* ಗಾಂಧೀಜಿಯವರ ನಾಯಕತ್ವದಲ್ಲಿ 1920ರಲ್ಲಿ ಅಸಹಕಾರ ಚಳವಳಿ ಆರಂಭ .
*
ಸರ್ಕಾರದೊಂದಿಗೆ ಅಸಹಕಾರ ತೋರಲು ಮತ್ತು `ಸ್ವರಾಜ್ಯ'ಕ್ಕಾಗಿ ಒತ್ತಾಯಿಸಲು ಗಾಂಧೀಜಿಯವರು ಕರೆ ನೀಡಿದರು.
*
ನ್ಯಾಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಶಾಸಕಾಂಗ ಸಭೆಗಳಿಗೆ ಚುನಾವಣೆ ಮತ್ತು ಬ್ರಿಟಿಷ್ ಸರಕುಗಳ
ಬಹಿಷ್ಕಾರ.
*
ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಯಿತು.
*
ರವೀಂದ್ರನಾಥ್ ಟಾಗೋರ್ರವರು `ನೈಟ್ ಹುಡ್' ಮತ್ತು ಗಾಂಧೀಜಿಯವರು ತಮ್ಮ `ಕೈಸರ್ ಐ ಹಿಂದ್' ಪದವಿಯನ್ನು
ಬ್ರಿಟಿಷ್ ಸರ್ಕಾರಕ್ಕೆ ಹಿಂತಿರುಗಿಸಿದರು.
*
ಈ ಕಾಲಘಟ್ಟದ ಪ್ರಮುಖ ನಾಯಕರಾದ ಚಿತ್ತರಂಜನ್ ದಾಸ್, ಮೋತಿಲಾಲ್ ನೆಹರು, ವಲ್ಲಭಾಯ್ ಪಟೇಲ್, ಸುಭಾಶ್
ಚಂದ್ರ ಬೋಸ್ ರವರುಗಳು ಚಳವಳಿಗೆ ಸೇರಿದರು.
*
ವಿದ್ಯಾರ್ಥಿಗಳು, ರೈತರು ಮತ್ತು ಮಹಿಳೆಯರೂ ಸಹ ಭಾಗಿಯಾಗಿದ್ದರು.
*
ಇದು ಭಾರತೀಯರಿಗೆ ಹೊಸ ಅನುಭವವಾಗಿತ್ತು.
*
ಚಳವಳಿಯನ್ನು ಹತ್ತಿಕ್ಕಲು ಸರ್ಕಾರದಿಂದ ದಮನಕಾರಿ ಕ್ರಮದ ವಿರೋಧವಾಗಿ - ಉ.ಪ್ರದೇಶದ ಚೌರಿಚೌರಾದಲ್ಲಿ
ಉದ್ರಿಕ್ತ ಜನಸ್ತೋಮದಿಂದ ಠಾಣೆಯ 22 ಜನ ಪೊಲೀಸರ ಸಜೀವ ದಹನವಾಯಿತು.
->
1924 ರಿಂದ 1929ರವರೆಗೆ - ರಚನಾತ್ಮಕ ಕಾರ್ಯಕ್ರಮಗಳು:
*
ಗಾಂಧೀಜಿಯವರು - ಖಾದಿಯನ್ನು ಜನಪ್ರಿಯಗೊಳಿಸುವುದು ಮತ್ತು ಹರಿಜನೋದ್ಧಾರ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತಹ
ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
*
ಈ ಸಮಯದಲ್ಲಿ ಸ್ವರಾಜ್ಯವಾದಿಗಳಾದ ಸಿ.ಆರ್. ದಾಸ್ ಮತ್ತು ಮೋತಿಲಾಲ್ ನೆಹರು ರವರ ನೇತೃತ್ವದಲ್ಲಿ ರಾಷ್ಟ್ರೀಯ
ಹೋರಾಟದ ಚಟುವಟಿಕೆಗಳು ಮುಂದುವರಿದವು.
-> ಸಂವಿಧಾನ ರಚನೆಗಾಗಿ 1927ರಲ್ಲಿ ಮೋತಿಲಾಲ್ ನೆಹರು ಸಮಿತಿ/ವರದಿ :
ಎಲ್ಲಾ
ಸಮುದಾಯದವರು ಒಪ್ಪುವಂತಹ ಸಂವಿಧಾನವನ್ನು ರಚಿಸಿಕೊಳ್ಳುವಂತೆ ಬ್ರಿಟಿಷರು ಭಾರತೀಯ ರಾಜಕೀಯ ನಾಯಕರಿಗೆ
ಸವಾಲೆಸೆದ ಪರಿಣಾಮವಾಗಿ ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ
ಸಂವಿಧಾನ ಸಮಿತಿ ರಚನೆಯಾಯಿತು.
-> 1928ರಲ್ಲಿ ಭಾರತಕ್ಕೆ ಸೈಮನ್ ಆಯೋಗ :
* 1919ರ ಶಾಸನದ ಸುಧಾರಣೆಗಳು ಜಾರಿಗೊಂಡ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಭಾರತಕ್ಕೆ ಸೈಮನ್ ನಿಯೋಗ ಭೇಟಿ ನೀಡಿತು.
