ನಮಗೆ ಹಾಲನ್ನು ಕೊಡುವ ಕೆಲವು ಸಾಮಾನ್ಯ ಪ್ರಾಣಿಗಳೆಂದರೆ ಹಸು, ಮೇಕೆ ಮತ್ತು ಎಮ್ಮೆ. ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಬೆಣ್ಣೆ, ಕ್ರೀಮ್ (ಕೆನೆ), ಗಿಣ್ಣು ಮತ್ತು ಮೊಸರನ್ನು ಉಪಯೋಗಿಸುವರು.
ಅಕ್ಕಿಯ ಗಂಜಿಯಲ್ಲಿ ಅದ್ದಿ, ಕರಿದ ಕುಂಬಳಕಾಯಿ ಹೂಗಳನ್ನು ನೀವು ಎಂದಾದರು ತಿಂದಿರುವಿರ? ಸಾಸಿವೆ ಸಸ್ಯಗಳ ಬೀಜಗಳಿಂದ ನಮಗೆ ಎಣ್ಣೆ ದೊರೆಯುತ್ತದೆ ಮತ್ತು ಎಲೆಗಳನ್ನು ತರಕಾರಿಯಾಗಿ ಉಪಯೋಗಿಸುತ್ತೇವೆ. ಬಾಳೆಗಿಡದ ಬೇರೆ ಬೇರೆ ಭಾಗಗಳನ್ನು ಆಹಾರವಾಗಿ ಉಪಯೋಗಿಸುತ್ತೇವೆ.
ಒಣಗಿದ ಹೆಸರುಕಾಳು ಅಥವಾ ಕಡ್ಲೆಕಾಳುಗಳನ್ನು ಒಂದು ನೀರಿರುವ ಪಾತ್ರೆಯಲ್ಲಿ ಹಾಕಿ. ಒಂದು ದಿನ ಇಟ್ಟು, ಮರುದಿನ ಪಾತ್ರೆಯಲ್ಲಿರುವ ಎಲ್ಲ ನೀರನ್ನು ಬಸಿದು ಕಾಳುಗಳನ್ನು ತೇವವಾದ ಬಟ್ಟೆಯಿಂದ ಸುತ್ತಿ ಪಾತ್ರೆಯಲ್ಲಿಯೆ ಇಟ್ಟು ಒಂದು ಕಡೆ ಇಟ್ಟಾಗ ಕಾಳುಗಳಿಂದ ಚಿಕ್ಕದಾದ ಬಿಳಿಯ ರಚನೆ ಬೆಳೆದು ಹೊರಬಂದಿರುವುದನ್ನು ಕಾಣಬಹುದು. ಮೊಳಕೆಕಾಳುಗಳನ್ನು ತೊಳೆದು ಅವುಗಳನ್ನು ತಿನ್ನಬಹುದು. ಅವುಗಳನ್ನು ಬೇಯಿಸಲೂಬಹುದು. ಬೇಯಿಸಿದ ಕಾಳುಗಳಿಗೆ ಸ್ವಲ್ಪ ಮಸಾಲೆಯನ್ನು ಹಾಕಿದರೆ, ತಿನ್ನುವುದಕ್ಕೆ ರುಚಿಕರವಾದ ಲಘು ತಿಂಡಿಯಾಗುತ್ತದೆ.
. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಆಹಾರ ಪದ್ಧತಿಯಲ್ಲಿ ಬಹಳ ವೈವಿಧ್ಯವಿದೆ.
. ಪ್ರಾಣಿಗಳು ಮತ್ತು ಸಸ್ಯಗಳು ನಮ್ಮ ಆಹಾರದ ಮುಖ್ಯ ಮೂಲಗಳು.
. ಸಸ್ಯಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಸಸ್ಯಾಹಾರಿಗಳು ಎನ್ನುವರು.
. ಪ್ರಾಣಿಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಮಾಂಸಾಹಾರಿಗಳು ಎನ್ನುವರು.
