* ಅಂಬೇಡ್ಕರ್ ರವರು ಮಧ್ಯಪ್ರದೇಶದ `ಮ್ಹೋ'
ಎಂಬಲ್ಲಿ 14 ಏಪ್ರಿಲ್ 1891ರಂದು ಜನನ.
* ತಂದೆ-ರಾಮ್ಜಿ ಸಕ್ಪಾಲ್, ತಾಯಿ-ಭೀಮಾಬಾಯಿ
* ಅಂಬೇಡ್ಕರರ ಬಾಲ್ಯದ ಹೆಸರು-ಭೀಮರಾವ್.
* ಅಸೃಶ್ಯತೆಯ ವಿರುದ್ಧ ಮಹಡ್ ಸತ್ಯಾಗ್ರಹ,
ನಾಸಿಕ್ ನಲ್ಲಿನ ಕಲಾರಾಮ ದೇವಾಲಯ ಪ್ರವೇಶದಂತಹ ಯಶಸ್ವಿ ಹೋರಾಟಗಳನ್ನು ಹಮ್ಮಿಕೊಂಡರು.
* ಪತ್ರಿಕೆಗಳು- 'ಮೂಕನಾಯಕ' ಮತ್ತು 'ಬಹಿಷ್ಕೃತ ಭಾರತ' ಮತ್ತು - 'ಬಹಿಷ್ಕೃತ ಹಿತಕಾರಿಣಿ ಸಭಾ' ಸಂಘಟನೆಯನ್ನು ಸ್ಥಾಪಿಸಿದರು.
* ದಲಿತ ವರ್ಗಗಳ ಪ್ರತಿನಿಧಿಯಾಗಿ ಲಂಡನಿನಲ್ಲಿ
ನಡೆದ ಮೂರೂ ದುಂಡುಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು.
* ಬ್ರಿಟನ್ ಪ್ರಧಾನಿ ರಾಮ್ಸೆ ಮ್ಯಾಕ್ಡೊನಾಲ್ಡ್
ರಿಂದ 1932ರಲ್ಲಿ ಘೋಷಿಸಲ್ಪಟ್ಟ `ಮತೀಯ ತೀರ್ಪು / ಕಮ್ಯೂನಲ್ ಎವಾರ್ಡ್ - ದಲಿತ ವರ್ಗಕ್ಕೆ ಪ್ರತ್ಯೇಕ
ಚುನಾವಣಾ ಕ್ಷೇತ್ರಕ್ಕೆ ಅವಕಾಶ ನೀಡಿತು - ಈ ತೀರ್ಪನ್ನು ವಿರೋಧಿಸಿ ಗಾಂಧೀಜಿಯವರು ಪೂನಾದ ಯರವಾಡಾ
ಸೆರೆಮನೆಯಲ್ಲಿ ಆಮರಣ ಉಪವಾಸ ಕೈಗೊಂಡರು.
* ಅಂತಿಮವಾಗಿ 1932ರಲ್ಲಿ ಪೂನಾ ಒಪ್ಪಂದದ
ಮೂಲಕ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯ ಅಂತ್ಯ.
* 1956 ಡಿಸೆಂಬರ್ 6ರಂದು ನಿಧನ- ಇದಕ್ಕೆ
ಕೆಲವೇ ತಿಂಗಳುಗಳ ಮೊದಲು ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದರು.
* 1990ರಲ್ಲಿ ಮರಣೋತ್ತರವಾಗಿ ಭಾರತ ರತ್ನ
ಪ್ರಶಸ್ತಿ
* "ಶಿಕ್ಷಣ, ಸಂಟನೆ ಮತ್ತು ಹೋರಾಟ"
ಇದು ಅಂಬೇಡ್ಕರರ ಪ್ರಸಿದ್ಧ ಘೋಷವಾಕ್ಯವಾಗಿದೆ.
0 Comments