⚫ Introduction to the History of India & Citations to History


ಭಾರತದ ಇತಿಹಾಸ ಪರಿಚಯ & ಇತಿಹಾಸಕ್ಕೆ ಆಧಾರಗಳು

* ಇತಿಹಾಸವನ್ನು ಹೇಗೆ ರಚಿಸಬೇಕು ಎಂಬುದನ್ನ ಜಗತ್ತಿಗೆ ಮೊಟ್ಟಮೊದಲು ತೋರಿಸಿಕೊಟ್ಟವರು ಗ್ರೀಕ್ ದೇಶದ ´ಹೆರೋಡೋಟಸ್. ಆದ್ದರಿಂದ ಅವರನ್ನು ‘ಇತಿಹಾಸದ ಪಿತಾಮಹ’ ಎಂದು ಕರೆಯಲಾಗುತ್ತದೆ.

 ಆಧಾರ ಎಂದರೇನು? :

ಪ್ರಾಚೀನ ಕಾಲದಿಂದಲೂ ಮನುಷ್ಯನು ತಮ್ಮ ಬದುಕನ್ನು ಕಟ್ಟಿಕೊಳ್ಳಲು ವಿವಿಧ ಬಗೆಯ ಅನುಕೂಲಗಳನ್ನು ಮಾಡಿಕೊಂಡಿದ್ದರು. ಮಾನವ ಸಮಾಜಗಳು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದ ವಸ್ತುಗಳು ಇಂದಿಗೂ ಉಳಿದುಕೊಂಡಿದ್ದರೆ ಅವುಗಳನ್ನು ಆಕರಗಳೆಂದು ಇತಿಹಾಸಕಾರರು ಪರಿಗಣಿಸುತ್ತಾರೆ. ಉದಾ:ಹಿಂದಿನವರು ಬಳಸಿ ಬಿಟ್ಟುಹೋಗಿರುವ ವ್ಯವಸಾಯದ ಪರಿಕರಗಳು, ದೇವಾಲಯಗಳು ಮತ್ತು ಇತರ ಧಾರ್ಮಿಕ ಕಟ್ಟಡಗಳು, ಕೋಟೆಗಳು, ಶಾಸನಗಳು, ನಾಣ್ಯಗಳು, ಆಯುಧಗಳು ಮುಂತಾದವುಗಳನ್ನು ಇತಿಹಾಸದ ಆಕರಗಳೆಂದು ಪರಿಗಣಿಸಿ ಇತಿಹಾಸವನ್ನು ಬರೆಯಲು ಉಪಯೋಗಿಸಿಕೊಳ್ಳಲಾಗುತ್ತದೆ.

 

ಭಾರತದ ಇತಿಹಾಸದ ಮೂಲಾಧಾರಗಳು :

