● ಭಾರತದಲ್ಲಿ ಹಸಿರು ಕ್ರಾಂತಿ - ಅತ್ಯುಪಯುಕ್ತ ಮಾಹಿತಿ




* ಉತ್ತಮ ಇಳುವರಿ ನೀಡುವ ಬೀಜಗಳ ಬಳಕೆ, ಹೆಚ್ಚುತ್ತಿರುವ ಗೊಬ್ಬರಗಳ ಬಳಕೆ ಹಾಗೂ
ಪರಿಣಾಮಕಾರಿಯಾದ ನೀರಾವರಿ ವ್ಯವಸ್ಥೆಯ ಬಳಕೆಗಳಿಂದಾಗಿ ಕೃಷಿ ಕ್ಷೇತ್ರದಲ್ಲಿ ಉಂಟಾಗಿರುವ ಇಳುವರಿಯ ಭಾರೀ ಹೆಚ್ಚಳವನ್ನು ಹಸಿರು ಕ್ರಾಂತಿ ಎಂದು ಕರೆಯಲಾಗುತ್ತದೆ.
 * 1968 ರಲ್ಲಿ ವಿಲಿಯಮ್ ಗಾವ್ಡ್ (William gaud) ಎಂಬ ವಿಜ್ಞಾನಿ ಈ ಪವನ್ನು ಮೊದಲಿಗೆ ಬಳಸಿದರು.
* `ಭಾರತದ ಹಸಿರು ಕ್ರಾಂತಿಯ ಪಿತಾಮಹ ' - ಡಾ|| ಎಂ.ಎಸ್. ಸ್ವಾಮಿನಾಥನ್
* ಹಸಿರು ಕ್ರಾಂತಿಗೆ ಮುಖ್ಯ ಕಾರಣ  - ಅಧಿಕ ಇಳುವರಿ ಕೊಡುವ ಬೇಳೆ ಕಾಳುಗಳ ತಳಿಗಳು, ನೀರಾವರಿ ವ್ಯವಸ್ಥೆಯ ವಿಸ್ತರಣೆ, ಸಂಕರಣ ತಳಿಬೀಜಗಳ ಹಂಚಿಕೆ, ಕೃತಕ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ರೈತರಿಗೆ ದೊರೆಯುವಂತೆ ಮಾಡಿದ್ದುದು.
* ಹಸಿರು ಕ್ರಾಂತಿಯ ವಿವಿಧ ಮಜಲುಗಳನ್ನು ರೈತರಿಗೆ ತಲುಪಿಸುವಲ್ಲಿ ಆಕಾಶವಾಣಿಯ ಪಾತ್ರ ಮಹತ್ತರವಾದುದು.
* ನಮ್ಮ ದೇಶದಲ್ಲಿ ಭತ್ತ ಮತ್ತು ಗೋಧಿಯ ಉತ್ಪಾದನೆಯ ಹೆಚ್ಚಳದಲ್ಲಿ ಹಸಿರು ಕ್ರಾಂತಿಯ ಪ್ರಭಾವ ಎದ್ದು ಕಾಣುತ್ತದೆ.
* ಹಸಿರು ಕ್ರಾಂತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯಗಳು- ಪಂಜಾಬ ಹಾಗೂ ಉತ್ತರ ಪ್ರದೇಶ
* ಭಾರತ ಸೇರಿದಂತೆ ಪ್ರಪಂಚದಲ್ಲಿ ಹಸಿರು ಕ್ರಾಂತಿಯ ಯಶಸ್ಸಿನ ನಡುವೆಯೂ ಸಹ ಸುಮಾರು 800 ಮಿಲಿಯನ್ ಜನರು ಹಸಿವಿನಿಂದ ನರಳುತ್ತಿದ್ದಾರೆ. ಈ ಜನರಲ್ಲಿ 2/3 ರಷ್ಟು ಜನ ಹಸಿರು ಕ್ರಾಂತಿ ಅತಿ ಹೆಚ್ಚು ಯಶಸ್ವಿಯಾದ ಏಶಿಯಾಖಂಡದಲ್ಲಿಯೇ ಕಂಡು ಬರುತ್ತಾರೆ.
* ಹಸಿರು ಕ್ರಾಂತಿಯು ನಮ್ಮ ದೇಶದ ಧಾನ್ಯ ಆಮದಿನ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡಿದೆ. ನಮ್ಮ ಜನಸಂಖ್ಯೆಯ 1/3 ಭಾಗ ಬಡವರಾಗಿದ್ದು, ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ. ಪ್ರಪಂಚದಲ್ಲಿ ಪ್ರತಿದಿನ ಸುಮಾರು 5000 ಜನ ಈ ಸಮಸ್ಯೆಗೆ ತುತ್ತಾಗಿ ಸಾಯುತ್ತಿದ್ದಾರೆ.

