* ಸಾ.ಶ. 6ನೆಯ ಶತಮಾನದಲ್ಲಿ ಜೈನ ಮತ್ತು ಬೌದ್ಧ
ಧರ್ಮಗಳು - ಮಧ್ಯ ಗಂಗಾನದಿ ಬಯಲಿನಲ್ಲಿ ಉದಯಿಸಿದವು.
-> ಜೈನ ಮತ್ತು ಬೌದ್ಧ
ಧರ್ಮಗಳ ಉದಯದ ಹಿನ್ನೆಲೆ / ಕಾರಣಗಳು :
* ಸಾ.ಶ. 6ನೆಯ ಶತಮಾನದ ಹೊತ್ತಿಗೆ-ಭಾರತೀಯ
ಸಮಾಜ ವರ್ಣಾಧಾರಿತವಾಗಿ ವಿಭಜಿತವಾಗಿತ್ತು.
* ಕ್ಷತ್ರಿಯರು-ಆಳುವ ವರ್ಗದವರಾಗಿದ್ದು, ರೈತನ
ಕಂದಾಯದ ಮೇಲೆ ಬದುಕುತ್ತಿದ್ದರು.
* ವೈಶ್ಯರನ್ನು-ದ್ವಿಜರೆಂದು ಮಾನ್ಯ ಮಾಡಿದ್ದರೂ,
ಅವರ ಮೇಲೆ ನಿರ್ಬಂಧಗಳಿದ್ದವು,
* ಶೂದ್ರರು-ಕೃಷಿಯಾಳು, ಮನೆಯಾಳುಗಳಾಗಿ ಮತ್ತು
ಕುಶಲ ಕಸುಬುದಾರಿಕೆ ಸೇವೆಗಾಗಿಯೇ ಮೀಸಲಾಗಿದ್ದರು.
* ಈ ಸಂದರ್ಭದಲ್ಲಿ ಜನತೆಗೆ ಗೌತಮ ಮತ್ತು ಮಹಾವೀರರ
ತತ್ವಗಳು ಭರವಸೆಯ ಹೊಸ ಮಾರ್ಗಗಳಾಗಿ ಗೋಚರಿಸಿದವು.
* ಎಲ್ಲಾ ಪ್ರಾಚೀನ ಕಾಲದ ಸಮಾಜದಲ್ಲಿ, ಧರ್ಮ
ಮತ್ತು ರಾಜ್ಯ ವ್ಯವಸ್ಥೆಗಳಲ್ಲಿ ಬಹುದೊಡ್ಡ ಬದಲಾವಣೆಗಳು ಘಟಿಸಲು-ಆಯಾ ಸಮಾಜದಲ್ಲಿನ ಕೃಷಿ ವಿಧಾನಗಳಲ್ಲಿನ
ಮಾರ್ಪಾಡುಗಳು ಮತ್ತು ಆಹಾರ ಧಾನ್ಯಗಳ ಹೆಚ್ಚಳ ಬಹುಪಾಲು ಮೂಲ ಪ್ರೇರಣೆಯಾಗುತ್ತವೆ.
* ಈ ಕಾಲದ ಹೊತ್ತಿಗೆ-ಉ.ಪ್ರದೇಶದ ಪೂರ್ವ ಭಾಗ
ಬಿಹಾರದ ಉತ್ತರ - ದಕ್ಷಿಣ ಭಾಗಗಳಲ್ಲಿ ನವೀನ ಕೃಷಿಯಾಧಾರಿತ ಅರ್ಥವ್ಯವಸ್ಥೆ ರೂಪುಗೊಂಡಿತು.
* 5ನೆಯ ಶತಮಾನದ ವೇಳೆಗೆ ಇಲ್ಲಿ-ಕಬ್ಬಿಣದ
ವ್ಯವಸಾಯದ ಉಪಕರಣಗಳು ಬಳಕೆಗೆ ಬಂದವು.
* ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಳವಾಯಿತು.