*
ನಿಯೋಗದಲ್ಲಿ ಭಾರತೀಯರಿಗೆ ಪ್ರಾತಿನಿಧ್ಯವಿರಲಿಲ್ಲದ ಕಾರಣ-ಭಾರತೀಯರಿಂದ "ಸೈಮನ್ನರೆ ಹಿಂತಿರುಗಿ"
ಎಂಬ ಘೋಷಣೆಯೊಂದಿಗೆ ನಿಯೋಗಕ್ಕೆ ಬಹಿಷ್ಕಾರ ಹಾಕಲಾಯಿತು.
*
ಲಾಹೋರಿನ ಪ್ರತಿಭಟನೆಯಲ್ಲಿ ಪೊಲೀಸರ ಲಾಠಿಚಾರ್ಜ್ ಗೆ ಲಾಲಾ ಲಜಪತ್ ರಾಯ್ ಮರಣ ಹೊಂದಿದರು.
-> 1929ರಲ್ಲಿ ಲಾಹೋರ್ ಕಾಂಗ್ರೆಸ್ ಅಧಿವೇಶನ - ಪೂರ್ಣ ಸ್ವರಾಜ್ಯ :
*
ಜವಾಹರಲಾಲ್ ನೆಹರು ಮತ್ತು ಸುಭಾಷ್ಚಂದ್ರ ಬೋಸ್ ರವರಿಂದ ಮೋತಿಲಾಲ್ ನೆಹರು ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದ
'ಬ್ರಿಟಿಷ್ ಚಕ್ರಾಧಿಪತ್ಯದ ಪರಿಧಿಯೊಳಗಿನ ಸ್ವಯಂ ಆಡಳಿತದ ಸ್ಥಾನಮಾನ'ದ ತಿರಸ್ಕಾರ.
*
ಇದರ ಪರಿಣಾಮವಾಗಿ 1929ರಲ್ಲಿ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ-"ಸಂಪೂರ್ಣ ಸ್ವಾತಂತ್ರ್ಯ"ದ
ನಿರ್ಣಯದ ಮಂಡನೆ ಮಾಡಲಾಯಿತು.
*
1930ರ ಜನವರಿ 26ರಂದು ಅಧಿವೇಶನದಲ್ಲಿ `ಸಂಪೂರ್ಣ ಸ್ವರಾಜ್ಯದಿನ' ಆಚರಣೆಗೆ ನಿರ್ಧಾರ - ಈ ಐತಿಹಾಸಿಕ
ಸಂಭ್ರಮಾಚರಣೆಯ ದಿನದ ನೆನಪಿಗಾಗಿ ಸ್ವತಂತ್ರ ಭಾರತದ ಸಂವಿಧಾನವನ್ನು- ಜನವರಿ 26, 1950ರಂದು ಜಾರಿಗೆ
ತರಲಾಯಿತು.
->
1930 ಮಾರ್ಚ್ 12 - ನಾಗರಿಕರ ಕಾಯ್ದೆ ಭಂಗ ಚಳವಳಿ :
*
ಉಪ್ಪನ್ನು ಉತ್ಪಾದಿಸಿ ಉಪ್ಪಿನ ಕಾನೂನನ್ನು ಮುರಿಯುವ ಉದ್ದೇಶದಿಂದ ಗಾಂಧೀಜಿ ಆಯ್ದ 78 ಮಂದಿ ಅನುಯಾಯಿಗಳೊಡನೆ
ಸಾಬರಮತಿ ಆಶ್ರಮದಿಂದ ಗುಜರಾತಿನ ದಂಡಿಯವರೆಗೆ 375 ಕಿ.ಮೀ.ಗಳ ಪ್ರಸಿದ್ಧ ದಂಡಿಯಾತ್ರೆ ಪ್ರಯಾಣ.
*
ಚಳವಳಿಯು ಬಹುಬೇಗ ದೇಶದಾದ್ಯಂತ ಹರಡಿ ಎಲ್ಲೆಡೆ ಜನರು ಹರತಾಳ, ವಿದೇಶಿ ವಸ್ತುಗಳ ಬಹಿಷ್ಕಾರ, ಖಾದಿಪ್ರಚಾರ,
ಮದ್ಯದ ಅಂಗಡಿಗಳ ಮುಂದೆ ಪ್ರತಿಭಟನೆ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ ಮೊದಲಾದವುಗಳಲ್ಲಿ ಭಾಗವಹಿಸಿದರು.
*
ಕರ್ನಾಟಕದ ಅಂಕೋಲದಲ್ಲಿ ಉಪ್ಪಿನ ಸತ್ಯಾಗ್ರಹ
*
ವಾಯವ್ಯ ಭಾರತದಲ್ಲಿ `ಗಡಿನಾಡ ಗಾಂಧಿ' ಖಾನ್
ಅಬ್ದುಲ್ ಗಫಾರ್ ಖಾನರಿಂದ- 'ಖುದಾಯಿ ಖಿದ್ಮತ್ಗಾರ/ದೇವರ
ಸೇವಕರು' ಎಂಬ ಸಂಟನೆಯ ಸ್ಥಾಪನೆ.
*
ನಾಗಾಲ್ಯಾಂಡಿನಲ್ಲಿ 13 ವರ್ಷದ ಬಾಲೆ ರಾಣಿ ಗಾಯ್ಡಿಲ್ಯೂಳಿಂದ ಬ್ರಿಟಿಷರ ವಿರುದ್ಧ ಬಂಡಾಯ.
0 Comments