-> ಬೇಡನಾಯಕರ ದಂಗೆಗಳು :
ಹೈದರಾಬಾದ್-ಕರ್ನಾಟಕದಲ್ಲಿ
ಪ್ರಬಲವಾಗಿದ್ದ ಬೇಡನಾಯಕ ಪಾಳೆಯಗಾರರು ಸ್ಥಳೀಯ ಜಮೀನ್ದಾರರ ಶೋಷಣೆ ಮತ್ತು 1800ರ ಅನಂತರ ಬ್ರಿಟಿಷರು
ಜಾರಿಗೆ ತಂದಿದ್ದ- ಶಸ್ತ್ರಾಸ್ತ್ರ ಕಾಯ್ದೆ, ಅರಣ್ಯ ಕಾಯ್ದೆ ಹಾಗೂ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ
25ಕ್ಕೂ ಹೆಚ್ಚು ದಂಗೆಗಳನ್ನು ನಡೆಸಿದರು.
-> ಹಲಗಲಿ ಬೇಡನಾಯಕರ ದಂಗೆ :
* ಬಾಗಲಕೋಟೆ
ಜಿಲ್ಲೆ ಮುಧೋಳ ತಾಲ್ಲೂಕಿನಲ್ಲಿರುವ ಹಲಗಲಿ ಇಂದಿಗೂ ಪೈಲವಾನಗಿರಿಗೆ ಪ್ರಸಿದ್ಧವಾಗಿದೆ.
* 1857ರಲ್ಲಿ
ಬ್ರಿಟಿಷರು ಜಾರಿಗೆ ತಂದ ಶಸ್ತ್ರಾಸ್ತ್ರ ಕಾಯ್ದೆಯಂತೆ ಭಾರತೀಯರು ಸರ್ಕಾರದ ಅಪ್ಪಣೆ ಪಡೆದುಕೊಂಡೇ
ಆಯುಧಗಳನ್ನು ಇರಿಸಿಕೊಳ್ಳಬೇಕಿತ್ತು.
* ದಂಗೆಯ ನಾಯಕರಾಗಿದ್ದ-
ಜಡಗ, ಬಾಲ, ರಾಮಿರವರು ಕೆಚ್ಚೆದೆಯಿಂದ ಹೋರಾಡಿದರು.
* ರಾಮಿಯು 3
ಜನ ಬ್ರಿಟೀಷ್ ಸೈನಿಕರನ್ನು ಗುಂಡಿಕ್ಕಿ ಕೊಂದು, ವೀರಮರಣ ಹೊಂದಿದಳು.
* ಕೊನೆಗೆ ಬ್ರಿಟೀಷರು
290 ಜನರನ್ನು ಸೆರೆಹಿಡಿದು ಅವರಲ್ಲಿ 19 ಮಂದಿಯನ್ನು ಗಲ್ಲಿಗೇರಿಸಿದರು.
*
ಸಿಂಧೂರ ಲಕ್ಷ್ಮಣನು ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಸಿಂಧೂರ ಗ್ರಾಮದಲ್ಲಿ ಬೇಡರ ಸಾಬು ಮತ್ತು ನರಸವ್ವ
ಎಂಬ ದಂಪತಿಗಳಿಗೆ ಜನಿಸಿದ.
*
ಈತನ ಸಮಾಧಿ- ಬೀಳಗಿಯಲ್ಲಿದೆ.
*
ಸಿಂಧೂರು ಗ್ರಾಮದ ಇನಾಂದಾರರ/ಗೌಡರ ಮತ್ತು ಬ್ರಿಟಿಷರ ವಿರುದ್ಧ ಬಂಡೆದ್ದ ಲಕ್ಷ್ಮಣನು- ಬ್ರಿಟಿಷರ
ಖಜಾನೆಗಳನ್ನು ಮತ್ತು ಶ್ರೀಮಂತರನ್ನು ದೋಚಿ ಹಣವನ್ನು ಬಡವರಿಗೆ ಹಂಚುತ್ತಿದ್ದ.
*
ಊರ ಚಾವಡಿಯ ಮುಂದೆ ಲಕ್ಷ್ಮಣನನ್ನು ಕರೆಯಿಸಿ ಕಳ್ಳತನದ ಬಗ್ಗೆ ವಿಚಾರಣೆ ನಡೆಸಿದಾಗ ಅವನಿಗೆ ಅವಮಾನವಾಯಿತೆಂದು
ಅಲ್ಲಿಂದ ತಪ್ಪಿಸಿಕೊಂಡನು.
