ಯುರೋಪಿಯನ್ನರು ಪರಿಚಯಿಸಿದ ಭಾರತ
* ಆಗ್ರಾದಲ್ಲಿ ನೆಲೆಸಿದ್ದ
ಹೆನ್ರಿಚ್ ರೋಥ್ (Heinrich Roth) ಎಂಬ ಪಾದ್ರಿಯು - ಸಂಸ್ಕೃತ ವ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟೀನ್ ಭಾಷೆಯಲ್ಲಿ ಬರೆದನು.
* ಒಂದು ಶತಮಾನ ಕಳೆದ
ನಂತರ ಫಾದರ್ ಕಾರ್‌ಡಾಕ್ಸ್ (Couerdoux) ಎಂಬಾತನು ಸಂಸ್ಕೃತ ಮತ್ತು ಯೂರೋಪಿನ ಭಾಷೆಗಳ ನಡುವೆ ಸಂಬಂಧವಿದೆ
ಎಂಬುದನ್ನು ಮೊದಬಾರಿಗೆ ಗುರುತಿಸಿದನು.
* ಬ್ರಿಟೀಷರಿಗೆ ಬಂಗಾಳದ
ದಿವಾನಿ ಹಕ್ಕು (ಕಂದಾಯ ಸಂಗ್ರಹದ ಅಧಿಕಾರ) ದೊರಕಿದ್ದರಿಂದ ಬ್ರಿಟೀಷ್ ಅಧಿಕಾರಿಗಳು ಭಾರತೀಯರೊಂದಿಗೆ
ವ್ಯವಹರಿಸುವ ಸಲುವಾಗಿ ಭಾರತೀಯರ ಇತಿಹಾಸ, ಸಂಪ್ರದಾಯ, ಆಚಾರ, ವಿಚಾರ, ನಂಬಿಕೆ ಮತ್ತು ಕಾನೂನುಗಳನ್ನು
ಅರ್ಥಮಾಡಿಕೊಳ್ಳಲು ಮುಂದಾದರು.
* ಸರ್. ವಿಲಿಯಂ ಜೋನ್ಸ್:
ಭಾರತೀಯಶಾಸ್ತ್ರದ (ಇಂಡಾಲಜಿ) ಅಧ್ಯಯನಕ್ಕೆ ಮಹತ್ವದ ಹೆಜ್ಜೆಯಿಟ್ಟ ಆಂಗ್ಲ ಅಧಿಕಾರಿ. ಬಂಗಾಳದ ಸರ್ವೋಚ್ಛ
ನ್ಯಾಯಾಯದ ನ್ಯಾಯಾಧೀಶರಾದ ಇವರು ಸಾ.ಶ.1784ರಲ್ಲಿ’ದಿ ಏಷ್ಯಾಟಿಕ್ ಸೊಸೈಟಿ’ ಎಂಬ ಸಂಸ್ಥೆಯನ್ನು
ಕಲ್ಕತ್ತಾದಲ್ಲಿ ಸ್ಥಾಪಿಸಿದರು. ಅಲ್ಲದೇ ‘ಗೀತಗೋವಿಂದ, ಮಾನವಧರ್ಮಶಾಸ್ತ್ರ, ಕಾಳಿದಾಸನ ಶಾಕುಂತಲ
ಮುಂತಾದ ಕೃತಿಗಳನ್ನು ಸಂಸ್ಕೃತ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದರು.
* ಮ್ಯಾಕ್ಸ್ ಮುಲ್ಲರ್ : ಜರ್ಮನ್ ದೇಶದವರಾದ ಇವರು
50 ಸಂಪುಟಗಳಲ್ಲಿ ‘´ಸೆಕ್ರೇಡ್ ಬುಕ್ ಆಫ್ ದಿ ಈಸ್ಟ್’ನ್ನು ಇಂಗ್ಲೀಷ್ ಭಾಷೆಗೆ ತಂದರು.
* ಸ್ಕಾಟ್ಲಾಂಡಿನ ಇತಿಹಾಸಕಾರ
ಜೇಮ್ಸ್ ಮಿಲ್ : ಉಪಯುಕ್ತವಾದಿಗಸ ಗುಂಪಿಗೆ ಸೇರುವ
ಇವರು ‘ಹಿಸ್ಟರಿ ಆಫ್ ಇಂಡಿಯಾ’ ಹೆಸರಿನಲ್ಲಿ 6 ´ಸಂಪುಟಗಳಲ್ಲಿ ಭಾರತದ ಇತಿಹಾಸವನ್ನು ರಚಿಸಿದರು.
