ಬಟ್ಟೆ ತಯಾರಿಕೆಯ ಮೂಲಗಳು
ಬಟ್ಟೆ ಅಂಗಡಿಗೆ ಭೇಟಿ ನೀಡಿದನಂತರ ಸುತ್ತಮುತ್ತ ಕಂಡ ವಿವಿಧ ಮಾದರಿಯ ಬಟ್ಟೆಗಳನ್ನು ಗಮನಿಸಿದಾಗ, ಚಾದರಗಳು (ಬೆಡ್ಶೀಟುಗಳು), ಕಂಬಳಿಗಳು, ಪರದೆಗಳು, ಮೇಜು ಬಟ್ಟೆಗಳು, ಟವೆಲ್ಗಳು, ಧೂಳು ಒರೆಸುವ ಬಟ್ಟೆ ಇವೆಲ್ಲ ವಿವಿಧ ರೀತಿಯ ಬಟ್ಟೆಗಳಿಂದ ಮಾಡಿದವುಗಳು.
ಸೂಜಿಗೆ ದಾರ ಪೋಣಿಸುವಾಗ ಹಲವು ಬಾರಿ ದಾರದ ತುದಿಯು ಕೆಲವು ತೆಳು ಎಳೆಗಳಾಗಿ ಬೇರ್ಪಟ್ಟಿರುತ್ತದೆ. ಇದರಿಂದ ಸೂಜಿಯ ರಂಧ್ರದ ಮೂಲಕ ದಾರವನ್ನು ತೂರಿಸಲು ಕಷ್ಟವಾಗುತ್ತದೆ.
ನಾವು ನೋಡುವ ದಾರದ ಈ ತೆಳು ಎಳೆಗಳು ನಾರುಗಳು ಎಂಬ ಇನ್ನೂ ತೆಳುವಾದ ಎಳೆಗಳಿಂದ ಆಗಿವೆ. ಬಟ್ಟೆಯು ದಾರಗಳಿಂದ ರಚಿತವಾಗಿದ್ದರೆ, ದಾರಗಳು ನಾರುಗಳಿಂದಾಗಿವೆ. ಕೆಲವು ಬಟ್ಟೆಗಳಾದ ಹತ್ತಿ, ಸೆಣಬು, ರೇಷ್ಮೆ ಮತ್ತು ಉಣ್ಣೆಗಳ ನಾರುಗಳನ್ನು ಸಸ್ಯ ಮತ್ತು ಪ್ರಾಣಿಗಳಿಂದ ಪಡೆಯುತ್ತೇವೆ. ಇವುಗಳನ್ನು ನೈಸರ್ಗಿಕ ನಾರುಗಳು (natural
fibres) ಎಂದು ಕರೆಯುವರು. ಹತ್ತಿ ಮತ್ತು ಸೆಣಬು-ಇವು ಸಸ್ಯಗಳಿಂದ ಪಡೆಯುವ ನಾರುಗಳಿಗೆ ಉದಾಹರಣೆಗಳು. ಉಣ್ಣೆ ಮತ್ತು ರೇಷ್ಮೆ ನಾರುಗಳನ್ನು ಪ್ರಾಣಿಗಳಿಂದ ಪಡೆಯಲಾಗುತ್ತದೆ.
ಕುರಿ ಅಥವಾ ಮೇಕೆಯ ತುಪ್ಪಟದಿಂದ, ಮೊಲ, ಚಮರಿಮೃಗ ಮತ್ತು ಒಂಟೆಯ ಕೂದಲಿನಿಂದಲೂ ಉಣ್ಣೆಯನ್ನು ಪಡೆಯಲಾಗುತ್ತದೆ. ಪಡೆಯುತ್ತೇವೆ. ರೇಷ್ಮೆ ಹುಳುಗಳ ಗೂಡಿನಿಂದ ರೇಷ್ಮೆ ಎಳೆಯನ್ನು ತೆಗೆಯಲಾಗುತ್ತದೆ.