ಇತಿಹಾಸಕಾರರು ಲಭ್ಯ ಮೂಲಾಧಾರಗಳ ಸಹಾಯದಿಂದ ಗತವನ್ನು ಪುನರ್‌ರಚಿಸುವ ಪ್ರಯತ್ನ ಮಾಡುತ್ತಾರೆ. ಆದ್ದರಿಂದ ‘ಮೂಲಾಧಾರಗಳಿಲ್ಲದೇ ಇತಿಹಾಸವಿಲ್ಲ’. ಮೂಲಾಧಾರಗಳ ಅನ್ವೇಷಣೆ, ಸಂಗ್ರಹ ಮತ್ತು ಅಥೈಸುವಿಕೆಯು ಇತಿಹಾಸಕಾರರ ಮುಂದಿರುವ ದೊಡ್ಡ ಸವಾಲುಗಳಾಗಿವೆ. ಮೂಲಾಧಾರಗಳಿಲ್ಲದೆ ಹೋದಲ್ಲಿ ಐತಿಹಾಸಿಕ ಘಟನೆಗಳು ಬರೀ ಊಹೆಗಳಾಗುತ್ತವೆ/ಕಾಲ್ಪನಿಕ ಕಥೆಗಳಾಗುತ್ತವೆ. ಭಾರತ ಮತ್ತು ಕರ್ನಾ ಟಕ ಇತಿಹಾಸಗಳ ಅಧ್ಯಯನಕ್ಕೆ ವಿವಿಧ ಮೂಲಾಧಾರಗಳು ಲಭ್ಯವಿವೆ. ಆದಾಗ್ಯೂ ಭಾರತೀಯರಲ್ಲಿ ಐತಿಹಾಸಿಕ ಪ್ರಜ್ಞೆಯ ಕೊರತೆ ಇರುವುದು ಸ್ವೀಕೃತ ಸತ್ಯವಾಗಿದೆ. ಭಾರತದ ಪ್ರಾಚೀನ ಭಾಷೆಗಳಾದ ಸಂಸ್ಕೃತ, ಪಾಲಿ, ಪ್ರಾಕೃತ ಮತ್ತು ಅನೇಕ ಪ್ರಾದೇಶಿಕ ಭಾಷೆಗಳ ಮತ್ತು ಖರೋಷ್ಠಿ ಹಾಗೂ ಬ್ರಾಹ್ಮಿ ಮುಂತಾದ ಲಿಪಿಗಳ ಪರಿಪೂರ್ಣ ಜ್ಞಾನವಿಲ್ಲದೆ ಭಾರತೀಯ ಇತಿಹಾಸವನ್ನು ರಚಿಸುವುದು ಇತಿಹಾಸಕಾರರಿಗೆ ತುಂಬಾ ಕಠಿಣವಾಗುತ್ತದೆ. ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಆಳವಾದ ಜ್ಞಾನವೂ ಅವಶ್ಯಕವಾಗಿರುತ್ತದೆ. ಇತಿಹಾಸದ ರಚನೆಗೆ ಲಭ್ಯ ಮೂಲಾಧಾರಗಳನ್ನು ಅವಲಂಬಿಸಿ ಇತಿಹಾಸವನ್ನು ಇತಿಹಾಸ ಪೂರ್ವಕಾಲ ಮತ್ತು ಇತಿಹಾಸ ಕಾಲವೆಂದು ವರ್ಗೀಕರಿಸುತ್ತೇವೆ. ಲಿಖಿತ ಮೂಲಾಧಾರಗಳು ಲಭ್ಯವಿಲ್ಲದ ಕಾಲವನ್ನು ಇತಿಹಾಸ ಪೂರ್ವಕಾಲವೆಂದೂ ಮತ್ತು ಲಿಖಿತ ಮೂಲಾಧಾರಗಳು ಲಭ್ಯವಿರುವ ಕಾಲವನ್ನು ಇತಿಹಾಸ ಕಾಲವೆಂದೂ ಗುರುತಿಸುತ್ತೇವೆ.

* ಇತಿಹಾಸ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳೇ ಆಧಾರ. ಈ ಆಧಾರಗಳನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು. 1) ಸಾಹಿತ್ಯಿಕ ಆಧಾರಗಳು 2) ಪ್ರಾಕ್ತನ ಆಧಾರಗಳು

 

1) ಸಾಹಿತ್ಯಕ ಆಧಾರಗಳು :

ಇತಿಹಾಸದ ಹಿನ್ನಲೆಯಲ್ಲಿ ಸಾಹಿತ್ಯ ಎಂದರೆ ಬರವಣಿಗೆ ಅಥವಾ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಂಗತಿಗಳು. ಇವುಗಳಲ್ಲಿ 2 ವಿಧ

ಎ) ಲಿಖಿತ ಸಾಹಿತ್ಯ :

ಇದನ್ನು ದೇಶೀಯ ಸಾಹಿತ್ಯ ಮತ್ತು ವಿದೇಶಿಯ ಸಾಹಿತ್ಯಗಳೆಂದು ವಿಂಗಡಿಸಲಾಗುವುದು.