*
ಪೊಲೀಸ್ ಅಧಿಕಾರಿಯನ್ನು ಕೊಂದಿದ್ದರಿಂದ ಬ್ರಿಟಿಷರು ಲಕ್ಷ್ಮಣನನ್ನು ಶತಪ್ರಯತ್ನಪಟ್ಟು 1922 ಜುಲೈ
22 ರಂದು ಗುಂಡಿಕ್ಕಿ ಕೊಂದರು.
*
ಯಾದಗಿರಿ ಜಿಲ್ಲೆಯ ಸುರರ ಸಂಸ್ಥಾನವನ್ನು ನಿಜಾಮ ಮತ್ತು ಬ್ರಿಟಿಷರು ಹರಿದು ಹಂಚಿಕೊಳ್ಳಲು ಹವಣಿಸುತ್ತಿದ್ದರು.
*
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಾಜಾ ವೆಂಕಟಪ್ಪನಾಯಕನು ಸಂಗ್ರಾಮದಲ್ಲಿ ತಕ್ಷಣ
ಧುಮುಕಿದ.
*
ಬ್ರಿಟಿಷ್ ಸೇನೆ ಸುರರದ ಕೋಟೆಗೆ ಮುತ್ತಿಗೆ ಹಾಕಿ, ಕುಟಿಲತನನಿಂದ ಜಯಗಳಿಸಿತು.
*
ತಪ್ಪಿಸಿಕೊಂಡ ವೆಂಕಟಪ್ಪ ನಾಯಕನು ಹೆಚ್ಚಿನ ಸೈನ್ಯ ಸಂಗ್ರಹಕ್ಕಾಗಿ ಹೈದರಾಬಾದಿನ ನಿಜಾಮನಲ್ಲಿಗೆ ಹೋದಾಗ,
ನಿಜಾಮನ ಪ್ರಧಾನ ಮಂತ್ರಿ ಸಾಲಾರ್ ಜಂಗ್ ಬ್ರಿಟಿಷರಿಂದ ಲಾಭದ ನಿರೀಕ್ಷೆಯಿಂದ ವೇಂಕಟಪ್ಪನಾಯಕನನ್ನು
ಬ್ರಿಟಿಷರ ವಶಕ್ಕೊಪ್ಪಿಸಿದನು.
*
ಬ್ರಿಟಿಷರು ವೆಂಕಟಪ್ಪ ನಾಯಕನನ್ನು ಮೋಸದಿಂದ ಗುಂಡಿಟ್ಟು ಕೊಂದು, ನಂತರ ವಿಚಾರಣೆ, ಮರಣದಂಡನೆ ಮತ್ತು
ಶಿಕ್ಷೆಯನ್ನು 4 ವರ್ಷಕ್ಕೆ ಇಳಿಸುವ ನಾಟಕೀಯತೆ ಮಾಡಿ
ಆತ್ಮಹತ್ಯೆಯೆಂದು ಸುಳ್ಳು ಕಥೆ ಹಬ್ಬಿಸಿ ಪ್ರಚಾರ ಮಾಡಿದರು.
*
ನಂತರ ಬ್ರಿಟಿಷರು ಹೈದರಾಬಾದ್ ನಿಜಾಮನಿಗೆ ಸುರಪುರವನ್ನು ಕಾಣಿಕೆಯಾಗಿ ನೀಡಿದರು.
*
ಹೀಗೆ ಕಲಬುರಗಿ, ಬೀದರ ಮತ್ತು ರಾಯಚೂರು ಪ್ರದೇಶಗಳು ಹೈದರಾಬಾದ್ ಸಂಸ್ಥಾನದಲ್ಲಿ ಸೇರ್ಪಡೆಗೊಂಡವು.
* * * * *
* ಹೈದರಾಬಾದ್-ಕರ್ನಾಟಕ
ವಿಮೋಚನಾ ಹೋರಾಟ- ಸ್ವಾಮಿ ರಮಾನಂದ ತೀರ್ಥರು
ಸ್ವಾತಂತ್ರ್ಯ ಪೂರ್ವದಲ್ಲಿ 562 ಚಿಕ್ಕಪುಟ್ಟ ರಾಜ್ಯ/ಸಂಸ್ಥಾನಗಳು ಬ್ರಿಟಿಷರ ಅಧೀನದಲ್ಲಿದ್ದವು. ಈ ರಾಜ್ಯಗಳಲ್ಲಿ ಹೈದರಾಬಾದ್ ಪ್ರಮುಖವಾಗಿತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ 562 ಚಿಕ್ಕಪುಟ್ಟ ರಾಜ್ಯ/ಸಂಸ್ಥಾನಗಳು ಬ್ರಿಟಿಷರ ಅಧೀನದಲ್ಲಿದ್ದವು. ಈ ರಾಜ್ಯಗಳಲ್ಲಿ ಹೈದರಾಬಾದ್ ಪ್ರಮುಖವಾಗಿತ್ತು.
