⚫ Kannada Grammer - ಕನ್ನಡ ವ್ಯಾಕರಣ ಭಾಗ-1


ವರ್ಣಮಾಲೆ

ಮಾನವ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ಆಡಿದ, ಆಡಬೇಕಾದ ಮಾತುಗಳನ್ನು ನಿರ್ದಿಷ್ಟ ಲಿಪಿಯ (ಲಿಖಿತ) ರೂಪಕ್ಕಿಳಿಸುವುದೇ ಬರವಣಿಗೆ. ಪದ ಮತ್ತು ಪದಗಳ ಸಂಬAಧವನ್ನು ಖಚಿತವಾಗಿ ತಿಳಿಸುವುದೇ ವ್ಯಾಕರಣಶಾಸ್ತç. ಆದ್ದರಿಂದ ಭಾಷೆಯನ್ನು ಕಲಿಯುವವರು ಆ ಭಾಷೆಯ ವ್ಯಾಕರಣವನ್ನು ಅರಿಯುವುದು ಉತ್ತಮ. ಕ್ರಿಯಾತ್ಮಕ ವ್ಯಾಕರಣದ ಕಲಿಕೆಯಿಂದ ಭಾಷೆಯನ್ನು ಸ್ಪಷ್ಟ ಹಾಗೂ ನಿಖರವಾಗಿ ಬಳಸಲು ಸಾಧ್ಯ.

ವರ್ಣಮಾಲೆಯಲ್ಲಿರುವ ಅಕ್ಷರಗಳನ್ನು ಹೀಗೆ ಗುರುತಿಸಬಹುದು.

ಒಟ್ಟು ವರ್ಣಮಾಲೆ – 49 ಇದರಲ್ಲಿ

ಸ್ವರಗಳು - 13,

ವ್ಯಂಜನಗಳು - 34,

ಯೋಗವಾಹಗಳು - 2

ಹ್ರಸ್ವಸ್ವರಗಳು  - 6

ದೀರ್ಘಸ್ವರಗಳು - 7

ವರ್ಗೀಯ ವ್ಯಂಜನಗಳು - 25

ಅವರ್ಗೀಯ ವ್ಯಂಜನಗಳು  - 9

ಅನುಸ್ವಾರ  -  1

ವಿಸರ್ಗ - 1

ಹೀಗೆ ಒಟ್ಟು ಅಕ್ಷರಗಳು - 49

* ಕನ್ನಡದಲ್ಲಿ ಒಟ್ಟು 49 ಅಕ್ಷರಗಳಿವೆ. ಇವುಗಳನ್ನು ವರ್ಣಗಳೆಂದು ಕರೆಯುತ್ತಾರೆ. ಈ ಅಕ್ಷರಗಳ ಕ್ರಮಬದ್ಧ ಜೋಡಣೆಗೆ ‘ವರ್ಣಮಾಲೆ’ ಅಥವಾ ‘ಅಕ್ಷರಮಾಲೆ’ ಎಂದು ಹೆಸರು.

* ವರ್ಣಮಾಲೆಯಲ್ಲಿ 3 ವಿಧಗಳು: ಅವು

ಅ) ಸ್ವರಾಕ್ಷರಗಳು ಆ) ವ್ಯಂಜನಾಕ್ಷರಗಳು ಇ) ಯೋಗವಾಹಗಳು

ಅ) ಸ್ವರಾಕ್ಷರಗಳು: ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು ಸ್ವರಾಕ್ಷರಗಳು=ಒಟ್ಟು ಸ್ವರಾಕ್ಷರಗಳು 13.

ಸ್ವರಾಕ್ಷರಗಳಲ್ಲಿ ಎರಡು ವಿಧ. : 1) ಹ್ರಸ್ವಸ್ವರಗಳು 2) ದೀರ್ಘಸ್ವರಗಳು

1) ಹ್ರಸ್ವಸ್ವರ  -  ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ (ಅ, ಇ, ಉ, ಋ, ಎ, ಒ.) ಅಕ್ಷರಗಳು ಹ್ರಸ್ವಸ್ವರಗಳು=6

2) ದೀರ್ಘಸ್ವರ  -  ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ (ಆ, ಈ, ಊ, ಏ, ಐ, ಓ, ಔ) ಅಕ್ಷರಗಳು ದೀರ್ಘಸ್ವರಗಳು=7


 ಆ)  ವ್ಯಂಜನಾಕ್ಷರಗಳು: ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳು ವ್ಯಂಜನಾಕ್ಷರಗಳು.

