● ಭಾರತ ಸ್ವಾತಂತ್ರ್ಯ ಚಳುವಳಿ - ಗಾಂಧಿ ಯುಗ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ



ಮಹಾತ್ಮ ಗಾಂಧಿ :
* ಸಾ.ಶ. 1869ರಲ್ಲಿ ಅಕ್ಟೋಬರ್ 2 ರಂದು ಗುಜರಾತಿನ ಪೋರಬಂದರನಲ್ಲಿ ಜನನ.
* ಅಹಿಂಸೆ ಮತ್ತು ಸತ್ಯಾಗ್ರಹ ನೀತಿಯು ಗಾಂಧೀಜಿಯವರ ಹೋರಾಟದ ಪ್ರಮುಖ ಅಸ್ತ್ರಗಳಾಗಿದ್ದವು.
* ಗಾಂಧೀಜಿಯವರ ಜೀವನದ ಮೇಲೆ ಪ್ರಭಾವ ಬೀರಿದ ಪ್ರಮುಖ ಕೃತಿಗಳೆಂದರೆ-
1) ಭಗವದ್ಗೀತೆ 
2) ಜಾನ್ ರಸ್ಕಿನ್ ನ Unto this Last / ಕೊನೆಯ ತನಕ' 
3) ಟಾಲ್ಸ್ ಟಾಯ್  ರವರ - The Kingdom of God is Within You / ನಿನ್ನಂತರಂಗವೇ ದೇವರ ರಾಜ್ಯ 
4) ಸತ್ಯ ಹರಿಶ್ಚಂದ್ರ ನಾಟಕ.

-> ದಕ್ಷಿಣ ಆಫ್ರಿಕದಲ್ಲಿ ಗಾಂಧೀಜಿ : 
* ಗಾಂಧೀಜಿಯವರ ಆರಂಭಿಕ ಶಿಕ್ಷಣ ಪೋರಬಂದರಿನಲ್ಲಿ ಹಾಗೂ ಉನ್ನತ ಶಿಕ್ಷಣ ಮತ್ತು ಕಾನೂನು ಪದವಿ-ಇಂಗ್ಲೆಂಡಿನಲ್ಲಾಯಿತು.
* 1891ರಲ್ಲಿ ಭಾರತಕ್ಕೆ ಹಿಂದಿರುಗಿ ರಾಜ್ಕೋಟ್ ಮತ್ತು ಮುಂಬೈಯಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿದರು.
* ದಾದಾ ಅಬ್ದುಲ್ಲಾ ಕಂಪನಿಯ ಆಹ್ವಾನದ ಮೇರೆಗೆ ಕಾನೂನು ಸಲಹೆಗಾರರಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು.
* ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ಕೆಳದರ್ಜೆಯವರಾಗಿ ಬಾಳುವುದನ್ನು ಕಂಡು ಆತಂಕಕ್ಕೊಳಗಾದರು. ಅಲ್ಲಿಯ `ಬಿಳಿ' ಸರ್ಕಾರದ ಜನಾಂಗೀಯ ನೀತಿಯನ್ನು ವಿರೋಧಿಸಿದರು.


-> ಗಾಂಧೀಜಿಯವರ ಪ್ರಮುಖ ಕೃತಿಗಳು :
1) ಸತ್ಯದೊಂದಿಗೆ ನನ್ನ ಪ್ರಯೋಗಗಳು 
2) ಹಿಂದ್ ಸ್ವರಾಜ್ 
3) ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ.

* ಸಂಪಾದಕೀಯ ವೃತ್ತಪತ್ರಿಕೆಗಳು 
- ಹರಿಜನ ಮತ್ತು ಯಂಗ್ ಇಂಡಿಯಾ. 

-> ಗಾಂಧೀಜಿಯವರ ಆರಂಭಿಕ ರಾಜಕೀಯ ಜೀವನ:
* 1915ರಲ್ಲಿ ದ.ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿ 1916ರಲ್ಲಿ ಅಹಮದಾಬಾದ್ ಬಳಿ ಸಬರಮತಿ ಆಶ್ರಮ ಸ್ಥಾಪನೆ  ಮಾಡಿದರು.
* ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನದ ಮೇರೆಗೆ ಭಾರತದಾದ್ಯಂತ ಪ್ರವಾಸ ಕೈಗೊಂಡರು.
* ಚಂಪಾರಣ್ ಮತ್ತು ಖೇಡಾಗಳಲ್ಲಿ ರೈತರ ಪರ ಹೋರಾಟ ನಡೆಸಿದರು.


-> 1917ರ ಬಿಹಾರದ ಚಂಪಾರಣ್ ಹೋರಾಟ :
ನೀಲಿ ಬೆಳೆಯುವಂತೆ ಒತ್ತಾಯಿಸಿದ ಪ್ಲಾಂಟರ್ ಗಳ ವಿರುದ್ಧ ಚಂಪಾರಣ್ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲಿಸಿ ಚಂಪಾರಣ್ ಸತ್ಯಾಗ್ರಹ ಕೈಗೊಂಡರು.
* ಚಂಪಾರಣ್ ಚಳವಳಿಯ ಮೂಲಕ ನಾಯಕರಾಗಿ ಹೊಮ್ಮಿದವರು - ಬಾಬು ರಾಜೇಂದ್ರ ಪ್ರಸಾದ್.


