www.spardhavijaya.blogspot.com ಇತಿಹಾಸ ಪರಿಚಯ - ಆರಂಭಿಕ ಸಮಾಜ
* ಸಾಮಾನ್ಯವಾಗಿ ಇತಿಹಾಸವನ್ನು 3 ಪ್ರಧಾನ ಕಾಲಗಳಾಗಿ ವರ್ಗೀಕರಿಸಿಕೊಳ್ಳಬಹುದು. ಅವುಗಳೆಂದರೆ:
1. ಪ್ರಾಗೈತಿಹಾಸ ಕಾಲ ((Pre historic Period) 2. ಪೂರ್ವಭಾವಿ ಇತಿಹಾಸಕಾಲ (Proto historic Period) ಮತ್ತು 3. ಇತಿಹಾಸಕಾಲ (Historic Period).
* ಮಾನವರ ಇತಿಹಾಸದಲ್ಲಿ ಪ್ರಾಗೈತಿಹಾಸ ಕಾಲವೇ ಶೇ. 99.9% ರಷ್ಟು ಕಾಲವಧಿಯನ್ನು ಒಳಗೊಂಡಿದೆ.
* ಮೇಲಿನ ಮೂರು ಕಾಲಗಳನ್ನು ವರ್ಗೀಕರಿಸಲು ಬಳಸುವ ಮಾನದಂಡವೇ ಅಕ್ಷರ ಜ್ಞಾನವಾಗಿದೆ.
* ಪ್ರಾಗೈತಿಹಾಸಿಕ ಕಾಲ: ಅಕ್ಷರ ಪರಿಚಯವೇ ಇಲ್ಲದ ಕಾಲಘಟ್ಟ. ಉದಾ: ಶಿಲಾಯುಗಗಳು.
* ಪೂರ್ವಭಾವಿ ಇತಿಹಾಸಕಾಲ: ಅಕ್ಷರಗಳ ತಿಳುವಳಿಕೆ ಇದ್ದು ಅವುಗಳನ್ನು ಇಂದು ಓದಲು ಸಾಧ್ಯವಾಗಿಲ್ಲದ ಕಾಲಘಟ್ಟ. ಉದಾ: ಹರಪ್ಪ ನಾಗರಿಕತೆಯ ಕಾಲ.
* ಇತಿಹಾಸಕಾಲ: ಅಕ್ಷರ ಪರಿಚಯವಿದ್ದು, ಆ ಅಕ್ಷರಗಳನ್ನು ಇಂದು ಓದಲು ಸಾಧ್ಯವಾಗುವ ಕಾಲ.
* ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿಗಳೆಂದರೆ-ಏಕಕೋಶ ಬ್ಯಾಕ್ಟೀರಿಯಾಗಳಾದ ಪ್ರೊಕ್ಯಾರಿಯೋಟ್ ಗಳು. ಇವು ಆಮ್ಲಜನಕ ಇಲ್ಲದ ವಾತಾವರಣದಲ್ಲಿ ಬದುಕಬಲ್ಲವಾಗಿದ್ದವು. ತಮಗೆ ಬೇಕಾದ ಶಕ್ತಿ ಮತ್ತು ಪೌಷ್ಟಿಕಾಂಶಗಳನ್ನು ಪರಿಸರದಿಂದ ಪಡೆದುಕೊಳ್ಳುತ್ತಿದ್ದವು.
* ನಂತರ ಸುಮಾರು 4000 ರಿಂದ 2500 ದಶಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡ ಶೈವಲ ಅಥವಾ ಆಲ್ಗೆಗಳು ಸಸ್ಯ ಮತ್ತು ಜೀವಗಳ ವಿಕಾಸಕ್ಕೆ ಕಾರಣವಾದವು.
* 3500 ದ.ಲಕ್ಷ ವರ್ಷಗಳ ಹಿಂದಿನ ಸೂಕ್ಷ ಜೀವಕಣ ಪಳೆಯುಳಿಕೆಗಳು ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿವೆ.