ಬಿ) ಮೌಖಿಕ ಸಾಹಿತ್ಯ:

ಜನಪದ ಗೀತೆ, ಕಥೆ, ಲಾವಣಿ, ಐತಿಹ್ಯ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಮೌಖಿಕ ಸಾಹಿತ್ಯವು ಲಿಖಿತ ಸಾಹಿತ್ಯ ರಚಿಸುವವರು ಅಕ್ಷರಸ್ಥರಾದರೆ, ಮೌಖಿಕ ಸಾಹಿತ್ಯ ರಚಿಸುವವರು ಅನಕ್ಷರಸ್ಥರಾಗಿರುತ್ತಾರೆ.

 

1.ಲಿಖಿತ ಸಾಹಿತ್ಯ:

ಮರದ ತೊಗಟೆ, ತಾಳೆಎಲೆ& ಕಾಗದದ ಮೇಲೆ ಬರೆದ ಹಳೆಯಕಾಲದ ದಾಖಲೆ/ಗ್ರಂಥಗಳು.

 ಎ) ದೇಶೀಯ ಸಾಹಿತ್ಯ :

ಭಾರತೀಯರಿಂದಲೇ ದೇಶೀಯ ಭಾಷೆಗಳಲ್ಲಿ ರಚನೆಯಾಗಿರುವ ಸಾಹಿತ್ಯವನ್ನು ದೇಶೀಯ ಸಾಹಿತ್ಯವೆಂದು ಕರೆಯಲಾಗುವುದು.ದೇಶೀಯ ಲೇಖಕರು, ಬರಹಗಾರರು ಬರೆದ ಬರವಣಿಗೆ ಅಥವಾ ಗ್ರಂಥಗಳನ್ನು ದೇಶೀಯ ಸಾಹಿತ್ಯವೆಂದು ಕರೆಯುತ್ತೇವೆ. ಇದು ಧಾರ್ಮಿಕ ಹಾಗೂ ಲೌಕಿಕ ಸಾಹಿತ್ಯಗಳೆರಡನ್ನೂ ಒಳಗೊಂಡಿದೆ. ಇವು ವಿವಿಧ ಭಾರತೀಯ ಭಾಷೆಗಳಲ್ಲಿ ಕಂಡು ಬರುತ್ತವೆ.ವೈದಿಕ ಋಷಿಗಳು, ಜೈನ - ಬೌದ್ಧ ಸನ್ಯಾಸಿಗಳು ರಚಿಸಿದ ಧಾರ್ಮಿಕ ಸಾಹಿತ್ಯವು ಇತಿಹಾಸದ ಪ್ರಮುಖ ಮೂಲಾಧಾರಗಳಲ್ಲಿ ಒಂದಾಗಿದೆ.

 ದೇಶೀ ಸಾಹಿತ್ಯ ಕೃತಿಗಳು:

ವೈದಿಕ ಅಥವಾ ಬ್ರಾಹ್ಮಣ ಸಾಹಿತ್ಯ - ವೇದಗಳು, ಬ್ರಾಹ್ಮಣಕಗಳು, ಅರಣ್ಯಕಗಳು, ಪುರಾಣಗಳು, ಮಹಾಕಾವ್ಯಗಳು,

