೆ
ವೆಬ್ಸೈಟ್
ಲಿಂಕ್ : ಇಲ್ಲ
ಸ್ಕ್ಯಾನ್
ಮಾಡಿದ ಪ್ರತಿ : ಅಲ್ಲ
ಸಂಪಾದಿಸಬಹುದಾದ
ಪಠ್ಯ : ಇಲ್ಲ
ನಕಲು
ಪಠ್ಯ : ಅಲ್ಲ
ಮುದ್ರಣ
: ಲಭ್ಯವಿದೆ
ಗುಣಮಟ್ಟ
: ಅತ್ಯುತ್ತಮ
ಫೈಲ್
ಗಾತ್ರ ಕಡಿಮೆಯಾಗಿದೆ : ಇಲ್ಲ
ಗುಪ್ತಪದ
: ಇಲ್ಲ
ಪಾಸ್ವರ್ಡ್
ಎನ್ಕ್ರಿಪ್ಟ್ : ಇಲ್ಲ
ಇಮೇಜ್
ಫೈಲ್ ಲಭ್ಯತೆ : ಇದೆ
ಫೈಲ್
ನ ವೆಚ್ಚ/ಮೌಲ್ಯ : ಸಂಪೂರ್ಣ ಉಚಿತ
0 Comments