. ಸಸ್ಯಗಳು ಮತ್ತು ಪ್ರಾಣಿಗಳೆರಡನ್ನೂ
ತಿನ್ನುವ ಪ್ರಾಣಿಗಳನ್ನು ಮಿಶ್ರಾಹಾರಿಗಳು
ಎನ್ನುವರು.
. ನಿಮ್ಮ ಮನೆಯ ಸುತ್ತಮುತ್ತ ಗಾರ್ಡನ್ ಹಲ್ಲಿ ಅಥವಾ ಓತಿಕ್ಯಾತ (garden lizard)ವನ್ನು ನೀವು ನೋಡಿರಬಹುದು . ಒಂದು ಊಟವು ಚಪಾತಿ, ದಾಲ್ ಮತ್ತು ಬದನೆಕಾಯಿ ಪಲ್ಯವನ್ನು ಒಳಗೊಂಡಿರಬಹುದು. ಇನ್ನೊಂದರಲ್ಲಿ ಅನ್ನ, ಸಾಂಬಾರು ಮತ್ತು ಬೆಂಡೆಕಾಯಿ ಪಲ್ಯ ಇರಬಹುದು. ಇನ್ನೂ ಮತ್ತೊಂದರಲ್ಲಿ ಪಡ್ಡು (ಗುಂಡು ಪೊಂಗ್ಲು) ಅಥವಾ ದೋಸೆ, ಮೀನಿನ ಸಾರು ಮತ್ತು ತರಕಾರಿಗಳು ಇರಬಹುದು. ಸಾಮಾನ್ಯವಾಗಿ ನಮ್ಮ ಊಟಗಳಲ್ಲಿ ಯಾವುದಾದರೂ ಒಂದು ರೀತಿಯ ಧಾನ್ಯದಿಂದ ಮಾಡಿದ, ಕನಿಷ್ಟ ಒಂದಾದರೂ ಪದಾರ್ಥ ಇರುತ್ತದೆ.
ಪ್ರೊಟೀನ್ಗಳು, ಕೊಬ್ಬು, ವಿಟಮಿನ್ಗಳು ಮತ್ತು ಖನಿಜಗಳು ನಮ್ಮ ಆಹಾರದಲ್ಲಿರುವ ಮುಖ್ಯ ಪೋಷಕಾಂಶಗಳು. ಇದರ ಜೊತೆಗೆ ನಮ್ಮ ದೇಹಕ್ಕೆ ಅವಶ್ಯಕವಾದ ನಾರು ಪದಾರ್ಥ ಮತ್ತು ನೀರನ್ನು ಸಹ ಆಹಾರ ಒಳಗೊಂಡಿರುತ್ತದೆ. ಇತರ ಪೋಷಕಾಂಶಗಳನ್ನು ಗುರುತಿಸುವ ಪರೀಕ್ಷೆಗಳಿಗೆ ಹೋಲಿಸಿದರೆ ಕಾರ್ಬೊಹೈಡ್ರೇಟ್ಗಳು, ಪ್ರೊಟೀನ್ಗಳು ಮತ್ತು ಕೊಬ್ಬುಗಳ ಇರುವಿಕೆಯನ್ನು ತೋರಿಸುವ ಪರೀಕ್ಷೆಗಳು ಬಹಳ ಸರಳ. ಈ ಪರೀಕ್ಷೆಗಳನ್ನು ಮಾಡಲು ಕಾಸ್ಟಿಕ್ಸೋಡ, ಕಾಪರ್ (ತಾಮ್ರ) ಸಲ್ಫೇಟ್ ಮತ್ತು ಅಯೋಡಿನ್ ದ್ರಾವಣಗಳು ಬೇಕಾಗುತ್ತವೆೆ. ನಮ್ಮ ಆಹಾರದಲ್ಲಿರುವ ಕಾರ್ಬೊಹೈಡ್ರೇಟ್ಗಳು ಮುಖ್ಯವಾಗಿ ಪಿಷ್ಟ ಮತ್ತು ಶರ್ಕರಗಳ ರೂಪದಲ್ಲಿ ಕಂಡುಬರುತ್ತವೆ.