ಇದನ್ನು ಕಾಯ್ದುಕೊಳ್ಳಲು ಎತ್ತುಗಳ ಬಳಕೆ ಅತ್ಯಗತ್ಯವಾಗಿತ್ತು.
* ಕಾಲಾವಧಿಯಲ್ಲಿ ನಗರಗಳಾದ ಕೌಶಂಬಿ, ಕುಶಿನಗರ,
ವಾರಣಾಸಿ, ಬಿಹಾರದಲ್ಲಿ ವೈಶಾಲಿ, ಚಿರಾಂಡ್ ಮತ್ತು ರಾಜಗೃಹಗಳು ಪ್ರವರ್ಧಮಾನಕ್ಕೆ ಬಂದವು. ಮೊಟ್ಟಮೊದಲಿಗೆ
ನಾಣ್ಯಗಳನ್ನು ಬಳಸಿದರು.
* ವ್ಯಾಪಾರ ವಾಣಿಜ್ಯಗಳಿಗೆ ಪ್ರಶಸ್ತವಾದ ಈ
ಸನ್ನಿವೇಶದಲ್ಲಿ ವರ್ಣವಿಭಜಿತ ಸಮಾಜದಲ್ಲಿ 3ನೇ ಸ್ಥಾನದಲ್ಲಿದ್ದು, ಸಾಮಾಜಿಕ ಗೌರವವನ್ನು ಹೊಂದಿರದ
ವೈಶ್ಯರು - ವೈದಿಕ ಧರ್ಮ ತಮ್ಮ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಕಿತ್ತೆಸೆದು ತಮ್ಮ ಸ್ಥಾನವನ್ನು
ಉನ್ನತಗೊಳಿಸಿಕೊಳ್ಳಲು ವರ್ಣ ವ್ಯವಸ್ಥೆಗೆ ಮಹತ್ವ ನೀಡದ ಬೌದ್ಧ ಮತ್ತು ಜೈನ ಧರ್ಮಗಳನ್ನು ಸ್ವೀಕರಿಸಿದರು.
* ಗಂಗಾನದಿಯ ಬಯಲಿನಲ್ಲಿ ಜನಪದಗಳು ಮತ್ತು
ಮಹಾಜನಪದಗಳು, ರಾಜಪ್ರಭುತ್ವಗಳಾಗಿ ರೂಪಾಂತರವಾಗುತ್ತಿದ್ದವು.
* ಯುದ್ಧಗಳ ನಿರರ್ಥಕತೆಯನ್ನು ಮತ್ತು ಅಹಿಂಸೆಯನ್ನು
ಬೋಧಿಸಿದ ಬುದ್ಧ ಮತ್ತು ಮಹಾವೀರರ ತತ್ವಗಳನ್ನು ಜನರು ಒಪ್ಪಿಕೊಂಡರು.
* ಬುದ್ಧ ಮತ್ತು ಮಹಾವೀರರ ಧರ್ಮಗಳು ಸಂಪತ್ತಿನ
ಸಂಗ್ರಹಣೆ, ಭೋಗ ಜೀವನ ಶೈಲಿಯನ್ನು ತಿರಸ್ಕರಿಸಿ ಸರಳ, ಶುದ್ಧ ಸಾಂಸಾರಿಕ ಜೀವನವನ್ನು ಎತ್ತಿಹಿಡಿದವು.
* ಗೃಹಸ್ಥರು ಜೀವನಕ್ಕೆ ಎಷ್ಟು ಅಗತ್ಯವೋ ಅಷ್ಟು
ಮಾತ್ರ ಸಂಪತ್ತನ್ನು ಗಳಿಸಿ ಬಳಸುವಂತೆ ಉಪದೇಶಿಸಿದವು.
* ಜನರ ಭಾಷೆಯಾಗಿದ್ದ ಪಾಳಿ ಮತ್ತು ಪ್ರಾಕೃತ
ಭಾಷೆಗಳಲ್ಲಿ ಧರ್ಮೋಪದೇಶವನ್ನು ನೀಡಿದರು.
