*
ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ತುರ್ತಾಗಿ ದೊರಕಿಸುವುದು `ಕ್ರಾಂತಿಕಾರಿ ರಾಷ್ಟ್ರೀಯವಾದಿಗಳ'
ಧ್ಯೇಯವಾಗಿತ್ತು.
*
ಮೊದಲ ಬಾರಿಗೆ ಕ್ರಾಂತಿಕಾರಿ ರಹಸ್ಯ ಸಂಟನೆಯನ್ನು ರೂಪಿಸಿದವರು - ವಾಸುದೇವ ಬಲವಂತ ಫಡ್ಕೆ.
* ದಾಮೋದರ
ಮತ್ತು ಬಾಲಕೃಷ್ಣ ಚಾಪೇಕರ್ ಸಹೋದರರು ರಹಸ್ಯ ಸಂಘಟನೆಯ ಜೀವನಾಡಿಗಳಾಗಿದ್ದರು. ಇವರಿಬ್ಬರನ್ನೂ ಬಂಧಿಸಿ
ಗಲ್ಲಿಗೇರಿಸಲಾಯಿತು.
*
1899ರಲ್ಲಿ ವಿ.ಡಿ. ಸಾವರ್ಕರ್ ರವರು `ಮಿತ್ರಮೇಳ' ಎನ್ನುವ ಪ್ರಥಮ ಗುಪ್ತ ಸಂಟನೆಯನ್ನು ಕಟ್ಟಿದರು.-ಇವರಿಗೆ
ಬ್ರಿಟಿಷ್ ಸರ್ಕಾರ ಜೀವಾವಧಿ ಕಾರಾಗೃಹವಾಸವನ್ನು ವಿಧಿಸಿ ಅಂಡಮಾನ್ ಜೈಲಿಗೆ ರವಾನಿಸಿತು - ಅಂಡಮಾನ್
ಜೈಲಿನಲ್ಲಿ ಭಾರತ ಸರ್ಕಾರ ಸಾವರ್ಕರ್ ರವರ ಸ್ಮಾರಕವನ್ನು ನಿರ್ಮಿಸಿದೆ.
*
1908ರಲ್ಲಿ- ಸ್ವಾತಂತ್ರ್ಯ ಹೋರಾಟದಲ್ಲಿ ನೇಣುಗಂಬ ಏರಿದ ಭಾರತದ ಮೊದಲ ಹುತಾತ್ಮ - 19ವರ್ಷದ ಖುದಿರಾಮ್ ಭೋಸ್.
=> ಚಂದ್ರಶೇಖರ ಆಜಾದ್:
`ಹಿಂದೂಸ್ಥಾನ್
ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್'ಗೆ ಸೇರಿದ್ದ ಇವರು - ಕಾಕೋರಿ ಪಿತೂರಿ, ಶಾಸನ ಸಭೆಯ ಬಾಂಬ್ ಘಟನೆ ಹಾಗೂ ಲಾಹೋರಿನಲ್ಲಿ
ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ನ ಮೇಲೆ ಗುಂಡಿನ ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಬ್ರಿಟಿಷ್
ಸೈನಿಕರಿಂದ ತಪ್ಪಿಸಿಕೊಳ್ಳಲು ಏಕಾಂಗಿ ಹೋರಾಟ ನಡೆಸಿ, ಕೇವಲ ಒಂದು ಗುಂಡು ಉಳಿದಿದ್ದಾಗ ತನ್ನ ಕಪೋಲಕ್ಕೆ
ಗುರಿಯಿಟ್ಟು ಹಾರಿಸಿಕೊಂಡು, ತಾನು ಬಂಧನಕ್ಕೊಳಗಾಗುವುದಿಲ್ಲ ಎನ್ನುವ ತನ್ನ ಪ್ರತಿಜ್ಞೆಯನ್ನು ಆಜಾದ್
ಉಳಿಸಿಕೊಂಡರು.
* ಭಗತ್ ಸಿಂಗ್ : ಹಿಂದೂಸ್ಥಾನ್ ಸಮಾಜವಾದಿ ರಿಪಬ್ಲಿಕನ್ ಸಂಟನೆಯ ಪ್ರಧಾನ ಕಾರ್ಯದರ್ಶಿ ಮತ್ತು "ಇಂಕ್ವಿಲಾಬ್
ಜಿಂದಾಬಾದ್ / ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆ ಮಾಡಿದ ಮೊದಲ ಭಾರತೀಯ.
*
ದಿಲ್ಲಿಯ ಕೇಂದ್ರೀಯ ಶಾಸನಸಭೆಯ ಮೇಲೆ ಬಾಂಬ್ ಎಸೆದ ಪ್ರಕರಣದಲ್ಲಿ 1929ರಲ್ಲಿ - ಭಗತ್ ಸಿಂಗ್, ರಾಜಗುರು
ಮತ್ತು ಸುಖದೇವ್ ರನ್ನು - ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
*
ಪ್ರಮುಖ ಕ್ರಾಂತಿಕಾರಿ ನಾಯಕರು:
ಖುದಿರಾಮ್ ಬೋಸ್, ವಿನಾಯಕ ದಾಮೋದರ ಸಾವರ್ಕರ್, ಚಂದ್ರಶೇಖರ ಆಜಾದ್,
ಭಗತ್ ಸಿಂಗ್, ವಾಸುದೇವ್ ಬಲವಂತ್ ಫಡ್ಕೆ, ದಾಮೋದರ್ ಮತ್ತು ಬಾಲಕೃಷ್ಣ ಚಾಪೇಕರ್ ಸಹೋದರರು.
0 Comments