ಸ್ವಲ್ಪ ಪ್ರಮಾಣದ ಬೇಯಿಸದ ಘಟಕಾಂಶ ಅಥವಾ ಆಹಾರ ಪದಾರ್ಥವನ್ನು ತೆಗೆದುಕೊಂಡು 2
- 3 ಹನಿ ದುರ್ಬಲ ಅಯೋಡಿನ್ ದ್ರಾವಣವನ್ನು ಅದರ ಮೇಲೆ ಹಾಕಿದಾಗ ಆಹಾರ ಪದಾರ್ಥದ ಬಣ್ಣ ಕಪ್ಪು ಮಿಶ್ರಿತ ನೀಲಿ ಬಣ್ಣಕ್ಕೆ ತಿರುಗಿದರೆ ಅದು - ಪಿಷ್ಟದ ಇರುವಿಕೆಯನ್ನು ಸೂಚಿಸುತ್ತದೆ.
ಸ್ವಲ್ಪ ಪ್ರಮಾಣದಲ್ಲಿ ಆಹಾರ ಪದಾರ್ಥವನ್ನು ತೆಗೆದುಕೊಳ್ಳಿ. ಅದನ್ನು ಒಂದು ಸಣ್ಣ ಹಾಳೆಯಲ್ಲಿ ಸುತ್ತಿ ಮತ್ತು ಜಜ್ಜಿ. ಹಾಳೆ ಹರಿಯದ ಹಾಗೆ ಎಚ್ಚರವಹಿಸಿ. ಹಾಳೆಯನ್ನು ನೇರ ಮಾಡಿ ಎಚ್ಚರಿಕೆಯಿಂದ ವೀಕ್ಷಿಸಿ. ಹಾಳೆಯ ಮೇಲಿನ ಎಣ್ಣೆಯ ಕಲೆ ಆಹಾರ ಪದಾರ್ಥದಲ್ಲಿರುವ ಕೊಬ್ಬಿನಂಶವನ್ನು
ತೋರಿಸುತ್ತದೆ. ಕೆಲವು ಸಮಯದಲ್ಲಿ ಆಹಾರ ಪದಾರ್ಥದಲ್ಲಿ ಸ್ವಲ್ಪ ನೀರಿನಂಶ ಇರಬಹುದು. ಆದ್ದರಿಂದ ಹಾಳೆಯ ಮಡಿಕೆಯಲ್ಲಿರುವ ವಸ್ತುವನ್ನು ಉಜ್ಜಿದ ನಂತರ ಸ್ವಲ್ಪ ಸಮಯ ಹಾಳೆಯನ್ನು ಒಣಗಲು ಬಿಡಿ. ಆಹಾರದಲ್ಲಿದ್ದ ನೀರಿನಂಶ ಬಂದಿದ್ದರೆ ಸ್ವಲ್ಪ ಸಮಯದ ನಂತರ ಅದು ಒಣಗುತ್ತದೆ. ಇದಾದ ನಂತರ ಹಾಳೆಯಲ್ಲಿ ಯಾವುದೇ ಎಣ್ಣೆಯ ಕಲೆಯು ಇಲ್ಲವೆಂದಾದರೆ ಆಹಾರ ಪದಾರ್ಥದಲ್ಲಿ ಯಾವುದೇ ಕೊಬ್ಬಿನಂಶ ಇರುವುದಿಲ್ಲ.
ನಮ್ಮ ದೇಹಕ್ಕೆ ಕಾರ್ಬೊಹೈಡ್ರೇಟ್ಗಳು ಮುಖ್ಯವಾಗಿ ಶಕ್ತಿಯನ್ನು ಒದಗಿಸುತ್ತವೆ. ವಾಸ್ತವವಾಗಿ ನಿರ್ದಿಷ್ಟ ಮೊತ್ತದ ಕಾರ್ಬೊಹೈಡ್ರೇಟ್ಗಳಿಗೆ ಹೋಲಿಸಿದರೆ, ಅದೇ ಮೊತ್ತದ ಕೊಬ್ಬು ಅತಿ ಹೆಚ್ಚು ಶಕ್ತಿಯನ್ನು ಕೊಡುತ್ತದೆ. ಕಾರ್ಬೊಹೈಡ್ರೇಟ್ಗಳು ಮತ್ತು ಕೊಬ್ಬಿನಂಶವನ್ನು
ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಶಕ್ತಿಯನ್ನು ಕೊಡುವ ಆಹಾರ ಪದಾರ್ಥಗಳು (energy giving foods) ಎಂದು ಸಹ ಕರೆಯುತ್ತಾರೆ. ನಮ್ಮ ದೇಹದ ಬೆಳವಣಿಗೆ ಮತ್ತು ದುರಸ್ತಿಗೆ ಪ್ರೊಟೀನ್ಗಳು ಅವಶ್ಯಕ. ಅನೇಕ ಸಲ, ಪ್ರೊಟೀನ್ಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ದೇಹ ನಿರ್ಮಾಣಕಾರಕ ಆಹಾರ ಪದಾರ್ಥಗಳು (body
building foods) ಎಂದು ಕರೆಯುತ್ತೇವೆ.