-> ಬುದ್ಧನ ಜೀವನ:
* ಜನನ - ನೇಪಾಳದ ಕಪಿಲವಸ್ತು ಸಮೀಪದ ಕಲುಂಬಿನಿವನದಲ್ಲಿ.
* ಬಾಲ್ಯದ ಹೆಸರು- ಸಿದ್ಧಾರ್ಥ.
* ಪತ್ನಿ- ಯಶೋಧರಾ, ಪುತ್ರ-ರಾಹುಲ.
* ತಂದೆ - ಶಾಕ್ಯ ಗಣರಾಜ್ಯದ ಮುಖ್ಯಸ್ಥ ಶುದ್ಧೋದನ, ತಾಯಿ- ಮಾಯಾದೇವಿ.
* ಸಿದ್ಧಾರ್ಥನನ್ನು - ಗೌತಮ ಬುದ್ಧ, ತಥಾಗತ, ಶಾಕ್ಯಮುನಿ ಎಂದೂ ಕರೆಯಲಾಗಿದೆ.
* 'ಅಸಿತ' ಎಂಬ ಮಹರ್ಷಿಯು 'ಈ ಮಗು ಲೋಕವನ್ನಾಳುವ ರಾಜನಾಗುತ್ತಾನೆ ಇಲ್ಲವೇ ಲೋಕದ
ಅಳಲನ್ನು ನಿವಾರಿಸುವ ಸನ್ಯಾಸಿಯಾಗುತ್ತಾನೆ' ಎಂದು ಬುದ್ಧನನ್ನು ಕುರಿತು ಭವಿಷ್ಯ ನುಡಿದಿದ್ದನು.
* ಬುದ್ಧನಲ್ಲಿ ವೈರಾಗ್ಯ
ಮೂಡಿಸಿ ದುಃಖದ ಮೂಲವನ್ನು ಕಂಡುಹಿಡಿಯಲು ಪ್ರೇರೇಪಿಸಿದ 4 ಸನ್ನಿವೇಶಗಳು: 1) ಓರ್ವ ವೃದ್ಧ 2) ರೋಗಿ 3) ಸನ್ಯಾಸಿ 4) ಶವಯಾತ್ರೆಯ ದೃಶ್ಯಗಳು.
* ಡಾ. ಅಂಬೇಡ್ಕರ್ ಪುಸ್ತಕದ ಮಾಹಿತಿ ಪ್ರಕಾರ- ಅರಮನೆಯನ್ನು ತೊರೆಯಲು ನದಿ ವಿವಾದ
ಕಾರಣ.- ಎರಡು ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆ ಬಗ್ಗೆ ವಿವಾದ ಉಂಟಾಗಿದ್ದರಿಂದ - ಯುದ್ಧಕ್ಕೆ
ಸಿದ್ಧವಾಗುವುದು ಸಿದ್ಧಾರ್ಥನಿಗೆ ಇಷ್ಟವಾಗದೆ ವಿರೋಧಿಸಿ ಅರಮನೆಯನ್ನು ತ್ಯಜಿಸಿದನೆಂದು ಹೇಳಲಾಗುತ್ತಿದೆ.
* ದುಃಖದ ಮೂಲ ಕುರಿತು ಉತ್ತರ ಸಿಗದ ಕಾರಣ ಕೊನೆಗೆ ಬಿಹಾರದ ಗಯಾ/ಬುದ್ಧಗಯಾ ಎಂಬಲ್ಲಿ ಅರಳಿ ಮರವೊಂದರ
ಕೆಳಗೆ ಕುಳಿತು ಧ್ಯಾನಸ್ಥನಾದಾಗ, ಅಲ್ಲಿ ಜ್ಞಾನೋದಯ ಪಡೆದು, ಸಿದ್ಧಾರ್ಥನು ಬುದ್ಧನಾದನು.
* ಬುದ್ಧನೆಂದರೆ ಜ್ಞಾನಿ, ತಿಳಿದವನು ಎಂದರ್ಥ.
