● ನಿರ್ಜಲೀಕರಣ ಎಂದರೇನು? ಕಾರಣಗಳು ಮತ್ತು ಪ್ರಾಚೀನ ವಿಜ್ಞಾನಿ ಸುಶ್ರುತನ ಚಿಕಿತ್ಸೆ.

.



     ಮಾನವನ ದೇಹ ಆಹಾರವಿಲ್ಲದೆ ಹಲವು ವಾರಗಳ ಕಾಲ ಇರಬಹುದು. ಆದರೆ ನೀರಿಲ್ಲದೆ ಅಷ್ಟು ದಿನ ಇರಲಾಗದು. ನಮ್ಮ ದೇಹದಲ್ಲಿ ಶೇ 55 ರಿಂದ 75 ರಷ್ಟು ನೀರು ಇದೆ. ರಕ್ತ, ಜೀರ್ಣರಸಗಳು, ಮೂತ್ರ ಮತ್ತು ಬೆವರು ಇವೆಲ್ಲದರಲ್ಲಿಯೂ ನೀರು ಪ್ರಮುಖ ಘಟಕವಾಗಿದೆ. ದೇಹಕ್ಕೆ ನೀರು ಅತ್ಯವಶ್ಯ. ದೇಹದಲ್ಲಿ ನೀರು ಸಂಗ್ರಹವಾಗಿರಲು ಸಾಧ್ಯವಿಲ್ಲದ ಕಾರಣ, ಚಯಾಪಚಯ ಚಟುವಟಿಕೆಗಳನ್ನು ನಡೆಸಲು ಪ್ರತಿ ನಿತ್ಯ ನೀಂದರೇನುರಂಓರೇನ್ನು ಸೇವಿಸಲೇಬೇಕು. ನಮ್ಮ ಶ್ವಾಸಕೋಶಗಳಿಂದ, ಚರ್ಮದಿಂದ, ಮೂತ್ರ ಹಾಗು ಮಲದ ಮೂಲಕ ಹೊರಹೋಗುವ ನೀರಿನ ನಷ್ಟವನ್ನು ಸರಿದೂಗಿಸಲು ಪ್ರತಿ ನಿತ್ಯ ನೀರಿನ ಸೇವನೆ ಅವಶ್ಯಕ. ಅವಶ್ಯವಿರುವ ನೀರಿನ ಪ್ರಮಾಣವು ದೇಹದ ಚಯಾಪಚಯ ಕ್ರಿಯೆಗಳು, ನಾವು ಸೇವಿಸುವ ಆಹಾರ, ನಮ್ಮ ಚಟುವಟಿಕೆಗಳು ಹಾಗೂ ಋತುವನ್ನು ಆಧರಿಸಿದೆ.
     ದೇಹದ ಪ್ರತಿಯೊಂದು ಜೀವಕೋಶದ ಆರೋಗ್ಯವನ್ನು ಕಾಪಾಡಲು ನೀರು ನೆರವಾಗುತ್ತದೆ. ರಕ್ತನಾಳಗಳಲ್ಲಿ ಸುಲಭವಾಗಿ ಹರಿಯಲು ಸಾಧ್ಯವಾಗುವಂತೆ ರಕ್ತದಲ್ಲಿ ಬೆರೆಯುತ್ತದೆ. ಇದು ತ್ಯಾಜ್ಯ ಹಾಗೂ ಅನಗತ್ಯ ವಸುಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಬೆವರಿನ ರೂಪದಲ್ಲಿ ಆವಿಯಾಗಿ ಹೊರಹೋಗುವ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ದೇಹದ ಲೋಳೆ ಪೊರೆಗಳನ್ನು ಶ್ವಾಸಕೋಶಗಳನ್ನು ಹಾಗೂ ಬಾಯಂಗಳವನ್ನು ಸದಾ ಒದ್ದೆಯಾಗಿಡುತ್ತದೆ. ಜೀರ್ಣ ಕ್ರಿಯೆಯನ್ನು ಉತ್ತೇಜಿಸುವ ನೀರು, ಮಲಬದ್ಧತೆಯನ್ನು ದೂರವಿಡುತ್ತದೆ. ಚರ್ಮದ ರಚನೆ ಹಾಗೂ ಕಾಂತಿಯನ್ನು ಉತ್ತಮಗೊಳಿಸುತ್ತದೆ. ದೇಹದ ಜೀವಕೋಶಗಳಿಗೆ ಪೋಷಕಾಂಶವನ್ನು ಹಾಗೂ ಆಕ್ಸಿಜನ್ ಅನ್ನು ಒದಗಿಸುತ್ತದೆ.

     ಕಣ್ಣಿನ ಒಳಗೆ ಹಾಗೂ ಮೆದುಳು ಬಳ್ಳಿಯ ಸುತ್ತ ಒತ್ತಡ ಹೀರಿಕೊಳ್ಳುತ್ತದೆ. ಗರ್ಭದ ಸಮಯದಲ್ಲಿ ಭ್ರೂಣದ ಸುತ್ತ ತೇವಾಂಶ ಹಾಗೂ ರಕ್ಷಣೆ ಒದಗಿಸುತ್ತದೆ. ನಿಯಮಿತವಾಗಿ ನೀರನ್ನು ಸೇವಿಸದಿದ್ದಲ್ಲಿ, ಮೂತ್ರ ನಾಳದಲ್ಲಿ ಸೋಂಕು, ಮೂತ್ರಪಿಂಡಗಳಲ್ಲಿ ಕಲ್ಲುಗಳು ಹಾಗೂ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆ ಇದೆ. ನಿರ್ಜಲೀಕರಣ ಸಾಮಾನ್ಯವಾಗಿ ಚಿಕ್ಕ ಮಕ್ಕಳು ಹಾಗೂ ಹಿರಿಯರಲ್ಲಿ ಉಂಟಾಗುವ ಸಮಸ್ಯೆ.