ನಮ್ಮ ಕಣ್ಣುಗಳು, ಮೂಳೆಗಳು, ಹಲ್ಲುಗಳು ಮತ್ತು ದವಡೆಗಳನ್ನು ಆರೋಗ್ಯವಾಗಿಡಲು ವಿಟಮಿನ್ಗಳು ಸಹಾಯ ಮಾಡುತ್ತವೆ. ಕೆಲವು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ ಮತ್ತು ಕೆ. ವಿಟಮಿನ್ ಬಿ - ಕಾಂಪ್ಲೆಕ್ಸ್ ಎನ್ನುವ ಮತ್ತೊಂದು ಗುಂಪಿನ ವಿಟಮಿನ್ಗಳು ಸಹ ಇವೆ. ನಮ್ಮ ಕಣ್ಣುಗಳು ಮತ್ತು ಚರ್ಮವನ್ನು ವಿಟಮಿನ್ ಎ ಆರೋಗ್ಯವಾಗಿಡುತ್ತದೆ. ಅನೇಕ ರೋಗಗಳ ವಿರುದ್ಧ ಹೋರಾಡಲು ವಿಟಮಿನ್ ಸಿ ಸಹಾಯ ಮಾಡುತ್ತದೆ. ಹಲ್ಲುಗಳು ಮತ್ತು ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಮ್ ಬಳಸಲು ನಮ್ಮ ದೇಹಕ್ಕೆ ವಿಟಮಿನ್ ಡಿ ಸಹಾಯಕ. ಸೂರ್ಯನ ಬೆಳಕಿನಲ್ಲಿ ನಮ್ಮ ದೇಹವು ಸಹ ವಿಟಮಿನ್ ಡಿ ಯನ್ನು ತಯಾರಿಸುತ್ತದೆ. ಇಂದಿನ ದಿನಗಳಲ್ಲಿ ಸೂರ್ಯನ ಬೆಳಕನ್ನು ಕಡಿಮೆ ಪ್ರಮಾಣದಲ್ಲಿ ಪಡೆಯುವುದರಿಂದ ಅನೇಕ ಜನರಿಗೆ ವಿಟಮಿನ್ ಡಿ ಕೊರತೆ ಉಂಟಾಗುತ್ತಿದೆ.