ಪ್ರಾಚೀನ ಭಾರತದಲ್ಲಿ ಕೃಷಿ ಮತ್ತು ಪ್ರಪಂಚಕ್ಕೆ ಭಾರತದ ಕೊಡುಗೆ :
* ಪ್ರಾಚ್ಯವಸ್ತು ಇಲಾಖೆಯ ಸಂಶೋಧನೆಯ ಪ್ರಕಾರ ಕ್ರಿಸ್ತಪೂರ್ವ 6 ನೇ ಸಹಸ್ರಮಾನದಲ್ಲಿ ಗಂಗಾನದಿಯ ತೀರದಲ್ಲಿ ಭತ್ತವನ್ನು ಬೆಳೆಯುತ್ತಿದ್ದರು. ಕ್ರಮೇಣ ಅದು ಇತರ ಸ್ಥಳಗಳಿಗೂ ವಿಸ್ತರಿಸಿತು.
* ಬಾರ್ಲಿ, ಓಟ್, ಗೋಧಿ ಮುಂತಾದ ಬೆಳೆಗಳು ಲೆಗ್ಯೂಮ್ ನ ಕಾಳುಗಳನ್ನು ಕ್ರಿ. ಪೂ. 6ನೇ ಶತಮಾನಕ್ಕೂ ಮುನ್ನ ಭಾರತದಲ್ಲಿ ಬೆಳೆಯುತ್ತಿದ್ದ ಬಗ್ಗೆ ಮಾಹಿತಿ ಇದೆ.
* ಋಗ್ವೇದದಲ್ಲಿ ಫಲವತ್ತಾದ ಮತ್ತು ನಿರುಪಯುಕ್ತ ಮಣ್ಣುಗಳ ಬಗ್ಗೆ ಮಾಹಿತಿ ಇದೆ.
* ಅಮರಕೋಶದ ಭೂಮಿವರ್ಗ ಅಧ್ಯಾಯದಲ್ಲಿ ಹನ್ನೆರಡು ಬಗೆಯ ಜಮೀನುಗಳ ವರ್ಣನೆ ಇದೆ. ಫಲವತ್ತತೆ ಹಾಗೂ ಮಣ್ಣಿನ ಭೌತಿಕ ಲಕ್ಷಣಗಳು ಈ ವರ್ಗಿಕರಣಕ್ಕೆ ಆಧಾರವಾಗಿತ್ತು.
* ವೈಸ್ಯವರ್ಗದ ಅಧ್ಯಾಯದಲ್ಲಿ ಭತ್ತ, ಬಾರ್ಲಿ, ಎಳ್ಳು, ಉದ್ದು, ಮುಂತಾದ ಬೆಳೆಗಳಿಗೆ ಸೂಕ್ತವಾದ ಮಣ್ಣಿನ ಬಗ್ಗೆ ಮಾಹಿತಿ ಇದೆ.
* ತಮಿಳಿನ ಸಂಗಮ ಸಾಹಿತ್ಯದಲ್ಲಿ (ಕ್ರಿ.ಪೂ 200ರಿಂದ ಕ್ರಿ. ಶ 100) ಮಣ್ಣಿನ ವಿಧಗಳ ಬಗ್ಗೆ ಮಾಹಿತಿ ಇದೆ.
* ಗೊಬ್ಬರವಿಲ್ಲದೆ ಬೆಳೆದ ಬೆಳೆಗಳು ಇಳುವರಿ ನೀಡುವುದಿಲ್ಲ ಎಂಬ ಅಂಶವನ್ನು ಕೃಷಿಪರಾಶರದಲ್ಲಿ ಹೇಳಲಾಗಿದೆ. ಸಗಣಿಯಿಂದ ಗೊಬ್ಬರವನ್ನು ತಯಾರಿಸುವ ವಿಧಾನವನ್ನು ಇದರಲ್ಲಿ ವಿವರಿಸಲಾಗಿದೆ.
* ಸಗಣಿ, ಪ್ರಾಣಿ ಮೂಳೆಗಳು, ಮೀನು ಮತ್ತು ಹಾಲು ಇವುಗಳನ್ನು ಬಳಸುವ ಬಗ್ಗೆ ಕೌಟಿಲ್ಯನು ಹೇಳಿದ್ದಾನೆ.
* ಕುರಿ ಮತ್ತು ಆಡುಗಳ ಸಗಣಿಯನ್ನು ಮರಗಳಿಗೆ ಗೊಬ್ಬರವಾಗಿ ಬಳಸಿ ಹೂವು ಮತ್ತು ಹಣ್ಣುಗಳ ಉತ್ಪತ್ತಿ ಹೆಚ್ಚು ಮಾಡುವ ಬಗ್ಗೆ ಅಗ್ನಿ ಪುರಾಣದಲ್ಲಿ ಹೇಳಲಾಗಿದೆ.
