■ ಇತಿಹಾಸ - ಉತ್ತರ ಭಾರತದ ಭಕ್ತಿ ಚಳುವಳಿ ಮತ್ತು ಪರಿಣಾಮಗಳು



* ಭಕ್ತಿ ಚಳವಳಿಯ ಬೆಳವಣಿಗೆಯು-ಮಧ್ಯಕಾಲೀನ ಭಾರತದ ಒಂದು ಪ್ರಮುಖ ಲಕ್ಷಣವಾಗಿದೆ.
* ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ, ಯಜ್ಞ ಯಾಗ ಮುಂತಾದ ಧಾರ್ಮಿಕ ಆಚರಣೆಗಳು ಬಹುಮುಖ್ಯ ಮಾರ್ಗಗಳೆಂದು ಹೆಚ್ಚು ಪ್ರಸಿದ್ಧಿಯನ್ನು ಪಡೆದವು.
* ಉತ್ತರ ಭಾರತದಲ್ಲಿ-ರಮಾನಂದ, ಕಬೀರ, ಗುರುನಾನಕ್, ಮೀರಾಬಾಯಿ, ಚೈತನ್ಯ, ನಾಮದೇವ, ರವಿದಾಸ್/ರಾಯಿದಾಸ್, ಸೂರ್ ದಾಸ್ ಮುಂತಾದವರು ಮುಖ್ಯರಾಗಿದ್ದಾರೆ. 

1) ಕಬೀರದಾಸ್ - ಸಾ.ಶ. 1398-1518 : ನೇಕಾರ ಕುಟುಂಬ
* ಇವರು ರಾಮಾನಂದರ ಶಿಷ್ಯರು.
* ವಾರಣಾಸಿಯಲ್ಲಿನ ನೇಕಾರ ಕಸುಬಿನ `ಜುಲಾಸ್ಕಿ' ಎಂಬ ಮುಸಲ್ಮಾನ ಕುಟುಂಬದಲ್ಲಿ ನೀರು ಮತ್ತು ನೀಮರ ಮಗನಾಗಿ ಜನಿಸಿದರು.
* ಬೋಧನೆಗಳು: ಅಲ್ಲಾ ಮತ್ತು ರಾಮ ಎಂಬುದು ಒಂದೇ ದೇವರ ಎರಡು ಹೆಸರುಗಳು, ಹಿಂದೂ ಮತ್ತು ಮುಸ್ಲಿಮರು ಒಂದು ಮಣ್ಣಿನಿಂದ ತಯಾರಿಸಿದ ಮಡಿಕೆಗಳು ಎಂದು ಬಣ್ಣಿಸಿದರು. ತಾನು ರಾಮ ಮತ್ತು ಅಲ್ಲಾಹನ ಮಗನೆಂದು ಸಾರಿದರು.
* ಇವರು ರಚಿಸಿದ 'ದೋಹೆ'ಗಳೆಂಬ ಪದ್ಯಗಳನ್ನು ಉತ್ತರ ಭಾರತದಲ್ಲಿ ಹಿಂದೂ-ಮುಸಲ್ಮಾನರುಗಳು ಈಗಲೂ ಹಾಡುತ್ತಾರೆ.
* ಇವರ ಅನುಯಾಯಿಗಳನ್ನು ಕಬೀರ್-ಪಂಥಿಗಳು/ಕಬೀರ್ ಮಾರ್ಗದಲ್ಲಿನ ಪ್ರವಾಸಿಗರು ಎಂದು ಕರೆಯುತ್ತಾರೆ.