ಅಕ್ಕಿಯಲ್ಲಿ ಕಾರ್ಬೊಹೈಡ್ರೇಟ್ಗಳು ಇತರ ಪೋಷಕಾಂಶಗಳಿಗಿಂತ ಹೆಚ್ಚಾಗಿರುತ್ತವೆ. ಹಾಗಾಗಿ ಅಕ್ಕಿಯನ್ನು ಕಾರ್ಬೊಹೈಡ್ರೇಟ್ ಸಮೃದ್ಧಿಯಾಗಿರುವ ಆಹಾರದ ಆಕರ ಎಂದು ನಾವು ಹೇಳುತ್ತೇವೆ. ಈ ಪೋಷಕಾಂಶಗಳಲ್ಲದೆ, ನಮ್ಮ ದೇಹಕ್ಕೆ ನೀರು ಮತ್ತು ನಾರು ಪದಾರ್ಥಗಳು (dietary fibres or roughage) ಅವಶ್ಯಕತೆ ಇದೆ. ಮುಖ್ಯವಾಗಿ ಸಸ್ಯ ಉತ್ಪನ್ನಗಳಿಂದ ನಾರು ಪದಾರ್ಥ ದೊರೆಯುತ್ತದೆ. ಇಡೀ ಧಾನ್ಯಗಳು ಮತ್ತು ಬೇಳೆ ಕಾಳುಗಳು, ಆಲೂಗಡ್ಡೆ, ತಾಜಾ ಹಣ್ಣುಗಳು ಮತ್ತು ತರಕಾರಿಗಳು ನಾರು ಪದಾರ್ಥದ ಪ್ರಧಾನ ಆಕರಗಳು. ನಮ್ಮ ದೇಹಕ್ಕೆ ಯಾವುದೇ ಪೋಷಕವನ್ನು ನಾರು ಪದಾರ್ಥ ಒದಗಿಸುವುದಿಲ್ಲ. ಆದರೆ ಇದು ಆಹಾರದ ಅಗತ್ಯ ಘಟಕ ಮತ್ತು ಇದು ಆಹಾರದ ಪ್ರಮಾಣವನ್ನು ಹೆಚ್ಚಿಸುತ್ತದೆ. ಒಂದು ನಿಂಬೆಹಣ್ಣು ಅಥವಾ ಟೊಮ್ಯಾಟೊ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಹೀಗೆ ಮಾಡುವಾಗ ನಿಮ್ಮ ಕೈಗಳು ಒದ್ದೆಯಾಗುತ್ತವೆಯೆ? ಅನೇಕ ಆಹಾರ ವಸ್ತುಗಳು ತಮ್ಮಲ್ಲಿಯೇ ನೀರನ್ನು ಹೊಂದಿರುವುದನ್ನು ನಾವು ನೋಡುತ್ತೇವೆ.
ಬೇಳೆಕಾಳುಗಳು, ಕಡ್ಲೆಕಾಯಿ ಬೀಜ, ಸೋಯಾಬೀನ್, ಮೊಳಕೆ ಕಾಳುಗಳು (ಹೆಸರು ಕಾಳು ಮತ್ತು ಕಡ್ಲೆಕಾಳು), ಹುದುಗಿದ ಆಹಾರ ಪದಾರ್ಥಗಳು (ದಕ್ಷಿಣ ಭಾರತೀಯ ಆಹಾರವಾದ ಇಡ್ಲಿ), ಸಂಯೋಜಿತ ಹಿಟ್ಟುಗಳು (ಕಡ್ಲೆಬೇಳೆ ಹಿಟ್ಟು, ಗೋಧಿ ಹಿಟ್ಟಿನ ರೊಟ್ಟಿ, ಬೇಳೆಕಾಳುಗಳು ಮತ್ತು ಧಾನ್ಯಗಳ ಹಿಟ್ಟಿನಿಂದ ಮಾಡಿದ ಪರೋಟ), ಬಾಳೆ ಹಣ್ಣು, ಪಾಲಕ್ ಸೊಪ್ಪು, ಕಡ್ಲೆಬೇಳೆ, ಬೆಲ್ಲ, ಲಭ್ಯವಿರುವ ತರಕಾರಿಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳು ಅನೇಕ ಪೋಷಕಗಳನ್ನು ಒದಗಿಸುತ್ತವೆ. ಆದ್ದರಿಂದ ಯಾರೇ ಆದರು ದುಬಾರಿಯಲ್ಲದ ಆಹಾರ ವಸ್ತುಗಳಿಲ್ಲದೆ ಸಂತುಲಿತ ಆಹಾರ ಸೇವಿಸಬಹುದು.
Title: Constituence of food
File language: Kannada
Which Department:
State: Karnataka
Published Date: -06-2022
File format : jpg /pdf/text
File size : mb
Number of Pages :
Availability for download: Yes
Availability of websites link: No
Scanned Copy : No
Editable Text : No
Copy text : No
Print enable : Yes
Quality : High
File size reduced: No
Password Protected: No
Password Encrypted : No
Image File Available : Yes
Cost : Free of cost
0 Comments