* ನಮ್ಮ ಕರ್ನಾಟಕದ ಸಂಡೂರು ತಾಲ್ಲೂಕಿನಲ್ಲಿ ‘ಧಾರವಾಡದ ಜಲಜ ಶಿಲೆಗಳಲ್ಲಿ 2000 ದಶಲಕ್ಷ ವರ್ಷಗಳಿಗೂ ಹಿಂದಿನ ಸೂಕ್ಷ್ಮಾಣು ಜೀವಿಗಳ ಪಳೆಯುಳಿಕೆಗಳು ಕಂಡುಬoದಿವೆ.
* ಜೀವವಿಕಾಸದ ಹಾದಿಯಲ್ಲಿ ಅನುಕ್ರಮಣಿಕೆ - ಮೀನು ಮತ್ತಿತರ ಜಲಚರಗಳು->ಕೀಟಗಳು->ಉಭಯವಾಸಿಗಳು-> ಸರಿಸೃಪಗಳು
->ಡೈನೋಸರಸ್->ಪಕ್ಷಿಗಳು ಮತ್ತು ಸಸ್ತನಿಗಳು->ಬೃಹತ್ ಸಸ್ತನಿಗಳು->ವಾನರಗಳು-> ದ್ವಿಪಾದಿಗಳು->ಮಾನವನ ವಿಕಾಸವಾಯಿತು.
* ಜೀವ ವಿಕಾಸದ ಹಾದಿಯಲ್ಲಿ ಮೊದಲು ಏಕಕೋಶ ಜೀವಿಗಳು ನಂತರ ಮೃದ್ವಂಗಿಗಳು, ಮೀನು, ಸಸ್ಯ, ಕೀಟ, ಉಭಯವಾಸಿ, ರೆಕ್ಕೆಯುಳ್ಳ ಕೀಟ, ಸರಿಸೃಪ, ಪಕ್ಷಿಗಳು, ಸಸ್ತನಿಗಳು, ಹೂಬಿಡುವ ಸಸ್ಯ, ಹುಲ್ಲು, ವಾನರ, ದ್ವಿಪಾದಿಗಳು ವಿಕಾಸ ಹೊಂದಿದವು.
* ಸುಮಾರು 18 ಲಕ್ಷ ಹಿಂದೆ ಮಾನವರ ವಿಕಾಸವಾಯಿತು.
* ಆಧುನಿಕ ಮಾನವರ ದೈಹಿಕ ರಚನೆಯನ್ನು ಹೊಂದಿದ್ದ ಮಾನವರು ಮೊದಲು ಕಾಣಿಸಿಕೊಂಡದ್ದು- ದಕ್ಷಿಣ ಆಫ್ರಿಕಾದಲ್ಲಿ.
>ಪ್ರಾಗೈತಿಹಾಸಿಕ ಕಾಲ ಅಥವಾ ಚರಿತ್ರೆಯ ಪೂರ್ವಕಾಲ :
* ಮಾನವರು ಲೇಖನ ಕಲೆಯನ್ನು ಕಂಡು ಹಿಡಿಯುವುದಕ್ಕೆ ಮೊದಲಿನ ಕಾಲವೇ- ಪ್ರಾಗೈತಿಹಾಸಿಕ ಕಾಲ
* ಈ ಕಾಲಘಟ್ಟದಲ್ಲಿ ಭಾಷೆಯ ಬೆಳವಣಿಗೆ ಹಾಗೂ ಲಿಪಿಯ ಬಳಕೆಯ ಬಗ್ಗೆ ನಮಗೆ ಆಧಾರಗಳು ಸಿಗದೆ ಇರುವುದರಿಂದ ಇದನ್ನು ಚರಿತ್ರೆಯ ಪೂರ್ವಕಾಲವೆಂದು ಕರೆಯುತ್ತೇವೆ. * ಈ ಕಾಲಘಟ್ಟವನ್ನು ಅಧ್ಯಯನ ಮಾಡುವ ತಜ್ಞರಿಗೆ ನಾವು ಪ್ರಾಕ್ತನ ಅಥವಾ ಪ್ರಾಚ್ಯವಸ್ತು ಅಧ್ಯಯನಕಾರರೆಂದು