 
2) ಗುರುನಾನಕರು - ಸಾ.ಶ.1469 - 1539 : ಸಹಪಂಕ್ತಿ ಭೋಜನ
* ಜನನ-ಪಾಕಿಸ್ತಾನದ `ತಳವಂಡಿ ಗ್ರಾಮದಲ್ಲಿ.
* ಮೆಹ್ತಾಕಲು ಮತ್ತು ತೃಪ್ತಾ ಇವರ ತಂದೆ-ತಾಯಿಗಳು.
* ಸಿಖ್ ಧರ್ಮದ ಸಂಸ್ಥಾಪಕರು.
* ಸಿಖ್ಖರ ಪವಿತ್ರ ಗ್ರಂಥ ಗ್ರಂಥ ಸಾಹಿಬ್ ನ್ನು ಗುರುದ್ವಾರದಲ್ಲಿಟ್ಟು  ಪೂಜಿಸುತ್ತಾರೆ. ಇದರಲ್ಲಿ 'ಜಪಜಿಗಳು ' ಎಂದು ಕರೆಯಲಾಗುವ ಹಾಡುಗಳಿವೆ.
* ದೀರ್ಘಕಾಲ ದೇಶ ಪರ್ಯಟನೆ ನಡೆಸಿ - ರಾವಿ ನದಿ ದಂಡೆಯ ಕರ್ತರಾರದಲ್ಲಿ ಭಕ್ತಿಕೇಂದ್ರವನ್ನು ಸ್ಥಾಪಿಸಿದರು.
* ಸಹಪಂಕ್ತಿ ಪೋಷಿಸಲು ಆರಂಭಿಸಿದ್ದ `ಲಂಗರ್' ಎನ್ನುವ ಭೋಜನ ಶಾಲೆ/ಧರ್ಮಶಾಲೆಯೇ ಈಗಿನ ಗುರುದ್ವಾರವಾಗಿದೆ.
* ಅವರ ಅನುಯಾಯಿಗಳು ತಾರತಮ್ಯವಿಲ್ಲದೆ ಸಹಪಂಕ್ತಿ ಭೋಜನ ಮಾಡುತ್ತಿದ್ದರು.
* ಸ್ತ್ರೀ-ಪುರುಷರ ಸಮಾನತೆ, ದೇವರು ಒಬ್ಬನೇ, ಮೂರ್ತಿ ಪೂಜೆ ಖಂಡನೆ, ಸತ್ಕಾರ್ಯ-ಪರಿಶುದ್ಧ ಹಾಗೂ ನೀತಿಯುಕ್ತ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಿದರು.
* ದೇವರ ನಾಮವನ್ನು ಜಪಿಸುವುದು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಸಿಖ್ ಪಂಥ ಮಹತ್ವ ನೀಡಿದೆ.
* ಕರ್ನಾಟಕದ ಬೀದರಿನಲ್ಲಿ ಅವರು ತಂಗಿದ್ದ ಸ್ಥಳವನ್ನು ನಾನಕ್ ಝರಾ (ಸಿಹಿ ನೀರಿನ ಬುಗ್ಗೆ) ಎಂದು ಕರೆಯುತ್ತಾರೆ.