* ಬುದ್ಧನು ತನ್ನ ಮೊದಲ ಉಪದೇಶ ಧರ್ಮಚಕ್ರ ಪ್ರವರ್ತನವನ್ನು -> ಉತ್ತರ ಪ್ರದೇಶದ
ಸಾರನಾಥದ ಜಿಂಕೆವನದಲ್ಲಿ ನೀಡಿದನು.
* ಅಲ್ಲಿಂದ ಮುಂದೆ ಬಿಹಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 40 ವರ್ಷಕಾಲ
ಸಂಚರಿಸಿ ಉಪದೇಶ ನೀಡುತ್ತ, ಬಿಹಾರದ ಕುಶೀನಗರ ಎಂಬಲ್ಲಿ 80ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದನು.
* ಬುದ್ಧನ ಜೀವನದ ನಾಲ್ಕು ಘಟ್ಟಗಳು -
1 ) ಮಹಾಪರಿತ್ಯಾಗ
2) ಜ್ಞಾನೋದಯ
3) ಧರ್ಮಚಕ್ರ ಪ್ರವರ್ತನ ಮತ್ತು
4) ಮಹಾಪರಿನಿರ್ವಾಣ.
-> ಬುದ್ಧನ ಉಪದೇಶಗಳ ಗುರಿ:
* ಶುದ್ಧ ಜೀವನ ಮತ್ತು ಚಿಂತನೆಗಳ
ಮೂಲಕ ಜ್ಞಾನವನ್ನು ಗಳಿಸುವುದೇ ಆಗಿತ್ತು. ಬುದ್ಧನು ಇದನ್ನು 'ಧಮ್ಮ' ಎಂದು ಕರೆದನು.
* ಜಗತ್ತು ಅಪಾರ ದುಃಖದಿಂದ
ಕೂಡಿದೆ, ಆಸೆಯೇ ದುಃಖದ ಮೂಲ.
* ಆಸೆಯನ್ನು ಜಯಿಸಿದವರು ನಿರ್ವಾಣ
/ ಮುಕ್ತಿ ಹೊಂದುವರು.
* ತನ್ನ ಅನುಯಾಯಿಗಳಿಗೆ ಹಿಂಸೆ,
ಮದ್ಯಪಾನ, ಭ್ರಷ್ಟಾಚಾರ ಮಾಡದಿರಲು, ಸುಳ್ಳು ಹೇಳದಿರಲು ನಿಯಮ ವಿಧಿಸಿದನು.
* ಬುದ್ಧನ ಉಪದೇಶಗಳು ಜನರ ಭಾಷೆಯಾದ
ಪಾಲಿ ಭಾಷೆಯಲ್ಲಿದ್ದುದರಿಂದ ಸರಳವೂ, ಜನಪ್ರಿಯವೂ ಆಗಿದ್ದವು.
-> ಬುದ್ಧನ ಮೂಲ ಬೋಧನೆಗಳು :
* 4 ಆರ್ಯಸತ್ಯಗಳು -
1) ಜಗತ್ತು ದುಃಖಮಯವಾಗಿದೆ
2) ಆಸೆಯೇ ದುಃಖದ ಮೂಲ
3) ಆಸೆಯನ್ನು
ಗೆದ್ದು ದುಃಖವನ್ನು ದಾಟಬಹುದು
4) ದುಃಖವನ್ನು ಕೊನೆಗೊಳಿಸುವ ದಾರಿಯೇ ಅಷ್ಟಾಂಗಮಾರ್ಗ.
-> ಅಷ್ಟಾಂಗ
ಮಾರ್ಗಗಳು -
1. ಒಳ್ಳೆಯ ನಡತೆ 2. ಮಾತು
3. ನೋಟ/ದೃಷ್ಟಿ 4. ಬದುಕು
5. ಪ್ರಯತ್ನ6. ನೆನಪು 7. ನಿರ್ಧಾರ & 8. ಚಿಂತನೆ ಎಂಬ ಮಧ್ಯಮ ಪಂಥವನ್ನು ಬೋಧಿಸಿದನು.