ಕರೆಯುತ್ತೇವೆ. * ಅಲೆಮಾರಿ ಜೀವನ, ಬೇಟೆ ಹಾಗೂ ಆಹಾರ ಸಂಗ್ರಹಣೆ, * ಶಿಲೆ, ಕಟ್ಟಿಗೆ ಹಾಗೂ ಎಲುಬುಗಳಿಂದ ತಯಾರಿಸಿದ ಆಯುಧಗಳ ಬಳಕೆ * ಪ್ರಾಣಿಗಳ ಮಾಂಸ ಹಾಗೂ ಮೂಳೆಗಳನ್ನು ಕತ್ತರಿಸಲು, ಮರಗಳ ತೊಗಟೆಯನ್ನು ಮತ್ತು ಪ್ರಾಣಿಗಳ ಚರ್ಮವನ್ನು ಕೀಳಲು, ಹಣ್ಣು ಹಾಗೂ ಬೇರುಗಳನ್ನು ಕತ್ತರಿಸಲು, ಗೆಡ್ಡೆ-ಗೆಣಸುಗಳನ್ನು ಪಡೆದುಕೊಳ್ಳಲು-ಶಿಲಾಪರಿಕರಗಳನ್ನು ಬಳಸುತ್ತಿದ್ದರು. * ಎಲುಬು ಮತ್ತು ಕಟ್ಟಿಗೆಗಳನ್ನು ಕೈಹಿಡಿಯಾಗಿ ಅಳವಡಿಸಿ-ಭರ್ಜಿ ಹಾಗೂ ಬಾಣವನ್ನಾಗಿಸಿಕೊಂಡು ಬೇಟೆಗಾಗಿ ಬಳಕೆ * ಮರ ಕಡಿದು ಸೌದೆಯಾಗಿ ಬಳಸಲು-ಶಿಲೆಗಳನ್ನು ಕೊಡಲಿಯನ್ನಾಗಿ ಮಾಡಿಕೊಂಡರು. * ಬೆಂಕಿಯ ಉಪಯೋಗ ತಿಳಿದಿತ್ತು.
* ಭಾರತದಲ್ಲಿ ಅವರು ಉಪಯೋಗಿಸಿದ ಒರಟು ಸಲಕರಣೆಗಳ ಆಧಾರದಿಂದಲೇ ಅವರ ಇತಿಹಾಸವನ್ನು ರಚಿಸುತ್ತೇವೆ.
* ಭಾರತವು ಮಾನವರ ಆರಂಭಿಕ ವಾಸಸ್ಥಾನಗಳಲ್ಲಿ ಒಂದಾಗಿದೆ. ಕೆಲವು ಇತಿಹಾಸಕಾರರು ಹಿಮಾಲಯದ ಸಿವಾಲಿಕ್ ಗುಡ್ಡಗಳೇ ಮಾನವನು ವಾಸಿಸಿದ ಪ್ರಥಮ ತಾಣಗಳೆಂತಲೂ ಮತ್ತು ಕೆಲವರು ದಕ್ಷಿಣ ಭಾರತದ ದಂಡಕಾರಣ್ಯ (ದಕ್ಷಿಣ ಕರ್ನಾಟಕದ ಭಾಗ) ಇವರ ವಾಸಸ್ಥಾನವೆಂದು ನಂಬುತ್ತಾರೆ. * ಭಾರತದಲ್ಲಿ ಅಸ್ತಿತ್ವದಲ್ಲಿರುವ ನಿಗ್ರೋ, ಮಂಗೋಲಿಯನ್, ದ್ರವಿಡಿಯನ್, ಆಲ್ಪಾಯಿನ್ ಮುಂತಾದ ವಿವಿಧ ಜನಾಂಗಗಳು ಮಾನವನ ಉಗಮದ ವಿಷಯವನ್ನು ಜಟಿಲಗೊಳಿಸುತ್ತವೆ.
* ದಕ್ಷಿಣ ಭಾರತವೇ ಮಾನವನ ಮೊದಲ ವಾಸಸ್ಥಾನ ಎಂಬುದು ಸ್ವೀಕೃತ ವಿಚಾರವಾಗಿದೆ.