ಕೃತಕವಾಗಿ ರಾಸಾಯನಿಕ ವಸ್ತುಗಳಿಂದ ಮಾಡುವ ನಾರನ್ನು ಸಂಶ್ಲೇಷಿತ ನಾರುಗಳು (synthetic fibres) ಎನ್ನುವರು. ಪಾಲಿಎಸ್ಟರ್ (polyester)),
ನೈಲಾನ್ (nylon) ಮತ್ತು
ಅಕ್ರಿಲಿಕ್ (acrylic) ಸಂಶ್ಲೇಷಿತ ನಾರುಗಳಿಗೆ ಉದಾಹರಣೆಗಳು.
>ಕೆಲವು ಸಸ್ಯ ನಾರುಗಳು :
ಹತ್ತಿ :
ಎಣ್ಣೆ ದೀಪಗಳಿಗೆ ಬತ್ತಿ, ಹಾಸಿಗೆಗಳು, ಗಾದಿ (ರಜಾಯಿ) ಅಥವಾ ದಿಂಬುಗಳಿಗೆ ತುಂಬುವುದಕ್ಕೂ ಸಹ ಹತ್ತಿ (cotton) ಯನ್ನು
ಬಳಸಲಾಗುತ್ತದೆ. ಸಾಮಾನ್ಯವಾಗಿ ಕಪ್ಪುಮಣ್ಣು ಮತ್ತು ಉಷ್ಣತೆಯ ಹವಾಮಾನವಿರುವ ಪ್ರದೇಶಗಳಲ್ಲಿ ಹತ್ತಿಯನ್ನು ಬೆಳೆಯಲಾಗುತ್ತದೆ. ಹತ್ತಿಗಿಡದ ಹಣ್ಣುಗಳು (cotton bolls) ನಿಂಬೆಹಣ್ಣಿನ ಗಾತ್ರದಷ್ಟಿರುತ್ತವೆ.
ಪಕ್ವವಾದ ಮೇಲೆ ಹತ್ತಿಕಾಯಿಗಳು ಒಡೆದು ತೆರೆದುಕೊಳ್ಳುತ್ತವೆ. ಆಗ ಹತ್ತಿ ನಾರುಗಳಿಂದ ಸುತ್ತುವರಿದಿರುವ ಬೀಜಗಳನ್ನು ಕಾಣಬಹುದು. ಕೊಯ್ಲಿಗೆ ಬಂದಿರುವ ಹತ್ತಿ ಹೊಲವು ಮಂಜು ಆವರಿಸಿದ ಹೊಲದಂತೆ ಕಾಣುತ್ತದೆ. ಸಾಮಾನ್ಯವಾಗಿ ಒಡೆದ ಹತ್ತಿ ಕಾಯಿಗಳಿಂದ ಹತ್ತಿಯನ್ನು ಕೈಯಿಂದ ತೆಗೆಯುತ್ತಾರೆ. ಬೀಜಗಳಿಂದ ನಾರನ್ನು ಬಾಚಿ ಪ್ರತ್ಯೇಕಿಸುತ್ತಾರೆ.
ಈ ಕ್ರಿಯೆಗೆ ಹಿಂಜುವುದು (ginning) ಎನ್ನುವರು.
ಸೆಣಬಿನ ಗಿಡದ ಕಾಂಡದಿಂದ ಸೆಣಬಿನ ನಾರನ್ನು ಪಡೆಯಲಾಗುತ್ತದೆ. ಇದನ್ನು ಮಳೆಗಾಲದಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಸೆಣಬನ್ನು ಮುಖ್ಯವಾಗಿ ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂಗಳಲ್ಲಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಸೆಣಬಿನ ಗಿಡವನ್ನು ಹೂ ಬಿಡುವ ಹಂತದಲ್ಲಿ ಕೊಯ್ಯುತ್ತಾರೆ. ಕೊಯ್ಲು ಮಾಡಿದ ಸಸ್ಯಗಳ ಕಾಂಡಗಳನ್ನು ಕೆಲವು ದಿನಗಳ ಕಾಲ ನೀರಿನಲ್ಲಿ ಮುಳುಗಿಸಲಾಗುತ್ತದೆ. ಕಾಂಡಗಳು ಕೊಳೆತ ನಂತರ ನಾರುಗಳನ್ನು ಕೈಯಿಂದ ಬೇರ್ಪಡಿಸಲಾಗುತ್ತದೆ.