ಬೌದ್ಧ ತ್ರಿಪಿಟಕಗಳು - ಮಹಾಜನಪದಗಳು, ನಗರಗಳು & ಮೌರ್ಯ ರಾಜರ ಬಗ್ಗೆ ಮಾಹಿತಿ

ಜೈನ ಧರ್ಮದ - ಅಂಗ ಮತ್ತು ಉಪಾಂಗಗಳು

ಕೌಟಿಲ್ಯನ - ಅರ್ಥಶಾಸ್ತ್ರ

ಹಾಲ ರಾಜನ - ಗಾಥಾಸಪ್ತಶತಿ

ವಿಶಾಖದತ್ತನ - ಮುದ್ರಾರಾಕ್ಷಸ

ಕಲ್ಹಣನ - ರಾಜತರಂಗಿಣಿ

ಬಾಣಭಟ್ಟನ - ಹರ್ಷಚರಿತ

ಚಾಂದ್ ಬರ್ದಾಯಿಯ - ಪೃಥ್ವಿರಾಜ ರಾಸೋ

ಪಂಪನ - ವಿಕ್ರಮಾರ್ಜುನ ವಿಜಯ

ಅಶ್ವಘೋಷ - ಬುದ್ಧಚರಿತ

ಬಿಲ್ಹಣನ - ವಿಕ್ರಮಾಂಕದೇವಚರಿತ

ಕಾಳಿದಾಸ - ರಘುವಶ ಮತ್ತು ಮಾಳವಿಕಾಗ್ನಿಮಿತ್ರ

ಪಾಣಿನಿಯ - ಮಹಾಭಾಷ್ಯ

ಪತಂಜಲಿಯ - ಅಷ್ಟಾಂಗಯೋಗ

ಆರ್ಯಭಟನ - ಸೂರ್ಯಸಿದ್ಧಾಂತ & ರೋಮಕಸಿದ್ಧಾಂತ

ಚರಕನ - ಚರಕಸಂಹಿತೆ

ಸುಶ್ರುತನ - ಸುಶ್ರುತಸಂಹಿತೆ

 

ಬಿ) ವಿದೇಶೀಯ ಸಾಹಿತ್ಯ :

ವಿದೇಶಗಳಿಂದ ಭಾರತಕ್ಕೆ ಬಂದ ಪ್ರವಾಸಿಗರು, ರಾಯಭಾರಿಗಳು, ವ್ಯಾಪಾರಿಗಳು, ಯಾತ್ರಾರ್ಥಿಗಳು, ತತ್ವಜ್ಞಾನಿಗಳು, ಅಧಿಕಾರಿಗಳು, ಮಿಷನರಿಗಳು ಮೊದಲಾದವರು ಇಲ್ಲಿನ ತಮ್ಮ ಅನುಭವಗಳನ್ನು ಬರವಣಿಗೆಗಳ ರೂಪದಲ್ಲಿ ದಾಖಲಿಸಿದ್ದಾರೆ. ಅವುಗಳನ್ನು ವಿದೇಶೀಯ ಸಾಹಿತ್ಯವೆಂದು ಪರಿಗಣಿಸಲಾಗುವುದು.

ಗ್ರೀಕ್ ರಾಯಭಾರಿ ಮೆಗಸ್ತನೀಸನ-ಇಂಡಿಕಾ-ಮೌರ್ಯರ ಕಾಲದ ದಕ್ಷಿಣ ಮತ್ತು ಉತ್ತರ ಭಾರತದ ಬಗ್ಗೆ ಅಮೂಲ್ಯ ಮಾಹಿತಿ ನೀಡುತ್ತದೆ.

ಫಾಹಿಯಾನನ(ಸಾ.ಶ.5ನೇ ಶತಮಾನ) - ಘೋ-ಕೋ-ಕಿ-ಭಾರತದ ಅನೇಕ ನಗರಗಳ ಬಗ್ಗೆ &ಅಶೋಕನ ಅರಮನೆಯ ಬಗ್ಗೆ ಕಣ್ಣಿಗೆ ಕಟ್ಟುವಂತಹ ವಿವರಣೆ ಹಾಗೂ ಗುಪ್ತರ ಆಡಳಿತದ ಬಗ್ಗೆಮಾಹಿತಿ