-> 1918ರ ಗುಜರಾತಿನ ಖೇಡಾ ರೈತ ಹೋರಾಟ:
* ಬೆಳೆಗಳು ವಿಫಲವಾಗಿ ಆಕವಾಗಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ- ಖೇಡಾ ರೈತರು ಕಂದಾಯ ಕಟ್ಟುವುದರಿಂದ ತಮಗೆ ವಿನಾಯಿತಿ ನೀಡಬೇಕೆಂದು ಮನವಿ ಸಲ್ಲಿಸಿದರು. ಸರ್ಕಾರವು ಮನವಿಯನ್ನು ತಿರಸ್ಕರಿಸಿ ಕಂದಾಯ ಸಂಗ್ರಹಣೆಗೆ ಒತ್ತಾಯಿಸಿತು. ಇದರ ವಿರುದ್ಧದ ರೈತರ ಹೋರಾಟಕ್ಕೆ ಗಾಂಧೀಜಿ ಪೂರ್ಣ ಬೆಂಬಲ ನೀಡಿದರು.
* ಖೇಡಾ ರೈತ ಹೋರಾಟದ ಮೂಲಕ ರಾಜಕೀಯವಾಗಿ ಬೆಳೆದ ನಾಯಕ- ಸರದಾರ ವಲ್ಲಭಭಾಯಿ ಪಟೇಲರು.


->1919ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ /ರಾಜಕೀಯ ರಂಗಕ್ಕೆ ಗಾಂಧೀಜಿಯವರ ಪ್ರವೇಶ :
* 1919ರಲ್ಲಿ ರೌಲಟ್ ಕಾಯಿದೆಯ ಜಾರಿ ಮತ್ತು ಜಲಿಯನ್ ವಾಲಾಬಾಗ್ನ ಘೋರ ಹಿಂಸಾಕೃತ್ಯದ ವಿರುದ್ಧ ಚಳವಳಿ ಹೂಡುವ ಮೂಲಕ ಗಾಂಧಿಜಿಯವರು ಭಾರತದ ರಾಜಕೀಯ ರಂಗವನ್ನು ಪ್ರವೇಶಿಸಿದರು.


-> 1919ರ ಖಿಲಾಫತ್ ಚಳವಳಿ : ಮೊಹಮ್ಮದ್ ಆಲಿ ಮತ್ತು ಶೌಕತ್ ಆಲಿ
* ಜಗತ್ತಿನ ಎಲ್ಲಾ ಮುಸಲ್ಮಾನರ ಪರಮೋಚ್ಛ ಧಾರ್ಮಿಕ ಮುಖಂಡರು - ಟರ್ಕಿಯ ಖಲೀಫ.
* 1ನೇ ಮಹಾಯುದ್ಧದಲ್ಲಿ ಟರ್ಕಿಯು ಬ್ರಿಟನ್ ವಿರುದ್ಧ ನಿಂತು ಸೋತ ಪರಿಣಾಮ-ಟರ್ಕಿಯ ಭಾಗವಾಗಿದ್ದ ಅರೇಬಿಯಾ, ಜೋರ್ಡಾನ್, ಇರಾಕ್ ಇತ್ಯಾದಿ ಸ್ವತಂತ್ರ ರಾಜ್ಯಗಳಾದವು.
* 1919ರಲ್ಲಿ ಟರ್ಕಿಯ ಖಲೀಫರ ಅರಸೊತ್ತಿಗೆಯನ್ನು ಮೂಲೆಗೊತ್ತಿ ಅಧಿಕಾರಕ್ಕೇರಿದ ಕಮಾಲ್ ಪಾಷಾ ಕುರಿತು ಭಾರತೀಯ ಮುಸ್ಲಿಮರು ಖಲೀಫರ ಪರವಾಗಿಯೂ ಮತ್ತು ಬ್ರಿಟನಿನ ವಿರುದ್ಧವಾಗಿಯೂ ನಡೆಸಿದ ಆಂದೋಲನವೇ ಖಿಲಾಫತ್ 'ಚಳವಳಿ'.
* ಗಾಂಧೀಜಿಯವರು ಖಿಲಾಫತ್ ಚಳವಳಿಯ ನಾಯಕತ್ವ ವಹಿಸಿದರು.
* ಮೊಹಮ್ಮದ್ ಆಲಿ ಮತ್ತು ಶೌಕತ್ ಆಲಿ ಸಹೋದರರು ಈ ಚಳವಳಿಯ ಪ್ರಮುಖ ನಾಯಕರಾಗಿದ್ದರು.

Post a Comment

0 Comments