ಈ ಎಲ್ಲಾ ನಾರುಗಳಿಂದ ಬಟ್ಟೆಗಳನ್ನು ಮಾಡಬೇಕಾದರೆ, ಮೊದಲು ಅವುಗಳನ್ನು ನೂಲಾಗಿ ಮಾರ್ಪಾಟು ಮಾಡುತ್ತಾರೆ. ನಾರುಗಳಿಂದ ನೂಲು ತಯಾರಿಸುವ ಕ್ರಿಯೆಯನ್ನು ನೂಲುವುದು (spinning) ಎನ್ನುವರು. ಈ ಕ್ರಿಯೆಯಲ್ಲಿ ಹತ್ತಿಯ ರಾಶಿಯಿಂದ ನಾರುಗಳನ್ನು ಹೊರ ಎಳೆದು ಹೆಣೆಯಲಾಗುವುದು.
ಇದರಿಂದ ನಾರುಗಳು ಒಟ್ಟಾಗಿ ನೂಲಿನ ರೂಪ ಬರುತ್ತದೆ. ನೂಲುವುದಕ್ಕೆ ಬಳಸುವ ಒಂದು ಸರಳ ಸಾಧನ ಕೈ-ಕೆದರು (hand spindle). ಇದಕ್ಕೆ ತಕಲಿ ಎಂದೂ ಕರೆಯುತ್ತಾರೆ. ನೂಲುವುದಕ್ಕೆ ಬಳಸುವ ಕೈಯಿಂದ ಕಾರ್ಯ ನಿರ್ವಹಿಸಬಹುದಾದ
ಮತ್ತೊಂದು ಸಾಧನ ಚರಕ. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಗಾಂಧೀಜಿಯವರು ಚರಕದ ಬಳಕೆಯನ್ನು ಜನಪ್ರಿಯಗೊಳಿಸಿದರು.
ಮನೆಯಲ್ಲೇ ನೇಯ್ದ ಬಟ್ಟೆಯನ್ನು ಧರಿಸಲು ಮತ್ತು ಬ್ರಿಟನ್ ಗಿರಣಿಗಳಲ್ಲಿ ತಯಾರಾಗಿ ಆಮದುಗೊಳ್ಳುತ್ತಿದ್ದ ಬಟ್ಟೆಯನ್ನು ಬಳಸದಂತೆಯೂ ಅವರು ಜನರನ್ನು ಪ್ರೆರೇಪಿಸಿದರು.
ಖಾದಿಯನ್ನು ಜನಪ್ರಿಯಗೊಳಿಸಲು
ಮತ್ತು ಪ್ರೋತ್ಸಾಹಿಸಲು,
ಭಾರತ ಸರ್ಕಾರವು ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಮಂಡಲಿಯನ್ನು 1956ರಲ್ಲಿ ಸ್ಥಾಪಿಸಿತು.
ನೂಲಿನಿಂದ ಬಟ್ಟೆಯನ್ನು ತಯಾರಿಸುವ ಹಲವಾರು ವಿಧಾನಗಳಿವೆ. ನೇಯುವುದು ಮತ್ತು ಹೆಣೆಯುವುದು-2 ಪ್ರಮುಖ ವಿಧಾನಗಳು.
ಎರಡು ಗುಂಪುಗಳ ನೂಲುಗಳನ್ನು ಒಟ್ಟಿಗೆ ಜೋಡಿಸಿ ಬಟ್ಟೆ ತಯಾರಿಸುವ ಕ್ರಿಯೆಯನ್ನು ನೇಯುವುದು (weaving) ಎನ್ನುವರು.