(ಉದಾ : ಕ್ + ಅ = ಕ ; ಚ್ + ಅ = ಚ) ಒಟ್ಟು ವ್ಯಂಜನಾಕ್ಷರಗಳು = 34

ವ್ಯಂಜನಾಕ್ಷರಗಳಲ್ಲಿ 2 ವಿಧ :

1) ವರ್ಗೀಯ ವ್ಯಂಜನಗಳು=25

2) ಅವರ್ಗೀಯ ವ್ಯಂಜನಗಳು=09

1. ವರ್ಗೀಯ ವ್ಯಂಜನಗಳು: ಒಟ್ಟು: 25

ಕ್ ವರ್ಗ:ಕ್ ಖ್ ಗ್ ಘ್ ಙ್ =5

ಚ್ ವರ್ಗ: ಚ್ ಛ್ ಜ್ ಝ್ ಞ್= 5

ಟ್ ವರ್ಗ: ಟ್ ಠ್ ಡ್ ಢ್ ಣ್ =5

ತ್ ವರ್ಗ: ತ್ ಥ್ ದ್ ಧ್ ನ್ =5

ಪ್ ವರ್ಗ: ಪ್ ಫ್ ಬ್ ಭ್ ಮ್ = 5

* ಇವು ಉತ್ಪತ್ತಿಯಾಗುವ ಸ್ಥಾನಗಳಿಗೆ ಅನುಗುಣವಾಗಿ ವರ್ಗ ಮಾಡಿರುವುದರಿಂದ ವರ್ಗೀಯ

ವ್ಯಂಜನಗಳು ಎಂದು ಕರೆಯುತ್ತಾರೆ.

ಕೊಟ್ಟಿರುವ ಕ್ ದಿಂದ ಮ್ ವರೆಗಿನ 25 ಅಕ್ಷರಗಳನ್ನು ಉಚ್ಚರಿಸುವಾಗ ಅವು ಹುಟ್ಟುವ ಸ್ಥಳವನ್ನು ಆಧರಿಸಿ ಅವನ್ನು 5 ವರ್ಗಗಳಾಗಿ ವಿಂಗಡಿಸಲಾಗಿದೆ. ಅವೇ ವರ್ಗೀಯ ವ್ಯಂಜನಗಳು. ಅವು ಇಂತಿವೆ:

- ಕ ವರ್ಗದ ಅಕ್ಷರಗಳು - ಕಂಠ್ಯ ಅಕ್ಷರಗಳು (ಕಂಠ/ಗಂಟಲು ಭಾಗದಲ್ಲಿ ಹುಟ್ಟುತ್ತವೆ)

- ಚ ವರ್ಗದ ಅಕ್ಷರಗಳು - ತಾಲವ್ಯ ಅಕ್ಷರಗಳು (ತಾಲುವಿನ (ದವಡೆಯ) ಸಹಾಯದಿಂದ ಹುಟ್ಟುತ್ತವೆ)

- ಟ ವರ್ಗದ ಅಕ್ಷರಗಳು - ಮೂರ್ಧನ್ಯ ಅಕ್ಷರಗಳು (ಮೂರ್ಧಭಾಗದಲ್ಲಿ ಅಂದರೆ ನಾಲಿಗೆಯನ್ನು ಹಿಂದೆ ಚಾಚಿ ಬಾಯಿಯ ಮೇಲ್ಭಾಗವನ್ನು ಸ್ಪರ್ಶಿಸಿದಾಗ ಉಚ್ಚಾರಗೊಳ್ಳುವುದರಿಂದ)

- ತ ವರ್ಗದ ಅಕ್ಷರಗಳು - ದಂತ್ಯ ಅಕ್ಷರಗಳು (ಹಲ್ಲುಗಳ ಬಳಿ ಹುಟ್ಟುತ್ತವೆ)

- ಪ ವರ್ಗದ ಅಕ್ಷರಗಳು- ಓಷ್ಠ್ಯ ಅಕ್ಷರಗಳು (ತುಟಿಗಳ ಸಹಾಯದಿಂದ ಉಚ್ಚರಿಸಲ್ಪಡುವುದರಿಂದ)

* ಅಲ್ಪಪ್ರಾಣಾಕ್ಷರಗಳು - ಕಡಿಮೆ ಉಸಿರು ಕೊಟ್ಟು ಉಚ್ಚರಿಸಲಾಗುವ ವ್ಯಂಜನಗಳು ಅಲ್ಪಪ್ರಾಣಾಕ್ಷರಗಳು. ಉದಾ : ಕ್, ಚ್, ಟ್, ತ್, ಪ್, ಗ್, ಜ್, ಡ್, ದ್, ಬ್.=ಒಟ್ಟು 10

