* ಕನ್ನಡ ವ್ಯಾಕರಣ - For FDA, SDA,Police and TET


ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. ಅವನು + ಅಲ್ಲಿ ಎಂಬ ಎರಡು ಶಬ್ದಗಳನ್ನು ಕೂಡಿಸಿ ಅವನಲ್ಲಿ ಎಂದು ಹೇಳುತ್ತೇವೆ. ಅಂದರೆ ಅವುಗಳನ್ನು ಕೂಡಿಸಿಯೇ ಹೇಳುತ್ತೇವೆ.

ಉದಾ : ಆಡು + ಇಸು = ಆಡಿಸು, ಮರ + ಅನ್ನು = ಮರವನ್ನು,  ದೇವರು + ಇಗೆ = ದೇವರಿಗೆ

ಮಳೆ + ಕಾಲ = ಮಳೆಗಾಲ...ಹೀಗೆ ಎರಡು ಅಕ್ಷರಗಳ ಯಾವ ಕಾಲವಿಳಂಬವೂ ಇಲ್ಲದೆ ಪರಸ್ಪರ ಸೇರುವುದಕ್ಕೆ ಸಂಧಿ ಎನ್ನುವರು.

ಪದ    ಪದ      ಸಂಧಿರೂಪ

ಅವನ + ಅಂಗಡಿ = ಅವನಂಗಡಿ

ಕುಲ + ಅನ್ನು = ಕುಲವನ್ನು

ಬೆಟ್ಟ + ತಾವರೆ = ಬೆಟ್ಟದಾವರೆ

ಮಳೆ + ಕಾಲ = ಮಳೆಗಾಲ - ಹೀಗೆ ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದದ ಅಂತ್ಯದಲ್ಲಿ ಮತ್ತು ಉತ್ತರಪದದ ಆದಿಯಲ್ಲಿ 3 ಬಗೆಯ ಕಾರ್ಯಗಳು ನಡೆಯಬಹುದು. ಅಕ್ಷರವೊಂದು ಲೋಪವಾಗಬಹುದು / ಇನ್ನೊಂದು ಆಗಮಿಸಬಹುದು / ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಬೇರೆಯೇ ಅಕ್ಷರ ಬರಬಹುದು. ಇದನ್ನು  ಸಂಧಿಕಾರ್ಯ ಎನ್ನುವರು.

 ಪೂರ್ವಪದ + ಉತ್ತರಪದ = ಸಂಧಿಕಾರ್ಯ

   ಮಾತು    +   ಅನ್ನು   = ಮಾತನ್ನು

       (ಉ) + (ಅ) = ಉ ಲೋಪ

 ಅ. ಕನ್ನಡ ಸಂಧಿಗಳು:

1) ಲೋಪಸಂಧಿ :

 1. ಮೇಲೆ + ಇಟ್ಟು = ಮೇಲಿಟ್ಟು

 ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಮೇಲೆ ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ "ಎ" ಎಂಬುದು ಇಲ್ಲಿ ಲೋಪವಾಗಿದೆ.

 2. ಮುಳ್ಳು + ಅನ್ನು = ಮುಳ್ಳನ್ನು

 ಇಲ್ಲಿ ಮುಳ್ಳು ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ "ಉ" ಎಂಬುದು ಲೋಪವಾಗಿದೆ. ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಲೋಪವಾದರೆ ಅದನ್ನು ಲೋಪಸಂಧಿ ಎನ್ನುವರು.

ಇದರಂತೆ ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸೋಣ.

 ಒಸರುತ್ತ + ಇದ್ದ = ಒಸರುತ್ತಿದ್ದ : ಅ ಸ್ವರ ಲೋಪವಾಗಿದೆ.

 ಹುಡುಗರು + ಎಲ್ಲರು = ಹುಡುಗರೆಲ್ಲರು : ಉ ಸ್ವರ ಲೋಪವಾಗಿದೆ.

 ಮೇಲೆ + ಏರು = ಮೇಲೇರು : ಎ ಸ್ವರ ಲೋಪವಾಗಿದೆ.

 2) ಆಗಮಸಂಧಿ :

 1. ಹೊಲ + ಅನ್ನು = ಹೊಲವನ್ನು

 ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಹೊಲವನ್ನು ಎಂಬ ಪದದಲ್ಲಿ "ವ" ಎಂಬ ಅಕ್ಷರವು ಬಂದು ಸೇರಿಕೊಂಡಿದೆ.

2.ಹೊಳೆ + ಲ್ಲಿ = ಹೊಳೆಲ್ಲಿ

ಇಲ್ಲಿ ಹೊಳೆಯಲ್ಲಿ ಎಂಬ ಪದದಲ್ಲಿ ಯ ಎಂಬ ಅಕ್ಷರವು ಬಂದು ಸೇರಿಕೊಂಡಿದೆ. ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಒಂದು ಅಕ್ಷರ ಆಗಮವಾದರೆ ಅದನ್ನು ಆಗಮಸಂಧಿ ಎನ್ನುವರು.

 ಈ ರೀತಿಯಾದ ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸೋಣ :

 ಗಡಿಬಿಡಿ + ಇಂದ = ಗಡಿಬಿಡಿಯಿಂದ : ಯ ಆಗಮವಾಗಿದೆ.