* ಬೃಹತ್ ಸಂಹಿತೆಯಲ್ಲಿ ವರಾಹಮಿಹಿರನು ಎಳ್ಳಿನ ಗಿಡಗಳನ್ನು ಹಸಿರು ಗೊಬ್ಬರವನ್ನಾಗಿ ಬಳಸಬಹುದೆಂದು ಹೇಳಿದ್ದಾನೆ.
* ಸುರಪಾಲ (ಕ್ರಿ. ಶ 1000)ನು ಕುಣಪ ಎಂಬ ದ್ರವ್ಯರೂಪದ ಗೊಬ್ಬರವನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾನೆ.
* ಕೃಷಿ ಪರಾಶರ ಮತ್ತು ಬೃಹತ್ ಸಂಹಿತೆ ಗ್ರಂಥಗಳು ವಿವಿಧ ಋತುಗಳಲ್ಲಿ ಮಳೆಯ ಪ್ರಮಾಣವನ್ನು ಅಂದಾಜಿಸುವ ಮಾದರಿಗಳನ್ನು ವಿವರಿಸಿವೆ.
* ತೋಡುಗಳ ಮೂಲಕ ನೀರನ್ನು ಬೆಳೆಗಳಿಗೆ ಹಾಯಿಸುವ ಹಾಗೂ ಬಾವಿಗಳಿಂದ ನೀರನ್ನು ಒದಗಿಸುವ ವ್ಯವಸ್ಥೆಗಳ ಬಗ್ಗೆ ಋಗ್ವೇದದಲ್ಲಿ ಹೇಳಲಾಗಿದೆ.
* ಬೌದ್ಧ ಧರ್ಮದ ಗ್ರಂಥಗಳಲ್ಲಿ ನೀರಾವರಿಗಾಗಿ ಸಣ್ಣ ತೊಟ್ಟಿಗಳನ್ನು ನಿರ್ಮಿಸುತ್ತಿದ್ದ ಬಗ್ಗೆ ಉಲ್ಲೇಖವಿದೆ.
* ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತೂಬುಗಳ ಬಗ್ಗೆ ಮಾಹಿತಿ ಇದ್ದು, "ಈ ತೂಬುಗಳನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ಸಂಗ್ರಹಾಲಯದಿಂದ ನೀರು ಬಿಟ್ಟಲ್ಲಿ ಅಂಥವರು ಆರು ಪಣಗಳ ದಂಡ ಶುಲ್ಕ ನೀಡ ಬೇಕಾಗುತ್ತದೆ. ಹಾಗೆಯೇ ಈ ತೂಬುಗಳಿಂದ ಹರಿಯುವ ನೀರಿಗೆ ಯಾರಾದರೂ ತಡೆಯೊಡ್ಡಿದಲ್ಲಿ ಅವರೂ ಸಹಾ ಇದೇ ದಂಡ ಶುಲ್ಕವನ್ನು ಕಟ್ಟಬೇಕಾಗುತ್ತದೆ." ಎಂದು ಎಚ್ಚರಿಸಲಾಗಿದೆ.