* ಮಹಾಪ್ರಾಣಾಕ್ಷರಗಳು - ಹೆಚ್ಚು ಉಸಿರು ಕೊಟ್ಟು ಉಚ್ಚರಿಸಲಾಗುವ ವ್ಯಂಜನಗಳು ಮಹಾಪ್ರಾಣಾಕ್ಷರಗಳು. ಉದಾ : ಖ್, ಛ್, ಠ್, ಥ್, ಫ್. ಘ್, ಝ್, ಢ್, ಧ್, ಭ್=ಒಟ್ಟು 10

* ಅನುನಾಸಿಕಾಕ್ಷರಗಳು - ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ವ್ಯಂಜನಗಳು ಅನುನಾಸಿಕಾಕ್ಷರಗಳು. ಉದಾ : ಙ್, ಞ್, ಣ್, ನ್, ಮ್=ಒಟ್ಟು 05

 2.)ಅವರ್ಗೀಯ ವ್ಯಂಜನಗಳು:

‘ಯ್’ ಕಾರದಿಂದ ‘ಳ್’ ಕಾರದವರೆಗಿನ 09 ಅಕ್ಷರಗಳು ಅವರ್ಗೀಯ ವ್ಯಂಜನಗಳು.

ಉದಾ : ಯ್, ರ್, ಲ್, ವ್, ಶ್, ಷ್, ಸ್, ಹ್, ಳ್.

ಇವು ಉತ್ಪತ್ತಿಯಾಗುವ ಸ್ಥಾನಗಳು ಬೇರೆಬೇರೆಯಾಗಿರುವುದರಿಂದ, ಇವುಗಳನ್ನು ನಿರ್ದಿಷ್ಟವಾದ ವರ್ಗಗಳಲ್ಲಿ ಸೇರಿಸಿ ಹೇಳಲು ಬರುವುದಿಲ್ಲವಾದ್ದರಿಂದ ಇವನ್ನು ಅವರ್ಗೀಯ ವ್ಯಂಜನಗಳು ಎಂದು ಕರೆಯುವರು.

 * ಉಳಿದ 9 ಅಕ್ಷರಗಳು (ಯ್ ದಿಂದ ಳ್ ವರೆಗಿನ) ಬೇರೆ ಬೇರೆ ಸ್ಥಳಗಳಲ್ಲಿ ಹುಟ್ಟುವುದರಿಂದ

ವರ್ಗಗಳಾಗಿ ವಿಂಗಡಿಸಲು ಸಾಧ್ಯವಿಲ್ಲ. ಹಾಗಾಗಿ ಅವು ಅವರ್ಗೀಯ ವ್ಯಂಜನಗಳು.

 * ಯೋಗವಾಹಗಳು:

‘ಯೋಗವಾಹ’ ಎಂದರೆ ‘ಜೊತೆಗೂಡಿ ಹೋಗು’ ಎಂದರ್ಥ. ಇವು ಯಾವುದಾದರೂ ಒಂದು ಸ್ವರಾಕ್ಷರದ ಜೊತೆಗೆ ಕೂಡಿಕೊಂಡರೆ ಮಾತ್ರ ಉಚ್ಚರಿಸಲು ಸಾಧ್ಯವಾಗುತ್ತದೆ.

ಯೋಗವಾಹಗಳಲ್ಲಿ ಎರಡು ವಿಧ:

1.  ಂ -  ಅನುಸ್ವಾರ (ಒಂದು ಅಕ್ಷರಗಾತ್ರದ ಒಂದು ಸೊನ್ನೆ) - ಉದಾ : ಸಿಂಹ

2. ಃ  -  ವಿಸರ್ಗ (ಎರಡು ಸಣ್ಣ ಸೊನ್ನೆಗಳು ಒಂದರ ಕೆಳಗೆ ಒಂದರAತೆ ಒಂದು ಅಕ್ಷರಗಾತ್ರದಲ್ಲಿ) ಉದಾ : ದುಃಖ

(ಮುಂದುವರೆಯುವುದು……)


Title:  Kannada Grammer - ಕನ್ನಡ ವ್ಯಾಕರಣ ಭಾಗ-1

File language: Kannada

Which Department: Education

State: Karnataka

Published Date:  02-06-2022

File format : jpg /pdf/text

File size :  0.5 mb

Number of Pages : 3

Availability for download: Yes

Availability of websites link: No

Scanned Copy : No

Editable Text : No

Copy text : No

Print enable : Yes

Quality : High

File size reduced: No

Password Protected: No

Password Encrypted : No

Image File Available : Yes

Cost : Free of cost


Post a Comment

0 Comments