* ಸುಮಾರು 1,50000 ವರ್ಷಗಳ ಹಿಂದೆ ಮಾನವ ಈ ಭೂಮಿಯ ಮೇಲೆ ನಡೆದಾಡಿದ ಎಂದು ನಂಬಲಾಗಿದೆ.
ಇವರು ಬದುಕಿಗಾಗಿ ಯಾವೆಲ್ಲ ತಾಣಗಳನ್ನು ಬಳಸಿಕೊಂಡರು?
ಭಾರತದಲ್ಲಿ ಪ್ರಾಗೈತಿಹಾಸಕಾಲ/ಚರಿತ್ರೆಪೂರ್ವ ಕಾಲದ ಕುರುಹುಗಳೆಂದರೆ-ಬಿoಬೇಟ್ಕ, ಹುಣಸಗಿ ಮತ್ತು ಕರ್ನೂಲ್. * ಬಹುತೇಕ ನೆಲೆಗಳು ನದಿಗಳು ಹಾಗೂ ಕೆರೆದಂಡೆಗಳಲ್ಲಿ ಕಂಡುಬoದಿವೆ. * ಈ ಕಾಲಘಟ್ಟದ ಮನುಷ್ಯನ ಅಳಿವು-ಉಳಿವಿಗೆ ಶಿಲೆಗಳ ಪರಿಕರಗಳು ಅನಿವಾರ್ಯವಾದ್ದರಿಂದ-ಕಲ್ಲುಗಳು ದೊರೆಯುವ ಸ್ಥಳಗಳನ್ನೇ ಅವರು ವಾಸಕ್ಕೆ ಆಯ್ಕೆ ಮಾಡಿಕೊಂಡರು. * ಮನುಷ್ಯರು ಕಲ್ಲುಗಳನ್ನು ಬಳಸಿದ ಹಾಗೂ ತಯಾರಿಸಿದ ಇಂತಹ ಪ್ರದೇಶಗಳನ್ನು ‘ಆರಂಭಿಕ ಕೈಗಾರಿಕೆಯ ನೆಲೆಗಳೆಂದು ಭಾವಿಸಲಾಗಿದೆ. ಇಷ್ಟೇ ಅಲ್ಲದೇ ಕಲ್ಲಿನ ಚಕ್ಕೆಗಳ ರಾಶಿಗಳು, ನೆಲೆಗಳ ಸುತ್ತಲಿನ ಪ್ರದೇಶಗಳಲ್ಲಿ ಲಭ್ಯವಾಗಿವೆ. ಇಂತಹ ನೆಲೆಗಳಿಗೆ ವಾಸ ಹಾಗೂ ಕೈಗಾರಿಕೆಯ ನೆಲೆಗಳೆಂದು ಕರೆಯಲಾಗಿದೆ
ಬೆಂಕಿಯ ಬಗೆಗಿನ ತಿಳಿವು :
* ಕರ್ನೂಲಿನ ಗವಿಗಳಲ್ಲಿ ಬೂದಿಯ ಕುರುಹುಗಳು ದೊರೆತಿವೆ.
* ಬೆಂಕಿಯನ್ನು ಆಹಾರ ಬೇಯಿಸಲು, ಬೆಳಕನ್ನು ಪಡೆಯಲು ಹಾಗೂ ಪ್ರಾಣಿಗಳನ್ನು ಬೆದರಿಸಲು ಬಳಸುತ್ತಿದ್ದಿರಬಹುದು.
ಗುಹಾಲಯಗಳಲ್ಲಿ ಕಂಡು ಬರುವ ರೇಖಾಚಿತ್ರಗಳು :
ಶಿಲಾಯುಗದ ಮಾನವರು ಅತ್ಯಂತ ಸುಂದರವಾಗಿ ಬಿಡಿಸಿರುವ ಕಾಡು ಮೃಗಗಳ ಹಾಗೂ ಬೇಟೆಯ ಚಿತ್ರಗಳನ್ನು ನಾವು ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದ ಕೆಲವು ಗವಿಗಳಲ್ಲಿ ಕಾಣುತ್ತೇವೆ.