>3) ಚೈತನ್ಯರು - ಸಾ.ಶ. 1485-1533:
* ಜನನ: ಪಶ್ಚಿಮ ಬಂಗಾಳದ ನವದ್ವೀಪ/ನಾಡಿಯಾದ ಬ್ರಾಹ್ಮಣ ಕುಟುಂಬದಲ್ಲಿ.
*  ತಂದೆ-ಜಗನ್ನಾಥ ಮಿಶ್ರಾ ಮತ್ತು ತಾಯಿ-ಸಚೀದೇವಿ
* ಚೈತನ್ಯರ ಮೊದಲ ಹೆಸರು - ವಿಶ್ವಂಬರ & ಇವರ ಗುರು- ಈಶ್ವರಿ ಪುರಿಗಳು.
* ಸನ್ಯಾಸ ಧೀಕ್ಷೆಯನ್ನು ಪಡೆದು ಶ್ರೀಕೃಷ್ಣ ಪಂಥದ ಅನುಯಾಯಿಗಳಾಗಿ, ಅನೇಕ ವರ್ಷಗಳ ಕಾಲ ಮಥುರಾ ಮತ್ತು ಬೃಂದಾವನಗಳಲ್ಲಿ ತಂಗಿದ್ದರು.
* ವಿಶ್ವಪ್ರೇಮವೇ ದೇವರ ಪ್ರೀತಿಗಳಿಸುವ ಪ್ರಥಮ ಹೆಜ್ಜೆ ಎಂದು ಬೋಧಿಸಿದರು.
* ಚೈತನ್ಯ ಚರಿತಾಮೃತ ಎಂಬುದರಲ್ಲಿ ಅವರ ಆಧ್ಯಾತ್ಮಿಕ ಚಿಂತನೆಯ ಬೋಧನೆಗಳನ್ನು ಸಂಗ್ರಹಿಸಲಾಗಿದೆ.
* ಭಾರತದ ಎಲ್ಲಾ ಕಡೆ ತೀರ್ಥಯಾತ್ರೆ ಕೈಗೊಂಡು ಪ್ರೇಮದ ಸಂದೇಶ ಸಾರಿದರು.
* ಪ್ರೇಮ, ಸಹೋದರಭಾವ ಮತ್ತು ದಾನಶೀಲತೆ ಇವು ಅವರ ಬೋಧನೆಯ ತಿರುಳು
* ಇಂದಿನ ಹರೇಕೃಷ್ಣ ಪಂಥ ಇವರಿಂದ ಪ್ರಭಾವಿತವಾಗಿದೆ.
* ಬಂಗಾಳದ ಜನತೆ ಚೈತನ್ಯರನ್ನು ಶ್ರೀಕೃಷ್ಣನ ಅವತಾರವೆಂದು ಪರಿಗಣಿಸಿ – 'ಚೈತನ್ಯ ಮಹಾಪ್ರಭು' ಎಂದು ಕರೆದಿದ್ದಾರೆ.


4) ಕಲಿಯುಗದ ರಾಧೆ ಸಂತ ಮೀರಾಬಾಯಿ - ಸಾ.ಶ. 1498 - 1569 :
* ರಾಜಸ್ಥಾನದ ಮೇವಾಡದ ರಜಪೂತ ರಾಜಮನೆತನದಲ್ಲಿ ಜನಿಸಿದಳು.
* ತಂದೆ-ರಾಜಾ ರತನಸಿಂಗ್
* ಮೇವಾರದ ರಾಜಕುಮಾರನನ್ನು ವರಿಸಿ, ನಂತರ ಲೌಕಿಕ ಬದುಕಿನಿಂದ ದೂರ ಸರಿದಳು.
* ಗುರು - ಸಂತ ರವಿದಾಸ/ರಾಯ್ದಾಸ್
* ತನ್ನ ಬದುಕನ್ನೆಲ್ಲಾ ಶ್ರೀಕೃಷ್ಣನ ಆರಾಧನೆಗೆ ಮೀಸಲಿಟ್ಟಳು.
* ಜನಪ್ರಿಯವಾಗಿರುವ ಈಕೆಯ 'ಭಜನೆಗಳು' ಎಂಬ ಭಕ್ತಿಪೂರ್ವಕ ಕೀರ್ತನೆಗಳನ್ನು ಈಗಲೂ ಇಡೀ ಭಾರತದಾದ್ಯಂತ ಹಾಡಲಾಗುತ್ತಿದ್ದು- ರಾಜಸ್ತಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ.
* ಮಹಾರಾಷ್ಟ್ರದ ಭೀಮಾ ನದಿಯ ದಡದಲ್ಲಿರುವ ಪಂಢರಾರದ ವಿಠೋಬನ ದೇವಾಲಯವು ಭಕ್ತಿ ಪಂಥದ ಕೇಂದ್ರವಾಗಿತ್ತು.
* ಪುರಂದರದಾಸರು ಮತ್ತು ಕನಕದಾಸರು ಕರ್ನಾಟಕದ ಭಕ್ತಿ ಚಳವಳಿಯ ಪ್ರಮುಖರಾಗಿದ್ದರು. 


