■ ಭಕ್ತಿ ಚಳುವಳಿ - ಸೂಫಿ ಸಂತರು ಮತ್ತು ಚಿಸ್ತಿ ಪಂಥ



* ಸೂಫಿ ಪಂಥವು ಅರೇಬಿಯಾದಲ್ಲಿ ಉದಯಿಸಿತು
* ಹಿಂದೂ-ಮುಸ್ಲಿಮರ ಏಕತೆಗಾಗಿ ಶ್ರಮಿಸಿದರು.
*  ಸೂಫ್ ಎಂಬ ಸಾದಾ ಉಣ್ಣೆಯ ಅಂಗಿ ತೊಡುತ್ತಿದ್ದುದರಿಂದ ಮುಸ್ಲಿಂ ಸಂತರುಗಳನ್ನು ಸೂಫೀ ಎಂದು ಕರೆದರು.
* ಭಕ್ತಿಯಿಂದ ಕೂಡಿದ ನರ್ತನ ಮತ್ತು ಸಂಗೀತವು ನಮ್ಮನ್ನು ದೇವರ ಕಡೆ ಕೊಂಡೊಯ್ಯುತ್ತವೆ ಎಂದು ಸೂಫಿಗಳು ನಂಬಿದ್ದರು.
* ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಭಕ್ತಿಯ ಮಹತ್ವ ಸಾರುವ ಕೃತಿಗಳ ರಚನೆ.
* ಕುತುಬನ್ –ಮೃಗಾವತಿ & ಮಲ್ಲಿಕ್ ಮಹಮದ್ ಜಯಸಿಯು -ಪದ್ಮಾವತ್ ಕೃತಿಯನ್ನು ರಚಿಸಿದನು.
* ಸೂಫಿ ಪಂಥದಲ್ಲಿ 12 ವಿವಿಧ ಪಂಗಡಗಳಿದ್ದು, ಅವುಗಳಲ್ಲಿ 04 ಅತ್ಯಂತ ಪ್ರಮುಖವಾದವುಗಳಾಗಿವೆ.
* ಕರ್ನಾಟಕದ ಸೂಫೀ ಪರಂಪರೆಯ ಪ್ರಮುಖ ಕೇಂದ್ರಗಳೆಂದರೆ- ಬೀದರ್, ಕಲಬುರಗಿ ಮತ್ತು ವಿಜಯಪುರ.
* ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಭಕ್ತಿಯಿಂದ ಪಾಲ್ಗೊಳ್ಳುವ-ಉರುಸ್ ಆಚರಣೆ ಇಂದಿಗೂ ಜೀವಂತವಾಗಿವೆ.

* ಸೂಫಿ ಪಂಥದ ಸಾರ:
* ದೇವರು ಒಬ್ಬನೇ, ಆತನು ಸರ್ವಶಕ್ತ, ನಾವೆಲ್ಲರೂ ಆತನ ಮಕ್ಕಳು
* ಉತ್ತಮ ಕಾಯಕಕ್ಕೆ ಮಹತ್ವ 
* ಎಲ್ಲಾ ಮಾನವರು ಸಮಾನರು
* ಜಾತಿ ಪದ್ಧತಿಯನ್ನು ವಿರೋಧಿಸಿತು. 
* ಧರ್ಮವೆಂದರೆ - ಪ್ರೇಮ & ಮಾನವನ ಸೇವೆ ಎಂಬುದೇ ಸೂಫಿಗಳ ಮೂಲ ತತ್ವವಾಗಿದೆ.

-> ಭಾರತದ ಪ್ರಮುಖ ಸೂಫಿ ಸಂತ - ದೆಹಲಿಯ ನಿಜಾಮುದ್ದಿನ್ ಔಲಿಯ :
ಹುಲ್ಲು ಮಾಡಿನ ಮಸೀದಿ ಇವರ ಚಟುವಟಿಕೆಯ ಕೇಂದ್ರ * ಭಕ್ತರಿಗೆ ಸದ್ಗುಣ ಕರುಣೆಯ ಸಂದೇಶ.

-> ಕಲಬುರ್ಗಿಯ - ಸಯ್ಯದ್ ಮಹಮದ್ ಹುಸೈನಿ/ಖ್ವಾಜಾ ಬಂದೇನವಾಜ್/ ಗೇಸುದರಾಜ್:
* ದೆಹಲಿಯ ನಾಸಿರುದ್ದೀನನ ಶಿಷ್ಯರಾಗಿದ್ದರು.
* ಬಂದೇನವಾಜ್ ಎಂದರೆ 'ಮೊರೆಹೊಕ್ಕವರನ್ನು ಪೊರೆಯುವವರು' ಎಂದರ್ಥ.
* ಗೇಸುದರಾಜ್ ಎಂದರೆ 'ಉದ್ದ ಕೂದಲಿನವನು' ಎಂದರ್ಥ.
* ಇವರಿಗೆ ಸಂಸ್ಕೃತ, ಅರಬೀ, ಪಾರಸಿ, ದಖನಿ/ಉರ್ದು ಭಾಷೆಗಳು ಬರುತ್ತಿದ್ದವು.
* ದೊರೆ ಫಿರೋಜ್ ಷಾ ಇವರಿಗೆ ತುಂಬಾ ಗೌರವ ನೀಡುತ್ತಿದ್ದನು.
* ಕಲಬುರಗಿಯಲ್ಲಿ ಪ್ರತಿವರ್ಷ ಇವರ ಉರುಸು ನಡೆಯುತ್ತದೆ.

-> ಚಿಸ್ತಿ ಪಂಥ :  
*ಸ್ಥಾಪಕ - ಅಜ್ಮೀರದ ಮುಯಿನುದ್ದಿನ್ ಚಿಸ್ತಿ.
* ಸೂಫಿ ಪಂಥದ ಒಂದು ಪಂಗಡ - ಚಿಸ್ತಿ ಪಂಥ.
* ದೈವಭಕ್ತಿ, ಗುರುಸೇವೆ, ಸನ್ಮಾರ್ಗದಲ್ಲಿ ನಡೆಯುವುದು ಚಿಸ್ತಿ ಅನುಯಾಯಿಗಳ ಲಕ್ಷಣವಾಗಿತ್ತು.
* ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಕಾಳಜಿಯಿತ್ತು. ಇವರು ಜನ ಬಳಕೆಯ ದಖನ್(ಉರ್ದು) ಭಾಷೆಯಲ್ಲಿ ಕೃತಿ ಬರೆದರು.
* ಫತೇಪುರ ಸಿಕ್ರಿಯ - ಸಲೀಮ್ ಚಿಸ್ತಿ * ಲಾಹೋರನ - ಶೇಖ್ ಇಸ್ಮಾಯಿಲ್  * ಅಜ್ಮೀರದ- ಖ್ವಾಜಾ ಮುಯಿನುದ್ದಿನ್ ಚಿಸ್ತಿ * ದೆಹಲಿಯ - ನಿಜಾಮುದ್ದಿನ್ ಔಲಿಯಾ * ಅರ್ಕಾಟ್ ನ- ಟಿಪ್ಪು ಮಸ್ತಾರ ಔಲಿಯಾ * ಕಲಬುರಗಿಯ - ಖ್ವಾಜಾ ಬಂದೇ ನವಾಜ್ ಪ್ರಮುಖರು.

Post a Comment

1 Comments