* ಪ್ರಾಚೀನ ಭಾರತದಲ್ಲಿ ಬಾವಿಗಳಿಂದಲೂ ಗದ್ದೆಗೆ ನೀರು ಹಾಯಿಸುವ ವ್ಯವಸ್ಥೆ ಇತ್ತು. ಹಗ್ಗ ಕಟ್ಟಲಾದ ಚರ್ಮದ ಚೀಲವೊಂದನ್ನು ಎತ್ತುಗಳು ಎಳೆಯುವ ಮೂಲಕ ಬಾವಿಯಿಂದ ನೀರನ್ನು ಎತ್ತಲಾಗುತ್ತಿತ್ತು. ಬಾವಿಯಿಂದ ನೀರನ್ನು ಎತ್ತಲು ಬಳಸಲಾಗುತ್ತಿರುವ `ಪರ್ಷಿಯನ್ ಚಕ್ರ' ವನ್ನು ಟರ್ಕಿಗಳ ದಾಳಿಗೂ ಮುಂಚೆ ಉತ್ತರ ಭಾರತದಲ್ಲಿ ಅಭಿವೃದ್ದಿಪಡಿಸಲಾಗಿತ್ತು
* ಸುರಪಾಲ ವಿರಚಿತ ವೃಕ್ಷಾಯುರ್ವೇದದಲ್ಲಿ ಅಂತರ್ಜಲ ಪತ್ತೆ ಮಾಡುವ ವಿಧಾನಗಳು,
ನೀರಾವರಿ ವ್ಯವಸ್ಥೆಗಳು, ಮಣ್ಣಿನ ಷಣೆ ಹಾಗೂ ಫಲವತ್ಕಾರಕಗಳ ಬಳಕೆ ಬಗ್ಗೆ ಹೇಳಲಾಗಿದೆ.
* ನಮಗೆ ರಾಮಾಯಣ ಹಾಗೂ ಮಹಾಭಾರತ ಗ್ರಂಥಗಳಲ್ಲಿ ಉದಾಹರಣೆಗಳು ದೊರಕುತ್ತವೆ. ಚಿತ್ರಕೊಟದಲ್ಲಿರುವ ಭರತನನ್ನು "ಪ್ರಿಯ ಭರತ, ಕೃಷಿ ವೃತ್ತಿಯಲ್ಲಿ ಹಾಗೂ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವವರು ನಿನ್ನ ವಿಶೇಷ ಗಮನ ಹಾಗೂ ಆಸಕ್ತಿಯನ್ನು ಪಡೆದುಕೊಳ್ಳುತ್ತಿರುವರೇನು?" ಎಂದು ರಾಮನು ಪ್ರಶ್ನಿಸುತ್ತಾನೆ.
* ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮನು ರಾಜ ಯುಧಿಷ್ಟಿರನನ್ನು ಕುರಿತು ಹೀಗೆ ಹೇಳುತ್ತಾನೆ. "ವ್ಯವಸಾಯ ಪಶುಸಂಗೋಪನೆ ಹಾಗೂ ವ್ಯಾಪಾರ ಇವು ಜನರ ಜೀವಂತಿಕೆ, ನೀನು ಹಾಕುತ್ತಿರುವ ತೆರಿಗೆಗಳಿಂದಾಗಿ ಕೃಷಿಕರು ರಾಜ್ಯವನ್ನು ತೊರೆಯುತ್ತಿಲ್ಲತ್ತಾನೇ? ರಾಜನ ಎಲ್ಲ ಭಾರವನ್ನು ಹೊತ್ತುಕೊಳ್ಳುವವರು ಹಾಗೂ ಇತರರಿಗೆ ಜೀವನಾವಶ್ಯಕಗಳನ್ನು ಪೂರೈಸುತ್ತಿರುವವರು ಕೃಷಿಕರು."

ಸಂಗ್ರಹ ಮೂಲ : ವಿಜ್ಞಾನ ಪಠ್ಯ ಪುಸ್ತಕ

Post a Comment

1 Comments

  1. ಹಸಿರು ಕ್ರಾಂತಿಯನ್ನು ಅಳವಡಿಸಿಕೊಂ ಎರಡನೇ ರಾಜ್ಯ-ಉತ್ತರ ಪ್ರದೇಶ ಅಲ್ಲ....

    ಹರಿಯಾಣ.

    ReplyDelete