* ಬುದ್ಧನು ಗ್ರಂಥಗಳನ್ನು ರಚಿಸಲಿಲ್ಲ.
ಅವನ ಉಪದೇಶಗಳನ್ನು ಆತನ ಶಿಷ್ಯರು ನೆನಪಿನಲ್ಲಿಟ್ಟು ಅವನ್ನು ತಲೆಮಾರಿನಿಂದ ತಲೆಮಾರಿಗೆ ಉಪದೇಶದ ಮೂಲಕ
ಕಾಪಾಡಿಕೊಂಡು ಬಂದರು.
* ಬುದ್ಧನ ಉಪದೇಶಗಳು ಇರುವ
ಪ್ರಾಚೀನ ಗ್ರಂಥವೆಂದರೆ - ಪಾಲಿ ಭಾಷೆಯಲ್ಲಿರುವ `ಸುತ್ತ ಪಿಟಕ'.
* ತ್ರಿಪಿಟಕಗಳು: ಬುದ್ಧನ ಉಪದೇಶಗಳನ್ನು ಆತನ ಶಿಷ್ಯರು 3 ಪಿಟಕಗಳಲ್ಲಿ ಸಂಗ್ರಹಿಸಿದರು.
ಅವುಗಳೆಂದರೆ- ವಿನಯ, ಸುತ್ತ ಮತ್ತು ಅಭಿದಮ್ಮ ಪಿಟಕಗಳು.
* ಮುಂದೆ ಬೌದ್ಧ ಧರ್ಮದಲ್ಲಿ- ಹೀನಯಾನ, ಮಹಾಯಾನ,
ವಜ್ರಯಾನ ಹಾಗೂ ಅವುಗಳಲ್ಲಿನ ಸೂತ್ರಗಳು ಹುಟ್ಟಿಕೊಂಡವು.
* ಬುದ್ಧನ ಅಸ್ಥಿಪಂಜರ, ಕಳೆಬರವನ್ನು ಹಾಗೂ
ಮೂಳೆಗಳನ್ನು ಜನ ಅವನ ನೆನಪಿನಲ್ಲಿ ಚೈತ್ಯಾಲಯ ಹಾಗೂ ಸ್ತೂಪಗಳಲ್ಲಿ ಸಂರಕ್ಷಿಸಿಟ್ಟು, ಅವುಗಳ ಮೂಲಕ
ಅವನ ಸಾಧನೆಯನ್ನು ಸ್ಮರಿಸುತ್ತಾ ಪೂಜಿಸತೊಡಗಿದರು. ಹೀಗೆ ಬುದ್ಧನ ಆರಾಧನೆಯಿಂದ ಮೊಟ್ಟಮೊದಲ ದೇವಾಲಯಗಳು,
ವಿಗ್ರಹಗಳು ಹಾಗೂ ಮೂರ್ತಿಜೆ ಪ್ರಾರಂಭವಾದವು.
-> ಧರ್ಮದ ಅನುಯಾಯಿಗಳು
:
* ಶ್ರೀಮಂತ ವರ್ತಕರು, ಕುಶಲಕರ್ಮಿಗಳು, ಜನಸಾಮಾನ್ಯರು
ಈ ಹೊಸ ಪ್ರತಿಪಾದನೆಯಿಂದ ಪ್ರೇರಿತರಾದರು.
* ತನ್ನ ಬೋಧನೆಗಳನ್ನು ಸ್ಥಳೀಯ ಸಂಪ್ರದಾಯಗಳ
ಅಂಶಗಳೊಂದಿಗೆ ಸಂಬಂಧ ಕಲ್ಪಿಸಿ, ಜನಸಾಮಾನ್ಯರ ಪ್ರಾಕೃತ ಭಾಷೆಯ ಮೂಲಕ ಮಾಡಿದನು.
* ಹೊಸ ನಗರಗಳ ವಾತಾವರಣ ಮತ್ತು ಬದಲಾದ ಪರಿಸ್ಥಿತಿಗಳಲ್ಲಿ
ಹೊಸ ಮತಗಳು ಆಶಾಕಿರಣಗಳಾದವು.