* ಆದರೆ ಮ್ಯಾಕ್ಸ್ ಮುಲ್ಲರ್ ಆಗಲಿ, ಜೇಮ್ಸ್ ಮಿಲ್ ಆಗಲಿ ಎಂದೂ
ಭಾರತಕ್ಕೆ ಬಂದವರಲ್ಲ.
* ಫ್ರೆಂಚ್ ಮಿಷನರಿ ಅಬೆ ಡುಬಾಯ್ಸ್ (Abbe Dubois) : ಶ್ರೀರಂಗಪಟ್ಟಣ ಬಳಿಯ ಗಂಜಾಂಗೆ
ಬಂದು ನೆಲೆಸಿದರು. ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸನ್ಯಾಸಿಯಂತೆ ಬದುಕಿದ ಇವರನ್ನು ಜನರು ‘ದೊಡ್ಡ ಸ್ವಾಮಿಮಿಯವರು’ ಎಂದು ಕರೆಯುತ್ತಿದ್ದರು. ಇವರು
‘·ಹಿಂದೂ ಮ್ಯಾನರ್ಸ್, ‘ಕಸ್ಟಮ್ಸ್ ಆಂಡ್ ಸೆರೆಮನೀಸ್’, ಎಂಬ ಕೃತಿಗಳನ್ನು ಬರೆದರು. ಇದರಲ್ಲಿ ಭಾರತೀಯರ ಆಚಾರ, ವಿಚಾರ,
ಹಬ್ಬ ಹರಿದಿನ, ವರ್ಣಾಶ್ರಮ ವ್ಯವಸ್ಥೆ ಮೊದಲಾದವುಗಳನ್ನು ಕುರಿತು ಬರೆದಿದ್ದಾರೆ. 24 ವರ್ಷಗಳ ಕಾಲ
ಭಾರತದಲ್ಲಿಯೇ ನೆಲೆಸಿದ್ದ ಅಬೆ ಡುಬಾಯ್ಸ್ ಆನಂತರ ಫ್ರಾನ್ಸಿಗೆ ಹಿಂತಿರುಗಿದರು.
* ಎಲ್ಫಿನ್‌ಸ್ಟನ್,
ಕೋಲ್ ಬ್ರೂಕ್, ಕನ್ನಿಂಗ್‌ಹ್ಯಾಮ್, ಇಲಿಯೆಟ್ ಮತ್ತು ಡಾಸನ್ ಮುಂತಾದವರೂ ಸಹ ಭಾರತದ ಚರಿತ್ರೆಯ ವಿವಿಧ
ಘಟ್ಟಗಳನ್ನು ಪರಿಚಯಿಸಿದ್ದಾರೆ.
* ಕರ್ನಾಟಕದ ಚರಿತ್ರೆಯ
ರಚನೆಗೆ ಅಮೂಲ್ಯ ಆಧಾರಗಳಾದ ಶಾಸನಗಳು, ಕೈಫಿಯತ್ತುಗಳು, ಹಸ್ತಪ್ರತಿಗಳು, ಬಕೈರುಗಳು ಮೊದಲಾದವುಗಳನ್ನು
ಸಂಗ್ರಹಿಸುವಲ್ಲಿ ಮತ್ತು ಸಮಕಾಲೀನ ಸಂಗತಿಗಳನ್ನು ದಾಖಲಿಸುವಲ್ಲಿ -ಫ್ರಾನ್ಸಿಸ್ ಬುಕನಾನ್, ಕರ್ನಲ್
ವಿಲ್ಕ್ಸ್, ಮೆಕೆಂಜಿ, ಬಿ.ಎಲ್. ರೈಸ್, ಫ್ಲೀಟ್ ಮುಂತಾದ ಯುರೋಪಿಯನ್ನರು ಯಶಸ್ವಿಯಾಗಿದ್ದಾರೆ.
* ಜೆಸೂಟ್(Jesut): ಜೀಸಸ್ ಸಂಘದ ಸದಸ್ಯರೇ ಜೆಸೂಟ್‌ಗಳು.
Title: India as Introduced by Europeans
File language: Kannada
Which Department: Education
State: Karnataka
Published Date: 02-06-2022
File format : jpg /pdf/text
File size : 1.0 mb
Number of Pages : 2
Availability for download: Yes
Availability of websites link: No
Scanned Copy : No
Editable Text : No
Copy text : No
Print enable : Yes
Quality : High
File size reduced: No
Password Protected: No
Password Encrypted : No
Image File Available : Yes
Cost : Free of cost
Download Here
0 Comments