 ಆರಂಭ + ಆಗು = ಆರಂಭವಾಗು : ವ ಆಗಮವಾಗಿದೆ.

 3) ಆದೇಶಸಂಧಿ :

 1. ಕೋಪ + ಕೊಂಡು = ಕೋಪಗೊಂಡು

 ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಕೋಪಗೊಂಡು ಎಂಬ ಪದದಲ್ಲಿ ಕ (ಕೊ) ಅಕ್ಷರದ ಬದಲಿಗೆ ಗ (ಗೊ) ಅಕ್ಷರ ಬಂದಿದೆ.

 2. ಮೈ + ತೊಳೆ = ಮೈದೊಳೆ - ಇಲ್ಲಿ ಮೈದೊಳೆ ಎಂಬ ಪದದಲ್ಲಿ "ತ" (ತೊ) ಅಕ್ಷರದ ಬದಲಿಗೆ  "ದ" (ದೊ) ಅಕ್ಷರ ಬಂದಿದೆ.

ಹೀಗೆ ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ ಬಂದರೆ ಅದನ್ನು ಆದೇಶಸಂಧಿ ಎನ್ನುವರು. ಇಲ್ಲಿ ಉತ್ತರ ಪದದ ಮೊದಲನೆಯ ಅಕ್ಷರವು ಬದಲಾಗುತ್ತದೆ. ಸಾಮಾನ್ಯವಾಗಿ ಕ,ತ,ಪ ಗಳಿಗೆ ಕ್ರಮವಾಗಿ ಗ,ದ,ಬ ಗಳು ಆದೇಶವಾಗಿ ಬರುತ್ತದೆ. ಈ ರೀತಿಯಾದ ಇನ್ನಷ್ಟು ಕೆಲವು ಉದಾಹರಣೆಗಳನ್ನು ಗಮನಿಸೋಣ :

 ಕುಡು + ಕೋಲು = ಕುಡುಗೋಲು : "ಕ"  ಬದಲು "ಗ" ಆಗಿದೆ.

 ಬೆಟ್ಟ + ತಾವರೆ = ಬೆಟ್ಟದಾದರೆ : "ಕ" ಬದಲು "ದ" ಆಗಿದೆ.

 ಕಣ್ + ಪನಿ = ಕಂಬನಿ : "ಪ" ಬದಲು "ಬ" ಆಗಿದೆ.

 ಮೇಲ್ಕಂಡ ವಿವರಣೆಯಲ್ಲಿ ಕನ್ನಡ ಪದಗಳು ಪರಸ್ಪರ ಸೇರಿ ಸಂಧಿಕಾರ್ಯ ನಡೆದಿದೆ. ಆದ್ದರಿಂದ ಇವುಗಳನ್ನು ಕನ್ನಡ ಸಂಧಿಗಳು ಎಂದು ಕರೆಯುತ್ತೇವೆ. ಇದುವರೆಗೆ ನಾವು 3 ರೀತಿಯ ಸಂಧಿಕಾರ್ಯಗಳನ್ನು ಗಮನಿಸಿದ್ದೇವೆ.

ಆದ್ದರಿಂದ, ಕನ್ನಡ ಸಂಧಿಗಳು- :1. ಲೋಪಸಂಧಿ 2. ಆಗಮಸಂಧಿ 3. ಆದೇಶಸಂಧಿ

ಅ. ಪ್ರಕೃತಿಭಾವ.

ಕೆಲವು ಸಲ ಸ್ವರಕ್ಕೆ ಸ್ವರವು ಪರವಾದಾಗ ಯಾವುದೇ ರೀತಿಯ ಸಂಧಿ ಕಾರ್ಯವು ನಡೆಯುವುದಿಲ್ಲ. ಇದನ್ನು ಪ್ರಕೃತಿಭಾವ ಎನ್ನುತ್ತೇವೆ.

ಉದಾ: ಅಣ್ಣಾ + ಓಡಿ ಬಾ = ಅಣ್ಣಾ ಓಡಿ ಬಾ.

ಇಲ್ಲಿ ಅಣ್ಣಾ ಮತ್ತು ಓಡಿ ಬಾ ಎಂಬ ಎರಡು ಪದಗಳ ನಡುವೆ ಸಂಧಿಕಾರ್ಯ ನಡೆಯದೇ ಆ ಪದಗಳು ಹಾಗೆಯೇ ಉಳಿದುಕೊಂಡಿವೆ. ಇದೇ ರೀತಿ ಕೆಲವು ಉದಾಹರಣೆಗಳನ್ನು ಗಮನಿಸಿರಿ.

ಕೃಷ್ಣ + ಎಲ್ಲಿದ್ದೀಯಾ = ಕೃಷ್ಣ ಎಲ್ಲಿದ್ದೀಯಾ?

ಅಕ್ಕಾ + ಎಲ್ಲಿರುವೆ = ಅಕ್ಕಾ ಎಲ್ಲಿರುವೆ?

ಆ + ಅಂಗಡಿ = ಆ ಅಂಗಡಿ

ಈ + ಮನೆ = ಈ ಮನೆ ಇತ್ಯಾದಿ.





Post a Comment

0 Comments