>ಬದಲಾಗುತ್ತಿರುವ ಪರಿಸರ :
ಸುಮಾರು 12000 ವರ್ಷಗಳ ಹಿಂದೆ ಜಗತ್ತಿನ ಪರಿಸರದಲ್ಲಿ ಬದಲಾವಣೆಯುoಟಾಗಿ, ಭೂ ಮಂಡಲದ ತಾಪಮಾನವು ಮತ್ತಷ್ಟು ಹೆಚ್ಚಿ, ಇದು ಹುಲ್ಲುಗಾವಲಿನ ಬೆಳವಣಿಗೆಗೆ ಕಾರಣವಾಯಿತು. * ವಿವಿಧ ಪ್ರಾಣಿ ಪಕ್ಷಿಗಳ ಜನನ, ಸಂತಾನೋತ್ಪತ್ತಿ, ಬೇಟೆ, ಆಹಾರ ಕ್ರಮದಲ್ಲಿ ಬದಲಾವಣೆ, ಪ್ರಾಣಿಗಳ ಸಾಕಾಣಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ- ಇದರ ಅತ್ಯಂತ ಪೂರ್ವದ ಕಾಲಘಟ್ಟವನ್ನು ಹಳೆಯ ಶಿಲಾಯುಗವೆಂದು ಕರೆಯುವರು. * ಹಳೆಯ ಶಿಲಾಯುಗದ ಕಾಲವು ಮಿಲಿಯನ್ ವರ್ಷದಷ್ಟು ಹಳೆಯದು ಹಾಗೂ ಅದು ಸುಮಾರು ೧೨ಸಾವಿರ ವರ್ಷದವರೆಗೂ ವಿಸ್ತರಿಸಲ್ಪಟ್ಟಿದೆ.
* ಹಳೆಯ ಶಿಲಾಯುಗವನ್ನು 3 ಭಾಗವಾಗಿ ವಿಂಗಡಿಸಲಾಗಿದೆ. ಅವೆಂದರೆ-ಆದಿ, ಮಧ್ಯ(ಸ್ಥಿತ್ಯಂತರ ಸೂಕ್ಷ್ಮ ಶಿಲಾಯುಗ) ಮತ್ತು ಅಂತ್ಯ ಹಳೆ ಶಿಲಾಯುಗಗಳು.
* ಶಿಲಾಯುಧಗಳು ಮತ್ತು ಲೋಹಗಳ ಬಳಕೆಯನ್ನವಲಂಬಿಸಿದ ಇತಿಹಾಸಪೂರ್ವ ಕಾಲ/ಪ್ರಾಗೈತಿಹಾಸಿಕ ಕಾಲವನ್ನು 6 ಯುಗಗಳಲ್ಲಿ ವಿಂಗಡಿಸಲಾಗಿದೆ. ಅವು -
1. ಹಳೆಯ ಶಿಲಾಯುಗ 2. ಮಧ್ಯ ಶಿಲಾಯುಗ 3. ನವ ಶಿಲಾಯುಗ 4. ತಾಮ್ರದ ಯುಗ 5. ಕಂಚಿನ ಯುಗ ಮತ್ತು 6. ಕಬ್ಬಿಣ ಯುಗ.
ಇತಿಹಾಸಕಾರರಲ್ಲಿ ಈ ಯುಗಗಳ ನಿಶ್ಚಿತ ಸಮಯ ಅಥವಾ ಅವಧಿಯ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ.
(ಮುಂದುವರೆಯುವುದು......)
- Home
- Downloads 1
- _KPSC KAS Notes
- _UPSC Notes
- _World Maps
- _All Notes
- _Question Papers
- _Exams Syllabus
- Govt. Books
- _1 to 10th Class
- _PUC Books
- _Economic Survey
- _Gazetteer Books
- Downloads 2
- _Constitution
- _Current Affairs
- _Economics
- _Geography
- _History
- Downloads 3
- _Kannada
- _Science
- _Govt.Orders
- _General Knowledge
- Contact Us
- _Facebook Page
- _Facebook Group
- _E-Mail
- Disclaimer
0 Comments