-> ಹೋರಾಟದ ಹಿನ್ನೆಲೆ :
*
ಹೈದರಾಬಾದ್ ಸಂಸ್ಥಾನದಲ್ಲಿ ಹಿಂದುಗಳ ಸ್ಥಿತಿ ಅತ್ಯಂತ ದಾರುಣವಾಗಿತ್ತು. ಸಾರ್ವಜನಿಕ ಧಾರ್ಮಿಕ ಆಚರಣೆಗಳ
ನಿಷೇಧ, ಶಿಕ್ಷಣದ ಕಡೆಗಣನೆ - ಇಲ್ಲಿ ಎಲ್ಲವೂ ಉರ್ದುಮಯವಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡ
ಹೊಡೆತ ಬಿತ್ತು.
*
ನಿಜಾಮನು ಜನರ ಮೂಲಭೂತ ಸ್ವಾತಂತ್ರ್ಯವನ್ನು ಹತ್ತಿಕ್ಕಲು- ಕಾಲಾಗಪ್ತಿ ಎಂಬ 53 ಕರಾಳ ನಿಯಮಗಳನ್ನು
ಜಾರಿಗೆ ತಂದನು.
ಹೋರಾಟದ ಗತಿ:
*
ಹೈ.ಕ. ಭಾಗ ಹೋರಾಟದ ಜನಪ್ರಿಯ ನಾಯಕ ಸ್ವಾಮಿ ರಮಾನಂದ ತೀರ್ಥರು ಹೈದರಾಬಾದ್ ಸಂಸ್ಥಾನದ ಎಲ್ಲೆಡೆ ಸಂಚಾರ
ಮಾಡಿ ಅಹಿಂಸಾತ್ಮಕ ಸತ್ಯಾಗ್ರಹ ಚಳುವಳಿಯನ್ನು ಸಂಟಿಸಿದರು.
*
ಹೋರಾಟದ ಇನ್ನೊಬ್ಬ ಪ್ರಸಿದ್ಧ ನಾಯಕ ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪರವರು ಪಾನ ವಿರೋಧ, ಅಸ್ಪೃಶ್ಯತೆಯ ನಿವಾರಣೆ ಮುಂತಾದ
ಸಮಾಜಮುಖಿ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸಿದರು.
-> ರಾಮಚಂದ್ರರಾವ್
ರವರ "ವಂದೇ ಮಾತರಂ" ಚಳವಳಿ:
*
ವಂದೇ ಮಾತರಂ ಹಾಡುವುದನ್ನು ಸರ್ಕಾರ ನಿಷೇಧಿಸಿತು. ವಂದೇ ಮಾತರಂ ಹಾಡಿದ ನೂರಾರು ಜನರನ್ನು ಬಂಧಿಸಲಾಯಿತು.
*
ಹೈದರಾಬಾದ್ ಸ್ವತಂತ್ರ್ಯ ಭಾರತದ ಒಕ್ಕೂಟವನ್ನು ಸೇರಬೇಕೆಂದು ನಿಜಾಮನನ್ನು ಒತ್ತಾಯಿಸಿದ ಕಾಂಗ್ರೆಸ್
ಸಂಸ್ಥೆಗೆ - ಸಂಸ್ಥಾನದಲ್ಲಿ ನಿಷೇಧವಿತ್ತು.
*
ನಿಜಾಮನ ಬೆಂಬಲದಿಂದ ರಜಾಕಾರರು- ಸಂಸ್ಥಾನದಲ್ಲಿ ವ್ಯಾಪಕ ಕೊಲೆ-ಸುಲಿಗೆಗಳನ್ನು ಮಾಡಲಾರಂಭಿಸಿದರು.
ಇದೇ ವೇಳೆ ಎಲ್ಲೆಲ್ಲೂ ಒಂದೇ ಸಮನೆ ವಂದೇ ಮಾತರಂ ಕೇಳಿ ಬರುತ್ತಿತ್ತು.