ನಿರ್ಜಲೀಕರಣದ ಪ್ರಮುಖ ಲಕ್ಷಣಗಳು :
* ತಲೆನೋವು, ಸೋಮಾರಿತನ, ಒಣಗಿದ, ಒಡೆದ ತುಟಿಗಳು ಗಾಢ ಬಣ್ಣದ ಮೂತ್ರ ಮತ್ತು ನಿಶಕ್ತಿ.
* ಕ್ರಮೇಣ ಮೂತ್ರದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.
* ಮೂತ್ರ ಪಿಂಡಗಳು ವಿಫಲವಾಗಬಹುದು. ಇದರಿಂದಾಗಿ ದೇಹದಿಂದ ತ್ಯಾಜ್ಯಗಳನ್ನು ಹೊರ ಹಾಕುವ ಪ್ರಕ್ರಿಯೆ ಕುಂಠಿತಗೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು. ಇದಕ್ಕೆ ಪ್ರಮುಖ ಕಾರಣಗಳೆಂದರೆ - ನಿಯಂತ್ರಣ ತಪ್ಪಿದ ವಾಂತಿ ಮತ್ತು ಬೇಧಿ.

ಒಬ್ಬ ವ್ಯಕ್ತಿಯಲ್ಲಿ ನಿರ್ಜಲೀಕರಣದ ಲಕ್ಷಣಗಳು ಕಂಡುಬಂದ ಸಂದರ್ಭದಲ್ಲಿ ಏನು ಮಾಡಬೇಕು?
ಮೌಖಿಕ ಮರುಜಲೀಕರಣ ದ್ರಾವಣದ (Oral Rehydration Solution-ORS) ಬಗ್ಗೆ ಕೇಳಿರಬಹುದು. ಇದು ಕುಡಿಯುವ ನೀರಿನಲ್ಲಿ ಉಪ್ಪು ಮತ್ತು ಸಕ್ಕರೆಯನ್ನು ಕರಗಿಸಿ ತಯಾರಿಸಿದ ದ್ರಾವಣವಾಗಿರುತ್ತದೆ. 

        ಪ್ರಾಚೀನ ಭಾರತದಲ್ಲಿ 2500 ವರ್ಷಗಳ ಹಿಂದೆ ಸುಶೃತ ಎಂಬ ವೈದ್ಯ ತೀವ್ರವಾದ ವಾಂತಿ ಭೇದಿಯಿಂದ ನರಳುತ್ತಿರು ವ್ಯಕ್ತಿಗೆ ಗಂಜಿ ನೀರು, ಎಳನೀರು ಹಾಗೂ ಕ್ಯಾರಟ್ ರಸ ಕುಡಿಸಿ ಗುಣಪಡಿಸುತ್ತಿದ್ದನು. ಆದರೆ ಈ ಮಾಹಿತಿಯು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತಲುಪಲಿಲ್ಲ. ಹೀಗಾಗಿ ಅಲ್ಲಿ ನಿರ್ಜಲೀಕರಣದಿಂದಾಗಿ ಬಹಳಷ್ಟು ಮಂದಿ ಸಾವಿಗೀಡಾಗುತ್ತಿದ್ದರು. ಮರುಜಲೀಕರಣ ಚಿಕಿತ್ಸೆ ಜಾರಿಗೆ ಬರುವವರೆಗೂ ಹೀಗೆ ನಡೆಯುತ್ತಿತ್ತು. 1950 ರ ದಶಕದಲ್ಲಿ ನಮ್ಮ ದೇಶದ ವೈದ್ಯ ಡಾ|| ಹೇಮೇಂದ್ರನಾಥ್ ಚಟರ್ಜಿ ಅವರು ಕಾಲರಾ ರೋಗ ಪೀಡಿತರಿಗೆ ORS ಚಿಕಿತ್ಸೆ ನೀಡಿ ಉತ್ತಮ ಫಲಿತಾಂಶ ಪಡೆದಿದ್ದರು. ಅಂದಿನಿಂದ ORS ಚಿಕಿತ್ಸೆ ಉಪಯೋಗಕ್ಕೆ ಬಂದಿತು.

Post a Comment

2 Comments

  1. ಆರೋಗ್ಯ ಮಾಹಿತಿಗಳು ಅತ್ಯುತ್ತಮವಾಗಿವೆ.ಇದು ಹೀಗೆಯೇ ಮುಂದುವರಿಯಲಿ.
    ನಿಮ್ಮ ತಂಡಕ್ಕೆ ಭಗವಂತನು ಆಯುರಾರೋಗ್ಯ ನೀಡಲೆಂದು ಪ್ರಾರ್ಥಿಸುತ್ತೇನೆ.
    ಹನುಮಂತ,ಎಂ.ಎ.ಬಿ.ಇಡಿ.ಶಿಕ್ಷಕರು ಹಾಗೂ
    ಸಂಶೋಧಕರು
    ಮಾನವ ಸಂಶೋಧನಾ ಕೇಂದ್ರ,
    ನಂಜನಗೂಡು-೫೭೧೩೦೧.
    ಮೊಬೈಲ್:೯೫೩೮೭೭೧೪೪೨.

    ReplyDelete
  2. Thank you for your support and valuable feedback sir 😊
    Will provide you more useful information for further days.So keep in touch with us.

    ReplyDelete