51) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ? ➡44 ನೇ ( 1978 ).
52) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.
53) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ? ➡ 3 ಭಾಗಗಳು
54) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.
55) ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ? ➡1955 ರಲ್ಲಿ.
56) ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು? ➡ಆಂಧ್ರಪ್ರದೇಶ್
57) 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು? ➡ ಗುಜರಾತ್ (1960).
58) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು? ➡112.
59) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು? ➡ರಾಷ್ಟ್ರಪತಿ.
60) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು? ➡ಉಪ ರಾಷ್ಟ್ರಪತಿ.
61) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು? ➡ಉತ್ತರಪ್ರದೇಶ.
62) ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು? ➡ಅಂದಾಜು ವೆಚ್ಚ ಸಮಿತಿ.
63) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು? ➡ರಾಜ್ಯಪಾಲರು.
64) ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ? ➡1921 ರಲ್ಲಿ.
65) ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು? ➡ಲೋಕಸಭೆಯ ಸ್ಪೀಕರ್.
66) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ? ➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.
67) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ? ➡ಅಟಾರ್ನಿ ಜನರಲ್.
68) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು? ➡54 ನೇ.
69) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ? ➡333.
70) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ? ➡ 25-28.
71) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ? ➡ಚುನಾವಣೆ ಆಯೋಗಕ್ಕೆ.
72) ಪಂಚಾಯತ್ ರಾಜ್ ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು? ➡29.
73) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.
74) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ? ➡ಉಪರಾಷ್ಟ್ರಪತಿಯ.
75) ಸಂಸತ್ತಿನ ಮೇಲ್ಮನೇ ಯಾವುದು? ➡ರಾಜ್ಯಸಭೆ.
76) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು? ➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.
77) ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.
78) ಸಂಸತ್ತು ------ ಒಳಗೊಂಡಿದೆ? ➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.
79) ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು? ➡315.
80) ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು? ➡35.
81) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು? ➡ಸಾರ್ವಜನಿಕ ಉದ್ದಿಮೆಗಳ ಸಮಿತಿ.
82) ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು? ➡ಸಿಎಜಿ ವರದಿಯನ್ನು ಪರಿಶೀಲಿಸುವುದು.
83) 44 ನೇ ತಿದ್ದುಪಡಿಯಾದದ್ದು ಯಾವಾಗ? ➡1978 ರಲ್ಲಿ.
84) ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು? ➡30.
85) ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು? ➡ರಾಜ್ಯಪಾಲರು.
86) ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವಅಧಿಕಾರ ---- ಗೆ ಇದೆ? ➡ ಸುಪ್ರೀಂಕೋರ್ಟ್
87) ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು? ➡108.
88) ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು? ➡ರಾಷ್ಟ್ರಪತಿ.
89) ರಾಜ್ಯಸಭೆಯ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ.
90) 75 ನೇ ವಿಧಿ ಸಂಬಂಧಿಸಿರುವುದು ---- ಗೆ? ➡ಪ್ರಧಾನ ಮಂತ್ರಿ
91) ಲೋಕಸಭೆಯನ್ನು ---- ಎನ್ನುವರು ➡ಸಂಸತ್ತಿನ ಕೆಳಮನೆ.
92) ನ್ಯಾಯ ನಿರ್ಣಯ ನೀಡುವುದು ಯಾವುದು? ➡ ನ್ಯಾಯಾಂಗ.
93) ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು? ➡5 ವರ್ಷ
94) ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು? ➡75.
95) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ? ➡ಹೊಸದಿಲ್ಲಿ
96) ಲೋಕ ಅದಾಲತ್ ಎನ್ನುವುದು ಒಂದು -----. ➡ಜನತಾ ನ್ಯಾಯಾಲಯ.
97) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು? ➡ಸರ್ವೋಚ್ಚ ನ್ಯಾಯಾಲಯ.
98) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು. ➡ ಕಾನೂನುಗಳು.
99) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ------ ಎನ್ನುವರು. ➡ಏಕಸದನ ಪದ್ದತಿ.
100) ಸುವರ್ಣಸೌಧ ಎಲ್ಲಿದೆ? ➡ಬೆಳಗಾವಿ.
0 Comments