The Indian Constitution- Qun. and Answers part-3


101) 75 ನೇ ವಿಧಿ ಸಂಬಂಧಿಸಿರುವುದು ------ಗೆ. ➡ಪ್ರಧಾನ ಮಂತ್ರಿ.
102) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ? ➡1929.
103) ಕೇಂದ್ರ ಮಂತ್ರಿ ಮಂಡಲ ----- ಗೆ ಬದ್ದವಾಗಿರುತ್ತದೆ. ➡ಲೋಕಸಭೆಗೆ.
104) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ.
105) ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು? ➡5 ವರ್ಷ (56 ನೇ ವಿಧಿ).
106) ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು? ➡ನೀಲಂ ಸಂಜೀವರೆಡ್ಡಿ
 107) ರಾಷ್ಟ್ರಪತಿ ನಿಲಯಂ ಎಲ್ಲಿದೆ? ➡ಹೈದರಾಬಾದ್.
 108) ಭಾರತದ ಸಂಸತ್ತಿನ ಎರಡು ಸದನಗಳು ಯಾವುವು?
➡1) ಲೋಕಸಭೆ.2) ರಾಜ್ಯಸಭೆ.
109) ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು? ➡250.
110) 2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು? ➡ಶಿಕ್ಷಣದ ಹಕ್ಕು
111)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು? ➡ಎಂ.ಎನ್.ರಾಯ್ 112)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು? ➡ಜವಹಾರ್ ಲಾಲ್ ನೆಹರು
113)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಪಡಿಸಿದ್ದರೂ 1950 ಜನವರಿ 26 ರಂದೇ ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು? ➡1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ
114)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು? ➡ಸಂವಿಧಾನದ ಭಾಗಗಳು - 22 ➡ಸಂವಿಧಾನದ ಅನುಚ್ಛೇದಗಳು- 395 ➡ಸಂವಿಧಾನದ ಅನುಸೂಚಿಗಳು- 8
115)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು? ➡ಭಾರತ ಸಂವಿಧಾನ
116)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು? ➡"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂ
ದು ಪ್ರಾಂತ್ಯ
117)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು? ➡1773 ರ ರೆಗ್ಯುಲೇಟಿಂಗ್ ಆಕ್ಟ್
118)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು? ➡1853ರ ಚಾರ್ಟರ್ ಆಕ್ಟ್
119) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ? 📖1858 ರ ಮ್ಯಾಗ್ನಕಾರ್ಟ್.
120)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ? 📖1858ರ ಭಾರತ ಸರ್ಕಾರ ಕಾಯಿದೆ 10)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು? 📖ಭಾರತ ಸರ್ಕಾರ ಕಾಯಿದೆಯ ಮೂಲಕ
121)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು? 📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ) ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ
 122)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು? 📖1909 ರ ಮಿಂಟೋ ಮಾರ್ಲೇ ಸುಧಾರಣೆ ಕಾಯ್ದೆ 123) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ? 📖1919.
 124)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು? 📖ಸಂವಿಧಾನ.
 125)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ? 📖ಪ್ರಜೆಗಳ.
 126)ಸಂವಿಧಾನದ ಹೃದಯ ಯಾವುದು? 📖ಪ್ರಸ್ತಾವನೆ.
127) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು? 📖ಭಾರತ.
 128) ಭಾರತದ ಸಂವಿಧಾನದ ಆದರ್ಶವೇನು? 📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.
 129) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ? 📖ನವೆಂಬರ್ 26.
 130)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು? 📖ಕ್ಯಾಬಿನೆಟ್ ಆಯೋಗ
131)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ? 📖 1946 ರಲ್ಲಿ.
 132)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು? 📖ಡಾ.ಬಾಬು ರಾಜೇಂದ್ರ ಪ್ರಸಾದ್
 133)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ? 📖 1946, ಡಿಸೆಂಬರ್ 9.
 134) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು? 📖ಡಾ.ಸಚ್ಚಿದಾನಂದ ಸಿನ್ಹಾ.
135) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು? 📖ಬಿ.ಎನ್.ರಾಯ್.
 136) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು? 📖ಬೆನಗಲ್ ನರಸಿಂಹರಾವ್.
 137) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು? 📖 ಪ್ರೊ.ಎಚ್.ಸಿ. ಮುಖರ್ಜಿ.
138) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು? 📖 22.
139)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ? 📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು
140)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು? 📖ಡಾ.ಬಿ.ಆರ್.ಅಂಬೇಡ್ಕರ್
 141) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು? 📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್
 142)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು? 📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ
143) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು? 📖 2 ವರ್ಷ 11 ತಿಂಗಳು 18 ದಿನ.
144)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ? 📖1951 ರಲ್ಲಿ.
145) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು? 📖ಸುಕುಮಾರ ಸೇನ್.
146) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು? 📖 26 ನವೆಂಬರ್ 2015.
147)ಭಾರತದ ಸಂವಿಧಾನವು 📖ದೀರ್ಘ ಕಾಲದ ಸಂವಿಧಾನ
 148)ಭಾರತ ಸಂವಿಧಾನದ ಸ್ವರೂಪವು 📖ಸಂಸದೀಯ ಪದ್ದತಿ
149)ಭಾರತದ ಸಂವಿಧಾನವು ಒಂದು 📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ
 150)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ? 📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ.

Post a Comment

0 Comments