ಭಾರತದಲ್ಲಿ ನಮ್ಮ ಪೂರ್ವಜರು ಗಂಗಾ ನದಿಯ ತೀರ ಪ್ರದೇಶದ ಹತ್ತಿರ ಬೆಳೆದ ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಧರಿಸುತ್ತಿದ್ದರು. ಅಗಸೆ(flax)ಯೂ ಕೂಡ ನೈಸರ್ಗಿಕ ನಾರುಗಳನ್ನು ಕೊಡುವ ಸಸ್ಯ. ಪ್ರಾಚೀನ ಈಜಿಪ್ಟ್ ನ ನೈಲ್ ನದಿಯ ಸಮೀಪ ಹತ್ತಿ ಹಾಗೂ ಅಗಸೆಯನ್ನು ಬೆಳೆಯಲಾಗುತ್ತಿತ್ತು. ಅವುಗಳನ್ನು ಬಟ್ಟೆಗಳ ತಯಾರಿಕೆಗೆ ಬಳಸುತ್ತಿದ್ದರು. ಆದರೆ ಈಗಲೂ ಕೂಡ ಸೀರೆ, ಪಂಚೆ, ಲುಂಗಿ ಅಥವಾ ರುಮಾಲು(ಪೇಟ)ಗಳು ಹೊಲಿಯದೆ ಬಳಸುವ ಬಟ್ಟೆಗಳೆಂದರೆ ಆಶ್ಚರ್ಯವಾಗುತ್ತದೆ.
. ಉಡುಪಿನ ಬಟ್ಟೆಗಳಲ್ಲಿ ವೈವಿಧ್ಯವಿದೆ. ಉದಾಹರಣೆಗೆ ಹತ್ತಿ, ರೇಷ್ಮೆ, ಉಣ್ಣೆ ಮತ್ತು ಪಾಲಿಎಸ್ಟರ್.
. ಬಟ್ಟೆಗಳು ನೂಲುಗಳಿಂದ ಆಗಿದ್ದರೆ, ನೂಲುಗಳು ನಾರುಗಳಿಂದಾಗಿವೆ.
. ನಾರುಗಳು ನೈಸರ್ಗಿಕ ಅಥವಾ ಸಂಶ್ಲೇಷಿತ. ಹತ್ತಿ, ಉಣ್ಣೆ, ರೇಷ್ಮೆ ಮತ್ತು ಸೆಣಬು ಇವುಗಳು ನೈಸರ್ಗಿಕ ನಾರುಗಳು, ಹಾಗೆಯೆ ನೈಲಾನ್ ಮತ್ತು ಪಾಲಿಎಸ್ಟರ್ ಸಂಶ್ಲೇಷಿತ ನಾರುಗಳಿಗೆ ಉದಾಹರಣೆಗಳು.
. ಒಂದು ಬಟ್ಟೆಯಿಂದ ಆರೆಂಟು ನೂಲುಗಳನ್ನು ಹೊರಗೆಳೆದು ನೂಲಿನ ಒಂದು ತುದಿಯನ್ನು ಇಕ್ಕಳದಿಂದ ಹಿಡಿದು ಇನ್ನೊಂದು ತುದಿಯನ್ನು ಮೇಣದ ಬತ್ತಿಯ ಜ್ವಾಲೆಯ ಮೇಲೆ ತಂದಾಗ ಅವು ಹತ್ತಿಯ ನೂಲುಗಳಾಗಿದ್ದಲ್ಲಿ
ಸುಟ್ಟು ಹೋಗುತ್ತವೆ. ಆದರೆ ಸುರುಟುವುದಿಲ್ಲ ಅಥವಾ ಕರಗುವುದಿಲ್ಲ.
* ಸುಟ್ಟು ಹೋಗುತ್ತಿರುವ ನೂಲಿನ ವಾಸನೆಯು ಸುಟ್ಟು ಹೋಗುತ್ತಿರುವ ಕಾಗದದ ಹಾಳೆಯ ವಾಸನೆಯಂತಿರುತ್ತದೆ.
