ವಜ್ರದ ಬಗ್ಗೆ ನಿಮಗೆಷ್ಟು ಗೊತ್ತು? ರಚನೆ, ಉತ್ಪಾದನೆ, ಲಕ್ಷಣ & ಉಪಯೋಗಗಳು


ವಜ್ರವು ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತು. ಇದು ಬ್ರೆಝಿಲ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಮೇರಿಕದ ಸಂಯುಕ್ತ ಸಂಸ್ಥಾನ ಮುಂತಾದ ಭಾಗಗಳಲ್ಲಿ ದೊರೆಯುತ್ತದೆ. 
ಭಾರತದ ಆಂಧ್ರ ಪ್ರದೇಶದಲ್ಲಿರುವ ಗೋಲ್ಕೊಂಡಾ ವಜ್ರದ ಗಣಿಯು ಅತ್ಯಂತ ದೊಡ್ಡ ವಜ್ರದ ಗಣಿಗಳಲ್ಲಿ ಒಂದಾಗಿತ್ತು. 
ಕೆಲವು ಉಲ್ಕೆಗಳಲ್ಲಿ ಸೂಕ್ಷ್ಮವಾದ ವಜ್ರದ ಹರಳುಗಳು ಕಂಡು ಬಂದಿವೆ. 
ಭೂಮಿಯ ಮೇಲ್ಮೈಯಿಂದ 100 ಕಿ.ಮೀ. ಆಳದಲ್ಲಿ ಅತ್ಯಂತ ಹೆಚ್ಚಿನ ತಾಪ ಮತ್ತು ಒತ್ತಡದ ಸ್ಥಿತಿಯಲ್ಲಿ ವಜ್ರವು ಉತ್ಪತ್ತಿಯಾಗುತ್ತದೆ. ಜ್ವಾಲಾಮುಖಿಗಳು ಸಂಭವಿಸಿದಾಗ ಅವು ಮೇಲಕ್ಕೆ ಬರುತ್ತವೆ.
ಸಾಮಾನ್ಯವಾಗಿ ವಜ್ರವು ಬಣ್ಣರಹಿತವಾಗಿರುತ್ತದೆ. ಆದರೂ ಅನೇಕ ವಿಧದ ಬಣ್ಣದ ವಜ್ರಗಳು ಪ್ರಕೃತಿಯಲ್ಲಿ ದೊರೆಯುತ್ತವೆ. ಅವು ಹಳದಿ, ಕಂದು, ಕೆಂಪು, ಹಸಿರು, ನೀಲಿ, ಬೂದುಬಣ್ಣ ಇತ್ಯಾದಿ. 
 ● ವಜ್ರದ ಬಣ್ಣವು ಅದರಲ್ಲಿರುವ ಲೋಹೀಯ ಬೆರಕೆಯಿಂದ ಉಂಟಾಗುತ್ತದೆ. 
ಅತ್ಯಲ್ಪ ಬೆಲೆಬಾಳುವ ವಜ್ರವೆಂದರೆ - ಬೂದು ಬಣ್ಣದ ವಜ್ರ. ಇದನ್ನು ಗಾಜು ಕತ್ತರಿಸುವ ಮತ್ತು ಬಂಡೆ ಕೊರೆಯುವ ಉಪಕರಣಗಳಲ್ಲಿ ಬಳಸುತ್ತಾರೆ. 
ವಜ್ರದ ಕಠಿಣತೆಗೆ ಅದರಲ್ಲಿನ ಪರಮಾಣುಗಳ ಜೋಡಣೆಯೇ ಕಾರಣವಾಗಿದೆ.