ಹ್ಯೂಯೆನ್‌ತ್ಸಾಂಗ(ಸಾ.ಶ.7ನೇಶತಮಾನ) - 18 ವರ್ಷಗಳ ಕಾಲ ಬಾರತದಲ್ಲಿ ವ್ಯಾಪಕ ಪ್ರವಾಸ

ಸಿ-ಯು ಕಿ - ಹರ್ಷವರ್ಧನ & ಇಮ್ಮಡಿ ಪುಲಿಕೇಶಿ ಕಾಲದ ಧರ್ಮ, ಆಡಳಿತ, ರಾಜಕೀಯದ ಬಗ್ಗೆ

ಗ್ರೀಕ್ ಇತಿಹಾಸಕಾರ  ಟಾಲೆಮಿಯ - ಜಿಯೋಗ್ರಾಪಿ  -ಪ್ರಾಚೀನ ಭಾರತದ ವಾಣಿಜ್ಯ ಸಂಬಂಧಗಳ ವಿವರ

ಬರಾನಿಯ - ತಾರೀಖ್-ಎ-ಫಿರೋಜ್ ಷಾಹಿ

ಫರಿಶ್ತಾನ - ತಾರೀಖ್-ಎ-ಫರಿಶ್ತಾ

ಬಾಬರನ - ತುಜ್-ಕಿ-ಬಾಬರಿ

ಅನಾಮಿಕ ಗ್ರೀಕ್ ಲೇಖಕನ - ‘ದಿ ಪೆರಿಪ್ಲಸ್ ಆಫ್ ಎರಿತ್ರಿಯನ್ ಸೀ'-ಭಾರತದ ಕಡಲು ತೀರದ ನಗರಗಳು, ರಾಜರು & ಉತ್ಪಾದನೆಗಳನ್ನು ಉಲ್ಲೇಖಿಸುತ್ತದೆ.

ರೋಮನ್ ಇತಿಹಾಸಕಾರಪ್ಲಿನಿಯ - ನ್ಯಾಚುರಲ್ ಹಿಸ್ಟೋರಿಯಾ-ಭಾರತ-ರೋಮ್‌ಗಳ ಸಂಬಂಧ & ಅಂದಿನ ಭಾರತದ ರಾಜಕೀಯ ಸ್ಥಿತಿಯ ಕುರಿತು.

ಇತ್ಸಿಂಗ್‌ನ(ಸಾ.ಶ.7ನೇ ಶತಮಾನದ ಕೊನೆಯ ದಶಕದಲ್ಲಿ ಭಾರತಕ್ಕೆ ಭೇಟಿ) - ನಗರಗಳಾದ ರಾಜಗೃಹ, ಕಾಶಿ ಮತ್ತು ನಳಂದ ಕುರಿತು ಮಾಹಿತಿ

ಫಿರದೋಷಿಯ - ಶಹನಾಮಾ

ಬಾಬರ್‌ನ - ಬಾಬರ್‌ನಾಮಾ

ಜಹಂಗೀರನ - ಜಹಂಗೀರ್‌ನಾಮಾ

ಅಬುಲ್ ಫಜಲ್‌ನ - ಅಕ್ಬರ್ ನಾಮಾ

ಅರಬ್ ಪ್ರವಾಸಿಗರಾದ ಸುಲೈಮಾನ್, ಆಲ್ಬರುನಿ&ಇಬ್ನಬತೂತರು - ಭಾರತದ ಇತಿಹಾಸದ ಬಗ್ಗೆ ದಾಖಲೆ ಬಿಟ್ಟು ಹೋಗಿದ್ದಾರೆ.

ಇಟಲಿಯ ನಿಕೋಲೋ ಕಾಂಟಿ, ಪರ್ಷಿಯಾದ ಅಬ್ದುಲ್ ರಜಾಕ್, ಪೋರ್ಚುಗಲ್‌ನ ಬರ‍್ಬೋಸಾ ಮತ್ತು ಡೋಮಿಂಗೋ ಪೇಸ್, ರಷ್ಯಾದ ನಿಕಿಟಿನ್ ಮುಂತಾದವರು-ವಿಜಯನಗರ ಮತ್ತು ಬಹಮನಿಗಳ ಇತಿಹಾಸದ ಬಗ್ಗೆ.

ಮುಂದುವರೆಯುವುದು…..

Post a Comment

0 Comments