5) ತುಳಸೀದಾಸರು - ಸಾ.ಶ. 1532 - 1623:
* ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
* ಇವರು ಬರೆದ ಹಿಂದೀ ಸಾಹಿತ್ಯದ ಶ್ರೇಷ್ಠ ಕೃತಿಯಾಗಿರುವ ರಾಮಚರಿತ ಮಾನಸವು ಉ.ಭಾರತದಲ್ಲಿ 'ತುಳಸೀ ರಾಮಾಯಣ' ಎಂದು ಜನಪ್ರಿಯವಾಗಿದೆ. 


>6) ರಮಾನಂದ :
* ಜನನ – ಅಲಹಾಬಾದ್ ನ ಬ್ರಾಹ್ಮಣ ಕುಟುಂಬದಲ್ಲಿ.
* ಹರಿಯನ್ನು ಸ್ಮರಿಸಿ, ಹರಿಯಲ್ಲಿ ಒಂದಾಗಿ. ಯಾರು ಯಾವ ಜಾತಿಯವನೆಂದು ಪ್ರಶ್ನಿಸುವುದಲ್ಲ. ಯಾರು ದೇವರನ್ನು ನೆನೆಯುವರೋ, ಅವರನ್ನು ದೇವರು ಆಶೀರ್ವದಿಸುವನು ಎಂಬ ವಿಶೇಷ ಸಂದೇಶ ನೀಡಿದರು.
* ಭಕ್ತಿ, ಪ್ರೀತಿಗಳ ಆಧಾರದ ಮೇಲೆ- ವೈಷ್ಣವ ಧರ್ಮದ ಶಾಲೆ ಪ್ರಾರಂಭ
* ಉ.ಭಾರತದ ಕೆಲವೆಡೆ ಸಂಚರಿಸಿ ರಾಮ-ಸೀತೆಯರ ಪೂಜೆಯ ಭಕ್ತಿ ಆರಾಧನ ಸಿದ್ಧಾಂತದ ಪ್ರತ್ಯೇಕ ಪಂಥವನ್ನು ಜನಪ್ರಿಯಗೊಳಿಸಿದರು.
* ವಾರಣಾಸಿಯು ಅವರ ಕಾರ್ಯಸ್ಥಾನದ ಕೇಂದ್ರವಾಗಿತ್ತು.
* ಇವರ ಶಿಷ್ಯ-ಸಂತ ಕಬೀರ್. 

 -> ಭಕ್ತಿಪಂಥದ ಪರಿಣಾಮಗಳು:

* ಭಕ್ತಿ ಪಂಥದ 2 ಮುಖ್ಯ ಉದ್ದೇಶಗಳೆಂದರೆ - ಮೌಢ್ಯಾಚರಣೆಗಳ ಅರ್ಥಹೀನತೆಯನ್ನು ಸಾರುವುದು ಮತ್ತು ಹಿಂದೂ-ಮುಸಲ್ಮಾನರಲ್ಲಿ ಮಧುರ ಬಾಂಧವ್ಯವನ್ನುಂಟುಮಾಡುವುದು
* ಭಾರತದ ಪ್ರಾದೇಶಿಕ ಭಾಷೆಗಳ ವಿಕಾಸ & ದೇಸೀ ಸಾಹಿತ್ಯ ಅಭಿವೃದ್ಧಿಯಾಯಿತು.
* ಸೂರದಾಸರು-ಸೂರ್ ಸಾಗರ್, ಜ್ಞಾನದೇವರ-ಜ್ಞಾನೇಶ್ವರಿ ಕಾವ್ಯ ಹಾಗೂ ಮರಾಠಿಯಲ್ಲಿ-ಅಭಂಗಗಳೆಂಬ ಕೀರ್ತನೆಗಳು ರಚನೆಯಾದವು.

Post a Comment

0 Comments