* ಬುದ್ಧ ಹಾಗೂ ಅವನ ಅನುಯಾಯಿಗಳು-ಕೋಸಲ, ಮಗಧ
ಹಾಗೂ ಗಂಗಾನದಿಯ ಬಯಲು ಪ್ರದೇಶದ ಉಳಿದ ಹಲವು ನಗರಗಳಿಗೆ ಕಾಲ್ನಡಿಗೆಯಲ್ಲಿಯೇ ಪ್ರಯಾಣಿಸಿ ತಮ್ಮ ವಿಚಾರಗಳನ್ನು
ಬೋಧಿಸಿದರು.
* ಬೌದ್ಧ ಧರ್ಮದ ವೈಭವವನ್ನು ಚೀನಾದ ಪ್ರವಾಸಿಗಳಾದ
- ಫಾಹಿಯಾನ್, ಇತ್ಸಿಂಗ್ ಹಾಗೂ ಹ್ಯೂಯನ್ತ್ಸಾಂಗ್ ಕಣ್ಣಿಗೆ ಕಟ್ಟುವಂತೆ ತಮ್ಮ ಬರವಣಿಗೆಗಳಲ್ಲಿ ವಿವರಿಸಿದ್ದಾರೆ.
* ಮಲಯ, ಬರ್ಮ, ಥೈಲ್ಯಾಂಡ್, ವಿಯಟ್ನಾಂ, ಕಂಬೊಡಿಯ,
ಶ್ರೀಲಂಕ ಹಾಗೂ ಬಾಮಿಯಾನಿನವರೆವಿಗೂ ಬೌದ್ಧ ಧರ್ಮವು ಹರಡಿತ್ತು. ಇಲ್ಲೆಲ್ಲ ಬೆಟ್ಟಗಳ ಶಿಲೆಗಳನ್ನೇ
ಕಡೆದು ಬುದ್ಧನ ಮೂರ್ತಿಗಳನ್ನು ನಿರ್ಮಿಸಿದ್ದಾರೆ.
* ಕಂಬೋಡಿಯಾದ ಅಂಕೂರ್ ವಾಟ್ ಹಾಗೂ ಅಪ್ಘಾನಿಸ್ತಾನದ
ಬಾಮಿಯಾನ್ ನಲ್ಲಿ ಬುದ್ಧನ ಬೃಹತ್ ಪ್ರತಿಮೆಗಳನ್ನು ನಾವು ಇಂದಿಗೂ ಕಾಣಬಹುದು.
* ಇತ್ತೀಚಿನ ದಿನಗಳಲ್ಲಿ ಬಾಮಿಯಾನ್ ನ ಬುದ್ಧನ
ಬೃಹತ್ ಪ್ರತಿಮೆಗಳು ಭಯೋತ್ಪಾದಕರ ದಾಳಿಗೆ ತುತ್ತಾಗಿ ನಾಶವಾದವು.
* 1956ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ರವರು
ಬೌದ್ಧ ಧರ್ಮವನ್ನು ಸ್ವೀಕರಿಸಿದರು.
-> ನಳಂದ ವಿಶ್ವವಿದ್ಯಾಲಯ:
* ಬುದ್ಧನ ಪೂರ್ವಾಪರಜನ್ಮದ ಮತ್ತೊಂದು ಹೆಸರು
- ನಳಂದ.
* ಬುದ್ಧನು ನಳಂದ ವಿ.ವಿ.ಕ್ಕೆ ಭೇಟಿ ನೀಡಿದ್ದನು.
* ಹರ್ಷವರ್ಧನನು 25 ಮೀಟರ್ ಎತ್ತರದ ಕಂಚಿನ
ಬುದ್ಧ ಪ್ರತಿಮೆಯನ್ನು ನಳಂದಕ್ಕೆ ಕಾಣಿಕೆ ನೀಡಿದನೆಂಬ ಉಲ್ಲೇಖವಿದೆ.
0 Comments