* ರೇಷ್ಮೆಯ ನಾರು ಸುರುಟಿ ಜ್ವಾಲೆಯಿಂದ ದೂರ ಸರಿಯುತ್ತದೆ. ಇದು ಸುಟ್ಟು ಹೋಗುತ್ತದೆ ಆದರೆ ಕರಗುವುದಿಲ್ಲ. ಇದಕ್ಕೆ ಸುಟ್ಟ ಮಾಂಸದ ವಾಸನೆಯಿರುತ್ತದೆ.
* ಉಣ್ಣೆಯ ಎಳೆ ಸಹ ಸುರುಟುತ್ತದೆ ಮತ್ತು ಸುಟ್ಟು ಹೋಗುತ್ತದೆ, ಆದರೆ ಕರಗುವುದಿಲ್ಲ. ಸುಟ್ಟು ಹೋಗುತ್ತಿರುವ ಕೂದಲಿನ ಬಲವಾದ ವಾಸನೆ ಇದಕ್ಕಿರುತ್ತದೆ.
* ಸಂಶ್ಲೇಷಿತ ಎಳೆಗಳು ಮುದುಡುತ್ತವೆ ಮತ್ತು ಸುಟ್ಟು ಹೋಗುತ್ತವೆ. ಅವುಗಳೂ ಕರಗುತ್ತವೆ ಮತ್ತು ಸುಟ್ಟು ಹೋಗುತ್ತಿರುವ ಪ್ಲಾಸ್ಟಿಕ್ ತರಹದ ವಾಸನೆಯನ್ನು ಕೊಡುತ್ತವೆ.
ಸ್ನೇಹಿತರೇ, ಮೇಲಿನ ವಿವರಣೆಯನ್ನು ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಕಡತದ
ಭಾಷೆ : ಕನ್ನಡ
ಇಲಾಖೆ
: ಶಿಕ್ಷಣ ಇಲಾಖೆ
ರಾಜ್ಯ:
ಕರ್ನಾಟಕ
ಪ್ರಕಟಿಸಿದ
ದಿನಾಂಕ : 05-06-2022
ಫೈಲ್
ಫಾರ್ಮ್ಯಾಟ್ : ಪಿಡಿಎಫ್/ಜೆಪಿಜೆ/ಟೆಕ್ಸ್ಟ್
ಫೈಲ್
ಗಾತ್ರ : 1.5ಎಂ.ಬಿ.
ಪುಟಗಳ
ಸಂಖ್ಯೆ : 4
ಡೌನ್ಲೋಡ್
ಲಿಂಕ್ : ಇದೆ
ವೆಬ್ಸೈಟ್
ಲಿಂಕ್ : ಇಲ್ಲ
ಸ್ಕ್ಯಾನ್
ಮಾಡಿದ ಪ್ರತಿ : ಅಲ್ಲ
ಸಂಪಾದಿಸಬಹುದಾದ
ಪಠ್ಯ : ಇಲ್ಲ
ನಕಲು
ಪಠ್ಯ : ಅಲ್ಲ
ಮುದ್ರಣ
: ಲಭ್ಯವಿದೆ
ಗುಣಮಟ್ಟ
: ಅತ್ಯುತ್ತಮ
ಫೈಲ್
ಗಾತ್ರ ಕಡಿಮೆಯಾಗಿದೆ : ಇಲ್ಲ
ಗುಪ್ತಪದ
: ಇಲ್ಲ
ಪಾಸ್ವರ್ಡ್
ಎನ್ಕ್ರಿಪ್ಟ್ : ಇಲ್ಲ
ಇಮೇಜ್
ಫೈಲ್ ಲಭ್ಯತೆ : ಇದೆ
ಫೈಲ್
ನ ವೆಚ್ಚ/ಮೌಲ್ಯ : ಸಂಪೂರ್ಣ ಉಚಿತ
0 Comments