ಗುಣಿತಾಕ್ಷರಗಳ ವಿವರ
ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳೇ ಗುಣಿತಾಕ್ಷರಗಳು.
ಒಂದು ವ್ಯಂಜನಕ್ಕೆ ಅ ದಿಂದ ಔ ವರೆಗಿನ 13 ಸ್ವರಗಳು ಸೇರಿದರೆ 13 ಗುಣಿತಾಕ್ಷರಗಳಾಗುತ್ತವೆ. 34 ವ್ಯಂಜನಗಳಿಗೆ ತಲಾ 13 ಸ್ವರಾಕ್ಷರಗಳನ್ನು ಸೇರಿಸುವುದರಿಂದ 442 ಗುಣಿತಾಕ್ಷರಗಳನ್ನು ರಚಿಸಬಹುದು. ಈ ಗುಣಿತಾಕ್ಷರಗಳೇ ಕಾಗುಣಿತ ಅಕ್ಷರಗಳು. ಅದೇ ರೀತಿ ಯೋಗವಾಹಗಳನ್ನು ಸೇರಿಸಿ ಗುಣಿತಾಕ್ಷರಗಳನ್ನು ಮಾಡಬಹುದು.
ಉದಾ: ಕ್+ಅ=ಕ ಕ್+ಆ=ಕಾ ಕ್+ಇ=ಕಿ ಕ್+ಈ=ಕೀ ಕ್+ಉ=ಕು ಕ್+ಊ=ಕೂ ಕ್+ಋ=ಕೃ ಕ್+ಎ=ಕೆ ಕ್+ಏ=ಕೇ ಕ್+ಐ=ಕೈ ಕ್+ಒ=ಕೊ ಕ್+ಓ=ಕೋ ಕ್+ಔ=ಕೌ ಕ್+ಅಂ=ಕಂ ಕ್+ಅಃ=ಕ:
ದ್ ವ್ ರ್ ವ್ಯಂಜನಾಕ್ಷರಗಳನ್ನು
ಸೇರಿಸಿ ಬರೆದರೆ ಪದ ರಚನೆಯಾಗುವುದಿಲ್ಲ.
ಅದರ ಬದಲಿಗೆ ದ್ + ಏ = ದೇ, ವ್ + ಅ = ವ, ರ್ + ಉ = ರು ಈ ರೀತಿ ಸ್ವರಾಕ್ಷರಗಳನ್ನು
ಸೇರಿಸಿ ಬರೆದರೆ ಅರ್ಥಪೂರ್ಣವಾದ ದೇವರು ಎಂಬ ಪದ ರಚನೆ ಆಗುತ್ತದೆ. ಹೀಗೆ ವ್ಯಂಜನಕ್ಕೆ ಸ್ವರ ಸೇರಿದಾಗ ಆಗುವ ಅಕ್ಷರವೇ ಗುಣಿತಾಕ್ಷರ.
ಅಕ್ಷರಗಳನ್ನು ಬಿಡಿಸಿ ಬರೆಯುವ ಕ್ರಮ :
ರಾಜಧಾನಿ = ರ್+ಆ=ರಾ, ಜ್+ಅ=ಜ, ಧ್+ಆ=ಧಾ, ನ್+ಇ=ನಿ
ಅಕ್ಷರಗಳನ್ನು
ಬಿಡಿಸಿ ಬರೆಯುವ ಸೂತ್ರ:
ಇಲ್ಲಿ ‘ರ್ ‘ ಅಕ್ಷರದಲ್ಲಿ ‘ಆ’ ಸೇರಿ ‘ರಾ’ ಎಂದಾಗಿದೆ ಮತ್ತು ಜ್ ಅಕ್ಷರದಲ್ಲಿ ‘ಅ’ ಸೇರಿ ‘ಜ’ ಎಂಬ
ಅಕ್ಷರವಾಗಿದೆ. ಆದ್ದರಿಂದ ಬಿಡಿಸಿ ಬರೆಯುವಾಗ ರ್+ಆ=ರಾ
& ಜ್+ಅ=ಜ ಎಂಬ ಸೂತ್ರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದೇ ಸೂತ್ರ ಎಲ್ಲಾ ಅಕ್ಷರಗಳನ್ನು
ಬಿಡಿಸಿ ಬರೆಯುವಾಗ ಅನ್ವಯವಾಗುತ್ತದೆ.
ಸಿಂಹಾಸನ = ಸ್+ಇಂ=ಸಿಂ, ಹ್+ಆ=ಹಾ, ಸ್+ಅ=ಸ, ನ್+ಅ=ನ,
ಪರಿಚಿತ = ಪ್+ಅ=ಪ, ರ್+ಇ=ರಿ, ಚ್+ಇ=ಚಿ, ತ್+ಅ=ತ,
ಬಾಯಾರಿಕೆ = ಬ್+ಆ=ಬಾ, ಯ್+ಆ=ಯಾ, ರ್+ಇ=ರಿ, ಕ್+ಎ+ಕೆ,
ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯಲಾಗುತ್ತದೆ.
* ವ್ಯಂಜನಕ್ಕೆ ವ್ಯಂಜನ ಸೇರಿಕೊಂಡು (ಸ್ವರದ ಸಹಾಯದಿಂದ) ಉಂಟಾಗುವ ಅಕ್ಷರಕ್ಕೆ ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಅಥವಾ ದ್ವಿತ್ತಕ್ಷರ ಎಂದು ಕರೆಯುವರು.
* ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವೇ ಸಂಯುಕ್ತಾಕ್ಷರ. ಇದನ್ನು ದ್ವಿತ್ವಾಕ್ಷರ/ಒತ್ತಕ್ಷರ ಎಂತಲೂ ಕರೆಯುವರು.
ಇದರಲ್ಲಿ ಸಜಾತೀಯ ಸಂಯುಕ್ತಾಕ್ಷರ ಮತ್ತು ವಿಜಾತೀಯ ಸಂಯುಕ್ತಾಕ್ಷರ ಎಂದು 2 ವಿಧಗಳಿವೆ.
1)ಸಜಾತೀಯ ಸಂಯುಕ್ತಾಕ್ಷರ
ಅಪ್ಪ, ಅಮ್ಮ, ಲೆಕ್ಕ, ಕಗ್ಗ ಪದಗಳನ್ನು ಗಮನಿಸಿದಾಗ ಇಲ್ಲಿರುವ ಪ್ರತಿಯೊಂದು ಸಂಯುಕ್ತಾಕ್ಷರದಲ್ಲೂ ಆಯಾ ಜಾತಿಯ ಎರಡೆರಡು ವ್ಯಂಜನಗಳಿವೆ. ಹೀಗೆ - ಒಂದೇ ಜಾತಿಯ ಎರಡು ವ್ಯಂಜನಗಳು ಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ
ಸಜಾತೀಯ ಸಂಯುಕ್ತಾಕ್ಷರ.
* ಒಂದೇ ಜಾತಿಯ ಎರಡು ವ್ಯಂಜನಗಳು (ಸ್ವರದ ಸಹಾಯದಿಂದ) ಒಂದಕ್ಕೊಂದು ಸೇರಿದರೆ ಸಜಾತೀಯ ಸಂಯುಕ್ತಾಕ್ಷರಗಳಾಗುವುವು.
ಉದಾ :- ಅ + ಕ್ + ಕ್ + ಅ = ಅಕ್ಕ. ಇಲ್ಲಿ ಕ್ + ಕ್ (+ಅ) ಇವು ಸಜಾತೀಯ ವ್ಯಂಜನಗಳಾಗಿದ್ದು, ಇವು ಒಂದಕ್ಕೊಂದು ಕೂಡಿ ‘ಕ್ಕ’ ಎಂಬ ಸಜಾತೀಯ ಸಂಯುಕ್ತಾಕ್ಷರವಾಗಿದೆ.
ಉದಾ :- ಅಪ್ಪ, ಅಮ್ಮ, ಅಣ್ಣ, ಅಕ್ಕರ, ಅಕ್ಕಪಕ್ಕ, ರಕ್ಕಸ ಇತ್ಯಾದಿ.
2) ವಿಜಾತೀಯ ಸಂಯುಕ್ತಾಕ್ಷರ:
ಅಷ್ಟ, ಆರ್ಯ, ಅಸ್ತ್ರ ಪದಗಳಲ್ಲಿರುವ ಪ್ರತಿಯೊಂದು ಸಂಯುಕ್ತಾಕ್ಷರದಲ್ಲೂ
ಬೇರೆ ಬೇರೆ ಜಾತಿಯ ವ್ಯಂಜನಗಳಿವೆ. ಹೀಗೆ - ಬೇರೆ ಬೇರೆ ಜಾತಿಯ ವ್ಯಂಜನಗಳು ಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ ವಿಜಾತೀಯ ಸಂಯುಕ್ತಾಕ್ಷರ.
* ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು (ಸ್ವರದ ಸಹಾಯದಿಂದ) ಒಂದಕ್ಕೊಂದು ಕೂಡಿಕೊಂಡು ಉಂಟಾಗುವ ಅಕ್ಷರವು ವಿಜಾತೀಯ ಸಂಯುಕ್ತಾಕ್ಷರವೆನಿಸುವುದು.
ಉದಾ : ಭ್ + ಅ + ಕ್ + ತ್ + ಅ = ಭಕ್ತ. ಇಲ್ಲಿ ಕ್ + ತ್ (+ ಅ).ಇವು ವಿಜಾತೀಯ ಸಂಯುಕ್ತಾಕ್ಷರ ವ್ಯಂಜನಗಳಾಗಿದ್ದು, ಇವೆರಡು ಕೂಡಿ ‘ಕ್ತ’ ಎಂಬ ವಿಜಾತೀಯ ಸಂಯುಕ್ತಾಕ್ಷರವಾಗಿದೆ.
ಉದಾ :- ಚಕ್ರ, ಆಜ್ಞೆ, ಸ್ತ್ರೀ, ವಸ್ತ್ರ ಇತ್ಯಾದಿ.
(ಮುಂದುವರೆಯುವುದು…)
Title: Kannada Grammer
File language: Kannada
Which Department: Education
State: Karnataka
Published Date: 04-06-2022
File format : jpg /pdf/text
File size : 0.5 mb
Number of Pages : 2
Availability for download: Yes
Availability of websites link: No
Scanned Copy : No
Editable Text : No
Copy text : No
Print enable : Yes
Quality : High
File size reduced: No
Password Protected: No
Password Encrypted : No
Image File Available : Yes
Cost : Free of cost
PDF Download Here
0 Comments