ವಜ್ರದ ರಚನೆ (Structure of diamond):
ವಜ್ರದಲ್ಲಿ ಪ್ರತಿಯೊಂದು ಕಾರ್ಬನ್ ಪರಮಾಣುವು ಇತರ ನಾಲ್ಕು ಪರಮಾಣುಗಳೊಂದಿಗೆ ಬಂಧಿಸಲ್ಪಟ್ಟಿದೆ. ಕೇಂದ್ರದಲ್ಲಿರುವ ಕಾರ್ಬನ್ನಿನ ಪರಮಾಣುವು ಚತುರ್ಮುಖ ಘನದ ಶೃಂಗಗಳಲ್ಲಿರುವ ಇತರ ನಾಲ್ಕು ಪರಮಾಣುಗಳೊಂದಿಗೆ ಬಂಧಿಸಲ್ಪಟ್ಟಿದೆ. ಇತರ ಕಾರ್ಬನ್ನಿನ ಪರಮಾಣುಗಳು ಹೀಗೆಯೇ ಚತುರ್ಮುಖ ಘನದ ಆಕಾರದಲ್ಲಿ ಇತರ ನಾಲ್ಕು ಪರಮಾಣುಗಳೊಂದಿಗೆ ಬಂಧಿಸಲ್ಪಟ್ಟಿದೆ. ಇಂತಹ ಬಂಧಗಳು ಕಾರ್ಬನ್ ಪರಮಾಣುಗಳ ಅತ್ಯಂತ ಸಾಂದ್ರವಾಗಿ ಜೋಡಿಸಲ್ಪಟ್ಟ ಬೃಹತ್ ಅಣುಗಳನ್ನು ಉಂಟುಮಾಡುತ್ತವೆ.

ವಜ್ರವನ್ನು ಕೃತವಾಗಿ ಉತ್ಪಾದಿಸುವ ವಿಧಾನ:
ವಿದ್ಯುತ ಕುಲುಮೆಯಲ್ಲಿ 3,50000C ತಾಪದಲ್ಲಿ ಕಬ್ಬಿಣವನ್ನು ಕರಗಿಸಿ, ಅದರಲ್ಲಿ ಶುದ್ಧ ಸಕ್ಕರೆ ಇದ್ದಿಲನ್ನು ವಿಲೀನಗೊಳಿಸುತ್ತಾರೆ. ಈ ದ್ರಾವಣವನ್ನು ತಂಪುಗೊಳಿಸಿದಾಗ ಕೃತಕ ವಜ್ರದ ಹರಳುಗಳು ಉತ್ಪತ್ತಿಯಾಗುತ್ತವೆ. ದ್ರಾವಣದಲ್ಲಿರುವ ಕಬ್ಬಿಣದ ಅಂಶವನ್ನು ದುರ್ಬಲ ಹೈಡ್ರೊಕ್ಲೋರಿಕ್ ಆಮ್ಲದೊಂದಿಗೆ ವರ್ತಿಸುವಂತೆ ಮಾಡಿ ಕೃತಕ ವಜ್ರವನ್ನು ಪ್ರತ್ಯೇಕಿಸಬಹುದು.

ವಜ್ರದ ಲಕ್ಷಣಗಳು (Properties of diamond):
1. ವಜ್ರವು ಕಾರ್ಬನ್ನಿನ ಅತ್ಯಂತ ಕಠಿಣ ಸ್ಫಟಿಕ ರೂಪ.
2. ಇದು ವಿದ್ಯುತ್ತಿನ ಅವಾಹಕ ಮತ್ತು ಉಷ್ಣದ ಉತ್ತಮವಾದ ವಾಹಕ.
3. ಸರಿಯಾದ ಕ್ರಮದಲ್ಲಿ ಕತ್ತರಿಸಿದ ವಜ್ರವು ತನ್ನ ಮೇಲೆ ಬಿದ್ದ ಬೆಳಕಿನ ಹೆಚ್ಚಿನ ಪ್ರಮಾಣವನ್ನು ಪ್ರತಿಫಲಿಸುತ್ತದೆ.
4. ಇದು 3,5000 ಸೆಲಿಸಿಯಸ್ ನಲ್ಲಿ ಉತ್ಪತನಗೊಳ್ಳುತ್ತದೆ.
5. ವಜ್ರವು ಗಾಳಿಯಲ್ಲಿ- 90000C ನಲ್ಲಿ,  ಆಕ್ಸಿಜನ್ ನಲ್ಲಿ- 70000C ನಲ್ಲಿ ಉರಿದು ಕಾರ್ಬನ್ ಡೈಆಕ್ಸೈಡನ್ನು ಉತ್ಪತ್ತಿ ಮಾಡುತ್ತದೆ.

ವಜ್ರದ ಉಪಯೋಗಗಳು (Uses of diamond):
-> ವಜ್ರವನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.
-> ಇದನ್ನು ಗಾಜು ಕತ್ತರಿಸುವ ಉಪಕರಣಗಳಲ್ಲಿ ಮತ್ತು ಬಂಡೆ ಕೊರೆಯುವ ಉಪಕರಣಗಳಲ್ಲಿ ಬಳಸುತ್ತಾರೆ.

Post a Comment

0 Comments