*
ಹೋರಾಟದಲ್ಲಿ ಆರ್ಯ ಸಮಾಜದ ಪಾತ್ರವು ಪ್ರಮುಖವಾಗಿತ್ತು.
*
ಕಾಸಿಂ ರಜವಿ ಮುಖಂಡತ್ವದಲ್ಲಿ ಇತ್ತೇಹಾದ್-ಉಲ್-ಮುಸಲ್ಮೀನ್ ಎಂಬ ಮುಸ್ಲಿಂ ಮೂಲಭೂತವಾದಿಗಳ ಸಂಘವು
ಸ್ಥಾಪನೆಯಾಯಿತು.
-> ಸರದಾರ್
ಶರಣಗೌಡ ಇನಾಂದಾರ್ ಭೂಗತ ಕಾರ್ಯಾಚರಣೆ :
*
ಇನಾಂದಾರರು ಸಂಘಟಿಸಿದ ಭೂಗತ ಕಾರ್ಯಾಚರಣೆಯ ಯುವತಂಡಗಳು - ರಜಾಕಾರರ ಮೇಲೆ ಸಿಡಿಲಿನಂತೆ ಬಂದೆರಗಿದ
ಪರಿಣಾಮವಾಗಿ ಅನೇಕ ಗ್ರಾಮಗಳು ರಜಾಕಾರರ ದೌರ್ಜನ್ಯದಿಂದ ಮುಕ್ತವಾದವು.
*
ರಜಾಕಾರರ ಅತಿಯಾದ ಹಾವಳಿಯಿಂದ ಹಲವು ಜನ ಹೈದರಾಬಾದ್ ಸಂಸ್ಥಾನವನ್ನು ತ್ಯಜಿಸಿ- ನೆರೆಯ ಸ್ವತಂತ್ರ
ಭಾರತಕ್ಕೆ ವಲಸೆ ಹೋದರು.
*
ಸಾವಿರಾರು ತರುಣರು ಹೈದರಾಬಾದಿನ ಗಡಿಯುದ್ದಕ್ಕೂ ಶಿಬಿರಗಳನ್ನು ಸ್ಥಾಪಿಸಿ, ರಜಾಕಾರ ತಂಡರ ವಿರುದ್ಧ ಸಶಕ್ತ ಹೋರಾಟ ನಡೆಸಿದರು.
-> ಸರ್ದಾರ್ ವಲ್ಲಭಭಾಯಿ ಪಟೇಲ್ ರು 1948ರ ಸಪ್ಟೆಂಬರ್ 17ರಂದು
ಸೇನಾ ಕಾರ್ಯಚರಣೆಯ ಮೂಲಕ ಹೈದರಾಬಾದನ್ನು ಭಾರತಕ್ಕೆ ಸೇರಿಸಿದರು.
*
1951ರಲ್ಲಿ ನಡೆದ ಹೈದರಾಬಾದ್ ಪ್ರಾಂತದ ಚುನಾವಣೆಗಳಲ್ಲಿ ಅಗ್ರಗಣ್ಯ ಜನನಾಯಕ ಸ್ವಾಮಿ ರಮಾನಂದ ತೀರ್ಥರು
- ಕಲಬುರಗಿ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು .
-> ಕಾಲಗಣನೆ (ಕ್ರಿ.ಶ.) :
-> 1854-58 - ಸುರರದ ರಾಜಾವೇಂಕಟಪ್ಪ ನಾಯಕನ ಹೋರಾಟ ಮತ್ತು
ಅಂತ್ಯ.
-> 1857 - ಹಲಗಲಿ ಗ್ರಾಮದ ಬೇಡನಾಯಕರ ಮೇಲೆ ಬ್ರಿಟಿಷರ ದಾಳಿ-
ರಾಮಿಯ ಅಂತ್ಯ.
-> 1922 ಜುಲೈ 22 - ಬ್ರಿಟಿಷರು ಸಿಂಧೂರ ಲಕ್ಷ್ಮಣನನ್ನು ಗುಂಡಿಕ್ಕಿ
ಹತ್ಯೆ.
->
1948 ಸಪ್ಟೆಂಬರ್ 17 - ಹೈದರಾಬಾದ್ ನಿಜಾಮನ ಶರಣಾಗತಿ ಮತ್ತು ಭಾರತ ಒಕ್ಕೂಟದೊಂದಿಗೆ ಹೈದರಾಬಾದ್
ಸಂಸ್ಥಾನದ ವಿಲೀನ.



0 Comments